ತಾಯಿ ಅಗಲಿಕೆ ದು:ಖದಲ್ಲಿರುವ ಕಿಚ್ಚನಿಗೆ ಸಾಂತ್ವಾನ ಹೇಳಿದ ಪ್ರಧಾನಿ ಮೋದಿ; ಬರೆದ ಪತ್ರದಲ್ಲಿ ಹೇಳಿದ್ದೇನು?

ಕಿಚ್ಚ ಸುದೀಪ್ ಅತೀವ ದು:ಖದಲ್ಲಿ ಇದ್ದಾರೆ. ತಾಯಿಯನ್ನು ಕಳೆದುಕೊಂಡು ನೋವು ಇನ್ನೂ ಮಾಸಿಲ್ಲ. ಸದಾ ಕಿಚ್ಚನ ಬೆನ್ನೆಲುಬಾಗಿ ನಿಂತಿದ್ದ ಸರೋಜಾ ಸಂಜೀವ್ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಈ ನೋವಿನಲ್ಲಿ ಇರುವಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಪತ್ರದ ಮೂಲಕ ಕಿಚ್ಚನಿಗೆ ಸಾಂತ್ವಾನದ ನುಡಿಗಳನ್ನು ತಿಳಿಸಿದ್ದಾರೆ.

ತಾಯಿಯನ್ನು ಕಳೆದುಕೊಂಡು ದು:ಖದಲ್ಲಿರುವ ಬಹುಭಾಷಾ ನಟ ಕಿಚ್ಚ ಸುದೀಪ್‌ಗೆ ವಿಶ್ವದ ಮೂಲೆ ಮೂಲೆಯಲ್ಲಿರುವ ಆತ್ಮೀಯರು ಸಂತಾಪವನ್ನು ಸೂಚಿಸುತ್ತಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಕೂಡ ಪತ್ರ ಮೂಲಕ ಕಿಚ್ಚ ಸುದೀಪ್‌ಗೆ ಧೈರ್ಯವನ್ನು ತುಂಬಿದ್ದಾರೆ. ಆ ಪತ್ರವನ್ನು ಕಿಚ್ಚ ಸುದೀಪ್ ತನ್ನ ಟ್ವಿಟರ್‌ (ಎಕ್ಸ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Kichcha Sudeep shared prime minister Narendra Modi condolence letter to his mother death Kannada news

ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಎಂಟು ದಿನಗಳ ಹಿಂದೆ ಅಂದರೆ, ಅಕ್ಟೋಬರ್ 20 ರಂದು ನಿಧನರಾಗಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಸಂಬಂಧ ಮೋದಿ ಪತ್ರ ಬರೆದಿದ್ದು, ಅವರು ಬರೆದ ಪತ್ರದ ಸಾರಾಂಶ ಹೀಗಿದೆ.

"ಶ್ರೀ ಸುದೀಪ್ ಸಂಜೀವ್ ಜೀ..

ನಿಮ್ಮ ತಾಯಿ ಸರೋಜಾ ಸಂಜೀವ್ ಜೀ ಅವರ ಅಗಲಿಕೆಯ ಸುದ್ದಿ ಕೇಳಿದ ಬಳಿಕ ನನಗೆ ಅತೀವ ದು:ಖವಾಗಿದೆ. ತಾಯಿಯನ್ನು ಕಳೆದುಕೊಂಡಿದ್ದು ಭರಿಸಲು ಸಾಧ್ಯವೇ ಇಲ್ಲ. ತಾಯಿಯ ಪ್ರೀತಿ, ವಾತ್ಸಲ್ಯಕ್ಕೆ ಸರಿ ಸಮಾನವಾದುದು ಮತ್ತೊಂದಿಲ್ಲ. ನಿಮ್ಮ ತಾಯಿಯೊಂದಿಗೆ ನೀವು ಎಂತಹ ಬಾಂಧವ್ಯವನ್ನು ಹೊಂದಿದ್ರಿ ಅನ್ನೋದನ್ನು ನೀವು ಭಾವುಕರಾಗಿದ್ದೇ ಹೇಳುತ್ತಿದೆ.

ನಿಮ್ಮ ತಾಯಿ ನಿಮ್ಮ ಮೇಲೆ, ನಿಮ್ಮ ಕುಟುಂಬದ ಮೇಲೆ ಎಷ್ಟು ಪ್ರಭಾವವನ್ನು ಬೀರಿದ್ದರು ಎಂಬುವುದು ತಿಳಿಯುತ್ತಿದೆ. ನೆನಪುಗಳ ಮೂಲಕ ಅವರು ಯಾವಾಗಲೂ ನಿಮ್ಮ ಜೊತೆಯೇ ಇರಲಿದ್ದಾರೆ. ಅವರಿಂದ ಕಲಿತ ಮೌಲ್ಯಗಳು ನಿಮಗೆ ಸ್ಪೂರ್ತಿಯಾಗಿ ಇರುತ್ತವೆ ಎಂದು ನಾನು ಭಾವಿಸಿದ್ದೇನೆ."

ನಿಮ್ಮ ಜೀವನದ ಅತ್ಯಂತ ಕಷ್ಟದ ದಿನಗಳಲ್ಲಿ ನಾನು ನಿಮಗೆ ಸಂತಾಪ ಸೂಚಿಸುತ್ತೇನೆ. ನಿಮ್ಮ ಕುಟುಂಬ ಹಾಗೂ ಆತ್ಮೀಯರಿಗಾಗಿ ನಾನು ಪ್ರಾರ್ಥನೆ ಮಾಡುತ್ತೇನೆ. ಅವರಿಗೂ ನೋವನ್ನು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರವನ್ನು ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಿಮ್ಮ ಸಾಂತ್ವಾನ ನನ್ನ ಹೃದಯಕ್ಕೆ ತಟ್ಟಿದ್ದೆ ಎಂದು ಹೇಳಿದ್ದಾರೆ.

"ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ.. ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲ ಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ." ಎಂದು ಬಹುಭಾಷಾ ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ತಾಯಿ ಅಗಲಿಕೆ ಬಳಿಕ ಸಂತಾಪ ಸೂಚಿಸಿದವರುಗೆ ದು:ಖದಲ್ಲಿಯೇ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಾಯಿ ಅಗಲಿಕೆ ಬಳಿಕ ಮಗನಾಗಿ ಅವರ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಸಿನಿಮಾದ ಜೊತೆಗೆ ಯಾವುದೇ ಕೆಲಸದಲ್ಲಿ ಭಾಗಿಯಾಗಿಲ್ಲ. ಕಳೆದ ವೀಕೆಂಡ್‌ನಲ್ಲಿ ಬಿಗ್‌ಬಾಸ್‌ಗೂ ಬಂದಿರಲಿಲ್ಲ. ಇನ್ನೂ ಕೆಲವು ದಿನಗಳು ಸಿನಿಮಾ ಹಾಗೂ ರಿಯಾಲಿಟಿ ಶೋ ಇತರ ಕೆಲಸಗಳಲ್ಲಿ ಕಾಣಿಸಿಕೊಳ್ಳುವುದ ಅನುಮಾನ.

More from Filmibeat

English summary
Kichcha Sudeep shared Prime Minister Narendra Modi condolence letter to his mother death Kannada news;
Read more about: sudeep letter filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X