ಅರಗಿಣಿಯೊಂದಿಗೆ ಮ್ಯಾಂಗೋ ಪಚ್ಚನ ರೆಟ್ರೋ ರೊಮ್ಯಾನ್ಸ್; ಇಂಪಾಗಿ ಸಾನ್ವಿ ಸುದೀಪ್ ಸಾಂಗ್

ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲೂ ಒಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಹತ್ತಾರು ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಆ ಸಿನಿಮಾ ಮತ್ಯಾವುದೂ ಅಲ್ಲ. ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ 'ಮ್ಯಾಂಗೋ ಪಚ್ಚ'. ಆದರೆ, ಅಭಿಮಾನಿಗಳಿಗೆ ಚಿತ್ರತಂಡ ನಿರಾಸೆ ಮಾಡಿಲ್ಲ.

2026ರಲ್ಲಿ ರಿಲೀಸ್ ಆಗಲಿರುವ ಹೊಸಬರ ಸಿನಿಮಾಗಳಲ್ಲಿ ನಿರೀಕ್ಷೆ ಹುಟ್ಟಾಕಿರುವ ಸಿನಿಮಾ 'ಮ್ಯಾಂಗೋ ಪಚ್ಚ' ಕೂಡ ಸೇರಿಕೊಂಡಿದೆ. ಸಂಚಿತ್ ಸಂಜೀವ್ ಈ ಸಿನಿಮಾದಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಟೀಸರ್ ಈಗಾಗಲೇ ಸಿನಿ ಪ್ರೇಮಿಗಳಲ್ಲಿ ಕುತೂಹಲವನ್ನು ಹುಟ್ಟಾಕಿದೆ. ಬಹುತೇಕ ಮೈಸೂರಿನ ಹಿನ್ನೆಲೆಯಲ್ಲೇ ನಡೆಯುವ ಕಥೆ ಮಾಸ್ ಎಂಟರ್‌ಟೈನರ್ ಅನ್ನೋದು ಮೇಲ್ನೋಟಕ್ಕೆ ಅನಿಸುತ್ತಿದೆ.

Kichcha Sudeep Nephew Sanchith Sanjeev debut movie Mango Pachcha second song Araginiye trending

'ಮ್ಯಾಂಗೋ ಪಚ್ಚ' ಕನ್ನಡ ಚಿತ್ರರಂಗದಲ್ಲಿ ಟೀಸರ್‌ ಹಾಗೂ ಹಾಡಿನಿಂದ ಭರವಸೆ ಮೂಡಿಸಿರೋ ಸಿನಿಮಾ. ಕಿಚ್ಚ ಸುದೀಪ್‌ ಅಕ್ಕನ ಮಗ ಸಂಚಿತ್‌ ಸಂಜೀವ್‌ ನಾಯಕ ಅಂದಾಗಲೇ ಅವರ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿತ್ತು. ಈಗಾಗಲೇ 'ಮ್ಯಾಂಗೋ ಪಚ್ಚ' ಸಿನಿಮಾದ "ಹಸರವ್ವ" ಹಾಡು ಗಮನ ಸೆಳೆದಿತ್ತು. ಈ ಹಾಡಿನ ಮೂಲಕ ಸದ್ದು ಮಾಡಿದ್ದ 'ಮ್ಯಾಂಗೋ ಪಚ್ಚ' ಸಿನಿಮಾ ತಂಡ ಮತ್ತೊಂದು ಹಾಡನ್ನು ರಿಲೀಸ್ ಮಾಡಿದೆ. ಅದುವೇ "ಅರಗಿಣಿಯೇ..". ಇದೊಂದು ರೊಮ್ಯಾಂಟಿಕ್‌ ಸಾಂಗ್ ಆಗಿದ್ದು, ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮೈಸೂರಿನ ಸುಂದರ ಜಾಗಗಳಲ್ಲಿ "ಅರಗಿಣಿಯೇ.." ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನ ಸ್ಪೆಷಾಲಿಟಿ ಅಂದ್ರೆ ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಸುದೀಪ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈಗಾಗಲೇ ತಂದೆ ನಟಿಸಿದ 'ಮಾರ್ಕ್' ಸಿನಿಮಾದಲ್ಲೂ "ಮಸ್ತ್‌ ಮಲೈಕಾ.." ಎಂದು ಹಾಡಿ ಸಂಗೀತ ಪ್ರೇಮಿಗಳ ಗಮನ ಸೆಳೆದಿದ್ದರು. ಈಗ ಮತ್ತೊಂದು ವಿಭಿನ್ನ ಶೈಲಿಯ ಹಾಡಿಗೆ ಸಾನ್ವಿ ಧ್ವನಿಯಾಗಿದ್ದಾರೆ. ಇವರೊಂದಿಗೆ ಸಪ್ತಸಾಗರ ದಾಚೆ ಎಲ್ಲೋ ಸಿನಿಮಾದ ಟೈಟಲ್‌ ಸಾಂಗ್‌ನಿಂದ ಕನ್ನಡದಲ್ಲಿ ಜನಪ್ರಿಯರಾಗಿರುವ ಕಪಿಲ್‌ ಕಪಿಲನ್‌ ಕೂಡ ಹಾಡಿದ್ದಾರೆ. ಇನ್ನು ಈ ಹಾಡಿಗೆ ಧನಂಜಯ ರಂಜನ್‌ ಸಾಹಿತ್ಯ ಬರೆದಿದ್ದು ಚರಣ್‌ ರಾಜ್‌ ಟ್ಯಾನ್ ಅನ್ನು ಕಂಪೋಸ್ ಮಾಡಿದ್ದಾರೆ.

Kichcha Sudeep Nephew Sanchith Sanjeev debut movie Mango Pachcha second song Araginiye trending

'ಮ್ಯಾಂಗೋ ಪಚ್ಚ' ಸಿನಿಮಾವನ್ನು ಕೆಆರ್‌ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡಿದೆ. ಇದು ಮೈಸೂರಿನ ಭಾಗದ ಕಥೆಯಾಗಿದ್ದು, ಬಹುತೇಕ ಅಲ್ಲಿಯೇ ಸಿನಿಮಾದ ಶೂಟಿಂಗ್ ನಡೆದಿದೆ. ಸಂಚಿತ್ ಸಂಜೀವ್‌ ಮೊದಲ ಸಿನಿಮಾದಲ್ಲೇ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕಾಜಲ್ ಕುಂದರ್, ಮಯೂರ್ ಪಟೇಲ್‌ , ಉಗ್ರಂ ಮಂಜು ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಈ ಸಿನಿಮಾಗೆ ಶೇಖರ್ ಚಂದ್ರ ಕ್ಯಾಮರಾ ವರ್ಕ್ ಇದೆ.

ಸಂಜಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಕ್ರೈಂ ಥ್ರಿಲ್ಲರ್‌ ಜಾನರ್‌ ಸಿನಿಮಾವಾಗಿದೆ. ಮೈಸೂರಿನ ಮೂಲದ ವಿವೇಕ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಟೀಸರ್‌ ಮತ್ತು ಹಾಡುಗಳಿಂದ ಸದ್ದು ಮಾಡ್ತಿರೋ 'ಮ್ಯಾಂಗೋ ಪಚ್ಚ' ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ. ಆ ವೇಳೆ ಟಿ20 ವರ್ಲ್ಡ್‌ ಕಪ್ ಹಾಗೂ ಬಳಿಕ ಐಪಿಎಲ್ ಶುರುವಾಗುವುದರಿಂದ ಯಾವಾಗ ರಿಲೀಸ್ ಮಾಡುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Kichcha Sudeep Nephew Sanchith Sanjeev debut movie Mango Pachcha second song Araginiye trending.
Read more about: sudeep kannada movie song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X