'ಕರಟಕ ದಮನಕ' ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ರೇರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದಾಗ ಸಿನಿಪ್ರಿಯರಿಗೆ ಎಲ್ಲಿಲ್ಲದ ಖುಷಿ. ಅಂತಹ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಸದ್ಯ ಅಂತಹದ್ದೇ ಒಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಅದುವೇ 'ಕರಟಕ ದಮನಕ'. ಈ ಸಿನಿಮಾ ಸಿನಿ ಪ್ರಿಯರಿಗೆ ಯಾಕೆ ಸ್ಪೆಷಲ್ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ.

'ಕರಟಕ ದಮನಕ' ಕನ್ನಡ ಚಿತ್ರರಂಗ ಕಂಡಿರೋ ರೇರ್ ಕಾಂಬಿನೇಷನ್ ಸಿನಿಮಾ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಮೊದಲ ಸಿನಿಮಾ. ಹಾಗೇ ಈ ಇಬ್ಬರು ದಿಗ್ಗಜರಿಗೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರೋ ಮೊದಲ ಸಿನಿಮಾ ಕೂಡ ಹೌದು.

Kichcha Sudeep released Karataka Damanak Teaser

ಈಗಾಗಲೇ ಈ ಸಿನಿಮಾದ ಎರಡು ಹಾಡುಗಳು ಕುತೂಹಲವನ್ನು ಕೆರಳಿಸಿವೆ. ಆದರೆ, ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ಕ್ಯಾರೆಕ್ಟರ್ ಹೇಗಿದೆ ಅನ್ನೋ ಗೌಪ್ಯವನ್ನು ಹಾಗೆಯೇ ಉಳಿಸಿಕೊಂಡಿದ್ದರು. ಅದೀಗ ರಿವೀಲ್ ಆಗಿದೆ. ಕಿಚ್ಚ ಸುದೀಪ್ 'ಕರಟಕ ದಮನಕ' ಸಿನಿಮಾದ ಕ್ಯಾರೆಕ್ಟರ್ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಸದ್ಯ ಈ ಟೀಸರ್‌ಗೆ ಶಿವಣ್ಣ, ಕಿಚ್ಚ ಸುದೀಪ್ ಹಾಗೂ ಪ್ರಭುದೇವ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

'ಕರಟಕ ದಮನಕ' ಸಿನಿಮಾ ಇದೇ ಶಿವರಾತ್ರಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಯೋಗರಾಜ್‌ ಭಟ್ ನಿರ್ದೇಶನದ ಸಿನಿಮಾ ಅಂದರೆ, ಅಲ್ಲಿ ಮನರಂಜನೆಗೇನು ಕಮ್ಮಿ ಇರೋದಿಲ್ಲ. ಇನ್ನು ಸೆಂಚುರಿ ಸ್ಟಾರ್ ಶಿವಣ್ಣ, ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಇಬ್ಬರೂ ಕಾಂಬಿನೇಷನ್‌ನಲ್ಲಿ ಹೇಗೆ ಮೂಡಿ ಬಂದಿರಬಹುದು ಅನ್ನೋ ಕೂತೂಹಲಕ್ಕೆ ಈ ಕ್ಯಾರೆಕ್ಟರ್ ಟೀಸರ್ ಕಿಕ್ ಕೊಟ್ಟಿದೆ.

ಅದೂ ಅಲ್ಲದೆ ಪಂಚತಂತ್ರದ ಎರಡು ಕ್ಯಾರೆಕ್ಟರ್‌ಗಳನ್ನೇ ಟೈಟಲ್ ಆಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ನರಿಗಳ ಸ್ವಭಾವವನ್ನೇ ಇಬ್ಬರು ದಿಗ್ಗಜರ ಪಾತ್ರಕ್ಕೆ ಕೊಟ್ಟು ಯೋಗರಾಜ್ ಭಟ್ ಏನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದು ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಅದಕ್ಕೆ ಎರಡೂ ಪಾತ್ರಗಳ ಝಲಕ್ ಅನ್ನು ಯೋಗರಾಜ್ ಭಟ್ ರಿವೀಲ್ ಮಾಡಿದ್ದಾರೆ. ಈ ಮೂಲಕ ಮನರಂಜನೆ, ಭರ್ಜರಿ ಡೈಲಾಗ್ ಇವೆಲ್ಲವನ್ನೂ ಮಿಸ್ ಆಗೋದೇ ಇಲ್ಲ ಅನ್ನೋದು ಕನ್ಫರ್ಮ್ ಆಗಿದೆ.

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ 'ಕರಟಕ ದಮನಕ' ಸಿನಿಮಾ ಶಿವರಾತ್ರಿ ಹಬ್ಬಕ್ಕೆ ಭರ್ಜರಿ ಮನರಂಜನೆ ನೀಡುವ ಲಕ್ಷಣಗಳು ಎದ್ದು ಕಾಣುತ್ತಿದೆ. ಕ್ಯಾರೆಕ್ಟರ್ ಟೀಸರ್ ಕೇವಲ ಸ್ಯಾಂಪಲ್ ಅಷ್ಟೇ. ಇನ್ನೂ ಟ್ರೈಲರ್ ಬರೋದು ಬಾಕಿಯಿದೆ. ಶೀಘ್ರದಲ್ಲಿಯೇ ಅದೂ ಕೂಡ ರಿಲೀಸ್ ಆಗುತ್ತೆ. ಆಗ ಸಿನಿಮಾದ ಬಗ್ಗೆ ಇನ್ನೂ ಸ್ಪಷ್ಟತೆ ಸಿಗಬಹುದು.

More from Filmibeat

English summary
Kichcha Sudeep released Shivarajkumar Prabhudeva movie Karataka Damanak Teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X