ಕಿರುತೆರೆಯಲ್ಲಿಯೂ ದಾಖಲೆ ಸೃಷ್ಟಿಸಿದ ಕಿಚ್ಚ ಸುದೀಪ್ 'ಪೈಲ್ವಾನ್'
ಬಹುಕೋಟಿ ವೆಚ್ಚದ 'ಪೈಲ್ವಾನ್' ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ಮುಂತಾದ ಪ್ರಸಿದ್ಧ ತಾರೆಯರು ನಟಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು.
ಎಸ್. ಕೃಷ್ಣ ನಿರ್ದೇಶನದ ಈ ಸಿನಿಮಾ 2019ರ ಸೆಪ್ಟೆಂಬರ್ 12ರಂದು ಬಿಡುಗಡೆಯಾಗಿತ್ತು. ಈಗಾಗಲೇ ಕಿರುತೆರೆಯಲ್ಲಿ ಎರಡು ಬಾರಿ ಪ್ರಸಾರವಾಗಿದೆ. ಎರಡು ಸಲ ಕೂಡ ಭಾರಿ ಸಂಖ್ಯೆಯಲ್ಲಿ ಜನರು ಸಿನಿಮಾ ನೋಡಿದ್ದಾರೆ. ಈ ಖುಷಿಯನ್ನು ನಿರ್ದೇಶಕ ಕೃಷ್ಣ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ನಟನೆಯ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ಖ್ಯಾತನಾಮ ನಟರು ನಟಿಸಿದ್ದರಿಂದ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಕುಸ್ತಿ ಮತ್ತು ಬಾಕ್ಸಿಂಗ್‌ನ ರೋಚಕ ಕಥೆಯ ಜತೆಗೆ ಪ್ರೇಮಕಥೆಯನ್ನು ಬೆರೆಸಲಾಗಿತ್ತು. ಮುಂದೆ ಓದಿ..
ಟಿವಿಆರ್‌ನಲ್ಲಿ ದಾಖಲೆ ಬರೆದ ಪೈಲ್ವಾನ್
ಮೊದಲ ಸಲ ಪೈಲ್ವಾನ್ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾದಾಗ 16.5 ಟೆಲಿವಿಷನ್ ರೇಟಿಂಗ್ ಪಾಯಿಂಟ್ ಪಡೆದುಕೊಂಡಿತ್ತು. ಎರಡನೆಯ ಸಲ ಪ್ರಸಾರವಾದಾಗ 11.3 ಟಿವಿಆರ್ ಸಿಕ್ಕಿದೆ. ಇದರ ಮೂಲಕ ದಾಖಲೆ ನಿರ್ಮಿಸಿದೆ ಎಂದು ಕೃಷ್ಣ ತಿಳಿಸಿದ್ದಾರೆ.

ಅತಿ ಹೆಚ್ಚು ಟಿಆರ್‌ಪಿ
ಡಿಜಿಟಲ್ ಪ್ರೀಮಿಯರ್ ಆದ ಬಳಿಕ 10525 ಟಿಆರ್‌ಪಿ ಪಡೆಯುವ ಮೂಲಕ ಅತಿ ಹೆಚ್ಚು ಟಿಆರ್‌ಪಿ ಪಡೆದ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ನಿರ್ದೇಶಕ ಕೃಷ್ಣ ಹೇಳಿದ್ದಾರೆ.

ಬಾಕ್ಸಿಂಗ್ ಚಾಂಪಿಯನ್ ಕಥೆ
ಅನಾಥ ಹುಡುಗನೊಬ್ಬ ಪೈಲ್ವಾನ್ ಕುಟುಂಬದ ಮನೆಯೊಂದರಲ್ಲಿ ಬೆಳೆದು ಆ ಕುಟುಂಬದ ಯಜಮಾನನ ಗರಡಿಯಲ್ಲಿ ಕಸರತ್ತು ಮಾಡಿ ಬಾಕ್ಸಿಂಗ್‌ನಲ್ಲಿ ಚಾಂಪಿಯನ್ ಆಗುವ ಆಕ್ಷನ್, ಲವ್ ಸ್ಟೋರಿಯನ್ನು ಪೈಲ್ವಾನ್ ಸಿನಿಮಾ ಹೊಂದಿದೆ.

ಐದು ಭಾಷೆಗಳಲ್ಲಿ ಬಿಡುಗಡೆ
ಸುಮಾರು 50 ಕೋಟಿ ವೆಚ್ಚದ ಈ ಚಿತ್ರ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಆರಂಭದಲ್ಲಿ ಒಂಬತ್ತು ಭಾಷೆಗಳಲ್ಲಿ 'ಪೈಲ್ವಾನ್'ಅನ್ನು ತೆರೆಗೆ ತರಲು ಉದ್ದೇಶಿಸಲಾಗಿತ್ತು. ಹಿಂದಿಯ ಅವತರಣಿಕೆ ಒಂದು ದಿನ ತಡವಾಗಿ ಬಿಡುಗಡೆಯಾಗಿತ್ತು.


Click it and Unblock the Notifications











