ಜುಲೈ 6 ಸುದೀಪ್‌ ವೃತ್ತಿ ಬದುಕಿಗೆ ಸ್ಪೆಷಲ್ ಯಾಕೆ? ಕಿಚ್ಚ ಫ್ಯಾನ್ಸ್ ಸಂಭ್ರಮಕ್ಕೇನು ಕಾರಣ?

ಕಿಚ್ಚ ಸುದೀಪ್ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು. ಈ ಮಾತನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಇಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕಿಚ್ಚ ಸುದೀಪ್‌ಗೆ ಅಭಿಮಾನಿಗಳಿದ್ದಾರೆ. 'ಸ್ಪರ್ಶ' ಸಿನಿಮಾದಿಂದ ಹೀರೊ ಜರ್ನಿ ಶುರುವಾಗಿದ್ದು 46ನೇ ಸಿನಿಮಾವರೆಗೂ ಬಂದು ನಿಂತಿದೆ.

ಈ 46 ಸಿನಿಮಾಗಳ ಸಿನಿ ಜರ್ನಿಯಲ್ಲಿ ಕಿಚ್ಚ ಸುದೀಪ್‌ಗೆ ಗೆಲುವು ಸಿಕ್ಕಿದೆ. ಸೋಲು ಕಂಡಿದ್ದಾರೆ. ಎರಡನೂ ಸಮಾನವಾಗಿ ಸ್ವೀಕರಿಸಿ ಮುನ್ನುಗುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ತಮ್ಮದೇ ವಿಶಿಷ್ಠ ಮ್ಯಾನರಿಸಂ, ಡೈಲಾಗ್ ಡಿಲೇವರಿ, ವಾಯ್ಸ್, ಫ್ಯಾಷನ್ ಸೆನ್ಸ್, ಆಟಿಟ್ಯೂಡ್ ಅವರ ಅಭಿಮಾನಿಗಳಿಗೆ ಇಷ್ಟ. ಅದಕ್ಕೆ ಕಿಚ್ಚನ ಪ್ರತಿಯೊಂದು ಸಂಭ್ರಮದಲ್ಲೂ ಅಭಿಮಾನಿಗಳು ಭಾಗಿಯಾಗುತ್ತಾರೆ.

Sudeep Huchcha Movie- Kichcha 46- Eega

ಜುಲೈ 6 ಕಿಚ್ಚ ಸುದೀಪ್‌ಗೆ ವಿಶೇಷ ದಿನ. ಈ ದಿನವನ್ನು ಅವರು ಎಂದಿಗೂ ಮರೆಯೋದಿಲ್ಲ. ಯಾಕಂದ್ರೆ, ಅವರ ವೃತ್ತಿ ಬದುಕಿಗೆ ಸೂಪರ್‌ ಸಕ್ಸಸ್ ಕೊಟ್ಟ ಎರಡು ಸಿನಿಮಾಗಳು ಬಿಡುಗಡೆಯಾಗಿದ್ದು ಇದೇ ಇದೆ. ಹಾಗಿದ್ದರೆ, ಆ ಎರಡು ಸಿನಿಮಾಗಳು ಯಾವುವು? ಅನ್ನೋದನ್ನು ನೋಡಿವುದಕ್ಕೆ ಮುಂದೆ ಓದಿ.

ಜುಲೈ 6 ಕಿಚ್ಚನಿಗೆ ಯಾಕಷ್ಟು ಸ್ಪೆಷಲ್?

ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 26 ವರ್ಷಗಳಾಗಿವೆ. ಈ 26 ವರ್ಷಗಳಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ನಟಿಸಿದ್ದಾರೆ. ಈ 26 ವರ್ಷಗಳಲ್ಲಿ ಸುದೀಪ್ ವೃತ್ತಿ ಬದುಕಿನಲ್ಲಿ ಅದೆಷ್ಟೋ ಸಿನಿಮಾಗಳು ಯಶಸ್ಸು ತಂದುಕೊಟ್ಟಿವೆ. ಆದರೆ, ಜುಲೈ 6ರಂದು ರಿಲೀಸ್ ಆಗಿದ್ದ ಎರಡು ಸಿನಿಮಾಗಳನ್ನು ಸುದೀಪ್ ಮರೆಯೋಕೆ ಸಾಧ್ಯವೇ ಇಲ್ಲ. ಅದರಲ್ಲೊಂದು 'ಹುಚ್ಚ'.

Sudeep Huchcha Movie- Kichcha 46- Eega

ಓಂ ಪ್ರಕಾಶ್ ರಾವ್ ನಿರ್ದೇಶಿಸಿದ 'ಹುಚ್ಚ' ಸಿನಿಮಾ ಕಿಚ್ಚ ಸಿನಿ ಕರಿಯರ್‌ಗೆ ಕಿಕ್ ಕೊಟ್ಟ ಸಿನಿಮಾ. ಇದು 2001 ಜುಲೈ 6 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. 'ಸ್ಪರ್ಶ' ಬಳಿಕ ತೆರೆಕಂಡಿದ್ದ 'ಹುಚ್ಚ' ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಸುದೀಪ್ ಸ್ಟೈಲ್, ಡೈಲಾಗ್, ಆಟಿಟ್ಯೂಡ್‌ ಅನ್ನು ಪ್ರೇಕ್ಷಕರು ಇಷ್ಟ ಪಟ್ಟಿದ್ದರು. ಅದರಲ್ಲೂ ರಾಜೇಶ್ ರಾಮನಾಥ್ ಹಾಕಿದ ಟ್ಯೂನ್‌ಗಳು ಸೂಪರ್ ಹಿಟ್ ಆಗಿದ್ದವು. ಇಂದು (ಜುಲೈ 6) 'ಹುಚ್ಚ' ರಿಲೀಸ್ ಆಗಿ 22 ವರ್ಷಗಳನ್ನು ಪೂರೈಸಿದೆ.

'ಈಗ' ತೆರೆಕಂಡು 11 ವರ್ಷ

ಇದು ಕಾಕತಾಳೀಯವೋ ಏನೋ ಗೊತ್ತಿಲ್ಲ. 2001, ಜುಲೈ 6 ರಂದು 'ಹುಚ್ಚ' ರಿಲೀಸ್ ಆಗಿತ್ತು. ಈ ಮೂಲಕ ಸುದೀಪ್ ಮಾಸ್ ಹೀರೊ ಆಗಿ ಕಂಡಿದ್ದರು. ಈ ಸಿನಿಮಾ ತೆರೆಕಂಡು ಸರಿಯಾಗಿ 11 ವರ್ಷಕ್ಕೆ ರಾಜಮೌಳಿ ನಿರ್ದೇಶಿಸಿದ 'ಈಗ' ತೆರೆಕಂಡಿತ್ತು. ಸುದೀಪ್ ನೆಗೆಟಿವ್ ಶೇಡ್‌ನಲ್ಲಿ ನಟಿಸಿದ್ದರೂ, ಗೆದ್ದಿದ್ದು ಇವರೇನೆ.

'ಈಗ' 2012, ಜುಲೈ 6 ರಂದು ತೆಲುಗು ಹಾಗೂ ತಮಿಳಿನಲ್ಲಿ ತೆರೆಕಂಡಿತ್ತು. ಈ ಸಿನಿಮಾ ತೆರೆಕಂಡು ಇಂದಿಗೆ (ಜುಲೈ 6) 11 ವರ್ಷಗಳನ್ನು ಪೂರೈಸಿದೆ. ಒಂದ್ಕಡೆ 'ಹುಚ್ಚ' ಸಿನಿಮಾ ತೆರೆಕಂಡು 22 ವರ್ಷಗಳಾಗಿದ್ದರೆ, 'ಈಗ' ರಿಲೀಸ್ ಆಗಿ 11 ವರ್ಷಗಳನ್ನು ಪೂರೈಸಿದೆ.

ಕಿಚ್ಚ 46 ಮೇಲೆ ಎಲ್ಲರ ಕಣ್ಣು

ಕಿಚ್ಚ ಸುದೀಪ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಆದರೆ, ಇದೇ 11 ವರ್ಷಗಳ ಹಿಂದೆನೇ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ನಟ ಎನಿಸಿಕೊಂಡಿದ್ದರು. ಕಳೆದ ವರ್ಷ ತೆರೆಕಂಡ 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಅಲ್ಲಿಂದ ಮತ್ತೊಂದು ಸಿನಿಮಾ ಆಯ್ಕೆ ಮಾಡಲು ಕೊಂಚ ಸಮಯ ತೆಗೆದುಕೊಂಡಿದ್ದರು.

ಕೆಲವೇ ದಿನಗಳ ಹಿಂದಷ್ಟೇ ಕಿಚ್ಚ ಸುದೀಪ್ ನಟನೆಯ 46ನೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದು ಸುದೀಪ್ ಅಭಿಮಾನಿಗಳಿ ಕಿಕ್ ಕೊಟ್ಟಿತ್ತು. ರಕ್ತಸಿಕ್ತ ದೇಹದ 'ಹೆಬ್ಬುಲಿ'ಯ ಘರ್ಜನೆ ಜೋರಾಗಿತ್ತು. ಇದೇ ಜುಲೈ 15 ರಿಂದ ಸುದೀಪ್ 446ನೇ ಚಿತ್ರದ ಶೂಟಿಂಗ್ ಆರಂಭದ ಆಗಿದೆ. ಈ ಮಧ್ಯೆ ಕಿಚ್ಚನ ಅಭಿಮಾನಿಗಳು ಜುಲೈ 6 ಅನ್ನು 'ಹುಚ್ಚ@22' ಮತ್ತು 'ಈಗ@11' ಎಂದು ಸಂಭ್ರಮಿಸುತ್ತಿದ್ದಾರೆ.

More from Filmibeat

English summary
Kichcha Sudeep Fans Celebrating Huchcha's 22nd and Eega's 11th Anniversary on July 6th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X