"ಇಂಟ್ರುಡಕ್ಷನ್ ಸೀನ್‌ ಇಲ್ದೇ ರಾಜಕೀಯ ಎಂಟ್ರಿ ಆಗಲ್ಲ.. ಬಂದ್ರೆ ಸ್ಟೈಲ್ ಆಗಿಯೇ ಬರ್ತೀನಿ" ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಸಿನಿಮಾಗಳಲ್ಲಷ್ಟೇ ಅಲ್ಲ. ಅವರು ರಾಜಕೀಯ ಮುಖಂಡರೊಂದಿಗೆ ಆತ್ಮೀಯರಾಗಿದ್ದಾರೆ. ಎಲ್ಲಾ ಪಕ್ಷದ ಮುಖಂಡರೊಂದಿಗೂ ಸುದೀಪ್ ಆತ್ಮೀಯವಾದ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ರಾಜಕೀಯಕ್ಕೆ ಬರಬಹುದು ಎಂಬ ಗುಮಾನಿಯಿದೆ. ಈ ಹಿಂದೆ ಕೂಡ ಇನ್ನೇನು ರಾಜಕೀಯಕ್ಕೆ ಬಂದೇ ಬಿಟ್ಟರು ಅನ್ನೋ ಸುದ್ದಿ ಜೋರಾಗಿಯೇ ಓಡಾಡಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಕಿಚ್ಚ ಸುದೀಪ್ ಬಿಜೆಪಿ ಪಕ್ಷದಿಂದ ರಾಜಕೀಯ ಪ್ರವೇಶ ಆಗುತ್ತೆ ಎಂದು ಸುದ್ದಿ ಬಲವಾಗಿ ಹಬ್ಬಿತ್ತು. ಆದರೆ, ಆ ವೇಳೆ ಕಿಚ್ಚ ಸುದೀಪ್ ಹಾಗೂ ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಮಾಧ್ಯಮದವರ ಮುಂದೆ ಈ ಸುದ್ದಿಯನ್ನು ತಳ್ಳಿ ಹಾಕಿದ್ದರು. ಬದಲಾಗಿ ಕೆಲವು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ತಿಳಿಸಿದ್ದರು.

Kichcha Sudeep says he will come to politics with a proper introduction and style

ಹೀಗಾಗಿ ಬಹಳ ದಿನಗಳಿಂದ ಕಿಚ್ಚ ಸುದೀಪ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಅದನ್ನು ಕಿಚ್ಚ ಸುದೀಪ್ ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಈಗ 'ಮಾರ್ಕ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಿಚ್ಚ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯಗಳೇನು ಅನ್ನೋದು ರಿವೀಲ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವರ್ಷಕ್ಕೆ ಎರಡು ಸಿನಿಮಾಗಳನ್ನು ಕೊಡಬೇಕು ಅಂತ ನಿರ್ಧರಿಸಿ, ಆ ಪ್ರಯತ್ನದಲ್ಲಿ ಇದ್ದಾರೆ. ಅಲ್ಲದೆ ಈಗಾಗಲೇ ಕೆಲವು ಒಳ್ಳೊಳ್ಳೆ ಸ್ಕ್ರೀಪ್ಟ್‌ಗಳ ಮೇಲೆ ಕಿಚ್ಚ ಸುದೀಪ್ ಕೆಲಸ ಮಾಡುತ್ತಿದ್ದಾರೆ. ಇನ್ನು 50ನೇ ಸಿನಿಮಾದ ತಯಾರಿಯಲ್ಲೂ ಇದ್ದಾರೆ. ಈ ಮಧ್ಯೆ ರಾಜಕೀಯದ ಕಡೆಗೆ ವಾಲುತ್ತಾರಾ? ಪಾಲಿಟಿಕ್ಸ್ ಬಗ್ಗೆ ತಮ್ಮ ನಿಲುವೇನು? ಅನ್ನೋದನ್ನು ಈ ಸಂದರ್ಶನಲ್ಲಿ ಹೇಳಿಕೊಂಡಿದ್ದಾರೆ.

"ಸಮಾಜ ಸೇವೆಗೆ ರಾಜಕೀಯ ಬೇಕಾಗಿಲ್ಲ. ಅದೆರಡೂ ಡಿಫ್ರೆಂಟ್ ಆಂಗಲ್. ಸಮಾಜ ಸೇವೆಗೆ ಬೇಕಾಗಿರೋದು ನಿಮ್ಮಲ್ಲಿರುವ ಮನಸ್ಥಿತಿ. ಎರಡನೆಯದ್ದು ನಿಮ್ಮಲ್ಲಿರುವ ಹಣ. ಇವೆರಡೂ ಇಲ್ಲದೆಯೂ ಆಗುವುದಿಲ್ಲ. ಒಂದೆರಡು ನಿಮ್ಮ ಕಿವಿ ಹತ್ತಿರ ಬರಬಹುದು. ಇನ್ನೊಂದೆರಡು ಸಹಾಯ ಮಾಡಿಲ್ಲ ಅಂತ ದೊಡ್ಡದೂ ಆಗಿರಬಹುದು. ಸಾವಿರ ಜನಕ್ಕೆ ಸಹಾಯ ಮಾಡುತ್ತಿರುತ್ತೇನೆ. ನನಗೆ ಎಷ್ಟಾಗುತ್ತೋ ಅಷ್ಟು ಮಾಡಬಲ್ಲೆ." ಎಂದು ರಾಜಕೀಯ ಹಾಗೂ ಸಮಾಜ ಸೇವೆ ಬಗ್ಗೆ ರಿವೀಲ್ ಮಾಡಿದ್ದರೆ.

Kichcha Sudeep says he will come to politics with a proper introduction and style

ರಾಜಕೀಯಕ್ಕೆ ಜವಾಬ್ದಾರಿಯನ್ನು ಇಟ್ಟುಕೊಂಡು ಬರಬೇಕು. ಸಮಾಜ ಸೇವೆ ಮಾಡುತ್ತೇನೆ ಅಂತ ಬರೋದೆಲ್ಲ ಸುಳ್ಳು ಎಂದಿದ್ದಾರೆ. "ರಾಜಕೀಯ ಅಂತ ಬರೋದು ಸಮಾಜ ಸೇವೆ ಅಲ್ಲ. ಅದು ಜವಾಬ್ದಾರಿ. ಈ ರಾಜ್ಯ ನಡೆಸುತ್ತೇವೆ. ಈ ಊರಿಗೆ ಒಳ್ಳೆಯದಾಗಬೇಕು ಅಂತ ಬಯಸೋರು ಮಾತ್ರ ರಾಜಕೀಯಕ್ಕೆ ಬರಬೇಕು. ಸಮಾಜ ಸೇವೆ ಆಸೆ ಇಟ್ಟುಕೊಂಡು ಬಂದಿದ್ದೇವೆ ಅಂದರೆ ಅದು ಸುಳ್ಳು. ಸಮಾಜ ಸೇವೆ ಮಾಡುತ್ತೇನೆ ಅಂತ ಆಸೆ ಇಟ್ಟುಕೊಂಡು ರಾಜಕೀಯಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ." ಎಂದಿದ್ದಾರೆ ಕಿಚ್ಚ ಸುದೀಪ್.

ಇನ್ನು ರಾಜಕೀಯಕ್ಕೆ ಬರುವ ಸುಳಿವನ್ನು ನೀಡಿದ್ದಾರೆ. ಬಂದರೆ, ತನ್ನದೇ ಸ್ಟೈಲ್‌ನಲ್ಲಿ ಬರುತ್ತೇನೆಂದು ಸುಳಿವು ಕೊಟ್ಟಿದ್ದಾರೆ. "ನೋಡೋಣ ರಾಜಕೀಯಕ್ಕೆ ಬಂದರೆ ಸ್ಟೈಲ್ ಆಗಿಯೇ ಬರುತ್ತೇನೆ. ಅದರಲ್ಲಿ ಏನಿದೆ. ಸಿನಿಮಾ ಅಭ್ಯಾಸ ಅಲ್ವಾ. ಒಳ್ಳೆ ಇಂಟ್ರುಡಕ್ಷನ್ ಸೀನ್ ಇಲ್ಲದೆ ಎಂಟ್ರಿ ಕೊಡುವುದಕ್ಕೆ ಆಗುವುದಿಲ್ಲವೇ. ಬಂದಾಗ ಸೌಂಡ್ ಅಲ್ಲಿಯೇ ಬರೋಣ." ಎಂದು ಕಿಚ್ಚ ರಾಜಕೀಯದ ಸುಳಿವು ನೀಡಿದ್ದಾರೆ.

More from Filmibeat

English summary
Kichcha Sudeep says he will come to politics with a proper introduction and style.
Read more about: sudeep politics movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X