Mango Pachcha: ಸಂಕ್ರಾಂತಿಗೆ ಕಿಚ್ಚನ ಅಳಿಯ ಸಂಚಿತ್ ಎಂಟ್ರಿ; ಸುಗ್ಗಿ ಹಬ್ಬದಂದೇ ದಿಗ್ಗಜರಿಗೆ 'ಮ್ಯಾಂಗೋ ಪಚ್ಚ'ನ ಪಂಚ್
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ 'ಮ್ಯಾಂಗೋ ಪಚ್ಚ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಸಿನಿಮಾ ಟೀಸರ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಾಸ್ ಹೀರೋ ಎಂಟ್ರಿ ಕೊಡೋದು ಕನ್ಫರ್ಮ್ ಅಂತ ಇಡೀ ಸ್ಯಾಂಡಲ್‌ವುಡ್ ಮಾತಾಡಿಕೊಳ್ಳುತ್ತಿದೆ. ಸದ್ಯ ಚಿತ್ರತಂಡ ಕಿಚ್ಚನ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗಾಗಿ ಒಂದು ಮುಖ್ಯವಾದ ಅನೌನ್ಸ್‌ಮೆಂಟ್ ಮಾಡಿದೆ.
'ಮ್ಯಾಂಗೋ ಪಚ್ಚ' ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಅನ್ನು ಬದಲಿಸುವ ಸುಳಿ ನೀಡುತ್ತಿದೆ. ಬ್ಯಾಕ್ ಟು ಬ್ಯಾಕ್ ಸೋಲನ್ನು ಕಂಡು ಹೈರಾಣಾಗಿದ್ದ ಸ್ಯಾಂಡಲ್‌ವುಡ್ ಮತ್ತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗಿವೆ. ಮತ್ತೆ ಹಳೆಯ ಚಾರ್ಮ್ ಬಂದಂತೆ ಆಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಲೈನ್‌ಅಪ್‌ನಲ್ಲಿವೆ. ಅವುಗಳ ಮಧ್ಯೆ ಸಂಚಿಯ್ ಸಂಜೀವ್ ನಟಿಸುತ್ತಿರುವ 'ಮ್ಯಾಂಗೋ ಪಚ್ಚ' ಕೂಡ ಒಂದು.

ಟೀಸರ್ ಮೂಲಕ ಕುತೂಹಲ ಕೆರಳಿಸಿದ್ದ 'ಮ್ಯಾಂಗೋ ಪಚ್ಚ' ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಗ್ರ್ಯಾಂಡ್ ಎಂಟ್ರಿ ಮುಹೂರ್ತ ಫಿಕ್ಸ್ ಆಗಿದ್ದು, ಸಂಕ್ರಾಂತಿ ಹಬ್ಬದಂದು ಸಂ'ಕ್ರಾಂತಿ' ಮಾಡೋದು ಕನ್ಫರ್ಮ್ ಎಂದು ತಂಡ ಭವಿಷ್ಯ ನುಡಿದಿದೆ. 2026, ಜನವರಿ 15ಕ್ಕೆ ಈ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.
ಈ ಸಿನಿಮಾ ಮೂಲಕ ಕಿಚ್ಚನ ಲೆಗಸಿಯನ್ನು ಪಚ್ಚ ಅಂದರೆ, ಸಂಚಿತ್ ಸಂಜೀವ್ ಮುಂದುವರೆಸಿಕೊಂಡು ಹೋಗುವುದಕ್ಕೆ ಸಿದ್ಧರಾಗುತ್ತಿದ್ದಾರೆ. ವರ್ಷದ ಆರಂಭದಲ್ಲಿ ಕ್ರಾಂತಿ ಮಾಡುವುದಕ್ಕೆ ಈಗಿನಿಂದಲೇ ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಮಾವನ ಸಿನಿಮಾ 'ಮಾರ್ಕ್' ಮುಂದಿನ ತಿಂಗಳು ಅಂದರೆ, ಡಿಸೆಂಬರ್ 25 ಕ್ರಿಸ್‌ಮಸ್ ರಿಲೀಸ್ ಆಗುತ್ತೆ ಎನ್ನಲಾಗಿದೆ. ಒಂದು ಅದೇ ದಿನ ಸಿನಿಮಾ ಬಿಡುಗಡೆಯಾದರೆ, 22ನೇ ದಿನಕ್ಕೆ 'ಮ್ಯಾಂಗೋ ಪಚ್ಚ' ರಿಲೀಸ್ ಆಗುತ್ತಿದೆ. ಕಿಚ್ಚನ ಹಿಂದೇನೆ ಪಚ್ಚ ಕೂಡ ಎಂಟ್ರಿ ಕೊಡುತ್ತಿರೋದು ಕಿಚ್ಚ ಅಭಿಮಾನಿಗಳಿಗೆ ಡಬಲ್ ಧಮಾಕಾ ಎಂದೇ ಹೇಳಬಹುದು.
ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾಗಳು ರಿಲೀಸ್ ಆಗುವುದಿಲ್ಲ. ಈ ವೇಳೆ ರಿಲೀಸ್ ಆದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಓಡುವುದಿಲ್ಲ. ಆ ವೇಳೆ ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗುವ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತವೆಂಬ ನಂಬಿಕೆಯಿದೆ. ತನ್ನ ಚೊಚ್ಚಲ ಪ್ರಯತ್ನದಲ್ಲಿಯೇ ಆ ನಂಬಿಕೆಯನ್ನು ಬ್ರೇಕ್ ಮಾಡುವುದಕ್ಕೆ ಕಿಚ್ಚನ ಅಳಿಯ ತುದಿಗಾಲಲ್ಲಿ ನಿಂತಿದ್ದಾರೆ.

'ಸಂಕ್ರಾಂತಿ'ಗೆ ರಿಲೀಸ್ ಆಗುತ್ತಿರುವ 'ಮ್ಯಾಂಗೋ ಪಚ್ಚ' ದಿಗ್ಗಜರ ಸಿನಿಮಾಗಳ ಮುಂದೆ ಕಣಕ್ಕೆ ಇಳಿಯುತ್ತಿದೆ. ದಳಪತಿ ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾ 'ಜನ ನಾಯಗನ್' ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ. ಇನ್ನು ತೆಲುಗಿನಲ್ಲಿ ಡಾರ್ಲಿಂಗ್ ಪ್ರಭಾಸ್ ನಟನೆಯ 'ರಾಜಾ ಸಾಬ್' ಜನವರಿ 9ಕ್ಕೆ ರಿಲೀಸ್ ಆಗುತ್ತಿದೆ. ಇದರ ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾ ಕೂಡ ಸಂಕ್ರಾಂತಿಯಂದೇ ಬಿಡುಗಡೆಯಾಗುತ್ತಿದೆ. ಇದರೊಂದಿಗೆ ನವೀನ್ ಪೋಲಿಶೆಟ್ಟಿ ಹಾಗೂ ಮೀನಾಕ್ಷಿ ಚೌಧರಿ ಸಿನಿಮಾ 'ಅನಗನಗ ಒಕ ರಾಜು' ಹಾಗೇ ಶರ್ವಾನಂದ್ ನಟಿಸಿರುವ 'ನಾರಿ ನಾರಿ ನಡುಮ ಮುರಾರಿ' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಎಲ್ಲಾ ಸಿನಿಮಾ ಮಧ್ಯೆ 'ಮ್ಯಾಂಗೋ ಪಚ್ಚ' ಲೆಟೆಸ್ಟ್ ಎಂಟ್ರಿ ಕೊಡಲಿದ್ದಾರೆ.
'ಮ್ಯಾಂಗೋ ಪಚ್ಚ' ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾ. ಮೈಸೂರು ಮೂಲದ ಕ್ರೈಂ ಥ್ರಿಲ್ಲರ್ ಕಥೆಯನ್ನು ತೆರೆಮೇಲೆ ಹೇಳುವುದಕ್ಕೆ ಹೊರಟಿದ್ದಾರೆ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾ ಜೀವಾಳ. ಇನ್ನು ಬಹುತೇಕ ಚಿತ್ರೀಕರಣವನ್ನು ಮೈಸೂರಿನಲ್ಲೇ ಮಾಡಿರುವುದು ವಿಶೇಷ. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿದಿದ್ದು, ಪಚ್ಚನಿಗೆ ಕಾಜಲ್ ಕುಂದರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಮಯೂರ್ ಪಟೇಲ್ ,ಬಾವನಾ, ಹಂಸ, ಹರಿಣಿ ಶ್ರೀಕಾಂತ್, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್, ಪ್ರಶಾಂತ್ ಹಿರೇಮಠ್ ನಟಿಸಿದ್ದಾರೆ. ಈ ಸಿನಿಮಾದ ಹೈಲೈಟ್ ಅಂದರೆ, ಚರಣ್ ರಾಜ್ ಮ್ಯೂಸಿಕ್. ಇನ್ನೇನು ಕೆಲವೇ ದಿನಗಳಲ್ಲಿ ಹಾಡುಗಳು ರಿಲೀಸ್ ಆಗಲಿದ್ದು ಕಿಕ್ ಕೊಡಲಿವೆ. ಹಾಗೇ ಸಂಕ್ರಾಂತಿಗೆ ದಿಗ್ಗಜರಿಗೆ ಕಿಕ್ ಕೊಡುತ್ತಾನಾ 'ಮ್ಯಾಂಗೋ ಪಚ್ಚ' ಅನ್ನೋದು ನೋಡಬೇಕಿದೆ.


Click it and Unblock the Notifications











