ಕಿಚ್ಚನ ಅಡುಗೆ ಸವಿದ ಧನಂಜಯ್, ನಂದಕಿಶೋರ್, ವಾಸುಕಿ ವೈಭವ್: ಸ್ಪೆಷಲ್ ಏನು?
ಕಿಚ್ಚ ಸುದೀಪ್ ಸಿನಿಮಾದಲ್ಲಿ ನಟಿಸುವುದಷ್ಟೆ ಅಲ್ಲ. ಪಾಕಶಾಲೆಯಲ್ಲೂ ಪ್ರವೀಣರು. ಈಗಾಗಲೇ ಹಲವು ಬಾರಿ ಕಿಚ್ಚ ಸುದೀಪ್ ತಮ್ಮ ಪ್ರೀತಿ ಪಾತ್ರರಿಗೆ ಅಡುಗೆ ಮಾಡಿ ಬಡಿಸಿದ್ದಾರೆ. ಸುದೀಪ್ ಕೈ ರುಚಿ ಸವಿದ ಹಲವು ಗಣ್ಯರು ಈಗಾಗಲೇ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಿಚ್ಚನ ಕಿಚನ್‌ನಲ್ಲಿ ರುಚಿಕರವಾದ ಅಡುಗೆಯನ್ನು ಸೆಲೆಬ್ರೆಟಿಗಳು ಆಗಾಗ ಸವಿಯುತ್ತಲೇ ಇರುತ್ತಾರೆ.
ಈಗ ಡಾಲಿ ಧನಂಜಯ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಹಾಗೂ ನಂದಕಿಶೋರ್ ಅವರಿಗೆ ಕಿಚ್ಚ ಸುದೀಪ್ ವಿಶೇಷ ಟ್ರೀಟ್ ಕೊಟ್ಟಿದ್ದಾರೆ. ಇವರೆಲ್ಲರಿಗೂ ತಮ್ಮ ಕೈಯ್ಯಾರೆ ರುಚಿಕರವಾದ ಅಡುಗೆಯನ್ನು ಬಡಿಸಿದ್ದಾರೆ. ಈ ವಿಷಯವನ್ನು ಸ್ವತ: ಡಾಲಿ ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಿಚ್ಚನ ಕೈ ರುಚಿ ಸವಿದು ಥ್ರಿಲ್ ಆದ ಡಾಲಿ
ಸುದೀಪ್ ಮನೆಯಲ್ಲಿ ಡಾಲಿ ಧನಂಜಯ್, ವಾಸುಕಿ ವೈಭವ್ ಹಾಗೂ ನಂದ ಕಿಶೋರ್ ಒಟ್ಟಿಗೆ ಸೇರಿದ್ದು ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಕೆರಳಿಸಿದೆ. ಅದರಲ್ಲೂ ಕಿಚ್ಚ ಸುದೀಪ್ ವಿಶೇಷ ಟ್ರೀಟ್ ಕೊಟ್ಟಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದೇ ವೇಳೆ ಧನಂಜಯ್ ಬೇರೆ ಕಿಚ್ಚನ ಕೈ ರುಚಿ ಸವಿದು ಫುಲ್ ಖುಷಿಯಾಗಿ ಟ್ವೀಟ್ ಮಾಡಿದ್ದಾರೆ.

"ಯೆಸ್ ಸರ್, ಇಬ್ಬರೂ ಸಂಭ್ರಮಿಸೋಣ. ಆಮಂತ್ರಣ ನೀಡಿದ್ದಕ್ಕೆ ಧನ್ಯವಾದಗಳು. ಒಳ್ಳೆಯ ಚರ್ಚೆ ನಡೆದಿದೆ. ನಿಮ್ಮ ಕೈ ಅಡುಗೆ ಚೆನ್ನಾಗಿತ್ತು." ಎಂದು ಧನಂಜಯ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕಂಡು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಮನೆಯ ಮೇಲಿದೆ ಇಷ್ಟ ಅಡುಗೆ ಮನೆ
ಕಿಚ್ಚ ಸುದೀಪ್ ಮನೆಯ ಮೇಲೆ ಸುಂದರವಾದ ಅಡುಗೆ ಮನೆಯಿದೆ. ಸುದೀಪ್ ಬಿಡುವಿದ್ದಾಗಲೆಲ್ಲಾ ಕಿಚ್ಚ ಸುದೀಪ್ ತಮ್ಮಿಷ್ಟದ ಅಡುಗೆ ಮನೆಯಲ್ಲಿ ಕಾಲ ಕಳೆಯುತ್ತಾರೆ. ವಿಶಿಷ್ಟವಾದ ಅಡುಗೆಯನ್ನು ಮಾಡಿ ಆತ್ಮೀಯರಿಗೆ ಬಡಿಸುವುದು ಮೊದಲಿನಿಂದ ನಡೆಯುತ್ತಲೇ ಇದೆ. ಅದೇ ಈ ಬಾರಿ ಧನಂಜಯ್, ವಾಸುಕಿ ವೈಭವ್ ಹಾಗೂ ನಂದಕಿಶೋರ್ ಅವರಿಗೆ ಸ್ಪೆಷಲ್ ಟ್ರೀಟ್ ಕೊಟ್ಟಿದ್ದಾರೆ.
ಧನಂಜಯ್, ವಾಸುಕಿ ಹಾಗೂ ನಂದಕಿಶೋರ್ ಜೊತೆ ನಿರ್ಮಾಪಕ ಜಾಕ್ ಮಂಜು ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇದು ಕೇವಲ ಟ್ರೀಟ್ ಅಷ್ಟೇನಾ? ಇಲ್ಲಾ ಸುದೀಪ್, ಧನಂಜಯ್, ವಾಸುಕಿ ವೈಭವ್, ನಂದಕಿಶೋರ್ ಸೇರಿ ಹೊಸತೇನಾದರೂ ಮಾಡುತ್ತಿದ್ದಾರಾ? ಅನ್ನುವ ಪ್ರಶ್ನೆಯಂತೂ ಕಾಡುತ್ತಿದೆ. ಆದರೆ, ಧನಂಜಯ್ ಸೇರಿದಂತೆ ಸುದೀಪ್ ಮನೆಯಲ್ಲಿ ಸೇರಿರುವ ಯಾರೊಬ್ಬರೂ ಅಡುಗೆ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.


Click it and Unblock the Notifications











