ಕಿಚ್ಚ ಸುದೀಪ್-ಯಶ್ ಮುಖಾ-ಮುಖಿ; ಉಪ್ಪಿಯ 'ಯುಐ' ಅಡ್ಡಾದಲ್ಲಿ ಮಹಾ ಸಂಗಮ

9 ವರ್ಷಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಯುಐ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗಿದೆ. ಮೊದಲ ಮೂರು ದಿನ ಸುಮಾರು 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದೇ ಖುಷಿಯಲ್ಲಿ ಸೆಲೆಬ್ರೆಟಿಗಳಿಗಾಗಿ ವಿಶೇಷ ಶೋ ಅನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳಿಗೆ ಅಂತಾನೇ ಈ ವಿಶೇಷ ಶೋ ಅನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕನ್ನಡ ಚಿತ್ರರಂಗದ ದಿಗ್ಗಜರಿಗ ಆಹ್ವಾನವನ್ನು ನೀಡಲಾಗಿತ್ತು. ಈ ವೇಳೆ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಈ ಸೆಲೆಬ್ರಿಟಿ ಶೋನಲ್ಲಿ ಭಾಗಿಯಾಗಿದ್ದರು. ಬಹಳ ದಿನಗಳ ಬಳಿಕ ಇದೊಂದು ಅಪೂರ್ವ ಸಂಗಮವಾಗಿತ್ತು.

Kichcha Sudeep and Yash met each other in Upendra directed UI

ಕಿಚ್ಚ ಸುದೀಪ್, ಯಶ್ ಹಾಗೂ ಉಪೇಂದ್ರ ಮೂರು ಒಟ್ಟಿಗೆ ಒಂದೇ ಸಿನಿಮಾಗಾಗಿ ಒಟ್ಟಿಗೆ ಸೇರಿ ಬಹಳ ವರ್ಷಗಳೇ ಆಗಿತ್ತು. ಅದರಲ್ಲೂ ಕಿಚ್ಚ ಸುದೀಪ್ ಹಾಗೂ ಯಶ್ ಇಬ್ಬರೂ ಒಟ್ಟಿಗೆ ಸಾರ್ವಜನಿಕವಾಗಿ ಮುಖಾ ಮುಖಿಯಾಗಿ ಭೇಟಿಯಾಗಿ ಬಹಳ ವರ್ಷಗಳೇ ಆಗಿದ್ದವು. ಈಗ ಉಪ್ಪಿಗಾಗಿ ಇಬ್ಬರೂ ಒಂದೇ ಸಿನಿಮಾ ನೋಡುವುದಕ್ಕೆ ಒಟ್ಟಿಗೆ ಸೇರಿಕೊಂಡಿದ್ದರು. ಇದು ಮೂವರ ಅಭಿಮಾನಿಗಳಿಗೂ ಕಿಕ್ ಕೊಟ್ಟಿದೆ.

'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಯಶ್ 'ಯುಐ' ಸಿನಿಮಾಗಾಗಿ ಬೆಂಗಳೂರಿಗೆ ಬಂದಿದ್ದರು. ಉಪ್ಪಿ ಹಾಗೂ ಅವರ ತಂಡ ಆಯೋಜಿಸಿದ್ದ ಸೆಲೆಬ್ರಿಟಿ ಶೋನಲ್ಲಿ ತಮ್ಮ ಪತ್ನಿ ರಾಧಿಕಾ ಪಂಡಿತ್ ಜೊತೆ ಭಾಗಿಯಾಗಿದ್ದರು. 'ಯುಐ' ಸಿನಿಮಾ ನೋಡಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನವನ್ನು ಹಾಡಿ ಹೊಗಳಿದ್ದಾರೆ. ಅವರಿಂದಲೇ ಸಿನಿಮಾ ಆಸಕ್ತಿ ಬೆಳೆಸಿಕೊಂಡಿದ್ದಾಗಿ ಹೇಳಿದ್ದಾರೆ.

Kichcha Sudeep and Yash met each other in Upendra directed UI

" ಇದೊಂದು ಅದೃಷ್ಟ ಅಂತ ಹೇಳಬಹುದು. ಉಪ್ಪಿ ಸರ್ ಕರೆದು ಸಿನಿಮಾ ತೋರಿಸಿದ್ದಾರೆ. ಅವರು ಬೆಳಗ್ಗೆ ಫೋನ್ ಮಾಡಿದಾಗಲೂ ಅದೇ ಹೇಳಿದ್ದು. ನಾನು ಚಿಕ್ಕ ಹುಡುಗರಿದ್ದಾಗ ಅವರ ಸಿನಿಮಾ ನೋಡಿಕೊಂಡು ಎಂಜಾಯ್ ಮಾಡಿಕೊಂಡು ಸಿನಿಮಾಗೆ ಬರಬೇಕು ಅಂತ ಬಂದವರು. ಈಗ ಅವರ ಜೊತೆ ಕೂತು ಒಂದು ಸಿನಿಮಾ ನೋಡುವಂತಹ ಅವಕಾಶ ಸಿಕ್ಕಿದೆ. ಅವರ ಮನಸ್ಸಿನಲ್ಲಿ ಏನು ನಡೀತಿದೆ? ಏನಿದೆ? ಅನ್ನೋದನ್ನು ಸಾಂಕೇತಿಕವಾಗಿ ಹೇಳುವುದಕ್ಕೆ ಹೊರಟಿದ್ದಾರೆ." ಎಂದು ಯಶ್ ಸಿನಿಮಾ ನೋಡಿದ ಬಳಿಕ ಹೇಳಿದ್ದಾರೆ.

ಇನ್ನು ರಾಧಿಕಾ ಪಂಡಿತ್ ಕೂಡ ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. " ಉಪ್ಪಿ ಸರ್‌ನ ತೆರೆ ಮೇಲೆ ನೋಡುವುದೇ ಒಂದು ಟ್ರೀಟ್. ಅದರಲ್ಲೂ ಇಷ್ಟು ವರ್ಷದ ನಂತರ ಅವರು ಡೈರೆಕ್ಟ್ ಮಾಡಿದ್ದಾರೆ ಅಂದರೆ ಅದು ಡಬಲ್ ಟ್ರೀಟ್. ಯಶ್ ಅವರು ಹೇಳಿದ ಹಾಗೆ ತುಂಬಾನೇ ಇಂಟಲಿಜೆಂಟ್ ಆಗಿ ಈ ಸಿನಿಮಾವನ್ನು ಮಾಡಿದ್ದಾರೆ. ಕಥೆಗಿಂತ ಯೋಚನೆ ಮಾಡುವಂತಹ ವಿಷಯಗಳು ಸಾಕಷ್ಟು ಇವೆ. ನಾವಂತೂ ಈ ಸಿನಿಮಾವನ್ನು ಎಂಜಾಯ್ ಮಾಡಿದ್ವಿ" ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.

"ಈ ಸಿನಿಮಾ ನೋಡಲು ಬಂದಿರುವ ಎಲ್ಲಾ ಗೆಸ್ಟ್‌ಗಳಿಗೆ, ಆರ್ಟಿಸ್ಟ್‌ಗಳಿಗೆ, ಟೆಕ್ನಿಷಿಯನ್‌ಗಳಿಗೆ ಸಿನಿಮಾ ತೋರಿಸುವುದಕ್ಕೆ ಒಂದು ಅವಕಾಶ ಸಿಕ್ತು. ನಮ್ಮ ರಾಕಿಂಗ್ ಸ್ಟಾರ್ ಯಶ್, ಸುದೀಪ್, ರಮೇಶ್ ಅರವಿಂದ್ ಅವರು ಎಲ್ಲರೂ ಒಂದು ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿದ ಗೆಸ್ಟ್‌ಗಳ ದೊಡ್ಡ ಲಿಸ್ಟ್ ಇದೆ. ಅವರೆಲ್ಲರಿಗೂ ಥ್ಯಾಂಕ್ಯೂ" ಎಂದು ಉಪೇಂದ್ರ ಹೇಳಿದ್ದಾರೆ.

More from Filmibeat

English summary
Kichcha Sudeep and Yash met each other in Upendra directed UI film celebrity show
Read more about: sudeep yash upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X