ನೀವು ಎಂದೆಂದಿಗೂ ಸ್ಫೂರ್ತಿ: ಕ್ರೇಜಿ ಸ್ಟಾರ್‌ಗೆ ಕಿಚ್ಚ ಸುದೀಪ್ ಶುಭಾಶಯ

'ಕನಸುಗಾರ' ರವಿಚಂದ್ರನ್ ಜನ್ಮದಿನದ ಸಂಭ್ರಮದಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಗೂ ಕ್ರೇಜಿಸ್ಟಾರ್ ಅನುಬಂಧದ ಕುರಿತು ಹಂಚಿಕೊಳ್ಳುವ ಮೂಲಕ ಅವರಿಗೆ ಶುಭ ಹಾರೈಸುತ್ತಿದ್ದಾರೆ.

Recommended Video

ಹುಟ್ಟು ಹಬ್ಬಕ್ಕೆ ಹೊಸ ಕನಸಿನ ಬಗ್ಗೆ ಮಾತನಾಡಿದ ರವಿಚಂದ್ರನ್ | Ravichandran | Filmibeat Kannada

ರವಿಚಂದ್ರನ್ ಅವರ ಕುರಿತು ಅಪಾರ ಗೌರವ ಮತ್ತು ಪ್ರೀತಿ ಇರಿಸಿಕೊಂಡ ನಟರಲ್ಲಿ ಕಿಚ್ಚ ಸುದೀಪ್ ಒಬ್ಬರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ರವಿಚಂದ್ರನ್ ಹೇಳುವ ಮಾತಿಗೆ ಒಲ್ಲೆ ಎನ್ನದೆ ಗೌರವದಿಂದ ಪಾಲಿಸುವಷ್ಟು ಸುದೀಪ್ ಅವರಲ್ಲಿ ಅಭಿಮಾನವಿದೆ. ಈ ಪ್ರೀತಿ ತೆರೆಯ ಮೇಲೆಯೂ ವ್ಯಕ್ತವಾಗಿತ್ತು. 'ಮಾಣಿಕ್ಯ' ಚಿತ್ರದಲ್ಲಿ ತಂದೆ-ಮಗನ ಪ್ರೀತಿಯ ಸನ್ನಿವೇಶಗಳು ಎಂಥಹವರ ಕಣ್ಣಲ್ಲೂ ನೀರು ತರಿಸುವಂತಿದ್ದವು. ಇಬ್ಬರೂ ನೈಜ ತಂದೆ ಮಕ್ಕಳೇನೋ ಎನ್ನುವಷ್ಟು ಅವರ ಅಭಿನಯವಿತ್ತು. ಮುಂದೆ ಓದಿ...

ಲಾಕ್‌ಡೌನ್ ಹೊಡೆತ: ಬಾಣಲೆಯಿಂದ ಬೆಂಕಿಗೆ ಬಡವರು, ಕಾರ್ಮಿಕರು

ಹೆಮ್ಮೆಯಾಗುತ್ತಿದೆ ಎಂದ ಕಿಚ್ಚ

ಹೆಮ್ಮೆಯಾಗುತ್ತಿದೆ ಎಂದ ಕಿಚ್ಚ

ಕ್ರೇಜಿ ಸ್ಟಾರ್ ಜನ್ಮದಿನದಂದು ಸುದೀಪ್, ತಮ್ಮದೇ ರೀತಿಯಲ್ಲಿ ಶುಭ ಹಾರೈಸಿದ್ದಾರೆ. 'ಒಂದೇ ಬಗೆಯ ವೃತ್ತಿ ಕ್ಷೇತ್ರದಲ್ಲಿ ಇರುವುದಕ್ಕೆ ಹೆಮ್ಮೆಯಾಗುತ್ತಿದೆ' ಎಂದು ಸುದೀಪ್, ರವಿಚಂದ್ರನ್ ಅವರೊಂದಿಗೆ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಹೆಮ್ಮೆಯನ್ನು ಹಂಚಿಕೊಂಡಿದ್ದಾರೆ.

ಎಂದೆಂದಿಗೂ ಸ್ಫೂರ್ತಿ

ಎಂದೆಂದಿಗೂ ಸ್ಫೂರ್ತಿ

ಹಾಗೆಯೇ ಚಿತ್ರರಂಗದ ಬೆಳವಣಿಗೆಯಲ್ಲಿ ನೀವು ನೀಡಿರುವ ಭಾರಿ ದೊಡ್ಡ ಕೊಡುಗೆಯನ್ನು ಕಣ್ಣಾರೆ ಕಂಡಿರುವುದು ಕೂಡ ಹೆಮ್ಮೆಯ ಸಂಗತಿ ಎಂದಿದ್ದಾರೆ. ನೀವು ಇದುವರೆಗೂ ಮತ್ತೆ ಮುಂದೆಯೂ ನಮ್ಮ ಸ್ಫೂರ್ತಿಯಾಗಿರುತ್ತೀರಿ. ನಿಮಗೆ ಸಂತಸ ಮತ್ತು ಆರೋಗ್ಯ ಎಂದೆಂದಿಗೂ ಸಿಗಲಿ ಎಂದು ಆಶಿಸುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.

ಜೀವಾ... ಜೀವಾ ಕಣೋ...

ಜೀವಾ... ಜೀವಾ ಕಣೋ...

ಇನ್‌ಸ್ಟಾಗ್ರಾಂನ ಖಾತೆಯಲ್ಲಿ ಸುದೀಪ್, 'ಮಾಣಿಕ್ಯ' ಚಿತ್ರದ ಹಿಟ್ ಹಾಡು 'ಜೀವಾ ಜೀವಾ ಕಣೋ' ಹಾಡಿನ ದೃಶ್ಯ ಹಂಚಿಕೊಂಡಿದ್ದಾರೆ. ಚಿತ್ರದ ಭಾವುಕ ಸನ್ನಿವೇಶಗಳಲ್ಲಿ ಒಂದಾದ ಈ ಹಾಡುವ ಅವರ ನಡುವಿನ ಆತ್ಮೀಯತೆಯನ್ನು ಧ್ವನಿಸುವಂತಿದೆ. 'ನಿಮಗೆ ಇನ್ನಷ್ಟು ಶಕ್ತಿ ಸಿಗಲಿ ಅಣ್ಣಾ' ಎಂದು ಸುದೀಪ್ ಶುಭಾಶಯ ಕೋರಿದ್ದಾರೆ.

ಲಾಯರ್ ಪಾತ್ರದಲ್ಲಿ ಸುದೀಪ್

ಲಾಯರ್ ಪಾತ್ರದಲ್ಲಿ ಸುದೀಪ್

ರವಿಚಂದ್ರನ್ ಅವರ 'ಅಪೂರ್ವ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಸುದೀಪ್, 'ರವಿ ಬೋಪಣ್ಣ' ಚಿತ್ರದಲ್ಲಿಯೂ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಹತ್ತು ನಿಮಿಷ ಮಾತ್ರ ಸುದೀಪ್ ಪಾತ್ರ ಬರಲಿದೆ. ಲಾಯರ್ ಆಗಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಚಿಕ್ಕದಾಗಿದ್ದರೂ, ಚಿತ್ರಕ್ಕೆ ಮಹತ್ವದ ತಿರುವು ನೀಡುವ ಪಾತ್ರ.

ಪಾತ್ರ ಸಿಗುವುದೇ ಅದೃಷ್ಟ

ಪಾತ್ರ ಸಿಗುವುದೇ ಅದೃಷ್ಟ

ಈ ಪಾತ್ರದಲ್ಲಿ ಸುದೀಪ್ ಇದ್ದರೆ ಚೆನ್ನಾಗಿರುತ್ತದೆ ಎಂದು ರವಿಚಂದ್ರನ್ ಅವರಿಗೆ ಅನಿಸಿತ್ತು. ರವಿಚಂದ್ರನ್ ಕರೆದಾಗ ಸುದೀಪ್ ಅರೆ ಕ್ಷಣ ಯೋಚಿಸುವುದೂ ಇಲ್ಲ. 'ಪಾತ್ರ ಸಣ್ಣದೋ, ದೊಡ್ಡದೋ.. ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುವುದೇ ಖುಷಿ. ಎರಡನೆಯ ಬಾರಿ ಈ ಅವಕಾಶ ಸಿಕ್ಕಿದೆ. ಅವರ ಮಕ್ಕಳಿಗೂ ಈ ಅವಕಾಶ ಸಿಕ್ಕಿಲ್ಲ. ಅವರು ಕರೆದಾಗ ಬಂದು ನಟಿಸುತ್ತೇನೆ' ಎಂದು ಸುದೀಪ್ ಹೇಳಿಕೊಂಡಿದ್ದರು.

More from Filmibeat

English summary
Kiccha Sudeep on his birthday wishes to crazy star Ravichandran said, You have been and will always be an inspiration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X