ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಅಪರೂಪದ ಫೋಟೊ ಹಂಚಿಕೊಂಡ ಸುದೀಪ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕನ್ನಡದ ಕೆಲವೇ ಸ್ಟಾರ್‌ಗಳಲ್ಲಿ ಕಿಚ್ಚ ಸುದೀಪ್ ಒಬ್ಬರು. ಅಭಿಮಾನಿಗಳಿಗೆ ಮತ್ತು ಚಿತ್ರರಂಗದ ಸ್ನೇಹಿತರಿಗೆ ಜನ್ಮದಿನ, ಮದುವೆಯ ಶುಭಾಶಯಗಳನ್ನು ಹೇಳುತ್ತಾ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ. ಹಾಗೆಯೇ ಆಗಾಗ್ಗೆ ಸಿನಿಮಾ ಮತ್ತು ವೈಯಕ್ತಿಕ ಬದುಕಿನ ಸಂಗತಿ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Recommended Video

ಸುಶಾಂತ್ ಅಭಿನಯದ ಕೊನೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆ | 'Dil bechara' to be released on Hotstar

ಕೆಲವೊಮ್ಮೆ ಸುದೀಪ್ ಹಳೆಯ ಫೋಟೊಗಳನ್ನು ಶೇರ್ ಮಾಡುವ ಮೂಲಕ ಬಾಲ್ಯದ ಜೀವನಕ್ಕೆ ಮರಳುತ್ತಿರುತ್ತಾರೆ. ಆ ದಿನಗಳ ನೆನಪು ತಮ್ಮನ್ನು ಕಾಡುತ್ತಿರುತ್ತದೆ ಎಂಬುದನ್ನು ಹಲವು ಬಾರಿ ಹೇಳಿಕೊಂಡಿದ್ದಾರೆ. ಫೋಟೊಗಳ ಜತೆಗೆ ಅಷ್ಟೇ ಅರ್ಥಪೂರ್ಣ ಅನಿಸಿಕೆಗಳನ್ನೂ ಬರೆದುಕೊಳ್ಳುತ್ತಾರೆ. ಸುದೀಪ್ ಅವರ ಹಳೆಯ ಫೋಟೊಗಳಲ್ಲಿ ಕಾಣಿಸುವ ಗತ್ತು, ಸ್ಟೈಲ್ ಬದಲಾಗಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುವುದು ಸಹಜ. ಅಂತಹ ಚೆಂದನೆಯ ಫೋಟೊವೊಂದನ್ನು ಅವರು ಶೇರ್ ಮಾಡಿದ್ದಾರೆ. ಆ ಮೂಲಕ ತಮ್ಮ ಬಾಲ್ಯದ ದಿನಕ್ಕೆ ಮರಳಿದ್ದಾರೆ. ಮುಂದೆ ಓದಿ...

ಸಹೋದರಿಯರ ನಡುವೆ ಅಪರೂಪದ ಫೋಟೊ

ಸಹೋದರಿಯರ ನಡುವೆ ಅಪರೂಪದ ಫೋಟೊ

ಕಲರ್ ಫುಲ್ ಬದುಕಿನ ನಡುವೆ ಸುದೀಪ್ ಕಪ್ಪು-ಬಿಳುಪಿನ ಕಾಲದತ್ತ ನೋಟ ಹರಿಸಿದ್ದಾರೆ. ತಮ್ಮ ಆಲ್ಬಂನಿಂದ ಚೆಂದನೆಯ ಫೋಟೊವೊಂದನ್ನು ಅವರು ಶೇರ್ ಮಾಡಿದ್ದಾರೆ. ಸಹೋದರಿಯರ ಜತೆಗಿನ ಫೋಟೊದಲ್ಲಿ ಸುದೀಪ್ ಕುಳಿತಿರುವ ಫೋಟೊ ಗಮನ ಸೆಳೆಯುತ್ತಿದೆ. ಆಗಲೂ ಅದೇ ಗತ್ತು ಗಾಂಭೀರ್ಯ ಕೊಂಚವೂ ಬದಲಾಗಿಲ್ಲ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ

ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ

ಫೋಟೊದೊಂದಿಗೆ ಸುದೀಪ್ ಬರೆದಿರುವ ಬರಹ ಕೂಡ ಅಷ್ಟೇ ಹೃದಯಸ್ಪರ್ಶಿಯಾಗಿದೆ. ನಮ್ಮ ಇಂದಿನ ದಿನಗಳಲ್ಲಿ ಸೆಲ್ಫಿಗಳ ನಡುವೆ ಈ ರೀತಿಯ ಕೌಟುಂಬಿಕ ಫೋಟೊಗಳನ್ನು ತೆಗೆಯುವ ಅಥವಾ ನೋಡುವ ಸಂದರ್ಭ ತೀರಾ ಅಪರೂಪವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಸುದೀಪ್, ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಹರ್ಷಲ್ ಗಿಬ್ಸ್ ಕಾಮೆಂಟ್

ಹರ್ಷಲ್ ಗಿಬ್ಸ್ ಕಾಮೆಂಟ್

ಸುದೀಪ್ ಹಾಕಿರುವ ಫೋಟೊಗೆ ದಕ್ಷಿಣ ಆಫ್ರಿಕಾದ ಮಾಜಿ ಖ್ಯಾತ ಕ್ರಿಕೆಟಿಗ ಹರ್ಷಲ್ ಗಿಬ್ಸ್ ಕಾಮೆಂಟ್ ಮಾಡಿದ್ದಾರೆ. 'ನೈಸ್ ಬಡ್' ಎಂದು ಗಿಬ್ಸ್ ಹೇಳಿರುವುದು ಸುದೀಪ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಗಿಬ್ಸ್ ಕಾಮೆಂಟ್ ಅನೇಕರಲ್ಲಿ ಅಚ್ಚರಿ ಕೂಡ ಉಂಟು ಮಾಡಿದೆ.

ಅದೇ ಕ್ಯೂಟ್ನೆಸ್ ಈಗಲೂ ಇದೆ...

ಅದೇ ಕ್ಯೂಟ್ನೆಸ್ ಈಗಲೂ ಇದೆ...

ಇನ್ನೊಂದೆಡೆ ಸುದೀಪ್ ಅಭಿಮಾನಿಗಳು ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೊವನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಸುದೀಪ್ ಎಷ್ಟು ಮುದ್ದಾಗಿ ಕಾಣಿಸುತ್ತಾರೆ. ಅದೇ ಕ್ಯೂಟ್ನೆಸ್ ಅನ್ನು ಈಗಲೂ ಕಾಪಾಡಿಕೊಂಡುಬಂದಿದ್ದಾರೆ. ನಮ್ಮ ಆದರ್ಶ ನಟ, ತಾನು ಬಹಳ ಪ್ರೀತಿಸುವ ಸಹೋದರಿಯರೊಂದಿಗೆ ಇರುವ ಇದುವರೆಗೆ ನೋಡಿರದ ಫೋಟೊ ಎಂದು ಅಭಿಮಾನಗಳು ಬರೆದುಕೊಂಡಿದ್ದಾರೆ.

More from Filmibeat

English summary
Actor Kichcha Sudeep has shared an adorable throwback photo with his sisters in Instagram and said Miss those times...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X