Max Box Office:ಕಿಚ್ಚ ಸುದೀಪ್ 'ಮ್ಯಾಕ್ಸ್' ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು? 'ಯುಐ' ಹಿಂದಿಕ್ಕುತ್ತಾ?
ಒಂದು ವಾರ ಕಳೆಯುವುದರೊಳಗೆ ಕನ್ನಡದ ಇಬ್ಬರು ಸೂಪರ್‌ಸ್ಟಾರ್‌ಗಳ ಸಿನಿಮಾಗಳು ರಿಲೀಸ್ ಆಗುತ್ತಿವೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ 'ಯುಐ' ಈಗಾಗಲೇ ಥಿಯೇಟರ್‌ನಲ್ಲಿ ಇದೆ. ಈಗ ಕಿಚ್ಚ ಸುದೀಪ್ ಸರದಿ. 'ವಿಕ್ರಾಂತ್ ರೋಣ' ಬಳಿಕ ತೆರೆಕಾಣುತ್ತಿರುವ 'ಮ್ಯಾಕ್ಸ್' ಡಿಸೆಂಬರ್ 25ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಕಿಚ್ಚನ ಪ್ಯಾನ್ಸ್‌ಗೆ ಕಿಕ್ ಕೊಟ್ಟಿದೆ.
ಹೆಚ್ಚು ಕಡಿಮೆ ಎರಡು ವರ್ಷಗಳ ಬಳಿಕ ಸುದೀಪ್ ಸಿನಿಮಾ ಬಿಡುಗಡೆಯಾಗುತ್ತಿದೆ. ಇತ್ತ 'ಮ್ಯಾಕ್ಸ್' ಇನ್ನೂ ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ಮೊದಲ ದಿನದ ಗಳಿಕೆ ಲೆಕ್ಕಾಚಾರ ಹಾಕಲಾಗಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶೇ.100ರಷ್ಟು ರೆಸ್ಪಾನ್ಸ್ ಸಿಗದೇ ಹೋದರೂ ಶೇ.70ರಷ್ಟು ಪ್ರತಿಕ್ರಿಯೆ ಸಿಕ್ಕಿದೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ.

ಸಿನಿಮಾ ಬಿಡುಗಡೆಗೂ ಮುನ್ನವೇ 'ಮ್ಯಾಕ್ಸ್' ಅಡ್ವಾನ್ಸ್ ಬುಕಿಂಗ್ ಹೇಗಿದೆ ಅನ್ನೋ ಲೆಕ್ಕ ಸಿಕ್ಕಿದೆ. ಸಿನಿಮಾ ಟ್ರೇಡ್ ಅನ್ನು ಟ್ರ್ಯಾಕ್ ಮಾಡುವ ಸ್ಯಾಕ್ನಿಲ್ಕ್ ವೆಬ್ ಪೋರ್ಟಲ್ ಅಡ್ವಾನ್ಸ್ ಬುಕಿಂಗ್‌ನಿಂದ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಆಗಿದೆ ಅನ್ನೋ ಲೆಕ್ಕಾಚಾರವನ್ನು ಹೊರಹಾಕಿದೆ.
1 ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್
ಕಿಚ್ಚ ಸುದೀಪ್ 'ಮ್ಯಾಕ್ಸ್' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಬೆಳಗ್ಗೆ 6 ಗಂಟೆಯಿಂದ ಮೊದಲ ಶೋ ಆರಂಭ ಆಗುತ್ತಿದೆ. ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಅನ್ನು ಅರೇಂಜ್ ಮಾಡಲಾಗಿದೆ. ಕಿಚ್ಚ ಸುದೀಪ್ ಈಗಾಗಲೇ ಸಿನಿಮಾ ಸಿಕ್ಕಿರುವ ರೆಸ್ಪಾನ್ಸ್ ಬಗ್ಗೆ ಅಧಿಕೃತವಾಗಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಅಡ್ವಾನ್ಸ್ ಬುಕಿಂಗ್‌ನಿಂದ ಸುಮಾರು 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಬುಕ್ ಆಗಿದ್ದು, 250ಕ್ಕೂ ಅಧಿಕ ಶೋಗಳು ಫಾಸ್ಟ್ ಫಿಲ್ಲಿಂಗ್ ಹಾಗೂ ಸೋಲ್ಡ್ ಔಟ್ ಆಗಿವೆ ಎಂದು ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್ ಎಷ್ಟು?
ಸ್ಯಾಕ್ನಿಲ್ಕ್ ವೆಬ್ ಪೋರ್ಟಲ್ 88 ಸಾವಿರ ಟಿಕೆಟ್ ಮಾರಾಟವಾದಾಗ ಕೌಂಟ್ ಅನ್ನು ತೆಗೆದುಕೊಂಡಿದೆ. ಆ ಹೊತ್ತಿದೆ. ಅಡ್ವಾನ್ಸ್ ಬುಕಿಂಗ್‌ನಿಂದ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾ 2.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ 927 ಶೋಗಳನ್ನು ಹಾಕಲಾಗಿದೆ. ಇನ್ನು ಬಿಡುಗಡೆಗೂ ಹಿಂದಿನ ಮುಗಿಯುವ ತನಕ 1 ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಟ್ ಆಗಿರುವುದರಿಂದ ಅಡ್ವಾನ್ಸ್ ಬುಕಿಂಗ್‌ನಿಂದ 2.75 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಅಂದಾಜಿಸಲಾಗಿದೆ.

ಯಾವ್ಯಾವ ಜಿಲ್ಲೆಯಲ್ಲಿ ಹೇಗಿದೆ ರೆಸ್ಪಾನ್ಸ್?
ಕಿಚ್ಚ ಸುದೀಪ್ ಸಿನಿಮಾಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಡ್ವಾನ್ಸ್ ಬುಕಿಂಗ್‌ನಿಂದ 1.54 ಕೋಟಿ ರೂಪಾಯಿ ಇಲ್ಲಿಂದಲೇ ಕಲೆಕ್ಷನ್ ಆಗಿದೆ. ಹಾಗೇ ಮೈಸೂರಿನಿಂದ 36 ಲಕ್ಷ ರೂಪಾಯಿ, ತುಮಕೂರು 11 ಲಕ್ಷ ರೂಪಾಯಿ, ಶಿವಮೊಗ್ಗ 6 ಲಕ್ಷ ರೂಪಾಯಿ, ದಾವಣಗೆರೆ 5.55 ಲಕ್ಷ ರೂ., ಕಲಬುರ್ಗಿ 6 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ನಾಳೆ ರಾತ್ರಿ 10 ಗಂಟೆ ಬಳಿಕ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನೋದು ಗೊತ್ತಾಗಲಿದೆ.
ಮೊದಲ ದಿನದ ಅಂದಾಜು ಕಲೆಕ್ಷನ್ ಎಷ್ಟು?
ಅಡ್ವಾನ್ಸ್ ಬುಕಿಂಗ್‌ನಿಂದ 'ಮ್ಯಾಕ್ಸ್' 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ. ಆದರೆ, ಬಹುತೇಕ ಕಡೆಗಳಲ್ಲಿ ಥಿಯೇಟರ್‌ಗೆ ಹೋಗಿ ಟಿಕೆಟ್‌ಗಳನ್ನು ಖರೀದಿ ಮಾಡುತ್ತಾರೆ. ಹೀಗಾಗಿ ಅದೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡು ಮೊದಲ ದಿನ ಅಂದಾಜು 5.5 ಕೋಟಿಯಿಂದ ಆರು ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂದು ಕರ್ನಾಟಕದ ವಿತರಕರು ಅಂದಾಜು ಲೆಕ್ಕ ಹಾಕಿದ್ದಾರೆ. ಉಪ್ಪಿ ನಿರ್ದೇಶಿಸಿದ 'ಯುಐ' ಸಿನಿಮಾ ಮೊದಲ ದಿನ 6.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಇದೇ ಸ್ಯಾಕ್ನಿಲ್ಕ್ ವೆಬ್ ಪೋರ್ಟಲ್ ವರದಿ ಮಾಡಿತ್ತು.


Click it and Unblock the Notifications











