ಸ್ವರ್ಗವಾಗಿದ್ದ ಭೂಮಿ ಈಗ ದುಃಸ್ವಪ್ನವಾಗಿದೆ ಎಂದು ಬೇಸರಗೊಂಡ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' 2017ರಲ್ಲಿ ಬಿಡುಗಡೆಯಾಗಿತ್ತು. ಎಸ್. ಕೃಷ್ಣ ನಿರ್ದೇಶನದ ಈ ಚಿತ್ರ ಬಾಕ್ಸಾಫಿಸ್‌ನಲ್ಲಿ ಸದ್ದು ಮಾಡಿತ್ತು. ಬಳಿಕ ತಮಿಳಿನಲ್ಲಿಯೂ ಬಿಡುಗಡೆಯಾಗಿತ್ತು. ಇತ್ತೀಚೆಗೆ ಹಿಂದಿಗೆ ಕೂಡ ಡಬ್ ಆಗಿದೆ.

Recommended Video

ಚಿತ್ರರಂಗದ ಹಿರಿಯ ಕಲಾವಿದರ ಹೊಟ್ಟೆ ತುಂಬಿಸುತ್ತಿದ್ದಾರೆ ಕಿಚ್ಚ ಸುದೀಪ್ | Sudeep | Dingri Nagraj | Helping

ಪ್ಯಾರಾ ಕಾಂಡೋ ಆಫೀಸರ್ 'ಕ್ಯಾಪ್ಟನ್ ರಾಮ್' ಪಾತ್ರದಲ್ಲಿ ಸುದೀಪ್ ನಟಿಸಿದ್ದರು. ಬೆಂಗಳೂರು, ಹೈದರಾಬಾದ್‌, ಜಮ್ಮು ಮತ್ತು ಕಾಶ್ಮೀರ ಹಾಗೂ ಐಸ್‌ಲ್ಯಾಂಡ್‌ನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಇತ್ತೀಚೆಗೆ ಈ ಸಿನಿಮಾ ಟಿವಿಯಲ್ಲಿ ಪ್ರಸಾರವಾದಾಗ ಅದನ್ನು ಮತ್ತೆ ಕುಳಿತು ನೋಡಿದ ಕಿಚ್ಚ ಸುದೀಪ್, ಮೂರು ವರ್ಷದ ಹಿಂದಿನ ಚಿತ್ರೀಕರಣದ ಕೆಲವು ನೆನಪುಗಳಿಗೆ ಮರಳಿದ್ದಾರೆ. ಅದನ್ನು ಅಭಿಮಾನಿಗಳ ಜತೆಗೆ ಕೂಡ ಹಂಚಿಕೊಂಡಿದ್ದಾರೆ. ತಾವು ತಮ್ಮ ಮೊಬೈಲಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆರೆಹಿಡಿದ ಸುಂದರ ಕ್ಷಣಗಳ ವಿಡಿಯೋಗಳು ಹಾಗೂ ಫೋಟೊಗಳನ್ನು ಜೋಡಿಸಿ ವಿಡಿಯೋ ತಯಾರಿಸಿದ್ದಾರೆ. ಮುಂದೆ ಓದಿ...

ಗತಕಾಲದ ವೈಭವ

ಗತಕಾಲದ ವೈಭವ

ಶ್ರೀನಗರದಲ್ಲಿ ಶೂಟಿಂಗ್ ಮಾಡಿದ ಹೆಬ್ಬುಲಿಯ ಎರಡನೆಯ ದಿನದ ಚಿತ್ರಗಳು. ನಾಸ್ಟಾಲ್ಜಿಯಾ. ನಿನ್ನೆ ಟಿವಿಯಲ್ಲಿ ಸಿನಿಮಾ ನೋಡಿದಾಗ ನಾನು ಮಾಡಿದ ಈ ವಿಡಿಯೋಗಳಿಗೆ ಹಿಂದಿರುಗುವಂತೆ ಮಾಡಿತು ಎಂದು ಸುದೀಪ್ ಎರಡು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.

ಭೂಮಿಯ ಮೇಲಿನ ಸ್ವರ್ಗ

ಶ್ರೀನಗರದ ಮನಮೋಹಕ ದೃಶ್ಯಗಳನ್ನು ಪೋಸ್ಟ್ ಮಾಡಿರುವ ಸುದೀಪ್, ಇದು ಭೂಮಿಯ ಮೇಲಿನ ಸ್ವರ್ಗ ಎಂದು ಬಣ್ಣಿಸಿದ್ದಾರೆ. ಶ್ರೀನಗರದ ಹಸಿರು, ಬೆಟ್ಟಗುಡ್ಡಗಳು, ಹಿಮ, ನದಿಗಳ ಸೊಗಸಾದ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಚಿತ್ರತಂಡದ ಫೋಟೊಗಳನ್ನು, ಅವರೊಂದಿಗಿನ ಸೆಲ್ಫಿಗಳನ್ನು ಹಂಚಿಕೊಳ್ಳುವ ಮೂಲಕ ಆ ಪಯಣ ಎಷ್ಟು ಸುಂದರವಾಗಿತ್ತು ಎನ್ನುವುದನ್ನು ತಿಳಿಸಿದ್ದಾರೆ.

ಮತ್ತೆ ಸ್ವರ್ಗವಾಗಿ ಬದಲಾಗಲಿ

ಮತ್ತೆ ಸ್ವರ್ಗವಾಗಿ ಬದಲಾಗಲಿ

ಈ 'ಸ್ವರ್ಗ'ವನ್ನು ಜನರು ದುಸ್ವಪ್ನದ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ ಎನ್ನುವುದು ಬಹಳ ದುಃಖದ ಸಂಗತಿ. ಈ ಸ್ವರ್ಗ ಒಂದಲ್ಲ ಒಂದು ದಿನ ಮುಕ್ತವಾಗಲಿದೆ ಎಂದು ಆಶಿಸುತ್ತೇನೆ. ಆ ಭರವಸೆ ಇದೆ' ಎಂದು ಕಾಶ್ಮೀರದ ಇಂದಿನ ಸ್ಥಿತಿಗೆ ಬೇಸರ ವ್ಯಕ್ತಪಡಿಸುತ್ತಾ, ಅದು ಬದಲಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಆಡಿದ ಹೆಬ್ಬುಲಿ ತಂಡ

ಮೂರನೇ ದಿನದ ದೃಶ್ಯಗಳೆಂದು ಸುದೀಪ್ ಹಂಚಿಕೊಂಡಿರುವ ಕ್ಷಣಗಳು ಮತ್ತಷ್ಟು ಮನಮೋಹಕವಾಗಿವೆ. ಬೆಟ್ಟದೊಂದಿಗಿನ ಸೆಲ್ಫಿ, ಚಿತ್ರತಂಡದೊಂದಿಗಿನ ತಮಾಷೆಯ ಅನುಭವಗಳು ಇಲ್ಲಿವೆ. ಚಿತ್ರೀಕರಣದ ನಡುವೆ ಸಿಕ್ಕ ಪುಟ್ಟ ಮೈದಾನದಲ್ಲಿ ಕ್ರಿಕೆಟ್ ಆಡಿ ಕೂಡ ಸಂಭ್ರಮಿಸಿದ್ದಾರೆ. ಹೃದಯಗಳನ್ನು ಮುಟ್ಟಲು ಹೃದಯಬೇಕು. ಯಶಸ್ಸಿನ ಮೊದಲ ಹೆಜ್ಜೆ ನಗು ಎಂದು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Kichcha Sudeep has shares nostalgic moments with his Hebbuli movie team during shooting at Srinagar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X