»   » ಅಭಿಮಾನಿಗಳಿಗೆ ಹೊಸ ಸಂದೇಶ ರವಾನಿಸಿದ ಸುದೀಪ್

ಅಭಿಮಾನಿಗಳಿಗೆ ಹೊಸ ಸಂದೇಶ ರವಾನಿಸಿದ ಸುದೀಪ್

Posted By:
Subscribe to Filmibeat Kannada

ಕಲಾವಿದರ ನಡುವೆ ಮನಸ್ತಾಪಗಳಾಗುವ ಸಣ್ಣಪುಟ್ಟ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಇದರ ಜೊತೆಗೆ ಅವರವರ ಅಭಿಮಾನಿಗಳು ಘಟನೆಗೆ ಇನ್ನಷ್ಟು ತುಪ್ಪ ಸುರಿದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿರುವುದೂ ಇದೆ.

ಇತ್ತೀಚೆಗೆ ರಣವಿಕ್ರಮ ಚಿತ್ರದ ಬಿಡುಗಡೆ ಸಂದರ್ಭದಲ್ಲೂ ಅಭಿಮಾನಿಗಳು ಅತಿರೇಕದ ನಡುವಳಿಕೆಯನ್ನು ತೋರಿದ್ದೂ ಆಗಿದೆ.

ಇದಲ್ಲದೇ, ಮೇಕೆದಾಟು ವಿಚಾರದಲ್ಲಿ ಸುದೀಪ್ ಪ್ರತಿಭಟನೆಯಲ್ಲಿ ಯಾಕೆ ಭಾಗವಹಿಸಲಿಲ್ಲ ಎನ್ನುವುದೂ ಸಾಮಾಜಿಕ ತಾಣದಲ್ಲಿ ಚರ್ಚೆಯ ವಿಷಯವಾಗಿತ್ತು. (ಹಾವಿನ ದ್ವೇಷ 12 ವರುಷ, ಅಭಿಮಾನಿಗಳ ದ್ವೇಷ)

ಕರ್ನಾಟಕ ಬಂದ್ ಮತ್ತು ಪ್ರತಿಭಟನೆಯಲ್ಲಿ ಯಾಕೆ ಭಾಗವಹಿಸಲಾಗಲಿಲ್ಲ ಎಂದು ಸುದೀಪ್ ಟ್ವೀಟ್ ಮೂಲಕ ವಿವರಿಸಿದ್ದೂ ಆಗಿದೆ.

ಈಗ ಕಿಚ್ಚ ಸುದೀಪ್, ಕಲಾವಿದರ ಅಭಿಮಾನಿಗಳ ನಡುವೆ ಆಗಾಗ ನಡೆಯುತ್ತಿರುವ ಅನಾವಶ್ಯಕ ಮಾತಿನ ಸಮರಕ್ಕೆ, ವಿರಸಕ್ಕೆ ಮಂಗಳ ಹಾಡುವ ನಿರ್ಧಾರಕ್ಕೆ ಬಂದಂತಿದೆ.

ಸಣ್ಣ ಸಣ್ಣ ವಿಚಾರಗಳು ಸುಖಾಸುಮ್ಮನೆ ದೊಡ್ಡದಾಗುತ್ತಿರುವುದರ ಬಗ್ಗೆ ಸುದೀಪ್ ವಿಷಾದ ವ್ಯಕ್ತ ಪಡಿಸಿದ್ದಾರೆ. ಟ್ವೀಟ್ ಮೂಲಕ ಸುದೀಪ್ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ಸುಮ್ಮನೆ ಜಗಳವಾಡಬೇಡಿ

ಕಾರಣವಿಲ್ಲದೇ ಟ್ವೀಟ್ ಮೂಲಕ ಜಗಳವಾಡಬೇಡಿ. ನಾವೆಲ್ಲಾ ಕಲಾವಿದರು ಒಂದೇ, ಚೆನ್ನಾಗಿಯೇ ಇದ್ದೇವೆ, ಇಂತಹ ಜಗಳಕ್ಕೆ ಮಂಗಳ ಹಾಡಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ಇತರ ಕಲಾವಿದರ ಮೇಲೆ ನಮಗೆ ಗೌರವವಿದೆ

ನಮಗೆ ಇತರ ಕಲಾವಿದರ ಮೇಲೆ ಗೌರವವಿದೆ. ನಾವೆಲ್ಲಾ ಕೆಲಸ ಮಾಡುತ್ತಿರುವುದು ಚಿತ್ರೋದ್ಯಮಕ್ಕಾಗಿ. ಪೈಪೋಟಿ ಎನ್ನುವುದು ಎಲ್ಲಾ ಉದ್ಯಮದಲ್ಲೂ ಇದ್ದದ್ದೇ, ಅದನ್ನೇ ಕಲಾವಿದರ ನಡುವೆ ಸರಿಯಿಲ್ಲ ಎಂದು ಬಿಂಬಿಸುವುದು ತಪ್ಪು.

ಸಾಮಾಜಿಕ ತಾಣದಲ್ಲಿ

ಸಾಮಾಜಿಕ ತಾಣದಲ್ಲಿ ಬಳಕೆಯಾದ ಅಸಂಬದ್ದ ಪದಗಳನ್ನು ನಿಯಂತ್ರಿಸಬಹುದು, ಸುದೀಪ್

ನನ್ನ ಟ್ವೀಟಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ

ನನ್ನ ಟ್ವೀಟಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ಕಲಾವಿದರಿಗೆ ಸಂಬಂಧಿಸಿದಂತೆ ಜಗಳವಾಡುವುದನ್ನು ಪ್ಲೀಸ್ ನಿಲ್ಲಿಸಿ. ನಮ್ಮೆಲ್ಲರ ನಡುವೆ ಪ್ರೀತಿಯಿರಲಿ, ಅನಾವಶ್ಯಕ ಚರ್ಚೆಯಲ್ಲ.

English summary
Kichcha Sudeep requested fans to stop fighting each other in connection to actors. We actors have mutual respect and we are all working for industry, Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada