Max Box Office Day 9:9ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಜಗ್ಗಲಿಲ್ಲ 'ಮ್ಯಾಕ್ಸ್';ವೀಕೆಂಡ್‌ನಲ್ಲೂ ಇರುತ್ತಾ ಕ್ರೇಜ್?

2024ರ ಕೊನೆಯಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 'ಮ್ಯಾಕ್ಸ್' ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಎರಡೂ ವರೆ ವರ್ಷಗಳ ಬಳಿಕ ಕಿಚ್ಚ ಸುದೀಪ್ ಗೆಲುವಿನ ರುಚಿ ಕಂಡಿದ್ದಾರೆ. ಸಿನಿಮಾ ಗೆದ್ದ ಖುಷಿಯಲ್ಲಿರುವ ಸುದೀಪ್ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ವಿಜಯಯಾತ್ರೆ ಹೋಗುವ ಸಾಧ್ಯತೆಯಿದೆ. ಬಿಡುಗಡೆಯಾಗಿ 10ನೇ ದಿನಕ್ಕೆ ಕಾಲಿಟ್ಟಿದ್ದು, ಥಿಯೇಟರ್‌ನಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಮ್ಮಿಯಾಗಿಲ್ಲ.

ಈ ಯಾರೇ ಸಿನಿಮಾ ಮಾಡಿದರೂ, ಎರಡು ವಾರವನ್ನು ಗಮನದಲ್ಲಿ ಇಟ್ಟುಕೊಂಡು ರಿಲೀಸ್ ಮಾಡುತ್ತಾರೆ. ಸೂಪರ್ ಸ್ಟಾರ್ ಸಿನಿಮಾಗಳು ಎರಡು ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಂಡರೆ, ನಿರ್ಮಾಪಕನ ಜೇಬು ತುಂಬುತ್ತೆ. ಸದ್ಯಕ್ಕೆ ಸಿನಿಮಾ ಮಂದಿ ಇಟ್ಟುಕೊಂಡಿರುವ ಲೆಕ್ಕಾಚಾರ ಇದೇನೆ. ಆದರೆ, 'ಮ್ಯಾಕ್ಸ್' ಮೂರನೇ ವಾರಕ್ಕೂ ಲಗ್ಗೆ ಇಡುತ್ತೆ ಅನ್ನೋ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

Kichcha Sudeep film Max Day 9 Karnataka Box office Collection Report

ಸಂಕ್ರಾಂತಿಗೆ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಅಲ್ಲಿವರೆಗೂ 'ಮ್ಯಾಕ್ಸ್' ಬಾಕ್ಸಾಫೀಸ್‌ನಲ್ಲಿ ತನ್ನ ದರ್ಬಾರ್ ಅನ್ನು ಮುಂದುವರೆಸಲಿದೆ. ಸದ್ಯ 9ನೇ ದಿನ (ಜನವರಿ 3)ರಂದು ಗಲ್ಲಾಪಟ್ಟಿಗೆಯಲ್ಲಿ ಕಲೆಕ್ಷನ್ ಡ್ರಾಪ್ ಆಗಬಹುದು ಅಂತ ಚರ್ಚೆ ನಡೆದಿತ್ತು. ಆದರೆ, ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಕಲೆಕ್ಷನ್ ಆಗಿದೆ. ಹಾಗಿದ್ದರೆ, 9ನೇ ದಿನದ ಕಲೆಕ್ಷನ್ ಎಷ್ಟು ನೋಡೋಣ ಬನ್ನಿ.

9ನೇ ದಿನ ಮ್ಯಾಕ್ಸ್ ಕಲೆಕ್ಷನ್

ಕಿಚ್ಚ ಸುದೀಪ್ 'ಮ್ಯಾಕ್ಸ್'ಗೆ ಹೊಸ ವರ್ಷದ ಎರಡನೇ ದಿನವೂ ರೆಸ್ಪಾನ್ಸ್ ಉತ್ತಮವಾಗಿದೆ. ಹೊಸ ವರ್ಷದ ಮಾರನೇ ದಿನ ಕಲೆಕ್ಷನ್ ಡ್ರಾಪ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, 9ನೇ ದಿನವಾದ ನಿನ್ನೆ (ಜನವರಿ 2) ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಸುಮಾರು 2 ಕೋಟಿ ರೂಪಾಯಿಯಷ್ಟು ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಟ್ರೇಡಿಂಗ್ ಸೈಟ್ ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ಎಂಟನೇ ದಿನಕ್ಕೆ ಹೋಲಿಕೆ ಮಾಡಿದರೆ ಶೇ.50ರಷ್ಟು ಡ್ರಾಪ್ ಆಗಿದ್ದರೂ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಎನ್ನುತ್ತಿದೆ ವಿತರಕರ ವಲಯ.

Kichcha Sudeep film Max Day 9 Karnataka Box office Collection Report

ಎಲ್ಲೆಲ್ಲಿ ಹೇಗಿ ಆಕ್ಯೂಪೆನ್ಸಿ

ಹೊಸ ವರ್ಷದ ಎಂಜಾಯ್ ಮಾಡಿದ ಬಳಿಕ ಜನರ ಜೀವನ ಸಹಜ ಸ್ಥಿತಿಗೆ ಮರಳಿದೆ. ಹೀಗಿದ್ದರೂ 'ಮ್ಯಾಕ್ಸ್' 9ನೇ ದಿನ ಕಲೆಕ್ಷನ್ ಇಂಪ್ರೆಸಿವ್ ಆಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿದೆ. ಕಲಬುರ್ಗಿಯಲ್ಲಿ ಶೇ.34, ಶಿವಮೊಗ್ಗ ಶೇ.39 ಹಾಗೂ ತುಮಕೂರು ಶೇ.26.67 ರಷ್ಟು ಆಕ್ಯೂಪೆನ್ಸಿ ಇತ್ತು ಎನ್ನಲಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದೆ.

ತಮಿಳು-ತೆಲುಗಿನಲ್ಲೂ ಭರ್ಜರಿ ಕಲೆಕ್ಷನ್

'ಮ್ಯಾಕ್ಸ್' ಸಿನಿಮಾಗೆ ತಮಿಳು ಹಾಗೂ ತೆಲುಗಿನಲ್ಲಿ ಉತ್ತಮ ರೆಸ್ಪಾನ್ಸ್ ಓಕೆ. ಆದರೆ, ನಿರೀಕ್ಷಿಸಿದ ಮಟ್ಟಕ್ಕೆ ಸಿನಿಮಾ ಕಲೆಕ್ಷನ್ ಆಗಿಲ್ಲ. ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲಿಯೂ ಕಿಚ್ಚ ಸುದೀಪ್ ಪರಿಚಯವಿದೆ. ಹೀಗಾಗಿ ಈ ಎರಡೂ ರಾಜ್ಯಗಳಲ್ಲಿ ಕಮ್ಮಿ ಅಂದರೂ 10 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅಲ್ಲಿವರೆಗೆ ಇನ್ನೂ ರೀಚ್ ಆಗಿಲ್ಲ.

9 ದಿನಗಳ ಒಟ್ಟು ಕಲೆಕ್ಷನ್

'ಮ್ಯಾಕ್ಸ್' ರಿಲೀಸ್ ಆದ ದಿನದಿಂದ ಒಟ್ಟು 9 ದಿನಗಳಲ್ಲಿ ಅದೂ ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ವಿತರಕರ ಅಂದಾಜಿನ ಪ್ರಕಾರ ಈ ಸಿನಿಮಾ ವಿಶ್ವದಾದ್ಯಂತ 50 ರಿಂದ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ. ಅದೇ ಕೇವಲ ಕರ್ನಾಟಕದಲ್ಲಿ 9 ದಿನಗಳ ಕಲೆಕ್ಷನ್ 38.55 ಕೋಟಿ ರೂ. ಆಗಿದೆ.

9 ದಿನಗಳ ಕಲೆಕ್ಷನ್ ಹೀಗಿದೆ.

ಮೊದಲ ದಿನ 8.70 ಕೋಟಿ ರೂ.
​ಎರಡನೇ ದಿನ 3.85 ಕೋಟಿ ರೂ.
ಮೂರನೇ ದಿನ 4.70 ಕೋಟಿ ರೂ.
​ನಾಲ್ಕುನೇ ದಿನ 5.00 ಕೋಟಿ ರೂ.
​ಐದನೇ ದಿನ 5.90 ಕೋಟಿ ರೂ.
​ಆರನೇ ದಿನ 2.45 ಕೋಟಿ ರೂ.
ಏಳನೇ ದಿನ 1.90 ಕೊಟಿ ರೂ.
ಎಂಟನೇ ದಿನ 4.15 ಕೋಟಿ ರೂ.
ಒಂಬತ್ತನೇ ದಿನ 2.00 ಕೋಟಿ ರೂ.
​ಒಟ್ಟು 38.55 ಕೋಟಿ ರೂ.

Disclaimer: ಈ ಸಿನಿಮಾದ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. 'ಮ್ಯಾಕ್ಸ್' ತಂಡ ಇನ್ನೂ ಅಧಿಕೃತವಾಗಿ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.

More from Filmibeat

English summary
Kichcha Sudeep film Max Day 9 Karnataka Box office Collection Report;
Read more about: sudeep box office sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X