Max Box Office Day 1:ಮೊದಲ ದಿನ ಉಪ್ಪಿ 'ಯುಐ' ಹಿಂದಿಕ್ಕಿದ ಕಿಚ್ಚ ಸುದೀಪ್ 'ಮ್ಯಾಕ್ಸ್'; ಕಲೆಕ್ಷನ್ ಎಷ್ಟು ಗೊತ್ತೇ?
ಕನ್ನಡದ ಎರಡು ಬಹು ನಿರೀಕ್ಷೆಯ ಸಿನಿಮಾಗಳು ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗಿದ್ದು ಸಿನಿಮಾ ಮಂದಿಯಲ್ಲಿ ಆತಂಕ ಮೂಡಿಸಿತ್ತು. ಒಂದ್ಕಡೆ ಉಪೇಂದ್ರ ನಿರ್ದೇಶಿಸಿದ 'ಯುಐ'. ಇನ್ನೊಂದು ಕಡೆ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್'. ಎರಡು ಸಿನಿಮಾಗಳು ಎರಡು ವಾರ ಗ್ಯಾಪ್ ಕೊಡದೇ ಬಿಡುಗಡೆಯಾಗುತ್ತಿರುವುದು ಇಬ್ಬರ ಅಭಿಮಾನಿಗಳಲ್ಲೂ ಆತಂಕ ಮೂಡಿಸಿತ್ತು.
ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಮೂಡಿನಲ್ಲಿ ಇರುವ ಜನರಿಗೆ ಎಂಟರ್‌ಟೈನ್ ಮಾಡುವುದಕ್ಕೆ 'ಮ್ಯಾಕ್ಸ್' ಸಿನಿಮಾ ತುದಿಗಾಲಲ್ಲಿ ನಿಂತಿತ್ತು. ನಿರೀಕ್ಷೆ ಮಾಡಿದಂತೆ 'ಮ್ಯಾಕ್ಸ್' ಸಿನಿಮಾ ಅದ್ಧೂರಿಯಾಗಿ ನಿನ್ನೆ (ಡಿಸೆಂಬರ್ 25) ಬಿಡುಗಡೆಯಾಗಿತ್ತು. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ರಿಲೀಸ್ ಆಗಿದ್ದ ಈ ಸಿನಿಮಾಗೆ ಮೊದಲ ದಿನ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ.

ಫಸ್ಟ್ ಡೇ ಫಸ್ಟ್ ಶೋನೇ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದರಿಂದ ಕರ್ನಾಟಕದಾದ್ಯಂತ ಸುಮಾರು ಶೇ.88ರಷ್ಟು ಆಕ್ಯೂಪೆನ್ಸಿ ಇತ್ತು ಎಂದು ವಿತರಕರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಅಡ್ವಾನ್ಸ್ ಬುಕಿಂಗ್ ಕೂಡ ಸಖತ್ ಆಗಿಯೇ ಆಗಿದೆ. ಹೀಗಾಗಿ 'ಮ್ಯಾಕ್ಸ್' ಮೊದಲ ದಿನದ ಕಲೆಕ್ಷನ್ ಎಷ್ಟು ಅನ್ನುವ ಲೆಕ್ಕಾಚಾರ ಶುರುವಾಗಿದೆ. ಇಂಡಸ್ಟ್ರಿ ಟ್ರೇಡಿಂಗ್ ವೆಬ್ ಪೋರ್ಟಲ್ ಸ್ಯಾಕ್ನಿಲ್ಕ್ ಈಗಾಗಲೇ ಮೊದಲ ದಿನ ಗಳಿಕೆ ಎಷ್ಟು ಅನ್ನೋದನ್ನು ಅನೌನ್ಸ್ ಮಾಡಿದೆ.
'ಮ್ಯಾಕ್ಸ್' ಮೊದಲನೇ ದಿನದ ಕಲೆಕ್ಷನ್
ಕಿಚ್ಚ ಸುದೀಪ್ ಸಿನಿಮಾ ಸುಮಾರು ಎರಡೂವರೆ ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. 'ವಿಕ್ರಾಂತ್ ರೋಣ' ಬಳಿಕ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ನಿರೀಕ್ಷೆ ಏನೂ ಕಮ್ಮಿಯಿರಲಿಲ್ಲ. ಮೊದಲ ದಿನ ಸಿನಿಮಾಗೆ ನಿರೀಕ್ಷೆ ಮಾಡಿದಂತೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 930 ಸ್ಕ್ರೀನ್‌ಗಳಲ್ಲಿ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿತ್ತು. ಈ ಲೆಕ್ಕಾಚಾರದ ಪ್ರಕಾರ 'ಮ್ಯಾಕ್ಸ್' ಮೊದಲ ದಿನ 8.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವೆಬ್ ಪೋರ್ಟಲ್ ವರದಿ ಮಾಡಿದೆ. ಇತ್ತ ವಿತರಕರ ವಲಯದಲ್ಲಿ ಈ ಲೆಕ್ಕಾಚಾರ ಇನ್ನೂ ಹೆಚ್ಚಾಗಬಹುದೆಂದು ಹೇಳುತ್ತಿದ್ದಾರೆ.

ಅಡ್ವಾನ್ಸ್ ಬುಕಿಂಗ್ ಎಷ್ಟು?
ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್'ಗೆ ಅಡ್ವಾನ್ಸ್ ಬುಕಿಂಗ್ ಸಖತ್ ಆಗಿಯೇ ಆಗಿತ್ತು. ಕರ್ನಾಟಕದಾದ್ಯಂತ ಸುಮಾರು 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಖರೀದಿಯಾಗಿದ್ದರು. ಆ ಹಿನ್ನೆಲೆಯಲ್ಲಿ ಬಿಡುಗಡೆಗೂ ಮುನ್ನವೇ 'ಮ್ಯಾಕ್ಸ್' ಸುಮಾರು 2.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ಥಿಯೇಟರ್‌ಗೆ ಬಂದು ಖರೀದಿ ಮಾಡಿದವರು ಹೆಚ್ಚಾಗಿದ್ದಾರೆ. ಅದೆಲ್ಲವೂ ಸೇರಿ ದೊಡ್ಡ ಮೊತ್ತವೇ ಕಲೆಕ್ಷನ್ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಹೇಗಿದೆ ಕಲೆಕ್ಷನ್?
ಕಿಚ್ಚ ಸುದೀಪ್‌ಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಆದರೆ, 'ಮ್ಯಾಕ್ಸ್' ಮೊದಲು ಕರ್ನಾಟಕದಲ್ಲಿ ರಿಲೀಸ್ ಆಗಿದ್ದರಿಂದ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟ್ರು ಕಲೆಕ್ಷನ್ ಆಗಿತ್ತು ಅನ್ನೋದನ್ನು ಸ್ಯಾಕ್ನಿಲ್ಕ್ ವೆಬ್ ಪೋರ್ಟಲ್ ವರದಿ ಮಾಡಿದೆ. ಈ ಪ್ರಕಾರ, ಶಿವಮೊಗ್ಗದಲ್ಲಿ ಅತೀ ಹೆಚ್ಚು ಶೇ.96.75ರಷ್ಟು ಆಕ್ಯೂಪೆನ್ಸಿ ಇತ್ತು. ರಾಯಚೂರಿನಲ್ಲಿ ಶೇ.94 ರಷ್ಟು, ಮೈಸೂರಿಲ್ಲಿ ಶೇ.93 , ತುಮಕೂರಿನಲ್ಲಿ ಶೇ. 92.50, ಇನ್ನೂ ಹಲವೆಡೆ ಹೆಚ್ಚು ಉತ್ತಮ ಕಲೆಕ್ಷನ್ ಆಗಿದೆ.
ವೀಕೆಂಡ್ ಕಲೆಕ್ಷನ್ ಲೆಕ್ಕಾಚಾರ
ಎರಡು ದಿನ ಮುನ್ನವೇ ಸಿನಿಮಾ 'ಮ್ಯಾಕ್ಸ್' ರಿಲೀಸ್ ಆಗಿದೆ. ಹೀಗಾಗಿ ಇನ್ನುಳಿದ ಮೂರು ದಿನಗಳಲ್ಲಿ ಕಲೆಕ್ಷನ್ ಹೇಗಿರುತ್ತೆ ಅನ್ನೋ ಕುತೂಹಲವಿದೆ. ಸಿನಿಮಾ ಈಗಾಗಲೇ ರಿಲೀಸ್ ಆಗಿದ್ದು ಮೊದಲ ದಿನ ಮಸ್ತ್ ಕಲೆಕ್ಷನ್ ಮಾಡಿದೆ. ಇನ್ನು ಉಳಿದ ನಾಲ್ಕು ದಿನಗಳಲ್ಲಿ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೂ ಸಿನಿಮಾ ಗೆದ್ದಂತೆ.


Click it and Unblock the Notifications











