50 ಮಿಲಿಯನ್ ಗಡಿ ದಾಟಿದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಹಾಡಿದ ಹಾಡು;ಮಸ್ತ್ ಮಲೈಕಾಗೆ ಮಸ್ತ್ ರೆಸ್ಪಾನ್ಸ್

ಕಳೆದ ವರ್ಷ ಡಿಸೆಂಬರ್‌ಗೆ ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್ ಆಗಿತ್ತು. ಈ ಮಾಸ್ ಎಂಟರ್‌ಟೈನರ್ ಸಿನಿಮಾ ಮೂಲಕ ಸುದೀಪ್ ಪುತ್ರಿ ಸಾನ್ವಿ ಕನ್ನಡದಲ್ಲಿ ಚೊಚ್ಚಲ ಹಾಡನ್ನು ಹಾಡುವ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇವರು ಹಾಡಿರುವ "ಮಸ್ತ್ ಮಲೈಕಾ.." ಸಂಗೀತ ಪ್ರಿಯರಿಗೆ ಕಿಕ್ ಕೊಟ್ಟಿತ್ತು.

ಕಿಚ್ಚ ಸುದೀಪ್ ನಟಿಸಿರುವ 'ಮಾರ್ಕ್' ಮಾಸ್ ಸಿನಿಮಾದಲ್ಲಿ ಹೆಜ್ಜೆ ಪಾರ್ಟಿ ಸಾಂಗ್‌ಗೆ ಸಾನ್ವಿ ಸುದೀಪ್ ಹಾಡಿದ್ದರು. ಅದು ಕನ್ನಡದ ಚೊಚ್ಚಲ ಸಾಂಗ್ ಆಗಿತ್ತು. ಮೊದಲ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾದ "ಮಸ್ತ್ ಮಲೈಕಾ" ಹಾಡು ಈಗ ಯೂಟ್ಯೂಬ್‌ನಲ್ಲಿ ದಾಖಲೆ ಬರೆದಿದೆ. ಸಾನ್ವಿ ಧ್ವನಿಗೆ ಸಂಗೀತ ಪ್ರಿಯರು ಫಿದಾ ಆಗಿದ್ದರು. ಹಾಡು ರಿಲೀಸ್ ಆಗುತ್ತಿದ್ದಂತೆ ಈ ಪಾರ್ಟಿ ಸಾಂಗ್ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು.

Kichcha Sudeep daughter Sanvi first Song Mast Malaika from Mark movie hit 50 million views

'ಮಾರ್ಕ್' ಸಿನಿಮಾದ "ಮಸ್ತ್ ಮಲೈಕಾ" ಹಾಡಿಗೆ ಮಕ್ಕಳಿಂದ ಹಿಡಿದು ಯುವಕ-ಯುವತಿಯರು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದ್ದರು. ಸಿನಿಪ್ರಿಯರ ಬಾಯಲ್ಲಿ ಮಸ್ತ್ ಮಲೈಕಾಳ ಹಾಡನ್ನು ಮಸ್ತ್ ಮಸ್ತ್ ಆಗಿ ಗುನುಗುತ್ತಿದ್ದರು. ಅಷ್ಟರ ಮಟ್ಟಿಗೆ "ಮಸ್ತ್ ಮಲೈಕಾ" ಹಾಡು ಭರ್ಜರಿ ಹಿಟ್ ಆಗಿತ್ತು. ಇದೀಗ ಯೂಟ್ಯೂಬ್‌ನಲ್ಲಿ ಈ ಹಾಡು ಹೊಸ ದಾಖಲೆಯನ್ನು ಬರೆದಿದೆ.

'ಮ್ಯಾಕ್ಸ್' ಸಿನಿಮಾ ಬಳಿಕ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನಲ್ಲಿ 'ಮಾರ್ಕ್' ನಿರ್ಮಾಣವಾಗಿತ್ತು. ಈ ಸಿನಿಮಾಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದರು. ಸಿನಿಮಾದ ಹಾಡು ಯುವಕರ ಪಾರ್ಟಿ ಸಾಂಗ್ ಆಗಿ ಬದಲಾಗಿತ್ತು. ಇಂದಿಗೂ ಯುವಕರು ಮಾಡುವ ಪಾರ್ಟಿಗಳಲ್ಲಿ "ಮಸ್ತ್ ಮಲೈಕಾ.." ಸಾಂಗ್ ಪ್ಲೇ ಆಗಿಯೇ ಆಗುತ್ತೆ.

Also Read
22 ವರ್ಷಗಳ ಬಳಿಕ 'ರಂಗ SSLC' ಸಿನಿಮಾ ನೆನೆದ ಕಿಚ್ಚ ಸುದೀಪ್; ಅಭಿಮಾನಿ ಪೋಸ್ಟ್ ನೋಡಿ ರಿಪ್ಲೇ
22 ವರ್ಷಗಳ ಬಳಿಕ 'ರಂಗ SSLC' ಸಿನಿಮಾ ನೆನೆದ ಕಿಚ್ಚ ಸುದೀಪ್; ಅಭಿಮಾನಿ ಪೋಸ್ಟ್ ನೋಡಿ ರಿಪ್ಲೇ

ಸರಿಗಮ‌ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ "ಮಸ್ತ್ ಮಲೈಕಾ" ಸಾಂಗ್ ರಿಲೀಸ್ ಆಗಿತ್ತು. ಈಗ ಈ ಹಾಡು ಐದು ಮಿಲಿಯನ್‌ಗೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಈ ಮೂಲಕ ಕಿಚ್ಚನ 'ಮಾರ್ಕ್' ಸಿನಿಮಾದ ಹಾಡು ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಇನ್ನು ಸಾನ್ವಿ ಸುದೀಪ್ ಜೊತೆ‌ ನಕಾಶ್ ಅಜೀಜ್ ಧ್ವನಿ ಕೂಡಿಸಿದ್ದರು. ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಈ ಹಾಡು ಬಿಗ್ ಹಿಟ್ ಆಗಿದೆ.

Kichcha Sudeep daughter Sanvi first Song Mast Malaika from Mark movie hit 50 million views

ಕಿಚ್ಚ ಸುದೀಪ್ ಮಗಳ ಧ್ವನಿಗೆ ಮಸ್ತ್ ಆಗಿ ಹೆಜ್ಜೆ ಹಾಕಿರೋದು ಮತ್ತೊಂದು ವಿಶೇಷ. ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದರೆ, 'ರಂಗೀತರಂಗ' ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಈ ಹಾಡಿಗೆ ಸಂಗೀತ ರಚಿಸಿದ್ದಾರೆ. ಮಸ್ತ್ ಮಲೈಕಾ ಹಾಡಿಗೆ ಧ್ವನಿಯಾಗುವ ಮೂಲಕ ಸಾನ್ವಿ ಸುದೀಪ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಾನ್ವಿ ಹಾಡಿರುವ ಚೊಚ್ಚಲ ಹಾಡು 50 ಮಿಲಿಯನ್ ವೀವ್ಸ್ ಕಂಡಿರುವುದು ದೊಡ್ಡ ದಾಖಲೆ. ಸರಿಗಮ ಯೂಟ್ಯೂಬ್‌ ಚಾನೆಲ್‌ನಲ್ಲಿ 50 ಮಿಲಿಯನ್ ವೀಕ್ಷಣೆ ಕಂಡ ಮೊದಲ ಕನ್ನಡ ಹಾಡು ಮಸ್ತ್ ಮಲೈಕಾ ಅನ್ನೋದು ಈ ಹಾಡಿನ ಮತ್ತೊಂದು ವಿಶೇಷ.

ಯೂಟ್ಯೂಬ್ ಮಾತ್ರವಲ್ಲದೆ ರೀಲ್ಸ್‌ನಲ್ಲಿಯೂ ಕಮಾಲ್ ಮಾಡಿದ ಮಸ್ತ್ ಮಲೈಕಾ ಸಾಂಗ್ 50 ಮಿಲಿಯನ್ ವೀಕ್ಷಣೆ ಕಂಡು ಮುಂದೆ ಸಾಗುತ್ತಿದೆ. ಈ ಹಾಡಿನಲ್ಲಿ ಕಿಚ್ಚ ಸುದೀಪ್ ಜೊತೆ ಮಲೈಕಾ ಅವತಾರದಲ್ಲಿ ನಿಶ್ವಿಕಾ ನಾಯ್ಡು ಸಖತ್ ಹೆಜ್ಜೆ ಹಾಕಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಈ ಹಾಡು ಬಿಡುಗಡೆಯಾಗಿತ್ತು. ಅದರಲ್ಲಿಯೂ ಕನ್ನಡದ ಹಾಡು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿತ್ತು.

More from Filmibeat

English summary
Kichcha Sudeep daughter Sanvi first Song Mast Malaika from Mark movie hit 50 million views.
Read more about: sudeep song youtube
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X