"ನಾನ್ಯಾಕೆ ಟಾಂಟ್ ಕೊಡಲಿ.. ನಾವೇನು ಛತ್ರಪತಿಗಳಾ? ಚಕ್ರವರ್ತಿಗಳಾ?" ಬಾಸ್‌ ಕೇಕ್‌ಗೆ ಕಿಚ್ಚ ಕ್ಲಾರಿಟಿ

ಕಿಚ್ಚ ಸುದೀಪ್‌ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ಅವರ ಸಿನಿಮಾ 'ಮ್ಯಾಕ್ಸ್' ಗೆದ್ದಿದೆ. ಕನ್ನಡ ಚಿತ್ರರಂಗಕ್ಕೊಂದು ಸೂಪರ್ ಹಿಟ್ ಸಿನಿಮಾ ಕೊಟ್ಟಿದೆ. ಎರಡೂ ವರ್ಷಗಳ ಬಳಿಕ ಸುದೀಪ್‌ಗೆ ಮತ್ತೊಂದು ಸಕ್ಸಸ್ ಸಿಕ್ಕಿದೆ. ಈ ಖುಷಿಯ ಬೆನ್ನಲ್ಲೇ ಬಾಸ್ಇಸಂ ಕೇಕ್ ವಿವಾದವನ್ನು ಹುಟ್ಟಾಕಿತ್ತು. ಈ ವೇಳೆ ಸಕ್ಸಸ್ ಮೀಟ್‌ನಲ್ಲಿ ಕಿಚ್ಚ ಸುದೀಪ್ ಈ ಕಾಂಟ್ರವರ್ಸಿಗೆ ಕ್ಲಾರಿಟಿ ಕೊಟ್ಟಿದ್ದಾರೆ.

'ಬಾಸ್‌ಇಸಂ ಕೇಕ್' ವಿವಾದ ಹೇಗೆ ಹುಟ್ಟಿಕೊಂಡ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಇನ್ನೊಂದು ಕಡೆ ಯಾರಿಗೂ ಟಾಂಟ್ ಕೊಟ್ಟಿಲ್ಲ. ಆ ಅಗತ್ಯನೂ ಇಲ್ಲ ಎಂದು ಹೇಳಿದ್ದಾರೆ. ದರ್ಶನ್, ಕನ್ನಡ ಚಿತ್ರರಂಗ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. 'ಮ್ಯಾಕ್ಸ್' ಪ್ರೆಸ್‌ಮೀಟ್‌ನಲ್ಲಿ ಬಾಸ್‌ಇಸಂ ಕೇಕ್ ಬಗ್ಗೆ ಕೊಟ್ಟ ಸ್ಪಷ್ಟನೆಯ ಝಲಕ್ ಇಲ್ಲಿದೆ.

Kichcha Sudeep clarifies Bossism cake and Darshan fans controversy in Max success meet

ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ?

"ನನ್ನೊಬ್ಬ ಸ್ನೇಹಿತ ಬೆಳಗ್ಗೆ ಚಿತ್ರಮಂದಿರಕ್ಕೆ ಹೋಗುತ್ತಾನೆ. ಯಾಕೆ ಈ ಮಾತು ಹೇಳುತ್ತಿದ್ದೇನೆ ಅಂದರೆ, ನನ್ನ ಹುಡುಗ ಅವನು. ಅವನಿಗೆ ಏನಾದರೂ ತೊಂದರೆ ಆದರೆ ಎದೆ ಕೊಟ್ಟು ನಿಂತುಕೊಳ್ಳೋನು ನಾನು. ಆ ಮೇಲೆ ಅವನಿಗೆ ತೊಂದರೆ ಆಗಲಿ. ಅವನೊಂದು ಮಾತು ಹೇಳುತ್ತಾನೆ. ಇವತ್ತಿಂದ ಕಿಚ್ಚ ಬಾಸ್ ಅಂತ ಕರೆಯೋದನ್ನು ನಿಲ್ಲಿಸಿ, ಕಿಚ್ಚ ಮಾಸ್ ಅಂತ ಕರೀರಿ ಅಂತಾರೆ. ಅದನ್ನೇ ಕೇಕ್ ಮೇಲೆ ಹಾಕೊಂಡು ಬರುತ್ತಾರೆ. ಅದನ್ನು ಒಂದು ವಾಹಿನಿಯವರು ಏನು ಮಾಡುತ್ತಾರೆ. ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ ಅಂತ ಮಾಡುತ್ತಾರೆ. ಇದಾದ್ಮೇಲೆ ಏನಾಗುತ್ತೆ. ಯಾರದ್ದೋ ಫ್ಯಾನ್ಸ್ ಅವರಿಗೆ ಬೆದರಿಕೆ ಹಾಕಿ, ಅವರಿಗೆ ಏನಾದರೂ ಹೆಚ್ಚು ಕಡಿಮೆ ಮಾಡಿದ್ರು ಅಂದುಕೊಳ್ಳೋಣ. ಅದಕ್ಕೆ ನಾನು ಬಿಡಲ್ಲ. ಮಾಡಿದ್ರು ಅಂದುಕೊಳ್ಳೋಣ.. ಆ ವಾಹಿನಿ ಜವಾಬ್ದಾರಿ ತೆಗೆದುಕೊಳ್ಳುತ್ತಾರಾ?" ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.

ನಾವ್ಯಾಕೆ ಟಾಂಟ್ ಕೊಡೋಣ?

"ಚಿತ್ರರಂಗದಲ್ಲಿ ಯಶ್, ದರ್ಶನ್, ಧ್ರುವ, ಉಪ್ಪಿ ಸರ್, ಶಿವಣ್ಣ ಪ್ರತಿಯೊಬ್ಬರೂ ಸೇರಿದರೇ ಕನ್ನಡ ಚಿತ್ರರಂಗ. ಸಂದರ್ಶನದಲ್ಲಿ ಇದೇ ದರ್ಶನ್ ಅವರ ಫ್ಯಾನ್ಸ್ ಬಗ್ಗೆ ಬಂದಾಗ ನಾನೇ ಹೇಳಿದ್ದೆ, ಫ್ಯಾನ್ಸ್ ಬಗ್ಗೆ ಬೈಯ್ಯುವುದಕ್ಕೆ ಹೋಗಬೇಡಿ. ಅವರಿಗೆ ಗೊತ್ತಾಗುತ್ತಿಲ್ಲ ಏನು ಮಾಡಬೇಕು ಅಂತ. ಅವರು ನೋವಿನಲ್ಲಿ ಇದ್ದಾರೆ ಅಂದಿದ್ದೆ. ಇದೇ ನಾನು ನನ್ನ ಬಾಯಾರೆ ಹೇಳಿದ ಮೇಲೆ ನಾವ್ಯಾಕೆ ಟಾಂಟ್ ಕೊಡೋಣ?" ಎಂದು ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ.

ನಾವೇನು ಛತ್ರಪತಿಗಳಾ? ಚಕ್ರವರ್ತಿಗಳಾ?

"ನಾನ್ಯಾಕೆ ಟಾಂಟ್ ಕೊಡಲಿ. ನಾವೇನು ಛತ್ರಪತಿಗಳಾ? ಚಕ್ರವರ್ತಿಗಳಾ? ವಯಸ್ಸಾಗಿ ನಾವು ಒಂದು ದಿನ ಹೋಗೋರೇ. ಬದುಕಿರಬೇಕಾದರೆ, ಒಂದು ಸಿನಿಮಾ ಕೈ ಹಿಡಿದಿರಬೇಕಾದರೆ, ಬೆಳೆಯೋಣ, ಇನ್ನೊಂದಿಷ್ಟು ಸಿನಿಮಾ ಮಾಡೋಣ. ಯಾರಿಗೆ ಕೊಡ್ತಾ ಇದ್ದೀವೋ ಅವರು ನನ್ನ ಸಹೋದರ ತರ ಇದ್ದವರು ಸರ್. ಈಗ ಯಶ್‌ಗೆ ಯಶ್ ಬಾಸ್ ಅನ್ನಲ್ವಾ? ಧ್ರುವಾಗೆ ಧ್ರುವ ಬಾಸ್ ಅನ್ನಲ್ವಾ?, ಶಿವಣ್ಣಗೆ ಶಿವಣ್ಣ ಬಾಸ್ ಅಂತ ಕರೆಯಲ್ವಾ? ಉಪ್ಪಿ ಬಾಸ್ ಅನ್ನಲ್ವಾ? ನನಗೂ ದರ್ಶನ್‌ಗೂ ಏನಿಲ್ಲ. ಬಹಳ ಕಷ್ಟಪಟ್ಟು ಅವರೂ ಮೇಲೆ ಬಂದಿದ್ದಾರೆ. ಪ್ರತಿ ಕಲಾವಿದರೂ ಬಂದಿದ್ದಾರೆ. ಚಿತ್ರರಂಗ ನೋವಿನಲ್ಲಿದೆ. ಅದು ಬೆಳೆಯಬೇಕು ಅಂದರೆ, ಅದು ಬೇಡ ನಮಗೆ." ಎಂದಿದ್ದಾರೆ.

ಬಾಸ್ ಅಂತ ಕರೆಯೋದು ನನ್ನ ತಂದೆಗೆ

ಇದೇ ವೇಳೆ ನಾನು ನನ್ನ ತಂದೆಗೆ ಬಾಸ್ ಕರೆಯುತ್ತೇನೆ. ಹಾಗಿದ್ದರೆ ಅವರಿಗೆ ಟಾಂಟ್‌ ಕೊಡುತ್ತಿದ್ದೇನಾ? ಆ ಹುಡುಗನಿಗೆ ನನ್ನ ತಂದೆಗೆ ಟಾಂಟ್ ಕೊಡುತ್ತಿದ್ದೀಯಾ ಅಂತ ಕೇಳಬೇಕಿತ್ತು. "ನಾನು ಬಾಸ್ ಅಂತ ಕರೆಯೋದು ನನ್ನ ತಂದೆಗೆ. ಆಗ ನಾನು ಏನು ಹೇಳಬೇಕಿತ್ತು. ನನ್ನ ತಂದೆಗೆ ಹೇಳುತ್ತಿದ್ದೀಯಾ ಅಂತ ಕೇಳಬೇಕಿತ್ತು. ಆ ಹುಡುಗ ಮನಸ್ಸು ನನಗೆ ಗೊತ್ತು. ಅಂತಹ ಮನಸ್ಸು ಅಲ್ಲ." ಎಂದು ಸುದೀಪ್ ಹೇಳಿದ್ದಾರೆ.

More from Filmibeat

English summary
Kichcha Sudeep clarifies Bossism cake and Darshan fans controversy in Max success meet.
Read more about: sudeep darshan filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X