ಭವಿಷ್ಯದ ಕಥೆ ಹೇಳಲು ಹೊರಟ ಕಿಚ್ಚ: 'ಬಿಲ್ಲ ರಂಗ ಬಾಷ'ನ ಜೊತೆ ಕೈ ಜೋಡಿಸಿದ 'ಹನುಮಾನ್'

ಕನ್ನಡದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹುಟ್ಟುಹಬ್ಬವನ್ನು ಸಂಭ್ರಮದಲ್ಲಿ ಆಚರಿಸುತ್ತಿದ್ದಾರೆ. ಬರ್ತ್‌ಡೇ ಅಂದ್ಮೇಲೆ ಸಿನಿಮಾ ಮಂದಿ ಸುಮ್ಮನೆ ಇರುತ್ತಾರಾ? ಅದರಲ್ಲೂ ಕಿಚ್ಚನಿಗೆ ಆಕ್ಷನ್ ಕಟ್ ಹೇಳುವುದಕ್ಕೆ ಹೊರಟಿರುವ ನಿರ್ದೇಶಕರು ಸುಮ್ಮನೆ ಇರುತ್ತಾರಾ? ನಿರ್ಮಾಪಕರು ಸುಮ್ಮನೆ ಇರುತ್ತಾರಾ?

'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಎರಡು ಸಿನಿಮಾಗಳ ಮೇಲೆ ಕಣ್ಣಿದೆ. ಒಂದು ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆ ರೆಡಿಯಾಗಿರುವ 'ಮ್ಯಾಕ್ಸ್'. ಇನ್ನೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬಿಲ್ಲ ರಂಗ ಬಾಷ'. ಈ ಸಿನಿಮಾ ಅಭಿಮಾನಿಗಳಿಗಷ್ಟೇ ಅಲ್ಲ. ಸಿನಿಮಾ ಮಂದಿಗೂ ಅಷ್ಟೇ ಕುತೂಹಲವಿದೆ.

Kichcha Sudeep Movie Billa Ranga Basha update on his 51st Birthday

'ಬಿಲ್ಲ ರಂಗ ಬಾಷ' ಈಗಾಗಲೇ ಶುರುವಾಗಬೇಕಿತ್ತು. ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಇದೇ ಮೊದಲ ಸಿನಿಮಾ ಆಗಿ ಬರಬೇಕಿತ್ತು. ಆದರೆ, ಗ್ಯಾಪ್‌ನಲ್ಲಿ ಬದಲಾವಣೆಯಾಗಿ 'ವಿಕ್ರಾಂತ್ ರೋಣ' ಟೇಕ್ ಆಫ್ ಆಗಿತ್ತು. ಕಿಚ್ಚನ ಮೊದಲ ಅಧಿಕೃತ ಪ್ಯಾನ್ ಇಂಡಿಯಾ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಅದೇ ವೇಳೆ ಕಿಚ್ಚ ಸುದೀಪ್ 'ಬಿಲ್ಲ ರಂಗ ಬಾಷ'ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಕಿಚ್ಚನ ಹುಟ್ಟುಹಬ್ಬದ ಈ ಸಂದರ್ಭದಲ್ಲಿ 'ಬಿಲ್ಲ ರಂಗ ಬಾಷ' ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ 'ಬಿಲ್ಲ ರಂಗ ಬಾಷ' ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ. ಹೊಸ ಪ್ರತಿಭೆಯನ್ನು ಇಟ್ಟುಕೊಂಡು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದ 'ಹನುಮಾನ್' ಚಿತ್ರದ ನಿರ್ಮಾಪಕರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ 'ಬಿಲ್ಲ ರಂಗ ಬಾಷ'ನಿಗೆ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ.

'ಬಿಲ್ಲ ರಂಗ ಬಾಷ' ಸಿನಿಮಾ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಚಿಕ್ಕದೊಂದು ಝಲಕ್ ಅನ್ನು ಬಿಟ್ಟುಕೊಟ್ಟಿದ್ದಾರೆ. ಈ ಸಿನಿಮಾ ಭವಿಷ್ಯದ ಕಥೆಯನ್ನು ಹೇಳುತ್ತಿದೆ ಎಂದಿರೋ ನಿರ್ದೇಶಕರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೆ ಸದ್ದು ಮಾಡುವುದಕ್ಕೆ ಹೊರಟಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಕಿಚ್ಚ ಸುದೀಪ್ 51ನೇ ಹುಟ್ಟುಹಬ್ಬದ ಈ ಸಂದರ್ಭದಲ್ಲ 'ಬಿಲ್ಲ ರಂಗ ಬಾಷ' ಸಿನಿಮಾದ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋ ರಿಲೀಸ್ ಮಾಡಲಾಗಿದೆ. ಈ ಮೂಲಕ ಇಷ್ಟು ದಿನ 'ಬಿಲ್ಲ ರಂಗ ಬಾಷ' ಸಿನಿಮಾಗೆ ಅಪ್‌ಡೇಟ್ ಕೇಳುತ್ತಿದ್ದ ಕಿಚ್ಚನ ಫ್ಯಾನ್ಸ್ ಚಿಕ್ಕದೊಂದು ಝಲಕ್ ಸಿಕ್ಕಂತಾಗಿದೆ. ಅಂದ್ಹಾಗೆ, ಈ ಸಿನಿಮಾ ಕೂಡ ವಿಎಫ್‌ಎಕ್ಸ್‌ಗೆ ಹೆಚ್ಚು ಮಹತ್ವವಿರುವ ಸಿನಿಮಾ ಅನ್ನೋ ಸುಳಿವು ಕೂಡ ಸಿಕ್ಕಿದೆ.

'ಬಿಲ್ಲ ರಂಗ ಬಾಷ' ಇಂದಿನಿಂದ 185 ವರ್ಷಗಳಷ್ಟು ಭವಿಷ್ಯದ ಕಥೆ. ಅನುಪ್ ಭಂಡಾರಿಯೇ ಹೇಳುವಂತೆ 2209 ADಯ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಕುತೂಹಲವಿದೆ. 'ವಿಕ್ರಾಂತ್ ರೋಣ'ದಂತಹ ಸಿನಿಮಾ ನೀಡಿದ ಬಳಿಕ ಈ ಜೋಡಿ ಮತ್ತೆ ಮೋಡಿ ಮಾಡುವುದಕ್ಕೆ ಬರುತ್ತಿದೆ. ಆದರೆ, ಹೆಚ್ಚಿನ ಮಾಹಿತಿಯನ್ನೇನು ಬಿಟ್ಟುಕೊಟ್ಟಿಲ್ಲ. ಕೇವಲ ನಿರ್ಮಾಪಕರ ಬಗ್ಗೆ ಅಷ್ಟೇ ಸುಳಿವು ನೀಡಿದ್ದು, 'ಮ್ಯಾಕ್ಸ್' ಬಳಿಕ ಒಂದೊಂದೇ ವಿಷಯ ರಿವೀಲ್ ಆಗಬಹುದು.

More from Filmibeat

English summary
Kichcha Sudeep and Anup Bhandari movie Billa Ranga Basha update:
Read more about: sudeep filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X