Max Box Office Day 7:7ನೇ 'ಮ್ಯಾಕ್ಸ್' ಬಾಕ್ಸಾಫೀಸ್ ಕಲೆಕ್ಷನ್ ಡ್ರಾಪ್.. ಅದಕ್ಕೂ ಒಂದು ಕಾರಣವಿದೆ!
ವರ್ಷದ ಕೊನೆಯಲ್ಲಿ 'ಮ್ಯಾಕ್ಸ್' ಸ್ಯಾಂಡಲ್‌ವುಡ್‌ಗೆ ಬೂಸ್ಟ್ ಕೊಟ್ಟಿದೆ. ಸಿನಿಮಾ ಮಂದಿಗೆ ಹೊಸ ಹುರುಪು ಬಂದಿದೆ. ವಿತರಕರು, ಪ್ರದರ್ಶಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ರಿಲೀಸ್ ಆದ ದಿನದಿಂದ 'ಮ್ಯಾಕ್ಸ್' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಲೇ ಇತ್ತು. ಆದರೆ, ಇದೇ ಮೊದಲ ಬಾರಿಗೆ 7ನೇ ದಿನ ಸ್ವಲ್ಪ ಮಟ್ಟಿಗೆ ಕಲೆಕ್ಷನ್ ವಿಚಾರದಲ್ಲಿ ಡ್ರಾಪ್ ಕಂಡಿದೆ. ಆದರೆ, ಅದಕ್ಕೊಂದು ಕಾರಣವಿದೆ.
2024 ಕೂಡ ಸ್ಯಾಂಡಲ್‌ವುಡ್‌ಗೆ ಡಿಸೆಂಬರ್ ಲಕ್ಕಿ ಅಂತ ಸಾಬೀತಾಗಿದೆ. 2023ನಲ್ಲೂ 'ಕಾಟೇರ' ಖಾಲಿ ಹೊಡೆಯುತ್ತಿದ್ದ ಚಿತ್ರಮಂದಿರಗಳನ್ನು ತುಂಬಿಸಿತ್ತು. ಈಗ ಆ ಕೆಲಸವನ್ನು 'ಮ್ಯಾಕ್ಸ್' ಮಾಡುತ್ತಿದೆ. ಇಂದು (ಜನವರಿ 1) ಎಂಟನೇ ದಿನ ಮ್ಯಾಕ್ಸ್ ಕಲೆಕ್ಷನ್ ಮತ್ತೆ ಏರಿಕೆಯಾಗುತ್ತೆ ಅಂತ ಕರ್ನಾಟಕದಲ್ಲಿ ವಿತರಕರ ವಲಯದಲ್ಲಿ ಚರ್ಚೆ ಶುರುವಾಗಿದೆ.

'ಮ್ಯಾಕ್ಸ್' ರಿಲೀಸ್ ಆದ ಐದು ಹಾಗೂ ಆರನೇ ದಿನ ಕಲೆಕ್ಷನ್ ಸ್ಟಡಿಯಾಗಿಯೇ ಇತ್ತು. ಆದರೆ, 7ನೇ ದಿನ ಸ್ವಲ್ಪ ಇಳಿಕೆ ಕಂಡಿದೆ. ನಿನ್ನೆಯ ನಾಲ್ಕು ಶೋಗಳಲ್ಲೂ ಡ್ರಾಪ್ ಕಂಡಿದೆ ಎನ್ನಲಾಗಿದೆ. ಅದಕ್ಕೆ ಬಲವಾದ ಕಾರಣವಿದೆ. ಅದೇನು? 7ನೇ ದಿನ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
7ನೇ ದಿನ 'ಮ್ಯಾಕ್ಸ್;' ಕಲೆಕ್ಷನ್
ಕಿಚ್ಚ ಸುದೀಪ್ 'ಮ್ಯಾಕ್ಸ್' ಮೊದಲ ಆರು ದಿನದ ಕಲೆಕ್ಷನ್ ಸ್ಯಾಂಡಲ್‌ವುಡ್ ಮಂದಿಯ ಮುಖದಲ್ಲಿ ಮಂದಹಾಸ ಮೂಡಿದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಕಣ್ಮುಚ್ಚಿ ಕಣ್ಣು ಬಿಡುವುದರಲ್ಲಿ ಮುಗಿದು ಹೋಗಿದೆ ಅಂತ ಅನಿಸಿದ ಅನುಭವ ಆಗಿದೆ. ಹೀಗಾಗಿ ಇಷ್ಟ ಪಟ್ಟು ಥಿಯೇಟರ್‌ನಲ್ಲಿ ಸಿನಿಮಾವನ್ನು ನೋಡುತ್ತಿದ್ದಾರೆ. ಆದರೆ, ಏಳನೇ ದಿನ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೇವಲ 1.90 ಯಿಂದ 2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಕರ್ನಾಟಕದ ಡಿಸ್ಟ್ರಿಬ್ಯೂಟರ್ ಸೆಕ್ಟರ್‌ನಲ್ಲಿ ಚರ್ಚೆಯಾಗುತ್ತಿದೆ.

ಇಳಿಕೆಗೆ ಕಾರಣವೇನು?
ಕಿಚ್ಚ ಸುದೀಪ್ 'ಮ್ಯಾಕ್ಸ್' ಇಳಿಕೆಗೆ ಕಾರಣ ಇಯರ್ ಎಂಡ್. ಜನರು ಹೊಸ ವರ್ಷದ ಸಂಭ್ರಮದಲ್ಲಿ ಇದ್ದರು. ಹೀಗಾಗಿ ಥಿಯೇಟರ್ ಕಡೆಗೆ ಮುಖ ಮಾಡುವುದಕ್ಕೆ ಹೋಗಲಿಲ್ಲ. ಹೀಗಾಗಿ ಏಳನೇ ದಿನ ಇಳಿಕೆ ಕಂಡಿದೆ. ಆದರೆ, ಹೊಸ ವರ್ಷದ ಮೊದಲ ದಿನ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗುತ್ತೆ ಎಂದು ವಿತರಕರು ಭವಿಷ್ಯ ನುಡಿಯುತ್ತಾರೆ. ಪ್ರತಿ ವರ್ಷ ಈ ಸಮಯದಲ್ಲಿ ರಿಲೀಸ್ ಆಗುವ ಎಲ್ಲಾ ಸಿನಿಮಾಗಳಿಗೂ ವರ್ಷದ ಕೊನೆಯ ದಿನ ಹೀಗಾಗುತ್ತೆ ಎನ್ನುತ್ತಾರೆ ಸಿನಿಮಾ ಮಂದಿ.
ಕಲಬುರ್ಗಿಯಲ್ಲಿ ಅತೀ ಹೆಚ್ಚು ಆಕ್ಯುಪೆನ್ಸಿ
'ಮ್ಯಾಕ್ಸ್' ಕರ್ನಾಟಕದಾದ್ಯಂತ ಕ್ರೇಜ್ ಹುಟ್ಟಾಕಿದೆ. ಮೌತ್ ಪಬ್ಲಿಸಿಟಿಯಿಂದ ರಾಜ್ಯದ ಮೂಲೆ ಮೂಲೆಯಲ್ಲಿ ಕಿಚ್ಚನ 'ಮ್ಯಾಕ್ಸ್'ಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ನ್ಯೂ ಇಯರ್ ಮೂಡ್‌ನಲ್ಲಿ ಇದ್ದರೂ, ಕೆಲವು ಜಿಲ್ಲೆಗಳಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ಹಾಗೇ ಶಿವಮೊಗ್ಗ ಶೇ.47.75, ಕಲಬುರ್ಗಿಯಲ್ಲಿ ಶೇ.47.75, ಕುಂದಾಪುರ ಶೇ.36.50, ರಾಯಚೂರು ಶೇ.21, ಮೈಸೂರು ಶೇ.24.35ರಷ್ಟು ಕಲೆಕ್ಷನ್ ಆಗಿದೆ. ಹಾಗೇ ಬೆಂಗಳೂರಿನಲ್ಲಿ ಶೇ.23.25ರಷ್ಟು ಚಿತ್ರಮಂದಿರಗಳು ತುಂಬಿವೆ.
7 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
7ನೇ ದಿನ ಒಂದು ಬಿಟ್ಟು 'ಮ್ಯಾಕ್ಸ್' ಒಟ್ಟು ಕಲೆಕ್ಷನ್ ಜೋರಾಗಿದೆ. ಕೇವಲ ಕರ್ನಾಟಕದಲ್ಲಿ ಮೂವತ್ತು ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಸಿನಿಮಾದ ಗಳಿಕೆ ಹೇಗಿರುತ್ತೆ? ಅನ್ನೋದು ನೋಡಬೇಕಿದೆ. ಸದ್ಯಕ್ಕೆ 7 ದಿನಗಳ ಕಲೆಕ್ಷನ್ ಹೀಗಿದೆ.
7 ದಿನಗಳ ಕಲೆಕ್ಷನ್ ಹೀಗಿದೆ.
| ಮೊದಲ ದಿನ | 8.70 ಕೋಟಿ ರೂ. |
| ಎರಡನೇ ದಿನ | 3.85 ಕೋಟಿ ರೂ. |
| ಮೂರನೇ ದಿನ | 4.70 ಕೋಟಿ ರೂ. |
| ನಾಲ್ಕುನೇ ದಿನ | 5.00 ಕೋಟಿ ರೂ. |
| ಐದನೇ ದಿನ | 5.90 ಕೋಟಿ ರೂ. |
| ಆರನೇ ದಿನ | 2.45 ಕೋಟಿ ರೂ. |
| ಏಳನೇ ದಿನ | 1.90 ಕೊಟಿ ರೂ |
| ಒಟ್ಟು | 32.40 ಕೋಟಿ ರೂ. |
Disclaimer: ಈ ಸಿನಿಮಾದ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. 'ಮ್ಯಾಕ್ಸ್' ತಂಡ ಇನ್ನೂ ಅಧಿಕೃತವಾಗಿ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.


Click it and Unblock the Notifications











