Max Box Office Day 2: 'ಮ್ಯಾಕ್ಸ್' ಮೊದಲನೇ ಭರ್ಜರಿ ಓಪನಿಂಗ್.. 2ನೇ ದಿನ ಗಳಿಸಿದ್ದೆಷ್ಟು?

ವರ್ಷದ ಕೊನೆಯಲ್ಲಿ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಹಿಟ್ ಸಿನಿಮಾ ಸಿಗುವ ಲಕ್ಷಣಗಳು ಕಾಣಿಸುತ್ತಿದೆ. ಕಿಚ್ಚ ಸುದೀಪ್ ಎರಡೂವರೆ ವರ್ಷಗಳ ಬಳಿಕ ನಟಿಸಿರುವ 'ಮ್ಯಾಕ್ಸ್'ಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಿಚ್ಚನ ಮ್ಯಾನರಿಸಂ, ಸ್ಟೈಟ್ ಆಕ್ಟಿಂಗ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪ್ರೇಕ್ಷಕರಿಗೆ ಇಡೀ ಸಿನಿಮಾ ಹಿಡಿಸಿಬಿಟ್ಟಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲೂ ಕಲೆಕ್ಷನ್ ಜೋರಾಗಿದೆ.

ಮೊದಲ ದಿನ 'ಮ್ಯಾಕ್ಸ್'ಗೆ ಸಿಕ್ಕಿದ ರೆಸ್ಪಾನ್ಸ್ ಕಂಡು ಸ್ಯಾಂಡಲ್‌ವುಡ್ ನಿಟ್ಟುಸಿರು ಬಿಟ್ಟಿತ್ತು. ವರ್ಷದ ಕೊನೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಗೆದ್ದಿರುವುದು ಸಿನಿಮಾ ಮಂದಿಗಂತೂ ಖುಷಿ ಕೊಟ್ಟಿದೆ. ಉಪ್ಪಿಯ 'ಯುಐ' ಹಾಗೂ ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾಗಳ ಬಾಕ್ಸಾಫೀಸ್‌ ಕಲೆಕ್ಷನ್ ಮತ್ತೆ ಸ್ಯಾಂಡಲ್‌ವುಡ್ ಚೇತರಿಕೆ ಕಾಣುತ್ತಿರುವ ಸೂಚನೆ.

Kichcha Sudeep film Max Day 2 Karnataka Box office Collection Report

ಇನ್ನು ಮೊದಲನೇ ದಿನ ಫ್ಯಾನ್ಸ್ ಶೋಗಳಿಂದ ಉತ್ತಮ ಕಲೆಕ್ಷನ್ ಆಗಿತ್ತು. ಎರಡನೇ ದಿನದಲ್ಲಿ ಆ ಮೊತ್ತ ಮೈನಸ್ ಆಗಿದೆ. ಹೀಗಾಗಿ ಮೊದಲನೇ ದಿನದ ಗಳಿಕೆಗೂ ಎರಡನೇ ದಿನದ ಗಳಿಕೆಗೂ ವ್ಯತ್ಯಾಸವಿದೆ. ಹಾಗಿದ್ದರೆ, ಫಸ್ಟ್ ಡೇ ಸಿಕ್ಕಿದ ರೆಸ್ಪಾನ್ಸ್ ಎರಡನೇ ದಿನವೂ ಸಿಕ್ಕಿದೆಯೇ? ಬಾಕ್ಸಾಫೀಸ್‌ನಲ್ಲಿ 'ಮ್ಯಾಕ್ಸ್' ಕಲೆಕ್ಷನ್ ಎಷ್ಟಿದೆ? ಕರ್ನಾಟಕದ ಡಿಸ್ಟ್ರಿಬ್ಯೂಟರ್ ಗುಂಪಿನಲ್ಲಿ ಚರ್ಚೆ ಆಗುತ್ತಿರುವುದೇನು? ತಿಳಿಯುವುದಕ್ಕೆ ಮುಂದೆ ಓದಿ.

ಕಿಚ್ಚನ 'ಮ್ಯಾಕ್ಸ್' 2ನೇ ದಿನ ಗಳಿಸಿದ್ದೆಷ್ಟು?

ಸೂಪರ್‌ಸ್ಟಾರ್ ಸಿನಿಮಾ ಮೊದಲನೇ ದಿನ ಸಹಜವಾಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಸುಮಾರು 8.5 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಎರಡನೇ ದಿನ ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಶೇ.70ರಷ್ಟು ಥಿಯೇಟರ್ ಆಕ್ಯೂಪೆನ್ಸಿ ಇತ್ತು. ಹೀಗಾಗಿ ಮೊದಲನೇ ದಿನಕ್ಕಿಂತ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ನಿನ್ನೆ (ಡಿಸೆಂಬರ್ 26) ವರ್ಕಿಂಗ್ ಡೇ ಆಗಿರುವುದು ಕೂಡ ಒಂದು ಕಾರಣ. ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರುವ ಲೆಕ್ಕದ ಪ್ರಕಾರ, 2ನೇ 'ಮ್ಯಾಕ್ಸ್' 4.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

Kichcha Sudeep film Max Day 2 Karnataka Box office Collection Report

ಯಾವ್ಯಾವ ಕಡೆ ಹೇಗಿದೆ ರೆಸ್ಪಾನ್ಸ್ ?

ನಿನ್ನೆ (ಡಿಸೆಂಬರ್ 26) 'ಮ್ಯಾಕ್ಸ್'ಗೆ ಮಾರ್ನಿಂಗ್ ಶೋ ಬಿಟ್ಟರೆ, ಉಳಿದ ಮೂರು ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್.ಕಾಮ್ ವರದಿ ಪ್ರಕಾರ, ಶಿವಮೊಗ್ಗದಲ್ಲಿ ಶೇ.77ರಷ್ಟು ಆಕ್ಯೂಪೆನ್ಸಿ ಇತ್ತು. ಹಾಗೇ ತುಮಕೂರು ಶೇ.87, ರಾಯಚೂರು ಶೇ.68, ಕುಂದಾಪುರ ಶೇ.61, , ಮೈಸೂರು ಶೇ.53, ಕಲಬುರ್ಗಿ ಶೇ.65ರಷ್ಟು ಚಿತ್ರಮಂದಿರಗಳು ತುಂಬಿವೆ. ಇನ್ನು ಬೆಂಗಳೂರಿನಲ್ಲಿ ಶೇ.47ರಷ್ಟು ಚಿತ್ರಮಂದಿರಗಳು ತುಂಬಿದ್ದವು ಎಂದು ವರದಿ ಮಾಡಿದೆ.

ಏರಿಯಾ ಲೆಕ್ಕಚಾರ

ಬೆಂಗಳೂರು, ಕೋಲಾರ, ತುಮಕೂರು 2 ಕೋಟಿ ರೂ.
ಮಂಡ್ಯ, ಮೈಸೂರು, ಕೂರ್ಗ್, ಹಾಸನ್ 90 ಲಕ್ಷ ರೂ.
ಚಿತ್ರದುರ್ಗ, ದಾವಣಗೆರೆ 65 ಲಕ್ಷ ರೂ.
ಶಿವಮೊಗ್ಗ, ದಕ್ಷಿಣ ಕನ್ನಡ 35 ಲಕ್ಷ ರೂ.
ಹುಬ್ಬಳ್ಳಿ 40 ಲಕ್ಷ ರೂ.
ಹೈದರಾಬಾದ್ ಕರ್ನಾಟಕ 30 ಲಕ್ಷ ರೂ.
ಇತರೆ 10 ಲಕ್ಷ ರೂ.

ಮೂರನೇ ದಿನ ಹೆಚ್ಚಿದ ನಿರೀಕ್ಷೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ರಾಜ್ಯದಲ್ಲಿ ಇಂದು (ಡಿಸೆಂಬರ್ 27) ಶೋಕಾಚರಣೆ ಆಚರಿಸಲಾಗುತ್ತಿದೆ. ಈ ಕಾರಣಕ್ಕೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಹಾಗಾಗಿ ಇಂದು ನಿರೀಕ್ಷೆಗಿಂತ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆಯಿದೆ. ಎರಡು ದಿನಗಳಲ್ಲಿ 'ಮ್ಯಾಕ್ಸ್' ಒಟ್ಟು 13.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೂರನೇ ದಿನಕ್ಕೆ 18 ರಿಂದ 20 ಕೋಟಿ ರೂ. ಆಗಬಹುದೆಂಬ ನಿರೀಕ್ಷೆಯಿದೆ.

ವೀಕೆಂಡ್ ಲೆಕ್ಕಾಚಾರವೇನು?

ಹೊಸ ವರ್ಷದ ಮೂಡ್‌ನಲ್ಲಿರುವ ಜನರು ಜಾಲಿ ಮೂಡ್‌ನಲ್ಲಿ ಇದ್ದಾರೆ. ಹಾಗೇ ಡಿಸೆಂಬರ್ ಕೊನೆಯಲ್ಲಿ ತೆರೆಕಂಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಈ ವರ್ಷ ಕೂಡ ಅದೇ ಲೆಗೆಸಿ ಮುಂದುವರೆಯುವ ಸಾಧ್ಯತೆಯಿದೆ. ಇಂದಿನಿಂದ (ಡಿಸೆಂಬರ್ 27) ಥಿಯೇಟರ್‌ ಸಂಖ್ಯೆಗಳನ್ನು ಹೆಚ್ಚಿಸಲಾಗಿದೆ. ಹೀಗಾಗಿ ಕಲೆಕ್ಷನ್‌ನಲ್ಲಿ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ. ವೀಕೆಂಡ್ ಮುಗಿಯುವ ವೇಳೆಗೆ 'ಮ್ಯಾಕ್ಸ್' 30 ರಿಂದ 35 ಕೋಟಿ ರೂ. ಕರ್ನಾಟಕದಲ್ಲಿಯೇ ಕಲೆಕ್ಷನ್ ಆಗಬಹುದು.

Disclaimer:ಈ ಸಿನಿಮಾದ ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. 'ಮ್ಯಾಕ್ಸ್' ತಂಡ ಅಧಿಕೃತವಾಗಿ ಇನ್ನೂ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಅನೌನ್ಸ್ ಮಾಡಬೇಕಿದೆ.

More from Filmibeat

English summary
Kichcha Sudeep film Max Day 2 Karnataka Box office Collection Report;
Read more about: sudeep box office sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X