"ನಾನೇ ಇಷ್ಟೆಲ್ಲ ಫೇಸ್ ಮಾಡಿದ್ದೀನಿ ಅಂದ್ಮೇಲೆ, ನನ್ನ ಮಗಳು ಅದರ ಹತ್ತರಷ್ಟು ಫೇಸ್ ಮಾಡ್ತಾಳೆ" ಕಿಚ್ಚ ಸುದೀಪ್

ಕಿಚ್ಚ ಸುದೀಪ್ ನಟಿಸಿರುವ 'ಮಾರ್ಕ್' ಸಿನಿಮಾ ರಿಲೀಸ್ ಆಗಿದ್ದು, ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಎರಡು ದಿನಗಳಿಂದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸುದೀಪ್ ಖುಷಿಯಾಗಿದ್ದಾರೆ. ಥಿಯೇಟರ್‌ಗಳ ಮುಂದೆ ಪ್ರೇಕ್ಷಕರು ಕಿಕ್ಕಿರಿದಿರುವುದನ್ನು ನೋಡಿ ಸುದೀಪ್ ಥ್ರಿಲ್ ಆಗಿದ್ದಾರೆ. ತಮ್ಮ ಅಭಿಮಾನಿಗಳು ತೋರಿರುವ ಪ್ರೀತಿಯನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.

'ಮಾರ್ಕ್' ಸುದೀಪ್ ಅಭಿಮಾನಿಗಳನ್ನು ಕಿಕ್ ಕೊಟ್ಟಿದೆ. ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಸುದೀಪ್ ಮತ್ತೊಂದು ಯಶಸ್ಸನ್ನು ಕಣ್ತುಂಬಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಿಚ್ಚನ ಖಡಕ್ ಮಾಸ್ ಲುಕ್ ಥ್ರಿಲ್ಲಿಂಗ್ ಆಗಿದೆ. ಹೀಗಾಗಿ ತಮ್ಮ ಖುಷಿಯನ್ನು ಹಂಚಿಕೊಳ್ಳುವುದಕ್ಕೆ ಮಾಧ್ಯಮದ ಮುಂದೆ ಕಿಚ್ಚ ಬಂದಿದ್ದರು.

Kichcha Sudeep says his daughter Saanvi is stronger than him she will face any criticism

ಈ ವೇಳೆ ಕಿಚ್ಚ ಸುದೀಪ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಖಾಲಿ ಥಿಯೇಟರ್‌ಗಳ ವಿಡಿಯೋವನ್ನು ಶೇರ್ ಮಾಡುತ್ತಿರೋ ಬಗ್ಗೆ ಅಭಿಪ್ರಾಯಗಳನ್ನು ಕೇಳಿದ್ದರು. ಹಾಗೇ ಅವರ ಮಗಳು ಸಾನ್ವಿಯನ್ನು ಟೀಕೆ ಮಾಡುತ್ತಿರುವ ಬಗ್ಗೆನೂ ಕೇಳಲಾಯ್ತು. ಅಂತಹವರ ವಿರುದ್ಧ ಕಿಚ್ಚ ಸುದೀಪ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದೇನು ಅನ್ನೋದರ ಝಲಕ್ ಇಲ್ಲಿದೆ.

ಕರ್ನಾಟಕದಲ್ಲಿ ಎಷ್ಟು ಬೆರಳುಗಳಿವೆ? ಎಣಿಸೋಕೆ ಆಗುತ್ತಾ?

"ನಾನು ಏನಕ್ಕೆ ಕ್ರಮ ತೆಗೆದುಕೊಳ್ಳಲಿ. ನಾನು ಏನಾದರೂ ಮಾತಾಡಿದರೆ ನೀವೆ ನನಗೆ ಉಲ್ಟಾ ಹೊಡೆಯುತ್ತೀರ. ಆಮೇಲೆ ಅವರು ಯಾವುದೋ ಅವರ ಸಿನಿಮಾಗೆ ಹೋಗಿರುತ್ತಾರೆ. ಅದನ್ನು ಹಾಕೊಂಡು ಆಮೇಲೆ ನನ್ನ ಟೈಟಲ್ ಹಾಕೋತಾರೆ. ನಂದೇನಿಲ್ಲ ಅದರಲ್ಲಿ. ಕೈಯಲ್ಲೇ ಐದು ಬೆರಳು. ಕರ್ನಾಟಕದಲ್ಲಿ ಎಷ್ಟು ಬೆರಳುಗಳಿವೆ? ಎಣಿಸೋದಕ್ಕೆ ಆಗುತ್ತಾ? ಅಷ್ಟು ಜನ ಚಪ್ಪಾಳೆ ತಟ್ಟಿ, ಅಷ್ಟು ಜನ ಪ್ರೋತ್ಸಾಹ ಕೊಟ್ಟು, ಶಿಳ್ಳೆ ಹಾಕಬೇಕಾದರೆ, ಯಾವುದೋ ಕಿತ್ತೋಗಿರೋ ವಿಡಿಯೋ ನೋಡಿಕೊಂಡು ಕೇಳ್ತಿದೀರ. ಅವರಿಗೆ ಪಾಪ ಏನು ನೋವಿದೆಯೋ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಅವೆಲ್ಲ ತಲೆ ಕೆಡಿಸಿಕೊಳ್ಳಬಾರದು. ದೇವರು ಚೆನ್ನಾಗಿ ಇಟ್ಟಿರಲಿ." ಎಂದು ಖಾಲಿ ಥಿಯೇಟರ್ ವಿಡಿಯೋ ಶೇರ್ ಮಾಡುತ್ತಿರುವವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಚಪ್ಪಾಳೆ ತಟ್ಟೋರ ಬಗ್ಗೆ ಮಾತಾಡಿ"

"ಇಲ್ಲಿ ಸೆಲೆಬ್ರೆಷನ್ ಮಾಡಿದ್ರಲ್ಲ ಅವರ ಬಗ್ಗೆ ಮಾತಾಡಿ. ನನ್ನ ಬಗ್ಗೆ ಬೆನ್ನು ತಟ್ಟಿ ಪ್ರೀತಿಯಿಂದ ಚಪ್ಪಾಳೆ ಹಾಕುತ್ತಾರಲ್ಲ ಅವರ ಬಗ್ಗೆ ಮಾತಾಡಿ. ಕೈ ತುತ್ತು ಕೊಡುವುದಕ್ಕೆ ನಮ್ಮ ತಾಯಂದಿರು ಇದ್ದಾರಲ್ಲ. ಅವರ ಬಗ್ಗೆ ಮಾತಾಡಿ. ಯಾರೋ ಎಲ್ಲೋ ಕೂತ್ಕೊಂಡು ಯಾವುದೋ ವಿಡಿಯೋ ಬಗ್ಗೆ ಮಾತಾಡಿದರೆ, ನಾವೇ ಇಲ್ಲಿ ಚೀಪ್ ಆಗೋದು. ಯಾರು ನಮಗೆ ಪ್ರೋತ್ಸಾಹ ಕೊಡ್ತಿದ್ದಾರಲ್ಲ ಅವರ ಬಗ್ಗೆ ಮಾತಾಡೋಣ." ಎಂದು ಸುದೀಪ್ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

Kichcha Sudeep says his daughter Saanvi is stronger than him she will face any criticism

"ವೇಸ್ಟ್ ನನ್ ಮಕ್ಕಳು"

ಇಲ್ಲಿಗೆ ಕಿಚ್ಚ ಸುದೀಪ್ ಆಕ್ರೋಶ ಕಡಿಮೆ ಆಗಿರಲಿಲ್ಲ. ಫೇಕ್ ವಿಡಿಯೋ ಮಾಡುತ್ತಿರೋರಿಗೆ ತಿರುಗೇಟು ಕೊಟ್ಟಿದ್ದಾರೆ. "ಅಲ್ಲಿ ಥಿಯೇಟರ್ ಮುಂದೆ ಸಾವಿರ ಮಂದಿ ಸೆಲೆಬ್ರೆಷನ್ ಮಾಡಿ ವಿಡಿಯೋ ಬಿಡುತ್ತಿದ್ದಾರೆ. ಯಾರೋ ಒಂದು ವಿಡಿಯೋ ಬಿಟ್ಟಿದ್ದಾರೆ. ಅವರ ಬಗ್ಗೆ ನಾನು ಮಾತಾಡುವುದಕ್ಕೆ ಹೋಗುವುದಿಲ್ಲ. ಅವರು ವೇಸ್ಟ್ ನನ್ ಮಕ್ಕಳು. ನಾನೇನು ಮಾತಾಡೋದು." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

"ಮಗಳು ನನ್ನ ಹತ್ತರಷ್ಟು ಫೇಸ್ ಮಾಡುತ್ತಾಳೆ"

ಮಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳನ್ನು ಮಾಡುವವರಿಗೂ ತರಾಟೆ ತೆಗೆದುಕೊಂಡಿದ್ದಾರೆ. "ನನ್ನ ಮಗಳ ಬಗ್ಗೆ ಹೇಳಿದ್ರಿ. ನನ್ನ ಮಗಳು ಸರ್. ನಾನೇ ಫೇಸ್ ಮಾಡಿದ್ದೀನಿ ಅಂದ್ಮೇಲೆ. ಅದರ ಹತ್ತರಷ್ಟು ಫೇಸ್ ಮಾಡುತ್ತಾಳೆ. ಹತ್ತರಷ್ಟು ಬೆಳೆಯುತ್ತಾಳೆ. ಹತ್ತರಷ್ಟು ದೊಡ್ಡವಳಾಗುತ್ತಾಳೆ. ನನಗಿಂತ ಹತ್ತರಷ್ಟು ಒಳ್ಳೆಯ ಮನಸ್ಸು ಇದೆ. ಅಷ್ಟೇ ಕೈ ಹಿಡೀತಾಳೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮಗಳನ್ನು ಸ್ವೀಕರಿಸಿದಂತಹ, ಹಾಡನ್ನು ಮೆಚ್ಚಿದಂತಹ ಚಿತ್ರರಂಗದ ಎಷ್ಟೋ ಮಿತ್ರರಿದ್ದಾರೆ. ಅಭಿಮಾನಿಗಳಿದ್ದಾರೆ. ನನ್ನ ಸ್ನೇಹಿತರಿದ್ದಾರೆ." ಎಂದು ಮಗಳನ್ನು ಕಿಚ್ಚ ಸುದೀಪ್ ಹಾಡಿ ಹೊಗಳಿದ್ದಾರೆ.

More from Filmibeat

English summary
Kichcha Sudeep says his daughter Saanvi is stronger than him she will face any criticism.
Read more about: sudeep kannada actor daughter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X