Sudeep Caravan:ಕಿಚ್ಚನಿಗೆ ಬಳಿ ಇದೆಯೇ ಈ ಕ್ಯಾರಾವ್ಯಾನ್? ಇದು ಸಿಗೋದ್ಯಾವಾಗ? ಒಳಗಡೆ ಏನೇನಿದೆ?

ಕಳೆದ ಕೆಲವು ಗಂಟೆಗಳಿಂದ ಕಿಚ್ಚ ಸುದೀಪ್ ಐಷಾರಾಮಿ ಕ್ಯಾರಾವ್ಯಾನ್ ಬಗ್ಗೆನೇ ಚರ್ಚೆಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಲ್ಲದೆ ಇದು ಕನ್ನಡ ಚಿತ್ರರಂಗದ ಅತ್ಯಂತ ದುಬಾರಿ ಕ್ಯಾರಾವ್ಯಾನ್. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಇಂತಹ ಸ್ಟೈಲಿಶ್ ಹಾಗೂ ದುಬಾರಿ ಕ್ಯಾರವ್ಯಾನ್ ಯಾರ ಬಳಿಯೂ ಇಲ್ಲ.

ಕೆಲಸ ಅಂತ ಬಂದರೆ ಕಿಚ್ಚ ಸುದೀಪ್‌ ಪರ್ಫೆಕ್ಟ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯವೇ. ಸೆಟ್ಟಿನಲ್ಲಿ ಪ್ರತಿಯೊಂದು ಪರ್ಫೆಕ್ಟ್ ಆಗಿರಬೇಕು ಅಂತ ಬಯಸುತ್ತಾರೆ. ಕೆಲವು ತಿಂಗಳ ಹಿಂದಷ್ಟೇ ಅವರ ಗ್ಯಾರೇಜ್ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರು ಸೇರ್ಪಡೆಯಾಗಿತ್ತು. ಟೊಯೊಟಾ ಕಂಪನಿಯ ವೆಲ್‌ಫೈರ್ ಅವರಿಗಿರುವ ಕಾರು ಕ್ರೇಜ್ ಬಗ್ಗೆ ಹೇಳಿತ್ತು.

Kichcha Sudeep hasn t gotten a luxury caravan yet do you know What s inside it

ಆದ್ರೀಗ ಅವರ ಗ್ಯಾರೇಜ್‌ಗೆ ಮತ್ತೊಂದು ವಾಹನ ಸೇರ್ಪಡೆಯಾಗಿದೆ. ಅದುವೇ ಐಷಾರಾಮಿ ಕ್ಯಾರವ್ಯಾನ್. ಸುಮಾರು ₹6.5 ಕೋಟಿ ಮೌಲ್ಯದ ಈ ಕ್ಯಾರಾವ್ಯಾನ್ ಕನ್ನಡ ಚಿತ್ರರಂಗದ ಹೈಟೆಕ್ ಕ್ಯಾರಾವ್ಯಾನ್ ಎಂದು ಹೇಳಲಾಗುತ್ತಿದೆ. ಇಷ್ಟು ದುಬಾರಿ ಮೊತ್ತದ ಕ್ಯಾರವ್ಯಾನ್‌ ಒಳಗೆ ಏನೇನಿದೆ? ಕಿಚ್ಚ ಸುದೀಪ್ ಕೈ ಸೇರಿತೇ ಈ ಕ್ಯಾರಾವ್ಯಾನ್? ತಿಳಿಯುವುದಕ್ಕೆ ಮುಂದೆ ಓದಿ.

ಕ್ಯಾರಾವ್ಯಾನ್ ಡಿಸೈನ್ ಮಾಡಿದ್ಯಾರು?

ಕಿಚ್ಚ ಸುದೀಪ್ ಏನೇ ಮಾಡಿದರೂ ಪರ್ಫೆಕ್ಟ್ ಆಗಿರಬೇಕು ಅಂತ ಬಯಸುತ್ತಾರೆ. ಅವರ ಮನೆಯ ವಿನ್ಯಾಸ ಕೂಡ ಅಷ್ಟೇ ಸೊಗಸಾಗಿದೆ. ಅವರ ಕಿಚನ್ ವಿನ್ಯಾಸ ಕೂಡ ಅಷ್ಟೇ ಅದ್ಭುತ. ಇನ್ನು ಕ್ಯಾರಾವ್ಯಾನ್ ಅಂದ್ಮೇಲೆ ಡಿಸೈನ್‌ ನಿಖರವಾಗಿ ಇರಲೇಬೇಕು. ಹೀಗಾಗಿ ಭಾರತದ ಪ್ರಸಿದ್ಧ ಆಟೋಮೊಬೈಲ್ ಡಿಸೈನರ್ ದಿಲೀಪ್ ಛಾಬ್ರಿಯಾ ಒಡೆತನದ 'DC2' ಸಂಸ್ಥೆಯು ಕಿಚ್ಚ ಸುದೀಪ್ ಟೇಸ್ಟ್‌ಗೆ ತಕ್ಕಂತೆ ವಿಶೇಷವಾಗಿ ವಿನ್ಯಾಸಗೊಳಿಸಿದೆ ಎಂದು ವರದಿಯಾಗಿದೆ. ಬಾಲಿವುಡ್‌ನ ಸೂಪರ್ ಸ್ಟಾರ್‌ ಸಲ್ಮಾನ್ ಖಾನ್ ಕ್ಯಾರಾವ್ಯಾನ್ ಕೂಡ ಇಲ್ಲೇ ಡಿಸೈನ್ ಆಗಿದೆ ಎಂದು ಹೇಳಲಾಗಿದೆ.

ಈ ಹೈಟೆಕ್ ಕ್ಯಾರವನ್‌ನಲ್ಲಿ ಏನೇನಿದೆ?

ಕಿಚ್ಚ ಸುದೀಪ್ ಅವರ ಮುಂದಿನ ಆರು ತಿಂಗಳು ಸಿಕ್ಕಾಪಟ್ಟೆ ಟೈಟ್ ಇದೆ. 'ಬಿಲ್ಲ ರಂಗ ಭಾಷಾ', ಬಿಗ್ ಬಾಸ್ ಜೊತೆಗೆ ಇನ್ನೂ ಮೂರರಿಂದ ನಾಲ್ಕು ಸಿನಿಮಾಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹೆಚ್ಚಾಗಿ ಶೂಟಿಂಗ್ ಸ್ಪಾಟ್‌ನಲ್ಲಿಯೇ ಇರುತ್ತಾರೆ. ಹೀಗಾಗಿ ಅಲ್ಲಿ ಮನೆಯಂತೆಯೇ ಭಾಸವಾಗುವ ಮಿನಿ ಸೌಕರ್ಯವುಳ್ಳ ಕ್ಯಾರಾವ್ಯಾನ್ ಬೇಕು. ಹೀಗಾಗಿ ಕೆಲವು ಸೌಕರ್ಯಗಳನ್ನು ಈ ಕ್ಯಾರಾವ್ಯಾನ್‌ನಲ್ಲಿ ಅಳವಡಿಸಲಾಗಿದ್ದು, ಏನೇನಿದೆ ಎಂದು ನೋಡುವುದಾರೇ,

ಲಿವಿಂಗ್ ಏರಿಯಾ: ಕ್ಯಾರಾವ್ಯಾನ್‌ನಲ್ಲಿ ಲಿವಿಂಗ್ ಏರಿಯಾ ಒಂದು ಪ್ರೈವೆಟ್ ಅಲ್ಲ. ಅಲ್ಲಿಗೆ ಸಿನಿಮಾದ ನಿರ್ದೇಶಕರಿಂದ ಹಿಡಿದು ಸಿನಿಮಾ ಮಂದಿ ಬಂದು ಚರ್ಚೆ ಮಾಡುತ್ತಾರೆ. ಹೀಗಾಗಿ ಎಲ್ಲಾ ಕ್ಯಾರಾವ್ಯಾನ್‌ನಲ್ಲೂ ಇರುವಂತೆ ಇದರಲ್ಲೂ ಲಿವಿಂಗ್ ಏರಿಯಾ ಇದೆ. ಆದರೆ, ವಿನ್ಯಾಸ ಆಕರ್ಷಕವಾಗಿರುತ್ತೆ.

ಬೆಡ್‌ ರೂಂ: ಕಿಚ್ಚ ಸುದೀಪ್ ನಿದ್ದೆ ಮಾಡುವುದೇ ಕಮ್ಮಿ ಅನ್ನೋದು ಪತ್ನಿ ಪ್ರಿಯಾ ಕಂಪ್ಲೇಂಟ್. ಹೀಗಾಗಿ ಬಿಡುವು ಸಿಕ್ಕಾಗ ಸುದೀಪ್ ನಿದ್ದೆಗೆ ಜಾರುತ್ತಾರೆ. ಕೆಲವೊಮ್ಮೆ ಶೂಟಿಂಗ್ ತಡವಾದರೆ, ಆಯಾಸ ಆದರೆ ಬೆಡ್‌ ರೂಂ ಅತ್ಯಗತ್ಯ.

ಕಿಚನ್: ಕಿಚ್ಚನಿಗೆ ಅಡುಗೆ ಮಾಡೋದು ಅಂದರೆ, ಬಲು ಇಷ್ಟ. ಹೀಗಾಗಿ ಕ್ಯಾರಾವ್ಯಾನ್‌ನಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಮಿನಿ ಕಿಚನ್ ವ್ಯವಸ್ಥೆಯನ್ನೂ ಮಾಡಲಾಗಿದೆ ಅನ್ನೋದು ಬಲ್ಲ ಮೂಲಗಳು ನೀಡಿರುವ ಮಾಹಿತಿ.

ಮಿನಿ ಜಿಮ್: ಇನ್ನು ಸ್ಟಾರ್‌ ಅಂದ್ಮೇಲೆ ದೇಹವನ್ನು ಕಟ್ಟು ಮಸ್ತಾಗಿ ಇಟ್ಟುಕೊಳ್ಳಬೇಕು. ಅದಕ್ಕೆ ಜಿಮ್‌ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುತ್ತಾರೆ. ಆ ರೊಟೀನ್ ಮಿಸ್ ಆಗಬಾರದೆಂದು ಮಿನಿ ಜಿಮ್ ಕೂಡ ಇದೆ ಎನ್ನಲಾಗಿದೆ. ಇದರೊಂದಿಗೆ ಹೈಟೆಕ್ ವಾಶ್‌ರೂಂ, ಟಿವಿ, ಮ್ಯೂಸಿಕ್ ಸಿಸ್ಟಮ್ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳು ಇವೆ.

ಕಿಚ್ಚನ ಕೈ ಸೇರಿಲ್ಲ ಕ್ಯಾರಾವ್ಯಾನ್

ಈ ಐಷಾರಾಮಿ ಕ್ಯಾರಾವ್ಯಾನ್ ಇನ್ನೂ ಕಿಚ್ಚನ ಕೈ ಸೇರಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಪೂನಾದಲ್ಲಿ ವಿನ್ಯಾಸ ಮಾಡಲಾಗಿದ್ದು, ಅಲ್ಲಿಂದ ಬಂದು ಕಿಚ್ಚನ ಕೈ ಸೇರುವುದಕ್ಕೆ ಇನ್ನೂ ಎರಡರಿಂದ ಮೂರು ವಾರ ಬೇಕು ಎನ್ನಲಾಗಿದೆ. ಸದ್ಯ 'ಬಿಲ್ಲ ರಂಗ ಭಾಷಾ' ಶೂಟಿಂಗ್ ನಡೆಯುತ್ತಿದ್ದು, ಮೂರು ದಿನಗಳಲ್ಲಿ ಒಂದು ಶೆಡ್ಯೂಲ್ ಮುಗಿಯಲಿದೆ. ಅದಾಗ ಬಳಿಕ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಲಿದ್ದಾರೆ. ಮತ್ತೆ 'ಬಿಲ್ಲ ರಂಗ ಭಾಷಾ' ಆರಂಭ ಆಗುವ ಹೊತ್ತಿಗೆ ಕ್ಯಾರಾವ್ಯಾನ್ ಕಿಚ್ಚನ ಕೈ ಸೇರುತ್ತೆ ಎನ್ನಲಾಗಿದೆ.

English summary
Kichcha Sudeep hasn't gotten a luxury caravan. What's inside a luxury caravan?
Read more about: sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X