ಬಿಗ್ ಬಾಸ್ ನಿರೂಪಣೆಗೆ ಅಂತ್ಯ ಹಾಡಿದ ಕಿಚ್ಚ ಸುದೀಪ್; ಭಾವುಕರಾದ ನೆಟ್ಟಿಗರು ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಗ್ರ್ಯಾಂಡ್ ಆಗಿಯೇ ಕೊನೆಗೊಂಡಿದೆ. ಈ ಬಾರಿಯ ಫಿನಾಲೆ ಸಿಕ್ಕಾಪಟ್ಟೆ ಮಜಾ ಕೊಟ್ಟಿತ್ತು. ಕಿಚ್ಚ ಸುದೀಪ್ ನಿರೂಪಣೆ ಮತ್ತೊಂದು ಪ್ರೇಕ್ಷಕರನ್ನು ರಂಜಿಸಿದ್ದು ಸುಳ್ಳಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 11 ಸೂಪರ್ ಸಕ್ಸಸ್ ಆಗಿ ಕೊನೆಗೊಂಡಿದೆ. ಸಖತ್ ಎಂಜಾಯ್ ಮಾಡಿದ್ದ ವೀಕ್ಷಕರು ನಿರಾಸೆಯಿಂದ 11ನೇ ಸೀಸನ್‌ಗೆ ಅಂತ್ಯ ಹಾಡಿದ್ದಾರೆ.
ಕಿಚ್ಚ ಸುದೀಪ್ ವೇದಿಕೆ ಮೇಲೆ ಬಂದು ನಿಂತರೆ ಅದೇನೋ ಒಂದು ಕಳೆ. ಅವರ ಮಾತಿನ ಶೈಲಿಗೆ ಮರುಳಾಗದವರೇ ಇಲ್ಲ. ಕಿಚ್ಚ ಸ್ಕ್ರೀನ್ ಪ್ರೆಸೆನ್ಸ್ ಕೂಡ ಅಷ್ಟೇ ಅದ್ಭುತವಾಗಿರುತ್ತೆ. ಒಂದೊಂದು ಸೀಸನ್ ಕೂಡ ನೆನಪಿನಲ್ಲಿ ಉಳಿಯುವಂತಹದ್ದು. ಪ್ರತಿ ಸೀಸನ್‌ನಲ್ಲೂ ಸುದೀಪ್ ಆಡುವ ಮಾತುಗಳು ಅದೆಷ್ಟೋ ಮಂದಿಯನ್ನು ನಾಟಿಸಿದೆ. ಸ್ಪರ್ಧಿಗಳನ್ನು ಬಡಿದೆಬ್ಬಿಸಿದೆ. ಹೊಸ ಅಧ್ಯಾಯಕ್ಕೆ ಮುನ್ನುಡಿಯನ್ನು ಬರೆದಿದೆ.

ಕಿಚ್ಚ ಸುದೀಪ್ ನಿರೂಪಣೆಗೆ ಅವರದ್ದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಈ ಬಾರಿಯಂತೂ ವೇದಿಕೆಯಲ್ಲಿ, ತಮಾಷೆ, ಕಣ್ಣೀರು, ಮಾತಿನ ಚಾಟಿ ಎಲ್ಲವೂ ಇತ್ತು. ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ತಂದೆ ಬಿಗ್ ಬಾಸ್ ಶೋಗೆ ಆಗಮಿಸಿದ ಬಳಿಕ ವೀಕ್ಷಕರಿಗೆ ಕನ್ಫರ್ಮ್ ಆಗಿತ್ತು. ಬಿಗ್ ಬಾಸ್ ನಿರೂಪಣೆಗೆ ಮತ್ತೆ ಕಿಚ್ಚ ಸುದೀಪ್ ಮರಳುವುದಿಲ್ಲ ಅನ್ನೋದು ಖಾತರಿಯಾಗಿತ್ತು. ಬಾರದ ಮನಸ್ಸಿನಿಂದಲೇ ಕಿಚ್ಚ ಸುದೀಪ್ ಬಿಗ್ ಬಾಸ್‌ಗೆ ವಿದಾಯ ಹೇಳಿದ್ದಾರೆ. ಅದೇ ಬೇಸರದಲ್ಲೇ ವೀಕ್ಷಕರು ಕೂಡ ಗುಡ್ ಬೈ ಹೇಳಿದ್ದಾರೆ. ಅದರಲ್ಲೂ ಟ್ವಿಟರ್ (ಎಕ್ಸ್)ನಲ್ಲಂತೂ ಕಿಚ್ಚ ಸುದೀಪ್ ನಿರೂಪಣೆ ಬಗ್ಗೆ ಹೊಗಳಿಕೆಯ ಮಹಾಪೂರವೇ ಹರಿದುಬಂದಿದೆ. ಟ್ವಿಟರ್‌ನಲ್ಲಿ ನೆಟ್ಟಿಗರ ರಿಯಾಕ್ಷನ್ ಹೇಗಿದೆ? ಅಂತ ನೋಡುವುದಾದರೆ..
ಬಿಗ್ ಬಾಸ್ ಯುಗಾಂತ್ಯ
"ಇದು ಬಿಗ್‌ಬಾಸ್‌ನ ಯುಗಾಂತ್ಯ. ಕಿಚ್ಚ ಸುದೀಪ್ ಅಣ್ಣ ನಿಮಗೊಂದು ಸಲ್ಯೂಟ್." ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ಸುದೀಪ್ ಬಿಗ್ ಬಾಸ್ ಮನೆಯೊಳಗಿದ್ದ ಹಲವು ಫೋಟೊಗಳ ಗುಚ್ಚವನ್ನು ಹಂಚಿಕೊಂಡು ಎಮೋಷನಲ್ ಆಗಿದ್ದಾರೆ.
ಮಹಿಳಾ ಅಭಿಮಾನಿಗಳು ಹೆಚ್ಚಾಗಿದ್ರು
"ಬಿಗ್ ಬಾಸ್ ಕನ್ನಡದ ನಿರೂಪಣೆ ಮಾಡುವ ಮೂಲಕ ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿತ್ತು. ಅದರಲ್ಲೂ ಅವರಿಗೆ ಮಹಿಳಾ ಅಭಿಮಾನಿಗಳು ಹೆಚ್ಚಾಗಿ ಹುಟ್ಟಿಕೊಂಡಿದ್ದರು. ಅವರ ಚಾರ್ಮ್, ಚಾಣಾಕ್ಷತನ, ತಮ್ಮ ನಿರೂಪಣೆಯ ಶೈಲಿಯಿಂದ ವೀಕ್ಷಕರನ್ನು ಸೆಳೆಯುವ ಶೈಲಿ ಇಷ್ಟ ಆಗುತ್ತು. ಅವರು ನಿರೂಪಣೆ ಮಾಡುವ ಶೈಲಿ ಈ ಶೋ ಅನ್ನು ನೋಡುವಂತೆ ಮಾಡುತ್ತಿದೆ ಎಂದು ಹಲವರು ಹೇಳಿದ್ದರು." ಎಂದು ಇನ್ನೊಬ್ಬ ನೆಟ್ಟಿಗರು ಎಮೋಷನಲ್ ಆಗಿ ಬರೆದುಕೊಂಡಿದ್ದಾರೆ.
ಬಿಗ್‌ಬಾಸ್ = ಕಿಚ್ಚ
"ಇದುವರೆಗೂ ಬಿಗ್ ಬಾಸ್ = ಕಿಚ್ಚ ಸುದೀಪ್ ಅನ್ನೋ ಹಾಗಿತ್ತು. ಈಗ ಆ ಯುಗ ಅಂತ್ಯ ಕಂಡಿದೆ. ಎಲ್ಲಾ ಭಾಷೆಗಳಿಗೂ ಹೋಲಿಕೆ ಮಾಡಿದರೆ ಇವರೇ ಅತ್ಯುತ್ತಮ ನಿರೂಪಕ ಎಂದು ಹೇಳಬಹುದು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
"ವಿ ಮಿಸ್ ಯೂ ಸುದೀಪ್ ಸರ್"
ಬಿಗ್‌ಬಾಸ್ ಮುಗಿದ ಅಧ್ಯಾಯ. ನಿಮ್ಮನ್ನು ಯಾರೂ ರೀಪ್ಲೇಸ್ ಮಾಡುವುದಕ್ಕೆ ಸಾಧ್ಯವಿಲ್ಲ. ಭಾರತದಲ್ಲಿ ನೀವು ಅತ್ಯುತ್ತಮ ನಿರೂಪಕ. ಕನ್ನಡ ಬಿಗ್ ಬಾಸ್‌ನಲ್ಲಿ ನಾವು ನಿಮ್ಮ ನಿರೂಪಣೆಯನ್ನು ನೋಡಿದ್ದಕ್ಕೆ ಧನ್ಯರು. ಮುಂದಿನ ಸೀಸನ್‌ನಿಂದ ನಿಜವಾಗಿಯೂ ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ. ವಿ ಲವ್ ಯೂ ಸುದೀಪ್ ಸರ್ " ಮತ್ತೊಬ್ಬ ಬಿಗ್ ಬಾಸ್ ಅಭಿಮಾನಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











