'ಮ್ಯಾಕ್ಸ್' ಶೂಟಿಂಗ್ ನಿಂತಿದ್ದಿದ್ದು ಏಕೆ?; ಫ್ಯಾನ್ಸ್‌ಗೆ ರಿವೀಲ್ ಮಾಡಿದ ಕಿಚ್ಚ ಸುದೀಪ್!

ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಒಂದ್ಕಡೆ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಅದೇ ಇನ್ನೊಂದು ಕಡೆ ಕೆಸಿಸಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಬ್ಯುಸಿಯಾಗಿದ್ದರು. ಇದೆಲ್ಲವನ್ನು ನೋಡಿದ ಬಳಿಕ ಕಿಚ್ಚನ ಅಭಿಮಾನಿಗಳು 'ಮ್ಯಾಕ್ಸ್' ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡಿ ಅಂತ ದುಂಬಾಲು ಬಿದ್ದಿದ್ದರು.

'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಒಪ್ಪಿಕೊಂಡಿರುವ ಸಿನಿಮಾ ಮ್ಯಾಕ್ಸ್. ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಸಂಕ್ರಾಂತಿ ಹಬ್ಬಕ್ಕಾದರೂ 'ಮ್ಯಾಕ್ಸ್' ಬಗ್ಗೆ ಏನಾದರೂ ಅಪ್‌ಡೇಟ್ ಕೊಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಚಿತ್ರತಂಡದಿಂದ ಏನೂ ಮಾಹಿತಿ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಫ್ಯಾನ್ಸ್ 'ಮ್ಯಾಕ್ಸ್' ಸಿನಿಮಾ ಬಗ್ಗೆ ಮಾಹಿತಿ ನೀಡುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಶುರು ಮಾಡಿದ್ದರು.

Kichcha Sudeep restarted Max movie shooting after sankranti

ಇನ್ನೊಂದು ಕಡೆ ಕಳೆದ ಕೆಲವು ತಿಂಗಳುಗಳಿಂದ ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಶೂಟಿಂಗ್‌ನಲ್ಲಿಯೂ ಭಾಗಿಯಾಗಿರಲಿಲ್ಲ. ಇದೆಲ್ಲವೂ ಸುದೀಪ್ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿತ್ತು. ಇದೆಲ್ಲವನ್ನೂ ಗಮನಿಸಿದ ಕಿಚ್ಚ ಸುದೀಪ್ ಸಂಕ್ರಾಂತಿ ಬಳಿಕ ಅವರ ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಕೊಟ್ಟಿದ್ದಾರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಆರಂಭದಲ್ಲಿ 'ಮ್ಯಾಕ್ಸ್' ಸಿನಿಮಾ ಅನೌನ್ಸ್‌ಮೆಂಟ್ ಜೋರಾಗಿ ಆಗಿತ್ತು. ಅದರ ಹಿಂದೆನೇ ಚಿಕ್ಕದೊಂದು ತುಣುಕಿನಲ್ಲಿ ಕಿಚ್ಚನ ಲುಕ್‌, ಗೆಟಪ್ ಅನ್ನು ರಿವೀಲ್ ಮಾಡಲಾಗಿತ್ತು. ಅಲ್ಲಿಂದ 'ಮ್ಯಾಕ್ಸ್' ಸಿನಿಮಾ ಏನಾಯ್ತು? ಶೂಟಿಂಗ್ ನಡೆಯುತ್ತಿದ್ಯಾ? ಇಲ್ವಾ? ನಿಂತಿದ್ದರೆ ಯಾಕೆ? ಅನ್ನೋ ಸುಳಿವು ಇರಲಿಲ್ಲ. ಅಲ್ಲದೆ ತಮಿಳಿನ ನಿರ್ಮಾಣ ಸಂಸ್ಥೆ ಆಗಿದ್ದರಿಂದ ಹೆಚ್ಚಿನ ಮಾಹಿತಿನೂ ಸಿಕ್ಕಿರಲಿಲ್ಲ. ಇದೆಲ್ಲದಕ್ಕೂ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ತನ್ನ ಎಕ್ಸ್ ಖಾತೆಯಲ್ಲಿ (ಟ್ವಿಟರ್) 'ಮ್ಯಾಕ್ಸ್' ಸಿನಿಮಾವನ್ನು ಮತ್ತೆ ಆರಂಭ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಕ್ರಾಂತಿ ನಂತರ ಈ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಆರಂಭ ಆಗಿದೆ ಅಂತ ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸಂಕ್ರಾಂತಿ ಬಳಿಕ ಬಿಗ್ ಅಪ್‌ಡೇಟ್ ಅನ್ನೇ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಕೊಟ್ಟ ಅಪ್‌ಡೇಟ್‌ನಲ್ಲಿ 'ಮ್ಯಾಕ್ಸ್' ಸಿನಿಮಾ ಶೂಟಿಂಗ್ ತಡವಾಗಿದ್ದು ಏಕೆ? ಅನ್ನೋದನ್ನು ಹೇಳಿದ್ದಾರೆ. ಸದ್ಯಕ್ಕೀಗ ಸಂಕ್ರಾಂತಿ ಬಳಿಕ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಆರಂಭಗೊಂಡಿದೆ. ಈಗಾಗಲೇ ಚಿತ್ರೀಕರಣಗೊಂಡ ಭಾಗಕ್ಕೆ ಎಲ್ಲಾ ನಟರೂ ವಾಯ್ಸ್ ಓವರ್ ಕೊಟ್ಟಿದ್ದಾರೆ. ಉಳಿದ ಭಾಗದ ಚಿತ್ರೀಕರಣ ನಡೆಯುತ್ತಿದೆ ಸುದೀಪ್ ತಮ್ಮ ಟ್ವೀಟ್‌ (ಎಕ್ಸ್) ನಲ್ಲಿ ಹೇಳಿದ್ದಾರೆ.

ಇದರ ಜೊತೆಗೆ ನವೆಂಬರ್‌ನಲ್ಲಿ ಮಳೆಯಿಂದ ಚಿತ್ರತಂಡ ಕೆಲವು ದಿನಗಳ ಕಾಲ ಶೂಟಿಂಗ್ ನಿಲ್ಲಸಬೇಕಾಯ್ತು. ಅದರಿಂದ ಅವಾಂತರದಿಂದ ಡಿಸೆಂಬರ್‌ನಲ್ಲಿ ಶೂಟಿಂಗ್ ಮಾಡಲು ಸಾಧ್ಯವಾಗಿಲ್ಲ. ಖುಷಿ ವಿಷಯ ಏನಂದರೆ, ಸಿನಿಮಾದ ಶೂಟಿಂಗ್ ಆರಾಮಾಗಿ ನಡೆಯುತ್ತಿದೆ. ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡುವ ಸಂದರ್ಭದಲ್ಲಿ ಚಿತ್ರತಂಡ ಹಿಂದೆ ಮುಂದೆ ನೋಡುವುದಿಲ್ಲ." ಎಂದು ಸುದೀಪ್ ಟ್ವೀಟ್‌ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.

ಇನ್ನೇನು ಬಿಗ್ ಬಾಸ್ ಸೀಸನ್ 10 ಕೂಡ ಮುಕ್ತಾಯದ ಹಂತದಲ್ಲಿದೆ. ರಿಯಾಲಿಟಿ ಶೋ ಬಳಿಕ ಕಿಚ್ಚ ಸುದೀಪ್ ಸಂಪೂರ್ಣವಾಗಿ 'ಮ್ಯಾಕ್ಸ್' ಮೇಲೆ ಗಮನ ಹರಿಸಲಿದ್ದಾರೆ. ಹೀಗಾಗಿ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ವರ್ಷ ಸದ್ದು ಮಾಡುವ ಎಲ್ಲಾ ಸಾಧ್ಯತೆನೂ ಇದೆ. ಹಾಗೇ ಇದರೊಂದಿಗೆ ಇನ್ನೂ ಕೆಲವು ಸಿನಿಮಾಗಳನ್ನೂ ಸುದೀಪ್ ಒಪ್ಪಿಕೊಂಡು ಈ ವರ್ಷವೇ ಚಾಲನೆ ಸಿಗುವ ಸಾಧ್ಯತೆಯಿದೆ.

More from Filmibeat

English summary
Kichcha Sudeep Max Movie restarted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X