ಕ್ಯಾನ್ಸರ್‌ನಿಂದ ಬಳಲುತ್ತಿರೋ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್: ವಿಡಿಯೋ ವೈರಲ್

ಕಿಚ್ಚ ಸುದೀಪ್‌ಗೆ ಚಿಕ್ಕವರಿಂದ ದೊಡ್ಡವರವರೆಗೂ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಪುಟ್ಟ ಅಭಿಮಾನಿಗಳೇ ಹೆಚ್ಚು. ಸುದೀಪ್ ಕಷ್ಟದಲ್ಲಿರೋ ತಮ್ಮ ಅಭಿಮಾನಿಗಳನ್ನು ಆಗಾಗ ಭೇಟಿ ಮಾಡುತ್ತಲೇ ಇರುತ್ತಾರೆ.

ಈ ಬಾರಿ ತನ್ನ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿ ಬಂದಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಕ್ಷಿ ಅನ್ನೊ ಕಿಚ್ಚನ ಪುಟ್ಟ ಅಭಿಮಾನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಈ ಬಾಲಕಿ ನೆಚ್ಚಿನ ನಟನನ್ನು ನೋಡುವ ಆಸೆ ವ್ಯಕ್ತಪಡಿಸಿತ್ತು.

ಹೀಗಾಗಿ ಕಿಚ್ಚ ಸುದೀಪ್ ಖುದ್ದಾಗಿ ಆಸ್ಪತ್ರೆಗೆ ತೆರಳಿ ತನ್ನ ಪುಟ್ಟ ಅಭಿಮಾನಿ ಹಾಗೂ ಕುಟುಂಬವನ್ನು ಭೇಟಿ ಮಾಡಿದ್ದಾರೆ ಬಂದಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Kichcha Sudeep met his little fan Sakshi in the hospital, who is fighting cancer

ಪುಟ್ಟ ಅಭಿಮಾನಿ ಭೇಟಿಯಾದ ಕಿಚ್ಚ

ಕಿಚ್ಚ ಸುದೀಪ್ ಪುಟ್ಟ ಅಭಿಮಾನಿ ಸಾಕ್ಷಿ ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈಕೆ ಕಿಚ್ಚನ ಅಪ್ಪಟ ಅಭಿಮಾನಿ. ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಾಕ್ಷಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಾಲಕಿ ತನ್ನ ನೆಚ್ಚಿನ ನಟನನ್ನು ನೋಡಬೇಕು ಅಂತ ಆಸೆ ವ್ಯಕ್ತಪಡಿಸಿದ್ದರು.

ಬಾಲಕಿಯ ಆಸೆ ಹಾಗೂ ಆರೋಗ್ಯದ ಸಮಸ್ಯೆಯನ್ನು ತಿಳಿದುಕೊಂಡ ಕಿಚ್ಚ ಸುದೀಪ್ ಆಸ್ಪತ್ರೆಗೆ ತೆರಳಿ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಹಾಗೇ ಬಾಲಕಿಯ ಕುಟುಂಬಸ್ಥರನ್ನೂ ಭೇಟಿ ಮಾಡಿದ್ದಾರೆ ಬಂದಿದ್ದಾರೆ.

ಬಾಲಕಿಗೆ ಆಟೋಗ್ರಾಫ್ ಕೊಟ್ಟ ಕಿಚ್ಚ

ತನ್ನ ನೆಚ್ಚಿನ ನಟ ಕಿಚ್ಚ ಸುದೀಪ್ ಭೇಟಿ ಮಾಡಬೇಕು ಅನ್ನೋ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ್ದಾರೆ. ಅಲ್ಲದೆ, ಸಾಕ್ಷಿಯ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಕೆಲ ಹೊತ್ತು ಬಾಲಕಿಯೊಂದಿಗೆ ಮಾತಾಡಿ ಆಟೋಗ್ರಾಫ್ ನೀಡಿ ಪ್ರೀತಿಯ ಅಪ್ಪುಗೆ ಕೊಟ್ಟು ಬಂದಿದ್ದಾರೆ.

ಕಿಚ್ಚ ಅಭಿಮಾನಿಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಕಿಚ್ಚನ ಸರಳತೆ ಹಾಗೂ ಹೃದಯವಂತಿಕೆಯನ್ನು ಅಭಿಮಾನಿಗಳು ಮೆಚ್ಚಿ ಕೊಂಡಾಡುತ್ತಿದ್ದಾರೆ. ಅಭಿಮಾನಿಯ ಆಸೆ ಈಡೇರಿಸಿದ್ದಕ್ಕೆ ನೆಟ್ಟಿಗರು ಕಿಚ್ಚನಿಗೆ ಮೆಚ್ಚುಗೆ ಸೂಚಿಸಿದ್ದಾರೆ.

Kichcha Sudeep met his little fan Sakshi in the hospital, who is fighting cancer

'ರನ್ನ'ನ ಥಿತಲಿ ಹಾಡು ಸ್ಪೂರ್ತಿ

ಕಿಚ್ಚ ಸುದೀಪ್ ಪುಟ್ಟ ಅಭಿಮಾನಿ ಸಾಕ್ಷಿ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. "ನನಗೆ ಸುದೀಪ್ ಸರ್ ಅಂದರೆ ಇಷ್ಟ. 'ರನ್ನ' ಸಿನಿಮಾದ 'ಥಿತಲಿ' ಹಾಡು ನನಗೆ ಸ್ಪೂರ್ತಿ" ಎಂದು ಹೇಳಿದ್ದಾರೆ.

ತನ್ನ ನೆಚ್ಚಿನ ನಟನನ್ನು ಕಂಡು ಸಾಕ್ಷಿ ಖುಷಿ ಮುಗಿಲು ಮುಟ್ಟಿತ್ತು. ಪುಟ್ಟ ಮನಸ್ಸಿಗೆ ಖುಷಿ ಹಂಚಿ ಬಂದ ಕಿಚ್ಚನ ಈ ಹೃದಯವಂತಿಕೆಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

More from Filmibeat

English summary
Kichcha Sudeep met his little fan Sakshi in the hospital, who is fighting cancer, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X