3ನೇ ದಿನ 'ವಿಕ್ರಾಂತ್ ರೋಣ'ನ ಬಾಕ್ಸಾಫೀಸ್ ಪರ್ಫಾಮೆನ್ಸ್ ಹೇಗಿದೆ? 100 ಕೋಟಿ ರೂ. ದಾಟುತ್ತಾ?

ಒಂದೇ ವರ್ಷ ಕನ್ನಡದ ನಾಲ್ಕು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ 'ಜೇಮ್ಸ್', ಯಶ್ 'ಕೆಜಿಎಫ್ 2', ರಕ್ಷಿತ್ ಶೆಟ್ಟಿ ಸಿನಿಮಾ '777 ಚಾರ್ಲಿ'. ಈಗ ನಾಲ್ಕನೇ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆಯಾಗಿದೆ.

'ವಿಕ್ರಾಂತ್ ರೋಣ' ಮೊದಲ ದಿನ 35 ಕೋಟಿ ಕಲೆಕ್ಷನ್ ಮಾಡುತ್ತು. ಮೊದಲ ದಿನವೇ ಸಿನಿಮಾ ಕಲೆಕ್ಷನ್ ಭರ್ಜರಿಯಾಗಿತ್ತು. ಈ ಕಾರಣಕ್ಕೆ ವೀಕೆಂಡ್‌ನಲ್ಲಿ ಸಿನಿಮಾ ಗಳಿಕೆ ಮೇಲೆ ಭಾರತದ ಎಲ್ಲಾ ಚಿತ್ರರಂಗವೂ ಕಣ್ಣಿಟ್ಟಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ವಿಕ್ರಾಂತ್ ರೋಣ ಕಲೆಕ್ಷನ್ ಸಖತ್ ಆಗಿಯೇ ಇದೆ. ಮೊದಲ ಎರಡೂ ದಿನವೂ 'ಕೆಜಿಎಫ್ 2' ಮೀರಿಸವಂತೆ ಇಲ್ಲದಿದ್ದರೂ, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮತ್ತೊಂದು ಬ್ಲಾಕ್‌ಬಸ್ಟರ್ ಲಿಸ್ಟ್ ಸೇರುವ ಸಾಧ್ಯತೆಗಳಿವೆ.

ಕಿಚ್ಚ ಸುದೀಪ್ ಅಭಿನಯದ ಮೊದಲ ಪೂರ್ಣ ಪ್ರಮಾಣದ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ'. ಹೀಗಾಗಿ ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಲೇ ಬೇಕು. ಕಳೆದೆರಡು ದಿನಗಳ ಕಲೆಕ್ಷನ್ ನೋಡಿದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೆಗಾ ಹಿಟ್ ಆಗೋದು ಕನ್ಫರ್ಮ್. ಹಾಗಿದ್ದರೆ ಮೂರನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ವಿಕ್ರಾಂತ್ ರೋಣ' ಹವಾ ಹೇಗಿದೆ?

'ವಿಕ್ರಾಂತ್ ರೋಣ' ಹವಾ ಹೇಗಿದೆ?

'ವಿಕ್ರಾಂತ್ ರೋಣ' ರಿಲೀಸ್‌ಗೆ ಒಂದು ತಿಂಗಳಿದೆ ಅನ್ನುವಾಗಲೇ ಸಿನಿಮಾ ಸುದೀಪ್ ಭರ್ಜರಿ ಪ್ರಚಾರ ಮಾಡಿದ್ದರು. ಅದಕ್ಕೆ ತಕ್ಕಂತೆ ಸಿನಿಮಾ ಸಖತ್ತಾಗೇ ಓಪನಿಂಗ್ ಪಡೆದುಕೊಂಡಿತ್ತು. ಆದರೆ, ಎರಡನೇ ದಿನ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡಿದ್ದರಿಂದ ವೀಕೆಂಡ್‌ ಕಲೆಕ್ಷನ್ ವಿಚಾರದಲ್ಲಿ ಬಗ್ಗೆ ಆತಂಕ ಎದುರಾಗಿತ್ತು. ಬಳಿಕ ನಿರ್ಮಾಪಕ ಜಾಕ್ ಮಂಜು ಕಲೆಕ್ಷನ್ ಕುಸಿತದ ಬಗ್ಗೆ ಕ್ಲಾರಿಟಿ ಕೊಟ್ಟ ಬಳಿಕ ಕಿಚ್ಚನ ಪ್ಯಾನ್ ನಿರಾಳರಾಗಿದ್ದಾರೆ. ಇನ್ನು ಮೂರನೇ ದಿನ ವಿಕ್ರಾಂತ್ ರೋಣ ಕಲೆಕ್ಷನ್ ಸ್ಟಡಿಯಾಗಿಯೇ ಇದೆ.

'ವಿಕ್ರಾಂತ್ ರೋಣ' 3ನೇ ದಿನದ ಕಲೆಕ್ಷನ್ ಎಷ್ಟು?

'ವಿಕ್ರಾಂತ್ ರೋಣ' 3ನೇ ದಿನದ ಕಲೆಕ್ಷನ್ ಎಷ್ಟು?

'ವಿಕ್ರಾಂತ್ ರೋಣ' ವಿಶ್ವದಾದ್ಯಂತ ಸುಮಾರು 9500 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ಸ್ಪೆಷಲ್‌ ಶೋಗಳೆಲ್ಲಾ ಸೇರಿ ಮೊದಲ ದಿನ ಶೋಗಳ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಮೊದಲ ದಿನ ಕಲೆಕ್ಷನ್ 35 ಕೋಟಿ ರೂ. ದಾಟಿತ್ತು. ಆದರೆ, ದಿನ ಕೊಂಚ ಇಳಿಕೆ ಕಂಡಿತ್ತು. ಹಾಗಂತ ಮೂರನೇ ದಿನ ಸ್ಟಡಿಯಾಗಿಯೇ ಇದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ವಿಕ್ರಾಂತ್ ರೋಣ' ಮೂರನೇ ದಿನ 25 ರಿಂದ 27 ಕೋಟಿ ರೂ. ಕಲೆ ಹಾಕಿದೆ ಎನ್ನಲಾಗಿದೆ.

'ವಿಕ್ರಾಂತ್ ರೋಣ' 3 ದಿನಗಳ ಗಳಿಕೆ ಹೀಗಿದೆ

ಮೊದಲ ದಿನ 35 ಕೋಟಿ ರೂ.
ಎರಡನೇ ದಿನ 25 ಕೋಟಿ ರೂ.
ಮೂರನೇ ದಿನ 25-27 ಕೋಟಿ ರೂ.
ಒಟ್ಟು 85 ಕೋಟಿ ರೂ.

 ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ?

ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ?

'ವಿಕ್ರಾಂತ್ ರೋಣ' ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಸಖತ್ತಾಗಿಯೇ ಸದ್ದು ಮಾಡುತ್ತಿದೆ. ಬೇರೆ ರಾಜ್ಯಗಳಲ್ಲಿ ನಿಧಾನವಾಗಿ ಟೇಕಾಫ್ ಆಗುತ್ತಿದೆ. 'ವಿಕ್ರಾಂತ್ ರೋಣ' ಆಂಧ್ರ ಹಾಗೂ ತೆಲಂಗಾಣದಲ್ಲಿ ರೆಸ್ಪಾನ್ಸ್ ಮಸ್ತ್ ಆಗಿದೆ. ಮೊದಲ ಆಂಧ್ರ-ತೆಲಂಗಾಣಲದಲ್ಲಿ 2.10 ಕೋಟಿ ರೂ., ಎರಡು ಮೂರು ದಿನವೂ ಎರಡೆರಡು ಕೋಟಿ ಕಲೆ ಹಾಕಿದೆ ಎನ್ನಲಾಗಿದೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಅಂದ್ಕೊಂಡಷ್ಟು ಕಲೆಕ್ಷನ್ ಆಗದೇ ಹೋದರೂ, ವೀಕೆಂಡ್‌ನಲ್ಲಿ ಪಿಕ್ ಆಗಿರೋ ಬಗ್ಗೆ ಮಾಹಿತಿ ಇದೆ.

ಈ ವಾರ 100 ಕೋಟಿ ರೂ ಫಿಕ್ಸ್ ?

ಈ ವಾರ 100 ಕೋಟಿ ರೂ ಫಿಕ್ಸ್ ?

ವಿಶ್ವದದಾದ್ಯಂತ 'ವಿಕ್ರಾಂತ್ ರೋಣ' ಗ್ರ್ಯಾಂಡ್ ರಿಲೀಸ್ ಆಗಿತ್ತು. ಹೀಗಾಗಿ ದೊಡ್ಡ ಮೊತ್ತದ ಗಳಿಕೆ ಕಲೆ ಹಾಕುತ್ತೆ ಎಂದೇ ನಿರೀಕ್ಷೆ ಮಾಡಲಾಗಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ವಿಕ್ರಾಂತ್ ರೋಣ' ಈ ವಾರಕ್ಕೆ 100 ಕೋಟಿ ರೂ. ಗಡಿ ದಾಟಬಹುದು ಎಂಬ ಲೆಕ್ಕಾಚಾರವಿದೆ. ಈಗಾಗಲೇ 80 ಕೋಟಿ ರೂ. ಕಲೆ ಹಾಕಿದೆ. ಮೊದಲ ವೀಕೆಂಡ್‌ 'ವಿಕ್ರಾಂತ್ ರೋಣ'ಗೆ ಹೆಚ್ಚು ಲಾಭ ತಂದುಕೊಟ್ಟರೆ, ಮುಂದೆ ಬರುವ ವೀಕ್‌ ಡೇಸ್‌ನಲ್ಲಿ 'ವಿಕ್ರಾಂತ್ ರೋಣ' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುವ ಸಾಧ್ಯತೆ ಇದೆ.

More from Filmibeat

English summary
Kichcha Sudeep Starrer Vikrant Rona Day 3 Box Office Collection Report Worldwide, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X