Chola Teaser: ಆಕ್ಷನ್ ಪ್ರಿಯರಿಗೆ ಕಿಕ್ ಕೊಟ್ಟ 'ಚೋಳಾ' ಟೀಸರ್.. ರೂರಲ್ ಸ್ಟಾರ್ ಅಂಜನ್ ಸಖತ್ ರಗಡ್
ರೂರಲ್ ಸ್ಟಾರ್ ಅಂಜನ್ ದಿನದಿಂದ ದಿನಕ್ಕೆ ಸಿನಿಪ್ರಿಯರಿಗೆ ಹತ್ತಿರವಾಗುತ್ತಿದ್ದಾರೆ. ಈಗ ನಾಯಕನಾಗಿ ನಟಿಸಿರುವ ಮತ್ತೊಂದು ಸಿನಿಮಾ 'ಚೋಳ'ದ ಕೂಡ ಹಾಗೇ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಶುರು ಮಾಡಿದೆ. ಸುರೇಶ್ ಡಿ.ಎಂ ಈ ಸಿನಿಮಾವನ್ನು ನಿರ್ದೇಶಿಸಿದ್ದು, ವಿಭಿನ್ನವಾದ ಕಥೆಯನ್ನು ಒಳಗೊಂಡಿದೆ.
ಇದೀಗ ರೂರಲ್ ರಂಜನ್ ಅಭಿನಯದ 'ಚೋಳ'ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರೂರಲ್ ಸ್ಟಾರ್ ಅಂಜನ್ ಈ ಸಿನಿಮಾದಲ್ಲಿ ಪಕ್ಕಾ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮೇಕಿಂಗ್, ಕಥೆ, ಪಾತ್ರವರ್ಗ ರಿಚ್ ಆಗಿದ್ದು, ಟೀಸರ್ ಹೊಸ ಭರವಸೆಯನ್ನು ಮೂಡಿಸಿದೆ.

ಇದೂವರೆಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸುರೇಶ್ ಡಿ.ಎಂ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. 'ಚೋಳ' ಡಿಎಂ ಸುರೇಶ್ ನಿರ್ದೇಶನದ ಚೊಚ್ಚಲ ಸಿನಿಮಾ. ಹಾಗಿದ್ದರೂ ಟೀಸರ್ ಮೂಲಕ ಭರವಸೆಯನ್ನು ಮೂಡಿಸಿದ್ದಾರೆ. ರೂರಲ್ ಸ್ಟಾರ್ ಅಂಜನ್ ಮೂಲಕ ಪಕ್ಕಾ ರಗಡ್ ಸಿನಿಮಾವನ್ನು ತೆರೆಮೇಲೆ ತರುವುದಕ್ಕೆ ಸಜ್ಜಾಗಿದ್ದಾರೆ.
ರೂರಲ್ ಸ್ಟಾರ್ ಅಂಜನ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ಈಗತಾನೇ ತನ್ನ ಪ್ರತಿಭೆಯನ್ನು ಹೊರಹಾಕಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಈಗ 'ಚೋಳ' ಮೂಲಕ ಮತ್ತೆ ಪ್ರೇಕ್ಷಕರ ಮನಗೆಲ್ಲಲು ಬರುತ್ತಿದ್ದಾರೆ. ಸದ್ಯ ಟೀಸರ್ ಮೂಲಕ ಈ ಯುವ ನಟ ಭರವಸೆಯನ್ನು ಮೂಡಿಸಿದ್ದಾರೆ.
'ಚೋಳ' ಸಿನಿಮಾದಲ್ಲಿ ರೂರಲ್ ಸ್ಟಾರ್ ಅಂಜನ್ ಜೊತೆ ದಿಶಾ ಪಾಂಡೆ ಮತ್ತು ಪ್ರತಿಭಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ದಿನೇಶ್ ಮಂಗಳೂರು, ಬಲ ರಾಜವಾಡಿ ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಹಾಗೇ ತುಳುವಿನಲ್ಲಿ ಸೂಪರ್ ಹಿಟ್ ಆಗಿರುವ, ರೂಪೇಶ್ ಶೆಟ್ಟಿ ನಿರ್ದೇಶನದ 'ಸರ್ಕಸ್' ಎಂಬ ಚಿತ್ರದ ಸಂಗೀತ ನಿರ್ದೇಶಕ ಲಾಯ್ ವ್ಯಾಲೆಂಟೈನ್ ಸಲ್ಡಾನ ಇದಕ್ಕೂ ಟ್ಯೂನ್ ಹಾಕಿದ್ದಾರೆ.
ಪ್ರೀತಿ, ರೌಡಿಸಂ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಕಥೆ ಈ ಸಿನಿಮಾದಲ್ಲಿದೆ. ಸದ್ಯ ಸಿನಿಮಾದ ಶೂಟಿಂಗ್ ಜಾರಿಯಲ್ಲಿದೆ. ಇನ್ನೂ ಸಿನಿಮಾದ ಶೂಟಿಂಗ್ ಬಾಕಿ ಉಳಿದಿದ್ದು, ಆದಷ್ಟು ಬೇಗ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಲಾಗುತ್ತಿದೆ.


Click it and Unblock the Notifications











