Puneeth Rajkumar Fans: ಪುನೀತ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ಅಪ್ಪು ಪ್ಯಾನ್ಸ್‌ಗೆ ಕ್ಷಮೆ ಕೇಳಿದ ಹುಡುಗ

'ಜೇಮ್ಸ್' ಸಿನಿಮಾ ಅಪ್ಪು ಅಭಿಮಾನಿಗಳಿಗೆ ಭಾವನಾತ್ಮಕ ಸಿನಿಮಾ. ಇದು ಬರೀ ಸಿನಿಮಾ ಆಗಿ ಉಳಿದಿಲ್ಲ. ಪುನೀತ್ ರಾಜ್‌ಕುಮಾರ್ ಕೊನೆಯ ಕಮರ್ಷಿಯಲ್ ಸಿನಿಮಾ ಆಗಿದ್ದರಿಂದ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಆದರೆ, ಕೆಲವು ದಿನಗಳ ಹಿಂದೆ ಪವನ್ ಎಂಬ ಹುಡುಗನೊಬ್ಬ ಪುನೀತ್ ರಾಜ್‌ಕುಮಾರ್ ಹಾಗೂ 'ಜೇಮ್ಸ್' ಸಿನಿಮಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಎನ್ನಲಾಗಿದೆ.

ಈ ಕಾರಣಕ್ಕೆ ರೊಚ್ಚಿಗೆದ್ದ ಅಪ್ಪು ಅಭಿಮಾನಿಗಳು ಪವನ್‌ರನ್ನು ಹುಡುಕಾಡಿದ್ದರು. ಕೊನೆಗೂ ಪವನ್‌ರನ್ನು ಹುಡುಕಿರುವ ಅಪ್ಪು ಫ್ಯಾನ್ಸ್ ಬುದ್ದಿವಾದ ಹೇಳಿದ್ದಾರೆ. ಈ ಪವನ್ ಕೂಡ ಅಪ್ಪು ಬಗ್ಗೆ ಹಾಗೂ ಜೇಮ್ಸ್ ಬಗ್ಗೆ ಮಾತಾಡಿದ್ದು ತಪ್ಪಾಗಿದೆ ಎಂದು ಕ್ಷಮೆ ಕೋರಿದ್ದಾನೆ. ಅಲ್ಲದೆ ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.

ಯುಟ್ಯೂಬ್‌ನಲ್ಲಿ ಪವನ್ ಹೇಳಿಕೆ

ಯುಟ್ಯೂಬ್‌ನಲ್ಲಿ ಪವನ್ ಹೇಳಿಕೆ

'ಜೇಮ್ಸ್' ಸಿನಿಮಾ ಬಿಡುಗಡೆಯಾದ ವೇಳೆ ಯುಟ್ಯೂಬ್ ಚಾನೆಲ್ ಒಂದರಲ್ಲಿ ಪವನ್ ಮಾತಾಡಿದ್ದ. ಪುನೀತ್ ರಾಜ್‌ಕುಮಾರ್ ಬಗ್ಗೆ ಹಾಗೂ ಜೇಮ್ಸ್ ಸಿನಿಮಾ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದ ಎಂದು ಪುನೀತ್ ಅಭಿಮಾನಿಗಳು ಆರೋಪ ಮಾಡಿದ್ದಾರೆ. ಹೀಗಾಗಿ ಪವನ್ ಹುಡುಕಾಟ ನಡೆಸಿದ್ದರು. ಕೊನೆಗೂ ಪವನ್ ಕಾಲೇಜ ಹುಡುಗ ಎಂದು ಗೊತ್ತಾದ ಬಳಿಕ ಬುದ್ದಿವಾದ ಹೇಳಿದ್ದಾರೆ. ತಕ್ಷಣವೇ ಪವನ್ ಅಪ್ಪುಗೆ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಹೇಳಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಅಪ್ಪುಗೆ ಕ್ಷಮೆ ಕೇಳಿದ ಪವನ್

ಅಪ್ಪುಗೆ ಕ್ಷಮೆ ಕೇಳಿದ ಪವನ್

"ನನ್ನ ಮಾತಿನಿಂದ ತಪ್ಪಾಗಿದ್ದರೆ, ನಾನು ಕ್ಷಮೆ ಹೇಳುತ್ತೇನೆ. ನಾನು ಈ ರೀತಿ ಮಾತಾಡಬಾರದಿತ್ತು. ಇನ್ನೊಮ್ಮೆ ಯಾವುದೇ ಹೀರೋ ಬಗ್ಗೆ ಆಗಲಿ, ಸಿನಿಮಾ ಬಗ್ಗೆ ಆಗಲಿ. ಆ ತರ ಮಾತಾಡುವುದಿಲ್ಲ. ಎಲ್ಲಾ ಅಪ್ಪು ಅಭಿಮಾನಿಗಳಿಗೆ ನನ್ನಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ." ಎಂದು ಪವನ್, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಮ್ಮುಖದಲ್ಲಿ ಕ್ಷಮೆ ಕೇಳಿದ್ದಾನೆ.

ಪವನ್‌ನನ್ನು ಕ್ಷಮಿಸಿದ್ದೇವೆ

ಪವನ್‌ನನ್ನು ಕ್ಷಮಿಸಿದ್ದೇವೆ

ಪವನ್ ಹುಡುಕಿ ಬುದ್ದಿ ಹೇಳಿರುವ ಅಭಿಮಾನಿಗಳು ಕೂಡ ಪವನ್‌ ಅನ್ನು ಕ್ಷಮಿಸಿದ್ದಾರೆ. ಇನ್ನೂ ಕಾಲೇಜು ಓದುತ್ತಿರುವ ಹುಡುಗ ಹುಡುಗಾಟದಿಂದ ಏನೋ ಮಾತಾಡಿದ್ದಾನೆ. ಅದಕ್ಕೆ ಕ್ಷಮಿಸಿದ್ದೇವೆ ಎಂದಿದ್ದಾರೆ. "ಇನ್ನೂ ಕಾಲೇಜು ಹುಡುಗ. ಹುಡುಗಾಟಿಕೆ ಬುದ್ದಿಯಿಂದ ಏನೋ ಮಾತಾಡಿದ್ದಾರೆ. ಎಲ್ಲಾ ಅಭಿಮಾನಿಗಳು ಈ ಹುಡುಗ ಪವನ್ ಅನ್ನು ದಯವಿಟ್ಟು ಕ್ಷಮಿಸಬೇಕು. ಟ್ರೋಲ್ ಪೇಜ್‌ನವರು ಈ ಹುಡುಗ ಕ್ಷಮೆಯನ್ನು ಸ್ವೀಕರಿಸಿ, ಆ ವಿಡಿಯೋಗಳನ್ನು ಡಿಲೀಟ್ ಮಾಡಿ." ಎಂದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

ಜೇಮ್ಸ್ ಸುಖಾಂತ್ಯ

ಜೇಮ್ಸ್ ಸುಖಾಂತ್ಯ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ಕಳೆದೆರಡು ದಿನಗಳಿಂದ ವಿವಾದಕ್ಕೆ ಸಿಲುಕಿತ್ತು. ಈಗ 'ಜೇಮ್ಸ್' ಎರಡನೇ ವಾರವೂ 270ಕ್ಕೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣಲಿದೆ. ಮೊದಲ ವಾರ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಅಭಿಮಾನಿಗಳು ಥಿಯೇಟರ್ ಮುಂದೆ ದೊಡ್ಡ ಜಾತ್ರೆಯನ್ನೇ ಮಾಡಿದ್ದರು.

More from Filmibeat

English summary
Kichcha Sudeep fan Pawan apolozised to Puneeth Rajkumar fans. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X