ಕಿಚ್ಚ ಸುದೀಪ್ ಟ್ರೈಲರ್ ರಿಲೀಸ್ ಮಾಡದೆ ಇದ್ದಿದ್ರೆ.. ಅದೊಂದು 'ಮರ್ಯಾದೆ ಪ್ರಶ್ನೆ'

ಟೈಟಲ್‌ನಿಂದಲೇ ಕೆಲವು ಸಿನಿಮಾಗಳು ಗಮನ ಸೆಳೆದು ಬಿಡುತ್ತವೆ. ಕನ್ನಡದಲ್ಲಿ ಇಂತಹ ಹಲವು ಸಿನಿಮಾಗಳು ಈಗಾಗಲೇ ಬಂದು ಸದ್ದು ಮಾಡಿವೆ. ಅದರಲ್ಲೂ ಹೊಸಬರ ಸಿನಿಮಾಗಳು ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಅನುಭವಿ ತಂಡವೇ ಟೈಟಲ್‌ನಿಂದ ಗಮನ ಸೆಳೆದಿತ್ತು. ಅದುವೇ 'ಮರ್ಯಾದೆ ಪ್ರಶ್ನೆ'.

'ಮರ್ಯಾದೆ ಪ್ರಶ್ನೆ' ಸಿನಿಮಾದ ಟೈಟಲ್ ಗಮನ ಸೆಳೆದಿತ್ತು. ಇದೊಂದು ಕಾಮಿಡಿ ಸಿನಿಮಾ ಇರಬಹುದು ಅಂತ ಆರಂಭದಲ್ಲಿ ಅಂದುಕೊಂಡಿದ್ದರು. ಆದರೆ, 'ಮರ್ಯಾದೆ ಪ್ರಶ್ನೆ' ಆ ಎಲ್ಲಾ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದೆ. ಯಾಕಂದ್ರೆ, ಇದೊಂದು ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ. ಇದು ಟ್ರೈಲರ್ ನೋಡಿದ ಮೇಲೆ ಅನುಭವಕ್ಕೆ ಬರುತ್ತೆ.

Kichcha Sudeep released Maryade Prashne Kannada movie trailer

ಅಂದ್ಹಾಗೆ 'ಮರ್ಯಾದೆ ಪ್ರಶ್ನೆ' ಸಿನಿಮಾದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ. ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಚಿತ್ರತಂಡ ಟ್ರೈಲರ್ ಸಿದ್ಧಪಡಿಸಿತ್ತು. ಅದನ್ನು ಕಿಚ್ಚ ಸುದೀಪ್ ಅವರಿಂದಲೇ ಬಿಡುಗಡೆ ಮಾಡಿಸಬೇಕು ಅಂತಲೂ ಬಯಸಿತ್ತು. ಅದರಂತೆಯೇ ಕಿಚ್ಚ ಟ್ರೈಲರ್ ರಿಲೀಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಟ್ರೈಲರ್ ನನಗೆ ತುಂಬಾ ಇಷ್ಟವಾಯಿತು. ಸಾಕಷ್ಟು ವಿಚಾರ ತಿಳಿಸಿಯೂ ಕೂಡ ಕುತೂಹಲ ಹುಟ್ಟಿಸುವಂತೆ ಟ್ರೇಲರ್ ಕಟ್ ಮಾಡಿರುವುದು ನನಗೆ ಹಿಡಿಸಿತು. ಈ ಸಿನಿಮಾದಲ್ಲಿ ವಿಭಿನ್ನತೆ ಇದೆ. ಎಲ್ಲಾ ವಿಭಾಗಗಳ ಕೆಲಸವು ಅದ್ಭುತವಾಗಿದೆ. ಕನ್ನಡ ಇಂಡಸ್ಟ್ರಿ ನಡೆಯುತ್ತಿರುವ ದಾರಿಯ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

'ಮರ್ಯಾದೆ ಪ್ರಶ್ನೆ' ಸಿನಿಮಾವನ್ನು ಆರ್‌ ಜೆ ಪ್ರದೀಪ ತಮ್ಮ ಸಖತ್ ಸ್ಟುಡಿಯೋ ಮೂಲಕ ನಿರ್ಮಾಣ ಮಾಡಿದ್ದಾರೆ. ನಾಗರಾಜ್ ಸೋಮಯಾಜಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದೇ ನವೆಂಬರ್ 22ಕ್ಕೆ ಬಿಡುಗಡೆಗೆ ಸಜ್ಜಾಗಿರುವ 'ಮರ್ಯಾದೆ ಪ್ರಶ್ನೆ' ಚಿತ್ರದ ಟ್ರೈಲರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ಪ್ರಿಯರಿಗಂತೂ ಈ ಸಿನಿಮಾದ ಟ್ರೈಲರ್ ಕಿಕ್ ಕೊಡುತ್ತಿದೆ.

ಇನ್ನು "ನಮ್ಮ ಮೊದಲ ಹೆಜ್ಜೆ ಮರ್ಯಾದೆ ಪ್ರಶ್ನೆ ಸಿನಿಮಾ ಬಗ್ಗೆ ತುಂಬಾ ವಿಶ್ವಾಸವಿದ್ದು, ಪ್ರತಿ ವರ್ಷ ಕನಿಷ್ಠ ಎರಡು ಇಂತಹ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಆಸೆಯಿದೆ. ಇವು ಜನರಿಗೆ ಇಷ್ಟ ಆಗುವುದರ ಜೊತೆಗೆ ಚರ್ಚೆಗಳನ್ನು ಹುಟ್ಟುಹಾಕುತ್ತೆ" ಎನ್ನುತ್ತಾರೆ ನಿರ್ಮಾಪಕ ಆರ್ ಜೆ ಪ್ರದೀಪ. ಹಾಗೇ "ತಮ್ಮ ಸುತ್ತಮುತ್ತಲಿನ ಕಥೆಗಳನ್ನ ಜನರು ತುಂಬಾ ಇಷ್ಟಪಡ್ತಾರೆ. ಅದನ್ನ ಸಿನಿಮಾ ಮಾಡುವಾಗ ತುಂಬಾ ನೈಜವಾಗಿ ಮೂಡಿ ಬಂದ್ರೆ, ನೋಡುವವರಿಗೂ ಸಹ ಹತ್ತಿರ ಅನಿಸತ್ತೆ ಅನ್ನೋದು ನನ್ನ ಅನಿಸಿಕೆ." ಎನ್ನುತ್ತಾರೆ ನಿರ್ದೇಶಕ ನಾಗರಾಜ ಸೋಮಯಾಜಿ.

'ಮರ್ಯಾದೆ ಪ್ರಶ್ನೆ' ಸಿನಿಮಾದಲ್ಲಿ ರಾಕೇಶ್ ಅಡಿಗ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್, ತೇಜು ಬೆಳವಾಡಿ, ನಟಿಸಿದ್ದಾರೆ. ಇವರೊಂದಿಗೆ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡ್ಲಿಗಿ, ಶ್ರವಣ್, ಹರಿಹರನ್ ಮುಂತಾದವರನ್ನು ಪೋಷಕ ಪಾತ್ರಗಳಲ್ಲಿ ನೋಡಬಹುದು.

More from Filmibeat

English summary
Kichcha Sudeep released Maryade Prashne Kannada movie trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X