Mark Advance Booking: 'ಮಾರ್ಕ್' ಅಡ್ವಾನ್ಸ್ ಬುಕಿಂಗ್ ಹೇಗಿದೆ? ಯಾವ್ಯಾವ ಸಿಂಗಲ್ ಸ್ಕ್ರೀನ್‌ಗಳು ಹೌಸ್‌ಫುಲ್?
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಇನ್ನೇನು ಕ್ಷಣಗಣನೆ ಶುರುವಾಗಿದೆ. 'ಮ್ಯಾಕ್ಸ್' ಸಿನಿಮಾದಂತೆ 'ಮಾರ್ಕ್' ಕೂಡ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡಬಹುದು? ಅನ್ನೋದನ್ನು ಕುತೂಹಲದಿಂದ ಇಡೀ ಚಿತ್ರರಂಗವೇ ಎದುರು ನೋಡುತ್ತಿದೆ. ಇನ್ನೊಂದು ಕಿಚ್ಚನ ಫೇವರಿಟ್ ಡೇಟ್ ಡಿಸೆಂಬರ್ 25ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಸೂಪರ್ ಹಿಟ್ ಆಗಬಹುದಾ? ಎಂಬ ನಿರೀಕ್ಷೆಯಲ್ಲಿದ್ದಾರೆ.
'ಮಾರ್ಕ್' ಸಿನಿಮಾ ಮಾಸ್ ಎಂಟರ್‌ಟೈನರ್. ಈಗಾಗಲೇ ಸಿನಿಮಾ ತುಣುಕುಗಳು ಹಾಗೂ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ಹೀಗಾಗಿ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ಭರ್ಜರಿ ರೆಸ್ಪಾನ್ಸ್ ಸಿಗುತ್ತೆ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಮಾಡಲಾಗಿದೆ. ಡಿಸೆಂಬರ್ 23ರ ಸಂಜೆವರೆಗೂ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್‌ಗೆ ರೆಸ್ಪಾನ್ಸ್ ಹೇಗಿದೆ? ಯಾವ್ಯಾವ ಸಿಂಗಲ್ ಸ್ಕ್ರೀನ್‌ಗಳು ಹೌಸ್‌ಫುಲ್ ಆಗಿವೆ? ತಿಳಿಯುವುದಕ್ಕೆ ಮುಂದೆ ಓದಿ.
2025ರಲ್ಲಿ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ 'ಮಾರ್ಕ್' ಒಂದು. ಇನ್ನೊಂದು ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ '45'. ಕಳೆದ ಬಾರಿ ಕೂಡ ಉಪೇಂದ್ರ ನಿರ್ದೇಶಿಸಿದ 'ಯುಐ' ಜೊತೆ ಸುದೀಪ್ ಸಿನಿಮಾ 'ಮ್ಯಾಕ್ಸ್' ರಿಲೀಸ್ ಆಗಿತ್ತು. ಈ ವರ್ಷ ಅದೇ ರಿಪೀಟ್ ಆಗಿದೆ. ಉಪೇಂದ್ರ ನಟಿಸಿದ '45' ಜೊತೆ 'ಮಾರ್ಕ್' ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ '45'ಗಿಂತ 'ಮಾರ್ಕ್'ಗೆ ಅಡ್ವಾನ್ಸ್ ಬುಕಿಂಗ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಫಿಲ್ಮಿಬೀಟ್‌ಗೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಸಿಂಗಲ್ ಸ್ಕ್ರೀನ್‌ಗಳಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಸಿಕ್ಕಿರುವ ರೆಸ್ಪಾನ್ಸ್ ಹೀಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಹಾಸನದಲ್ಲಿರುವ ಸಿಂಗಲ್ ಸ್ಕ್ರೀನ್‌ಗಲ್ಲಿ ಬಹುತೇಕ ಶೋಗಳು ಹೌಸ್‌ಫುಲ್ ಆಗಿವೆ. ಅದರ ಡಿಟೈಲ್ಸ್ ಇಲ್ಲಿದೆ.
ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಡಿಟೈಲ್ಸ್ (ಫ್ಯಾನ್ಸ್ ಶೋ ಹೊರತು ಪಡಿಸಿ)
ಊರ್ವಶಿ- 1 ಶೋ ಫುಲ್
ಸಂತೋಷ್ - 2 ಶೋ ಫುಲ್
ಸಿದ್ದೇಶ್ವರ - 4 ಶೋ ಫುಲ್
ಸಿದ್ದಲಿಂಗೇಶ್ವರ - 3 ಶೋ ಪುಲ್
ಬೃಂದಾ ಹೊಂಗಸಂದ್ರ - 3 ಶೋ ಫುಲ್
ರಾಬಿನ್ ಕೆಂಗೇರಿ - 2 ಶೋ
ವಿಕ್ಟರಿ ಸಿನಿಮಾಸ್ - 1 ಶೋ
ವೆಂಕಟೇಶ್ವರ ಅವಲಹಳ್ಳಿ - 2 ಶೋ
ನವರಂಗ್ - 2 ಶೋ
ಗೋವರ್ಧನ್ - 1 ಶೋ
ವಿ ಸಿನಿಮಾಸ್ (ರಾಮಮೂರ್ತಿನಗರ) - 2 ಶೋ
ಶ್ರೀನಿವಾಸ (ಕಾಡುಗೋಡಿ) - 2 ಶೋ
ಮೈಸೂರು ಸಿಂಗಲ್ ಸ್ಕ್ರೀನ್ ಡಿಟೈಲ್ಸ್ (ಫ್ಯಾನ್ಸ್ ಶೋ ಹೊರತು ಪಡಿಸಿ)
ಸಂಗಮ್ 4 ಶೋ
ಪದ್ಮಾ 4 ಶೋ
ಮಂಡ್ಯ ಸಿಂಗಲ್ ಸ್ಕ್ರೀನ್ ಡಿಟೈಲ್ಸ್ (ಫ್ಯಾನ್ಸ್ ಶೋ ಹೊರತು ಪಡಿಸಿ)
ಗುರುಶ್ರೀ 2 ಶೋ

ಹಾಸನ ಸಿಂಗಲ್ ಸ್ಕ್ರೀನ್ ಡಿಟೈಲ್ಸ್ (ಫ್ಯಾನ್ಸ್ ಶೋ ಹೊರತು ಪಡಿಸಿ)
ಶ್ರೀಗುರು 2 ಶೋ
ಶಿವಮೊಗ್ಗ ಸಿಂಗಲ್ ಸ್ಕ್ರೀನ್ ಡಿಟೈಲ್ಸ್ (ಫ್ಯಾನ್ಸ್ ಶೋ ಹೊರತು ಪಡಿಸಿ)
ಮಲ್ಲಿಕಾರ್ಜುನ 3 ಶೋ
ಭದ್ರಾವತಿ ಸಿಂಗಲ್ ಸ್ಕ್ರೀನ್ ಡಿಟೈಲ್ಸ್ (ಫ್ಯಾನ್ಸ್ ಶೋ ಹೊರತು ಪಡಿಸಿ)
ಸತ್ಯ 3 ಶೋ
ತುಮಕೂರು ಸಿಂಗಲ್ ಸ್ಕ್ರೀನ್ ಡಿಟೈಲ್ಸ್ (ಫ್ಯಾನ್ಸ್ ಶೋ ಹೊರತು ಪಡಿಸಿ)
ಜೈ ಭಾರತ್ 3 ಶೋ
ದಾವಣಗೆರೆ ಸಿಂಗಲ್ ಸ್ಕ್ರೀನ್ ಡಿಟೈಲ್ಸ್ (ಫ್ಯಾನ್ಸ್ ಶೋ ಹೊರತು ಪಡಿಸಿ)
ತ್ರಿಶೂಲ್-ತ್ರಿನೇತ್ರ 4 ಶೋ


Click it and Unblock the Notifications











