Max Box Office Day 5: 5ನೇ ದಿನ ಬಾಕ್ಸಾಫೀಸ್‌ನಲ್ಲಿ 'ಮ್ಯಾಕ್ಸ್'ಗೆ ಬಂಪರ್.. ತುಮಕೂರಿನಲ್ಲಿ ಶೇ.87ರಷ್ಟು ಆಕ್ಯೂಪೆನ್ಸಿ!
ಕಳೆದ ವರ್ಷ ಇದೇ ಸಮಯಕ್ಕೆ ರಿಲೀಸ್ ಆಗಿದ್ದ 'ಕಾಟೇರ' ಬಾಕ್ಸಾಫೀಸ್ ಅನ್ನೇ ನಡುಗಿಸಿತ್ತು. ಈ ವರ್ಷ ಕಿಚ್ಚ ಸುದೀಪ್ ನಟಿಸಿದ 'ಮ್ಯಾಕ್ಸ್' ಜೋರಾಗಿ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆದಲ್ಲಿಂದ 'ಮ್ಯಾಕ್ಸ್'ಗೆ ಸಿಕ್ಕಿರುವ ಮೌತ್ ಪಬ್ಲಿಸಿಟಿಯಿಂದ ಥಿಯೇಟರ್ ಅನ್ನು ತುಂಬಿಸುತ್ತಿದೆ. ಐದು ದಿನ ಕಿಚ್ಚನ ಸಿನಿಮಾಗೆ ಪ್ರೇಕ್ಷಕರಿಂದ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ.
ಈ ವರ್ಷದ ಕೊನೆಯಲ್ಲಿ ಮಾಸ್ ಆಕ್ಷನ್ ಸಿನಿಮಾ ಪ್ರೇಕ್ಷಕರಿಗೆ ಮಸ್ತ್ ಕಿಕ್ ಕೊಟ್ಟಿದೆ. ಕೇವಲ ಕರ್ನಾಟಕ ಅಷ್ಟೇ ಅಲ್ಲ. ಈ ಸಿನಿಮಾ ಬೇರೆ ಭಾಷೆಯ ಜನರಿಗೂ ಇಷ್ಟ ಆಗುತ್ತಿದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಸಿನಿಪ್ರಿಯರನ್ನು ಸೆಳೆದಿದೆ. ನಿನ್ನೆ (ಡಿಸೆಂಬರ್ 29) ಭಾನುವಾರ ಆಗಿದ್ದರಿಂದ ಥಿಯೇಟರ್‌ಗಳಿ ತುಂಬಿ ತುಳುಕಿವೆ. ಮ್ಯಾಟ್ನಿ, ಸಂಜೆ ಹಾಗೂ ರಾತ್ರಿ ಶೋಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ಕರ್ನಾಟಕದಲ್ಲಿ 'ಮ್ಯಾಕ್ಸ್' ಅಬ್ಬರ ಇನ್ನೂ ನಿಂತಿಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲಿ ತುಮಕೂರಿನಲ್ಲಿ ಶೇ.87ರಷ್ಟು ಮಂದಿ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿದ್ದಾರೆಂದು ವರದಿಯಾಗಿದೆ. ಹಾಗಿದ್ದರೆ, ಐದನೇ ದಿನ 'ಮ್ಯಾಕ್ಸ್' ಕಲೆಕ್ಷನ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
5ನೇ ದಿನ 'ಮ್ಯಾಕ್ಸ್;' ಕಲೆಕ್ಷನ್
'ಮ್ಯಾಕ್ಸ್' ಗೆಲುವಿಗೆ ಪ್ರಮುಖ ಕಾರಣ ಕಥೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಸಿನಿಪ್ರಿಯರಿಗೆ ಥಿಯೇಟರ್‌ನಲ್ಲಿ ಕಿಕ್ ಕೊಟ್ಟಿದೆ. ತಮಿಳಿನ 'ಕೈದಿ'ಯಿಂದ ಪ್ರೇರಣೆ ಅನ್ನೋ ಮಾತು ಕೇಳಿಬರುತ್ತಿದ್ದರೂ, ಸಿನಿಮಾ ಇಷ್ಟ ಆಗಿದೆ. ಹೀಗಾಗಿ ಥಿಯೇಟರ್‌ಗಳಿಗೆ ನುಗ್ಗಿ ಸಿನಿಮಾವನ್ನು ನೋಡುತ್ತಿದ್ದಾರೆ. ಐದನೇ ದಿನ ಕರ್ನಾಟಕದಲ್ಲಿ 5.50 ಕೋಟಿ ರೂ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ಅದೇ ರೀತಿ ಕರ್ನಾಟಕದ ವಿತರಕರ ವಲಯ ಕೂಡ 5.90 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಲೆಕ್ಕ ಕೊಡುತ್ತಿದ್ದಾರೆ.

ತುಮಕೂರಿನಲ್ಲಿ ಅತೀ ಹೆಚ್ಚು ಆಕ್ಯುಪೆನ್ಸಿ
ಕರ್ನಾಟಕದಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಕಲೆಕ್ಷನ್ ಚೆನ್ನಾಗಿದೆ. ಒಂದ್ಕಡೆ ನ್ಯೂ ಇಯರ್ ಮೂಡ್. ಇನ್ನೊಂದು ಕಡೆ ವೀಕೆಂಡ್ ಆಗಿದ್ದರಿಂದ ಥಿಯೇಟರ್‌ಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ನಿನ್ನೆ (ಡಿಸೆಂಬರ್ 29)ರಂದು ತುಮಕೂರು ಏರಿಯಾದಲ್ಲಿ ಅತೀ ಹೆಚ್ಚು ಅಂದರೆ, ಶೇ.87ರಷ್ಟು ಥಿಯೇಟರ್ ಆಕ್ಯೂಪೆನ್ಸಿ ಇತ್ತೆಂದು ಸ್ಯಾಕ್ನಿಲ್ಕ್.ಕಾಮ್ ಹೇಳಿದೆ. ಹಾಗೇ ಶಿವಮೊಗ್ಗ ಶೇ.86.75, ಕುಂದಾಪುರ ಶೇ.80.75, ಕಲಬುರ್ಗಿ ಶೇ.78.50, ರಾಯಚೂರು ಶೇ.66.25, ಮೈಸೂರು ಶೇ.61ರಷ್ಟು ಕಲೆಕ್ಷನ್ ಆಗಿದೆ. ಇವುಗಳೊಂದಿಗೆ ಬೆಂಗಳೂರಿನಲ್ಲಿ ಶೇ.55.25ರಷ್ಟು ಚಿತ್ರಮಂದಿರಗಳು ತುಂಬಿವೆ.
5 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಸಾಮಾನ್ಯವಾಗಿ ಯಾವುದೇ ಸಿನಿಮಾ ಇದ್ದರೂ ಐದನೇ ದಿನಕ್ಕೆ ಕಲೆಕ್ಷನ್‌ನಲ್ಲಿ ಕೊಂಚ ಮಟ್ಟಿಗೆ ಡ್ರಾಪ್ ಆಗುತ್ತೆ. ಆದರೆ, 'ಮ್ಯಾಕ್ಸ್'ಗೆ ಐದನೆ ದಿನವೂ ವೀಕೆಂಡ್ ಬಂದಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಲಾಭ ಮಾಡಿದೆ. ಐದನೇ ದಿನದ ಕಲೆಕ್ಷನ್ ಸೇರಿ 30 ಕೋಟಿ ರೂಪಾಯಿ ಸನಿಹದಲ್ಲಿದೆ. ಇನ್ನು ಮುಂದಿನ ದಿನಗಳಲ್ಲಿ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.
5 ದಿನಗಳ ಕಲೆಕ್ಷನ್ ಹೀಗಿದೆ.
ಮೊದಲ ದಿನ 8.70 ಕೋಟಿ ರೂ.
ಎರಡನೇ ದಿನ 3.85 ಕೋಟಿ ರೂ.
ಮೂರನೇ ದಿನ 4.70 ಕೋಟಿ ರೂ.
ನಾಲ್ಕನೇ ದಿನ 5.00 ಕೋಟಿ ರೂ.
ಐದನೇ ದಿನ 5.90 ಕೋಟಿ ರೂ.
ಒಟ್ಟು 28.15 ಕೋಟಿ ರೂ.
ಸೋಮವಾರದ ಪರೀಕ್ಷೆ ಗೆಲ್ಲುತ್ತಾ?
'ಮ್ಯಾಕ್ಸ್' ಸಿನಿಮಾಗೆ ಸೋಮವಾರದಿಂದ ಅಸಲಿ ಪರೀಕ್ಷೆ ಆರಂಭ ಆಗಲಿದೆ. ಇಲ್ಲಿವರೆಗೂ ರಜೆಯ ಮೂಡ್‌ನಲ್ಲಿದ್ದ ಜನರು ಸೋಮವಾರದಿಂದ ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ಕುತೂಹಲ. ಇಂದು (ಡಿಸೆಂಬರ್ 30) ಕೂಡ ಕಲೆಕ್ಷನ್ ಚೆನ್ನಾಗೇ ಆದರೆ, ದಾಖಲೆ ಬರೆಯೋದ್ರಲ್ಲಿ ಡೌಟೇ ಇಲ್ಲ.
Disclaimer: ಈ ಸಿನಿಮಾದ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. 'ಮ್ಯಾಕ್ಸ್' ತಂಡ ಇನ್ನೂ ಅಧಿಕೃತವಾಗಿ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.


Click it and Unblock the Notifications











