Max Box Office Day 12: ವೀಕೆಂಡ್‌ನಲ್ಲಿ ಬಾಕ್ಸಾಫೀಸ್‌ಗೆ ಕಿಕ್ ಕೊಟ್ಟ 'ಮ್ಯಾಕ್ಸ್'; 12ನೇ ದಿನ ಗಳಿಸಿದ್ದೆಷ್ಟು?
ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಹೊಸ ವರ್ಷಕ್ಕೆ ಹೊಸ ಹುರುಪು ಕೊಟ್ಟಿದೆ. ಈ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದು ಮೂರನೇ ವಾರಕ್ಕೆ ಕಾಲಿಟ್ಟಿದೆ. ಬಾಕ್ಸಾಫೀಸ್‌ನಲ್ಲಿ ಅದ್ಭುತ ಗಳಿಕೆ ಕಂಡ ಈ ಸಿನಿಮಾ ಮೂರವೇ ವಾರದ ಆರಂಭದಲ್ಲಿ ಕೊಂಚ ಇಳಿಮುಖ ಕಂಡಿತ್ತು. ಆದರೆ ಮೂರನೇ ವೀಕೆಂಡ್‌ನಲ್ಲಿ ಮತ್ತೆ ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡಿದೆ.
'ಮ್ಯಾಕ್ಸ್' ಯಶಸ್ಸಿನಿಂದ ಕಿಚ್ಚ ಸುದೀಪ್ ಖುಷಿಯಾಗಿರುವುದಂತೂ ನಿಜ. ಆದರೆ, ಖುಷಿ ಸಂಕ್ರಾಂತಿ ಹಬ್ಬದವರೆಗೂ ಮುಂದುವರೆಯುತ್ತಾ? ಅನ್ನುವ ಕುತೂಹಲವಿದೆ. 2024ರಲ್ಲಿ ಕನ್ನಡ ಸಿನಿಮಾಗಳು ಒಂದರ ಹಿಂದೊಂದು ಸೋತಿದ್ದವು. ಇಂತಹ ಸ್ಥಿತಿಯಲ್ಲಿ ಕನ್ನಡ ನಾಲ್ಕೈದು ಸಿನಿಮಾಗಳಲ್ಲಿ ಥಿಯೇಟರ್‌ಗೆ ಪ್ರೇಕ್ಷಕರನ್ನು ಸೆಳೆದಿದ್ದವು. ಅದರಲ್ಲಿ 'ಮ್ಯಾಕ್ಸ್' ಕೊನೆಯ ಸಿನಿಮಾ ಆಗಿತ್ತು.

2024ರ ಅಂತ್ಯದಲ್ಲಿ ತೆರೆಕಂಡಿದ್ದ ಸಿನಿಮಾ ಹೊಸ ವರ್ಷದಲ್ಲಿ ತನ್ನ ಯಶಸ್ಸನ್ನು ಮುಂದುವರೆಸಿದೆ. ಸದ್ಯ 'ಮ್ಯಾಕ್ಸ್' ರಿಲೀಸ್ ಆಗಿ 13 ದಿನಗಳಾಗಿವೆ. ಇದರಲ್ಲಿ 12 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಸಖತಾಗಿದೆ. ಹೀಗೆ ಮುಂದುವರೆದರೆ, ಕೇವಲ ಕರ್ನಾಟಕದಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಹಾಗಿದ್ದರೆ, 12ನೇ ದಿನ 'ಮ್ಯಾಕ್ಸ್' ಕಲೆಕ್ಷನ್ ಎಷ್ಟು? 'ಮ್ಯಾಕ್ಸ್' ಒಟ್ಟು ಗಳಿಕೆ ಎಷ್ಟಾಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಮ್ಯಾಕ್ಸ್' 12ನೇ ದಿನದ ಕಲೆಕ್ಷನ್
ಕಿಚ್ಚ ಸುದೀಪ್ ಸಿನಿಮಾ ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ವಾರದ ಮಧ್ಯೆ ಕಲೆಕ್ಷನ್ ಡ್ರಾಪ್ ಆಗುತ್ತಿದ್ದರೂ, ವೀಕೆಂಡ್‌ನಲ್ಲಿ ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದಾರೆ. ಬಾಕ್ಸಾಫೀಸ್ ಟ್ರ್ಯಾಕ್ ಮಾಡುವ ಸ್ಯಾಕ್ನಿಲ್ಕ್.ಕಾಮ್ ಪ್ರಕಾರ, ಕಿಚ್ಚ ಸುದೀಪ್ 'ಮ್ಯಾಕ್ಸ್' 12ನೇ ದಿನ 2.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಿಕೊಂಡಿದೆ. ಅದೂ ಫೈನಲ್ ರಿಪೋರ್ಟ್ ಅಲ್ಲ. ಹೀಗಾಗಿ ಇನ್ನೂ ಗಳಿಕೆಯಲ್ಲಿ ಏರಿಕೆ ಆಗುವ ಸಾಧ್ಯತೆಯಿದೆ.

ವೀಕೆಂಡ್‌ನಲ್ಲಿ ಮಸ್ತ್ ಕಲೆಕ್ಷನ್
ವೀಕೆಂಡ್‌ನಲ್ಲಿ 'ಮ್ಯಾಕ್ಸ್' ನೋಡುವುದಕ್ಕೆ ಜನರು ಥಿಯೇಟರ್‌ಗೆ ಬರುತ್ತಿದ್ದಾರೆ. ಈ ಸಿನಿಮಾದ ಸ್ಟೋರಿ, ಆಕ್ಷನ್ ಜೊತೆ ಕಿಚ್ಚ ಸುದೀಪ್ ಮ್ಯಾನರಿಸಂಗೆ ಮನಸೋತಿರುವ ಪ್ರೇಕ್ಷಕರು ವೀಕೆಂಡ್‌ನಲ್ಲಿ 'ಮ್ಯಾಕ್ಸ್' ನೋಡುತ್ತಿದ್ದಾರೆ. ಹೀಗಾಗಿ ಶನಿವಾರ 1.75 ಕೋಟಿ ರೂಪಾಯಿ ಹಾಗೂ ಭಾನುವಾರ 2.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮೂರನೇ ವಾರಕ್ಕೆ ಇದು ಉತ್ತಮ ಕಲೆಕ್ಷನ್ ಎನ್ನುತ್ತೆ ವಿತರಕರ ವಲಯ.
ವೀಕೆಂಡ್‌ನಲ್ಲಿ ಆಕ್ಯೂಪೆನ್ಸಿ ಹೇಗಿದೆ?
ಕರ್ನಾಟಕದಾದ್ಯಂತ 'ಮ್ಯಾಕ್ಸ್' ಸಿನಿಮಾಗೆ ಥಿಯೇಟರ್ ಆಕ್ಯೂಪೆನ್ಸಿ ಸೂಪರ್ ಆಗಿದೆ. ಮೂರನೇ ವಾರಕ್ಕೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಲೆಕ್ಷನ್ ಏರಿಕೆಯಾಗಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ, ಶಿವಮೊಗ್ಗ ಹಾಗೂ ಕಲಬುರ್ಗಿಯಲ್ಲಿ ಶೇ.68.75, ತುಮಕೂರಿನಲ್ಲಿ ಶೇ.55.55ರಷ್ಟು, ಮೈಸೂರು ಶೇ.46.25, ಕುಂದಾಪುರ ಶೇ.40.75ರಷ್ಟು, ರಾಯಚೂರು ಶೇ.39.25, ಮಣಿಪಾಲ್ ಶೇ. 38.25, ಹುಬ್ಬಳ್ಳಿ ಶೇ.38ರಷ್ಟು ಆಕ್ಯೂಪೆನ್ಸಿ ಇದ್ದರೆ, ಬೆಂಗಳೂರಿನಲ್ಲಿ ಶೇ.29ರಷ್ಟು ಚಿತ್ರಮಂದಿರಗಳು ತುಂಬಿವೆ.
12 ದಿನಗಳ ಕಲೆಕ್ಷನ್ ಹೀಗಿದೆ.
- ಮೊದಲ ದಿನ - 8.70 ಕೋಟಿ ರೂ.
- ಎರಡನೇ ದಿನ - 3.85 ಕೋಟಿ ರೂ.
- ಮೂರನೇ ದಿನ - 4.70 ಕೋಟಿ ರೂ.
- ನಾಲ್ಕನೇ ದಿನ - 5.00 ಕೋಟಿ ರೂ.
- ಐದನೇ ದಿನ - 5.90 ಕೋಟಿ ರೂ.
- ಆರನೇ ದಿನ - 2.45 ಕೋಟಿ ರೂ.
- ಏಳನೇ ದಿನ - 1.90 ಕೊಟಿ ರೂ.
- ಎಂಟನೇ ದಿನ - 4.15 ಕೋಟಿ ರೂ.
- ಒಂಬತ್ತನೇ ದಿನ - 1.35 ಕೋಟಿ ರೂ.
- ಹತ್ತನೇ ದಿನ - 1.15 ಕೋಟಿ ರೂ.
- ಹನ್ನೊಂದನೇ ದಿನ - 1.75 ಕೋಟಿ ರೂ.
- ಹನ್ನೆರಡನೇ ದಿನ - 2.25 ಕೋಟಿ ರೂ.
- ಒಟ್ಟು - 43.15 ಕೋಟಿ ರೂ.
Disclaimer: ಈ ಸಿನಿಮಾದ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. 'ಮ್ಯಾಕ್ಸ್' ತಂಡ ಇನ್ನೂ ಅಧಿಕೃತವಾಗಿ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.


Click it and Unblock the Notifications











