ಗಾಯನದ ಜೊತೆಗೆ ಸಿನಿಮಾ ವಿತರಣೆಗೆ ಇಳಿದ ಸಾನ್ವಿ ಸುದೀಪ್; ತಂದೆ ಸಿನಿಮಾ 'ಮಾರ್ಕ್' ಮೊದಲ ಹೆಜ್ಜೆ

ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಬಾಕಿಯಿದೆ ಅಷ್ಟೇ. ಈಗಾಗಲೇ ಸುದೀಪ್ ಭರ್ಜರಿಯಾಗಿ ಪ್ರಚಾರವನ್ನು ಆರಂಭ ಮಾಡಿದ್ದಾರೆ. ಈಗಾಗಲೇ ಟಿವಿ ಹಾಗೂ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದೊಂದು ಕಡೆಯಾದರೆ, ಇನ್ನೊಂದು ಕಡೆ ತಮ್ಮ ಪುತ್ರಿಯನ್ನೂ ಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದ್ದಾರೆ.

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ಸಿಂಗಿಂಗ್‌ನಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸಿದ್ದರು. ಹೀಗಾಗಿ ಸುದೀಪ್ ಕೂಡ ಮಗಳನ್ನು ಚಿತ್ರರಂಗಕ್ಕೆ ಗಾಯಕಿಯಾಗಿಯೇ ಪರಿಚಯಿಸಿದ್ದಾರೆ. ಮೊದಲು ತೆಲುಗು ಸಿನಿಮಾ ಮೂಲಕ ಸಿಂಗರ್ ಆಗಿ ಪರಿಚಯವಾಗಿದ್ದರು.

Kichcha Sudeep daughter Sanvi entered distribution with Mark through KRG Studio

ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ನಟನೆಯ 'ಹಿಟ್ 3' ಸಿನಿಮಾಗೆ ಒಂದು ಹಾಡನ್ನು ಹಾಡಿದ್ದರು. ಈಗ ತಂದೆಯೇ ನಟಿಸಿರುವ 'ಮಾರ್ಕ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಗಾಯಕಿಯಾಗಿದ್ದಾರೆ. ಹಾಗಂತ ಗಾಯಕಿಯಾಗಿ ಅಷ್ಟೇ ಅಲ್ಲ. ವಿತರಣೆ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಎಂಟ್ರಿ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

'ಮಾಕ್ಸ್' ಸಿನಿಮಾ ಮೂಲಕ ಕಿಚ್ಚ ಸುದೀಪ್ ದಾಟಿಯನ್ನು ಬದಲಿಸಿದ್ದಾರೆ. ಕೇವಲ ಸಂಭಾವನೆ ತೆಗೆದುಕೊಂಡು ಸಿನಿಮಾ ಮಾಡುತ್ತಿಲ್ಲ. ಸಂಭಾವನೆ ಜೊತೆಗೆ ಅವರು ನಟಿಸುವ ಸಿನಿಮಾದಲ್ಲಿ ಹೂಡಿಕೆ ಮಾಡಿ ಲಾಭವನ್ನು ಪಡೆಯುತ್ತಿದ್ದಾರೆ. ಈಗ ಅದರ ಬಗ್ಗೆ ಇನ್ನೊಂದು ಹೆಜ್ಜೆಯನ್ನೂ ಮುಂದಿಟ್ಟಿದ್ದಾರೆ. ಈಗ ವಿತರಣೆ ಕ್ಷೇತ್ರಕ್ಕೂ ಕಾಲಿಟಿದ್ದಾರೆ. ತಮ್ಮ ಪುತ್ರಿ ಸಾನ್ವಿ ಹಾಗೂ ಪತ್ನಿ ಪ್ರಿಯಾ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಸಾನ್ವಿ 'ಮಾರ್ಕ್' ಸಿನಿಮಾವನ್ನು ವಿತರಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇವರೊಂದಿಗೆ ಕೆಆರ್‌ಜಿ ಸ್ಟುಡಿಯೋ ಕೈ ಜೋಡಿಸುತ್ತಿದೆ. ಕರ್ನಾಟಕದಲ್ಲಿ ಕೆಆರ್‌ಜಿ ಜೊತೆಯಲ್ಲಿ ಜೊತೆಗೂಡಿ ವಿತರಣೆಯನ್ನು ಮಾಡುತ್ತಿದ್ದಾರೆ. ಇದು ಸಾನ್ವಿ ಸುದೀಪ್ ಅವರ ಮೊದಲ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ನಿರ್ಮಾಣಕ್ಕೆ ಕೈ ಹಾಕಿದರೂ ಅಚ್ಚರಿ ಪಡಬೇಕಿಲ್ಲ.

'ಮಾರ್ಕ್' ಸಿನಿಮಾ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಸಾನ್ವಿ ವಿತರಣೆ ಮಾಡುತ್ತಿರುವ ಮೊದಲ ಸಿನಿಮಾ. ಇದರ ಹಿಂದೇನೆ ಸುದೀಪ್ ಅಕ್ಕನ ಮಗ ಸಂಜಿತ್ ಸರೋವರ್ ನಟನೆಯ ಚೊಚ್ಚಲ ಸಿನಿಮಾ 'ಮ್ಯಾಂಗೋ ಪಚ್ಚ' ರಿಲೀಸ್‌ಗೆ ರೆಡಿಯಾಗಿದೆ. ಮುಂದಿನ ತಿಂಗಳು ಸಂಕ್ರಾಂತಿಗೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಆ ಸಿನಿಮಾವನ್ನು ಸಾನ್ವಿ ಸುದೀಪ್ ಅವರೇ ಮತ್ತೆ ಕೆಆರ್‌ಜಿ ಜೊತೆ ಸೇರಿಕೊಂಡು ವಿತರಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಸಾನ್ವಿ ಸುದೀಪ್ ಪಿಯುಸಿ ಮುಗಿಸಿದ್ದಾರಷ್ಟೇ. ಅದಾದ ಬಳಿಕ ಉನ್ನತ ಶಿಕ್ಷಣದ ಕಡೆ ಗಮನ ಹರಿಸಲಿಲ್ಲ. ಅಲ್ಲಿಗೆ ಬಿಟ್ಟು ಹೈದರಾಬಾದ್‌ನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ಅಭಿನಯದ ತರಬೇತಿಯನ್ನು ಪಡೆದರು. ಅದರೊಂದಿಗೆ ಗಾಯನದ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಈಗ ಸಿನಿಮಾದಲ್ಲಿ ಹಾಡುಗಾರಿಕೆಯಲ್ಲಿ ಗಮನ ಹರಿಸಿದ್ದಾರೆ. ಈಗ ವಿತರಣಾ ಕ್ಷೇತ್ರಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ.

More from Filmibeat

English summary
Kichcha Sudeep daughter Sanvi entered distribution with Mark through KRG Studio.
Read more about: kichcha sudeep daughter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X