'ಕೋಟಿಗೊಬ್ಬ 3' ಖದರ್ ಲುಕ್: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಖುಷಿಯೋ ಖುಷಿ

'ಫ್ಯಾಟಮ್' ಸುದ್ದಿಯಲ್ಲಿದೆ, ಆದರೆ 'ಕೋಟಿಗೊಬ್ಬ 3' ಚಿತ್ರದ ಸುಳಿವೇ ಇಲ್ಲವಲ್ಲ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಅಭಿಮಾನಿಗಳನ್ನು ಕಿಚ್ಚ ಸುದೀಪ್ ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಆದರೆ ಶುಕ್ರವಾರ ಕಿಚ್ಚನ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ಇದುವರೆಗೂ ಸುಮ್ಮನಿದ್ದ ಚಿತ್ರತಂಡ ಶುಕ್ರವಾರ 'ಕೋಟಿಗೊಬ್ಬ 3' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಅಂದಹಾಗೆ, ಈ ಪೋಸ್ಟರ್ ಬಿಡುಗಡೆ ಮಾಡಲು ಕಾರಣವಿದೆ. ಆಗಸ್ಟ್ 7, ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಜನ್ಮದಿನ. ಈ ಜನ್ಮದಿನದಂದು ಅವರಿಗೆ ಶುಭಾಶಯ ಕೋರುವ ಮೂಲಕ ಸುದೀಪ್ ಅಭಿಮಾನಿಗಳಿಗೆ ಹೊಸ ಉಡುಗೊರೆ ನೀಡಲಾಗಿದೆ. 'ಕೋಟಿಗೊಬ್ಬ 3' ಚಿತ್ರದ ಇದುವರೆಗಿನ ಪೋಸ್ಟರ್‌ಗಳು, ಬಿಡುಗಡೆಯಾದ ಹಾಡು ಸುದೀಪ್ ಅವರ ಖದರ್ ಲುಕ್‌ಅನ್ನು ಬಿಂಬಿಸಿದ್ದವು. ಈ ಹೊಸ ಪೋಸ್ಟರ್ ಕೂಡ ಆ ಖದರ್ ತೋರಿಸಿದೆ. ಮುಂದೆ ಓದಿ.

ಕುತೂಹಲ ಮೂಡಿಸಿದ ಪೋಸ್ಟರ್

ಕುತೂಹಲ ಮೂಡಿಸಿದ ಪೋಸ್ಟರ್

ವಿಲನ್‌ನ ತಲೆಯನ್ನು ಎಡಗೈನಲ್ಲಿ ನೆಲಕ್ಕೆ ಒತ್ತಿ ಹಿಡಿದ ಸುದೀಪ್ ಅವರ ಒಂದು ಬದಿಯ ಪೋಸ್ ಕಂಡು ಫ್ಯಾನ್ಸ್ ಪುಳಕಿತರಾಗಿದ್ದಾರೆ. ಚಿತ್ರದ ಆಕ್ಷನ್ ಸನ್ನಿವೇಶವೊಂದರ ಪೋಸ್ಟರ್ ಇದು. ಈ ಪೋಸ್ಟರ್ ನೋಡಿದ ಅಭಿಮಾನಿಗಳು ಕಟ್ಟಡವೊಂದರ ಒಳಗೆ ನಡೆಯುವ ಮೈನವಿರೇಳಿಸುವ ಹೊಡೆದಾಟದ ದೃಶ್ಯವನ್ನು ಕಲ್ಪಿಸಿಕೊಂಡು ರೋಮಾಂಚಿತರಾಗುತ್ತಿದ್ದಾರೆ.

ಸೂರಪ್ಪ ಬಾಬುಗೆ ಶುಭಾಶಯ

ಸೂರಪ್ಪ ಬಾಬುಗೆ ಶುಭಾಶಯ

ಸೂರಪ್ಪ ಬಾಬು ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ಸುದೀಪ್, ಸಂತೋಷ ಮತ್ತು ಆರೋಗ್ಯ ಸದಾ ಇರಲಿ ಎಂದು ಹಾರೈಸಿದ್ದಾರೆ. 'ಕೋಟಿಗೊಬ್ಬ 3' ಚಿತ್ರತಂಡ ಹಾಗೂ ಸುದೀಪ್ ಅಭಿಮಾನಿಗಳು ಸಹ ಸೂರಪ್ಪ ಬಾಬು ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಮಡೋನ್ನಾ ಸೆಬಾಸ್ಟಿಯನ್ ನಾಯಕಿ

ಮಡೋನ್ನಾ ಸೆಬಾಸ್ಟಿಯನ್ ನಾಯಕಿ

ಕೋಟಿಗೊಬ್ಬ ಚಿತ್ರ ಸರಣಿಯ ಮೂರನೇ ಭಾಗ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 'ಪ್ರೇಮಮ್' ಖ್ಯಾತಿಯ ಮಡೋನ್ನಾ ಸೆಬಾಸ್ಟಿಯನ್ ಸುದೀಪ್‌ಗೆ ಎದುರಾಗಿ ನಟಿಸಿದ್ದಾರೆ. ಬಾಲಿವುಡ್‌ನ ನಟರಾದ ಅಫ್ತಾಬ್ ಶಿವ್‌ದಾಸಾನಿ, ಶ್ರದ್ಧಾ ದಾಸ್ ಮತ್ತು ನವಾಬ್ ಶಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವಕಾರ್ತಿಕ್ ನಿರ್ದೇಶನದ ಚಿತ್ರವನ್ನು ಯುರೋಪ್ ಮತ್ತು ಭಾರತದಲ್ಲಿ ಚಿತ್ರೀಕರಿಸಲಾಗಿದೆ.

ಫ್ಯಾಂಟಮ್ ಚಿತ್ರೀಕರಣ

ಫ್ಯಾಂಟಮ್ ಚಿತ್ರೀಕರಣ

ಚಿತ್ರಕ್ಕೆ ಸಂಬಂಧಿಸಿದ ಕೆಲವು ಕೆಲಸಗಳು ಬಾಕಿ ಉಳಿದಿದೆ. ಹೀಗಾಗಿ ಯಾವುದೇ ಅಪ್‌ಡೇಟ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸುದೀಪ್ ಇತ್ತೀಚೆಗೆ ತಿಳಿಸಿದ್ದರು. ಕನ್ನಡದ ಜತೆಗೆ ತಮಿಳು ಮತ್ತು ತೆಲುಗಿನಲ್ಲಿಯೂ ಈ ಚಿತ್ರ ತೆರೆಕಾಣಲಿದೆ ಎಂದು ಹೇಳಲಾಗಿದೆ. ಸದ್ಯ ಸುದೀಪ್ ಈಗ ಅನೂಪ್ ಭಂಡಾರಿ ನಿರ್ದೇಶನದ 'ಫ್ಯಾಂಟಮ್' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

More from Filmibeat

English summary
Kichcha Sudeep starrer Kotigobba 3 brand new poster released on producer Soorappa Babu's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X