'ಪೆಪೆ' ನೋಡಿ "ಹೀರೋಗಿಂತ ಪಾತ್ರ ದೊಡ್ಡದು" ಎಂದು ಕಿಚ್ಚ: ವಿನಯ್‌ಗೆ ಸುದೀಪ್ ಹೇಳಿದ್ದೇನು?

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸಿನಿಮಾಗಳ ಪರ್ವ ಶುರುವಾಗಿದೆ. ಒಂದೊಂದೇ ಸಿನಿಮಾಗಳ ದಿಢೀರನೇ ಸದ್ದು ಮಾಡುವುಕ್ಕೆ ಶುರು ಮಾಡಿವೆ. ಬಹಳ ದಿನಗಳಿಂದ ಇದೊಂದು ಸಿನಿಮಾಗಾಗಿ ದೊಡ್ಮೆನೆ ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ಎರಡು ವರ್ಷಗಳ ಹಿಂದೆ ಕೇವಲ ಟೀಸರ್ ಬಿಟ್ಟಿದ್ದ ಸಿನಿಮಾ ಮತ್ತೆ ಸುದ್ದಿನೇ ಇರಲಿಲ್ಲ. ಈಗ ಬಿಡುಗಡೆಗಾಗಿ ಭರ್ಜರಿ ಪ್ರಚಾರ ಮಾಡುವುದಕ್ಕೆ ಶುರು ಮಾಡಿದೆ. ಅದುವೇ 'ಪೆಪೆ'.

ಹೌದು, ವಿನಯ್ ರಾಜ್‌ಕುಮಾರ್ ಸಿನಿಮಾ 'ಪೆಪೆ' ಟೀಸರ್ ಎರಡು ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಆ ಸಿನಿಮಾದ ಟೀಸರ್ ನೋಡಿ ಸಿನಿ ಪ್ರಿಯರ ಕಣ್ಣುಗಳು ಅರಳಿದ್ದವು. ಇಷ್ಟೊಂದು ಮಾಸ್, ರಗಡ್ ಕ್ಯಾರೆಕ್ಟರ್‌ನಲ್ಲಿ ವಿನಯ್ ರಾಜ್‌ಕುಮಾರ್ ಅನ್ನು ನೋಡಿ ಮಾತೇ ಹೊರಳಿರಲಿಲ್ಲ. 'ಪೆಪೆ' ಟೀಸರ್ ನೋಡಿ, ವಿನಯ್‌ಗೆ ಈ ಸಿನಿಮಾ ದೊಡ್ಡ ಬ್ರೇಕ್ ಕೊಡುತ್ತೆ ಅಂತಲೇ ಮಾತಾಡಿಕೊಂಡಿದ್ದಷ್ಟೇ ಬಂದಿತ್ತು.

Kichcha Sudeep said that he wanted to see Vinay Rajkumar as PePe movie character

'ಪೆಪೆ' ಟೀಸರ್‌ಗೆ ಸೈಲೆಂಟ್ ಆಗಿಬಿಟ್ಟಿತ್ತು. ಈಗ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೇ ಆಗಸ್ಟ್ 30ಕ್ಕೆ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ವಿನಯ್ ರಾಜ್‌ಕುಮಾರ್ ಖಂಡಿತಾ ಬ್ರೇಕ್ ಕೊಡುತ್ತೆ ಅನ್ನೋದಕ್ಕೆ ಒಂದು ಕುರುಹು ಸಿಕ್ಕಿದೆ. ಇತ್ತೀಚೆಗೆ ವಿನಯ್ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್‌ಗೆ 'ಪೆಪೆ'ಯ ಶೋ ರೀಲ್ ತೋರಿಸಿದ್ದರು. ಅದನ್ನು ಕಿಚ್ಚ ಕೊಟ್ಟ ರಿಯಾಕ್ಷನ್ ಈ ಸಿನಿಮಾತಂಡ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ.

ನಾಳೆ (ಆಗಸ್ಟ್ 18) 'ಪೆಪೆ' ಸಿನಿಮಾದ ಟ್ರೈಲರ್ ಅನ್ನು ಲಾಂಚ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಸ್ವತ: ಕಿಚ್ಚ ಸುದೀಪ್ ಹಾಗೂ ದುನಿಯಾ ವಿಜಯ್ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ. 'ಪೆಪೆ' ಟ್ರೈಲರ್ ಅನ್ನು ಕಿಚ್ಚ ಸುದೀಪ್ ಲಾಂಚ್ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ವಿನಯ್ ಈ ಸಿನಿಮಾದ ಶೋ ರೀಲ್ ಅನ್ನು ಕಿಚ್ಚ ಸುದೀಪ್ ತೋರಿಸಿದ್ದರು.

Kichcha Sudeep said that he wanted to see Vinay Rajkumar as PePe movie character

'ಪೆಪೆ' ಶೋ ರೀಲ್ ನೋಡಿ ಕಿಚ್ಚ ಸುದೀಪ್ ಫಿದಾ ಆಗಿದ್ದಾರೆ. ಪೆಪೆ ಕಂಟೆಂಟ್ ನೋಡಿ ಸುದೀಪ್ ಕೊಂಡಾಡಿದ್ದಾರೆ. "ಇಂಥ ಪಾತ್ರದಲ್ಲಿ ವಿನಯ್ ಅವರನ್ನು ನೋಡಲು ನಾನು ಇಷ್ಟ ಪಡುತ್ತೇನೆ. ಯಾವತ್ತಿಗೂ ಪಾತ್ರ ಮಾತನಾಡಬೇಕು. ಹೀರೋಗಿಂತ ಪಾತ್ರ ದೊಡ್ಡದು. ವಿನಯ್ ನಿರ್ವಹಿಸಿರುವ ಈ ಪಾತ್ರ ಸಖತ್ ಕುತೂಹಲ ಮೂಡಿಸಿದೆ. ಇಂತಹ ಸಿನಿಮಾಗಳನ್ನು ನೀವು ಮಾಡಿ. ನಿಮಗೆ ಒಪ್ಪುತ್ತದೆ. ಖಂಡಿತವಾಗಿ ನಾನು ಈ ನಿಮ್ಮ ಸಿನಿಮಾಕ್ಕೆ‌ ಸಪೋರ್ಟ್ ಮಾಡ್ತಿನಿ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಇಂದು (ಆಗಸ್ಟ್17) ಕಿಚ್ಚ ಸುದೀಪ್ ನಿವಾಸಕ್ಕೆ ವಿನಯ್ ರಾಜ್‌ಕುಮಾರ್ ಭೇಟಿ ನೀಡಿದ್ದರು. ಈ ವೇಳೆ 'ಪೆಪೆ' ಸಿನಿಮಾದ ಶೋ ರೀಲ್ ನೋಡಿ ಸುದೀಪ್ ಇಷ್ಟ ಪಟ್ಟಿದ್ದಾರೆ. ರೋಜ್ ಹಿಡಿದು ಮರ ಸುತ್ತೋ ಪಾತ್ರಕ್ಕಿಂತ ಇಂತಹ ಮಾಸ್ ಪಾತ್ರಗಳನ್ನು ಮಾಡಬೇಕು. ಪೆಪೆ ಪಾತ್ರ ನಿಮಗೆ‌ ಒಪ್ಪುತ್ತದೆ. ಈ ಸಿನಿಮಾವನ್ನು ಜನರಿಗೆ ದೊಡ್ಡ ಮಟಕ್ಕೆ ತಲುಪಿಸಿ. ಪ್ರೇಕ್ಷಕರು ಖಂಡಿತವಾಗಿ ಕೈ ಹಿಡಿಯುತ್ತಾರೆ." ಎಂದು ಕಿಚ್ಚ ಸುದೀಪ್ ಸಲಹೆ ನೀಡಿದ್ದಾರೆ.

'ಪೆಪೆ' ಸಿನಿಮಾವನ್ನು ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಈ ಸಿನಿಮಾ ಪಕ್ಕಾ ಮಾಸ್ ಅವತಾರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಈ ಸಿನಿಮಾವನ್ನು'ಪೆಪೆ' ನಿರ್ಮಿಸಿದ್ದು, ಇದೇ ಆಗಸ್ಟ್ 30ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

More from Filmibeat

English summary
Kichcha Sudeep liked Vinay Rajkumar PePe movie show reel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X