'ಮುಸ್ಸಂಜೆ ಮಾತು'ಗೆ 17 ವರ್ಷ: "ಕೊನೆವರೆಗೂ ಆ ಹಾಡು ನಮ್ಮ ಅಮ್ಮನ ಕಾಲರ್ ಟ್ಯೂನ್ ಆಗಿತ್ತು" ಎಂದ ಕಿಚ್ಚ

ಕಿಚ್ಚ ಸುದೀಪ್ ವೃತ್ತಿ ಬದುಕಿನ ಅದ್ಭುತ ಸಿನಿಮಾಗಳಲ್ಲಿ 'ಮುಸ್ಸಂಜೆ ಮಾತು' ಕೂಡ ಒಂದು. ಸುದೀಪ್ ಈ ಸಿನಿಮಾದಲ್ಲಿ ಆರ್‌ಜೆಯಾಗಿ ನಟಿಸಿದ್ದರು. ಮೋಹಕತಾರೆ ರಮ್ಯಾ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಮತ್ತೊಮ್ಮೆ ತೆರೆಮೇಲೆ ಕಾಣಿಸಿಕೊಂಡಿದ್ದರು. ಈ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಪ್ರೇಕ್ಷಕರು ಥಿಯೇಟರ್‌ಗೆ ಮುಗಿಬಿದ್ದಿದ್ದರು. 2008ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಕಿಚ್ಚನಿಗೆ ದೊಡ್ಡ ಸಕ್ಸಸ್ ಸಿಕ್ಕಿತ್ತು.

ಮುಸ್ಸಂಜೆ ಮಹೇಶ್ ನಿರ್ದೇಶಿಸಿದ ಈ ಸಿನಿಮಾ ಆ ವರ್ಷದ ಮೆಗಾ ಹಿಟ್‌ ಆಗಿತ್ತು. ಸುದೀಪ್ ವೃತ್ತಿ ಬದುಕಿನ ಸೂಪರ್‌ ಹಿಟ್ ಸಿನಿಮಾಗಳಲ್ಲಿ ಒಂದಾಗಿತ್ತು. ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ ಹಾಡುಗಳು ಸೂಪರ್ ಹಿಟ್ ಆಗಿತ್ತು. ಅದರಲ್ಲೂ "ಏನಾದರೂ ಸಾಗು ಮುಂದೆ ಸಾಗು ನೀ" ಹಾಡು ಇಂದಿಗೂ ಸಂಗೀತ ಪ್ರಿಯರ ಬಾಯಲ್ಲಿ ಹರಿದಾಡುತ್ತಿದೆ.

Kichcha Sudeep remembered Enagali song was his mother caller tune on Mussanjemaatu Film 17th year

17 ವರ್ಷಗಳ ಹಿಂದೆ ಅಂದರೆ, 2008, ಮೇ 16 ರಂದು 'ಮುಸ್ಸಂಜೆ ಮಾತು' ಸಿನಿಮಾ ರಿಲೀಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಸಿನಿಮಾವನ್ನು ಹಾಗೂ ತಂಡವನ್ನು ನೆನಪಿಸಿಕೊಂಡಿದ್ದಾರೆ. ಹಾಗೇ ನಿರ್ದೇಶಕರಿಗೆ, ನಿರ್ಮಾಪಕರಿಗೆ, ರಮ್ಯಾ, ಅನು ಪ್ರಭಾಕರ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

"ಮೊನ್ನೆ ಮೊನ್ನೆ ಮಾಡಿದ ಹಾಕಿದೆ ಸಿನಿಮಾ. ನಾನು ಎಲ್ಲರಿಗೂ ಧನ್ಯವಾದಗಳನ್ನು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಸಿನಿಮಾವನ್ನು ಇವತ್ತಿಗೂ ನೆನಪು ಇಟ್ಟುಕೊಂಡಿದ್ದಕ್ಕೆ, ಏನಾಗಲಿ ಮುಂದೆ ಸಾಗು ನೀ ಎನ್ನುವ ಸಾಂಗ್ ಅನ್ನು ಇನ್ನೂ ಜೀವಂತವಾಗಿ ಇಟ್ಟಿರುವುದಕ್ಕೆ, ಆ ಸಾಂಗ್ ಕೊಟ್ಟಂತಹ ಮ್ಯೂಸಿಕ್ ಡೈರೆಕ್ಟರ್, ನನ್ನ ನಿರ್ದೇಶಕ, ನಿರ್ಮಾಪಕ ಎಲ್ಲಾರಿಗೂ ನಾನು ಥ್ಯಾಂಕ್ಸ್ ಹೇಳಬೇಕು. ಸಿನಿಮಾ ಹಾಗೂ ಆ ಅದ್ಭುತ ಹಾಡುಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಕ್ಕೆ. ಅದ್ಭುತ ಹಾಡು ಎನ್ನುವುದಕ್ಕೆ ಕಾರಣ, ಆ ಹಾಡು ನನ್ನ ತಾಯಿಯ ಮೆಚ್ಚಿನ ಗೀತೆಯಾಗಿತ್ತು. ಆ ಸಿನಿಮಾ ರಿಲೀಸ್ ಆದಲ್ಲಿಂದ ಅವರು ಇರುವ ತನಕ ಅವರ ಕಾಲರ್ ಟ್ಯೂನ್ ಏನಾಗಲಿ ಮುಂದೆ ಸಾಗು ನೀ ಹಾಡೇ ಆಗಿತ್ತು. ಆ ಫೋನ್ ಇವತ್ತಿಗೂ ನನ್ನ ತಂದೆಯ ಹತ್ತಿರ ಇದೆ. ಇವತ್ತಿಗೂ ಅದೇ ಟ್ಯೂನ್ ಇದೆ. ರಮ್ಯಾ ಅನು ಎಲ್ಲಾರಿಗೂ ಈ ಸಿನಿಮಾವನ್ನು ಇನ್ನೂ ಅದ್ಭುತವಾಗಿ ಮಾಡಿದ್ದಕ್ಕೆ ನಾನು ಸ್ಪೆಷಲ್ ಥ್ಯಾಂಕ್ಸ್ ಹೇಳುತ್ತೇನೆ."

"ಆ ಸಿನಿಮಾ ಬಗ್ಗೆ ಗೊತ್ತಿಲ್ಲದ ಒಂದು ಸಂಗತಿ ಇದೆ. ಅದನ್ನು ಬಹುಶ: ಯಾರೊಂದಿಗೂ ಹೇಳಿಕೊಂಡಿಲ್ಲ. ಅವತ್ತಿಗೆ ಕೆಲವು ಆರ್‌ಜೆಗಳನ್ನು ನೋಡಬೇಕಾದರೆ, ಅವರು ಡ್ರೆಸ್ ಮಾಡಿಕೊಳ್ಳುವ ಒಂದು ರೀತಿಯಿತ್ತು. ನಾನು ಆತರನೇ ಕಾಣಬೇಕಿತ್ತು.ಡ್ರೂಪಿ ಡ್ರೆಸ್‌, ಲೂಸ್ ಫ್ಯಾಂಟ್ಸ್, ನಾನು ಬ್ಯಾಂಕಾಕ್‌ಗೆ ಹೋಗಿ ಡ್ರೆಸ್‌ಗಳನ್ನು ಖರೀದಿ ಮಾಡಿಕೊಂಡು ಬಂದೆ. ನಿಮಗೆ ನೆನಪಿದ್ದರೆ, ಅದರಲ್ಲಿ ಎರಡೆರಡು ಮೂರು ಲೇಯರ್ ಟಿ ಶರ್ಟ್‌ ಹಾಗೂ ಶರ್ಟ್ ಇದೆ. ಆದರೆ, ಯಾವುದೂ ಫಿಟ್ ಆಗುತ್ತಿರಲಿಲ್ಲ. ಎಲ್ಲಾ ಟೈಟ್ ಆಗುತ್ತಿತ್ತು. ಆ ವೇಳೆ ನಾನು ಸ್ಲಲ್ಪ ದಪ್ಪಗಿದ್ದೆ."

"ಅವತ್ತು ನಾನು ಒಂದು ನಿರ್ಧಾರ ತೆಗೆದುಕೊಂಡಿದ್ದೆ. ಯಾವತ್ತು ನಾನು ಈ ಡ್ರೆಸ್‌ಗಳಿಗೆ ಫಿಟ್ ಆಗುತ್ತೇನೋ ಅವತ್ತು ನಾನು ಶೂಟಿಂಗ್ ಶುರು ಮಾಡುತ್ತೇನೆ ಅಂತ. ಪ್ರತಿ ದಿನ ನಾನು 15 ರಿಂದ 16 ಕಿ.ಮೀ ಸೈಕಲಿಂಗ್ ಮಾಡುತ್ತಿದ್ದೆ. ಮೊದಲ ಎರಡು ಮೂರು ತಿಂಗಳು ಬರೀ ಹಣ್ಣುಗಳನ್ನು ತಿಂದುಕೊಂಡಿದ್ದೆ. ಅವತ್ತು ನಾನು ಜಿಮ್‌ಗೆ ಹೋಗುತ್ತಿರಲಿಲ್ಲ. ಸ್ವಲ್ಪ ಡಯೆಟ್, ಅಲ್ಲಿ ಇಲ್ಲಿ ಸ್ವಲ್ಪ ವ್ಯಾಯಾಮ ಮಾಡುತ್ತಿದ್ದೆ. ನಾನು ಸ್ವಲ್ಪ ಸಮಯ ತೆಗೆದುಕೊಂಡೆ. ನಾನು ಆ ಕಾಸ್ಟ್ಯೂಮ್ ಒಳಗೆ ಹೋದಾಗ ಚೆನ್ನಾಗಿ ಕಾಣಿಸಿದ್ದೆ. ಲಾಂಗ್ ಹೇರ್ ಕಟ್ ಮಾಡಿ ಆ ಪಾತ್ರ ಮಾಡಿದೆ. ಅವತ್ತಿನ ಆರ್‌ಜೆಗಳಿಗೆ ನಾನು ಸ್ಪೆಷಲ್ ಥ್ಯಾಂಕ್ಸ್ ಹೇಳಲೇಬೇಕು. ಮುಸ್ಸಂಜೆ ಮಾತು ನನಗೆ ತುಂಬಾನೇ ಸ್ಪೆಷಲ್ ಸಿನಿಮಾ. ನನ್ನ ಮನೆಯವರೆಲ್ಲರಿಗೂ. ಇಡೀ ತಂಡಕ್ಕೆ ನನ್ನ ಧನ್ಯವಾದಗಳು."

More from Filmibeat

English summary
Kichcha Sudeep remembered Enagali song was his mother caller tune on Mussanjemaatu Film 17th year;
Read more about: sudeep sandalwood mussanje maatu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X