ಸಿಂಗಲ್ ಸ್ಕ್ರೀನ್‌ನಲ್ಲಿ 'ಮ್ಯಾಕ್ಸ್' ಚಿಂದಿ ಕಲೆಕ್ಷನ್; ಯಾವ್ಯಾವ ಥಿಯೇಟರ್‌ನಲ್ಲಿ ಎಷ್ಟು ಲಕ್ಷ ಕಲೆಕ್ಷನ್?
ವರ್ಷದ ಕೊನೆಯಲ್ಲಿ ಬಂದು ಸದ್ದು ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಸದ್ದು ಮಾಡುತ್ತಿದೆ. ಎರಡೂವರೆ ವರ್ಷಗಳ ಬಳಿಕ ತೆರೆಕಂಡ ಸುದೀಪ್ ಸಿನಿಮಾಗವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ವರ್ಷ ಪೂರ್ತಿ ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್‌ಗಳ ಬಗ್ಗೆ ಇದ್ದ ಆತಂಕ ನಿಧಾನವಾಗಿ ಕಡಿಮೆಯಾಗಿದೆ.
2024ರಲ್ಲಿ ಕೆಲವು ಪ್ರಮುಖ ಚಿತ್ರಮಂದಿರಗಳು ಮುಚ್ಚಿದ್ದವು. ಕಳೆದ ಮೂರು ವರ್ಷಗಳಿಂದ ಸೂಪರ್ ಸ್ಟಾರ್‌ಗಳ ಕನ್ನಡ ಸಿನಿಮಾಗಳಿಲ್ಲದೆ ಸಿಂಗಲ್ ಸ್ಕ್ರೀನ್‌ಗಳು ಸೊರಗಿ ಹೋಗಿದ್ದವು. ಆದರೆ, ಕಳೆದ ಎರಡು ತಿಂಗಳಿನಿಂದ ಸಿಂಗಲ್ ಸ್ಕ್ರೀನ್‌ಗಳಿಗೆ ಮತ್ತೆ ಜೀವ ಬಂದಿದೆ. ಸಿನಿಪ್ರಿಯರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿರೋದು ಇಬ್ಬರಿಗೂ ಸಮಾಧಾನ ಕೊಟ್ಟಿದೆ.

'ಸಲಗ', 'ಕೃಷ್ಣಂ ಪ್ರಣಯ ಸಖಿ', 'ಭೈರತಿ ರಣಗಲ್', 'ಯುಐ' ಈಗ 'ಮ್ಯಾಕ್ಸ್' ಸಿನಿಮಾಗಳು ಸಿಂಗಲ್ ಸ್ಕ್ರೀನ್‌ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುತ್ತಿವೆ. ಅದರಲ್ಲೂ ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಸೌಂಡ್ ಮಾಡುತ್ತಿರುವ 'ಮ್ಯಾಕ್ಸ್' ಸಿಂಗಲ್ ಸ್ಕ್ರೀನ್‌ನಲ್ಲಿ ಸದ್ದು ಮಾಡುತ್ತಿದೆ. ಕಳೆದ ಐದು ದಿನಗಳಲ್ಲಿ ಕೆಲವು ಚಿತ್ರಮಂದಿರಗಳ 'ಮ್ಯಾಕ್ಸ್' ಕಲೆಕ್ಷನ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಬೆಂಗಳೂರಿನ ಸಿಂಗಲ್ ಸ್ಕ್ರೀನ್
ಬೆಂಗಳೂರಿನ ಸಿಂಗಲ್ ಸ್ಕ್ರೀನ್‌ಗಳಲ್ಲಿ 'ಮ್ಯಾಕ್ಸ್'ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಪ್ರಮುಖ ಚಿತ್ರಮಂದಿರ ನರ್ತಕಿ, ವೀರೇಶ್, ಗೋವರ್ಧನ್, ಸಿದ್ದೇಶ್ವರ ಹಾಗೂ ಸಿದ್ಧಲಿಂಗೇಶ್ವರ ಚಿತ್ರಮಂದಿರಗಳಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿವೆ. ಇವುಗಳಲ್ಲಿ ಕೆಲವು ಸಿಂಗಲ್ ಸ್ಕ್ರೀನ್‌ಗಳಲ್ಲಿ ಲಕ್ಷಗಳ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆ. ಐದು ಅಂತಹ ಸಿಂಗಲ್ ಸ್ಕ್ರೀನ್‌ಗಳ ಕಲೆಕ್ಷನ್ ಹೀಗಿದೆ.
ನರ್ತಕಿ - 22 ಲಕ್ಷ ರೂ.
ಗೋವರ್ಧನ್ - 11ಲಕ್ಷ ರೂ.
ಸಿದ್ದೇಶ್ವರ - 17 ಲಕ್ಷ ರೂ.
ಸಿದ್ದಲಿಂಗೇಶ್ವರ - 7 ಲಕ್ಷ ರೂ. ( 2 ಶೋಗಳು)
ದಾವಣಗೆರೆ ಸಿಂಗಲ್ ಸ್ಕ್ರೀನ್
ಬೆಂಗಳೂರಿನಂತೆ ದಾವಣಗೆರೆಯಲ್ಲೂ ಸಿಂಗಲ್ ಸ್ಕ್ರೀನ್‌ನಲ್ಲಿ ಕಲೆಕ್ಷನ್ ಮಸ್ತ್ ಆಗಿದೆ. ಇಲ್ಲಿನ ಅಶೋಕ ಚಿತ್ರಮಂದಿರದಲ್ಲಿ 11 ಶೋಗಳನ್ನು ಪ್ರದರ್ಶನ ಮಾಡಲಾಗಿತ್ತು. ಇದರಿಂದ 13 ಲಕ್ಷ ರೂ. ಕಲೆಕ್ಷನ್ ಆಗಿದೆ. ಹಾಗೇ ತ್ರಿಶೂಲ್ ಹಾಗೂ ತ್ರಿನೇತ್ರ ಎರಡು ಚಿತ್ರಮಂದಿರಗಳು 37 ಶೋಗಳನ್ನು ಪ್ರದರ್ಶನ ಮಾಡಿದೆ. ಈ ಎರಡೂ ಚಿತ್ರಮಂದಿರಗಳಿಂದ 39 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಮೂವಿ ಟೈಮ್ ಚಿತ್ರಮಂದಿರದಲ್ಲಿ 19 ಲಕ್ಷ ರೂ.
ಮಂಡ್ಯ, ಹಾಸನ, ಮೈಸೂರು
ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಮಂಡ್ಯ, ಹಾಸನ, ಮೈಸೂರು ಮೂರು ಏರಿಯಾಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಂಡ್ಯದ ಗುರುಶ್ರೀ ಚಿತ್ರಮಂದಿರ ಕಳೆದ ಐದು ದಿನಗಳಲ್ಲಿ 20 ಶೋಗಳನ್ನು ಹಾಕಲಾಗಿತ್ತು. ಇವುಗಳಿಂದ 19 ಲಕ್ಷ ರೂ. ಕಲೆಕ್ಷನ್ ಆಗಿದೆ. ಇನ್ನು ಹಾಸನದ ಶ್ರೀಗುರು ಚಿತ್ರಮಂದಿರದಲ್ಲಿ 21 ಶೋಗಳನ್ನು ಹಾಕಲಾಗಿತ್ತು. ಅದರಿಂದ 13 ಲಕ್ಷ ರೂ, ಕಲೆಕ್ಷನ್ ಆಗಿದೆ. ಮೈಸೂರಿನ ಸಂಗಮ್ 21 ಶೋದಿಂದ 22 ಲಕ್ಷ ರೂ. ಹಾಗೂ ರಾಜ್‌ಕಮಲ್ ಚಿತ್ರಮಂದಿರದಿಂದ 20 ಶೋದಿಂದ 13 ಲಕ್ಷ ರೂ. ಕಲೆಕ್ಷನ್ ಆಗಿದೆ ಎನ್ನಲಾಗಿದೆ.
ಪಿವಿಆರ್‌ನಲ್ಲಿ ಎಷ್ಟು?
ಇನ್ನು ಮಲ್ಟಿಪೆಕ್ಸ್‌ನಲ್ಲೇನು ಕಮ್ಮಿಯಿಲ್ಲ. ವಿಪಿಆರ್‌ನಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಡಿಆರ್‌ಸಿ, ವಿಷನ್‌ನಿಂದ ಸೇರಿ ಸುಮಾರು 60 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
Disclaimer: ಈ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಥಿಯೇಟರ್ ಮಾಲೀಕರಾಗಲಿ, ಚಿತ್ರತಂಡ ಆಗಲಿ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ.


Click it and Unblock the Notifications











