'ವಿಕ್ರಾಂತ್ ರೋಣ' ಟ್ರೈಲರ್‌ಗೆ ಮುಹೂರ್ತ ಇಟ್ಟ ಕಿಚ್ಚ: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಹಬ್ಬ!

ಆಗೊಂದು ಈಗೊಂದು ಚಿಕ್ಕ ತುಣುಕುಗಳನ್ನು ಬಿಟ್ಟು ಕಿಚ್ಚನ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸುತ್ತಲೇ ಇದೆ ಚಿತ್ರತಂಡ. ಕಿಚ್ಚ ಲುಕ್ ತೋರಿಸಿ, ಜಾಕ್ವೆಲಿನ್ ಫರ್ನಾಂಡೀಸ್ ಸಾಂಗ್ ಬಿಟ್ಟು ಅಭಿಮಾನಿಗಳನ್ನು ಕೆರಳಿಸಿದ್ದೂ ಆಗಿದೆ. ಇವೆಲ್ಲದರ ಮಧ್ಯೆ ಸುದೀಪ್ ಅಭಿಮಾನಿಗಳಿಗೆ ಟ್ರೈಲರ್ ಯಾವಾಗ ರಿಲೀಸ್ ಆಗುತ್ತೋ? ಕಾದು ಕೂತಿದ್ದರು. ಫ್ಯಾನ್ಸ್ ತಲ್ಲಣವನ್ನು ಅರಿತ ಕಿಚ್ಚ ಟ್ರೈಲರ್ ಬಿಡುಗಡೆಗೆ ಮುಹೂರ್ತವಿಟ್ಟಿದ್ದಾರೆ.

ಯೆಸ್, ಇಷ್ಟು ದಿನ ಇದೇ ಟ್ರೈಲರ್‌ಗಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಕಾದು ಕೂತಿದ್ದರು. ಅದರಂತೆ ಸಿನಿಮಾ ಟ್ರೈಲರ್ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ. ಸ್ವತ: ಕಿಚ್ಚ ಸುದೀಪ್ ಟ್ರೈಲರ್ ರಿಲೀಸ್ ಮಾಡುವ ಡೇಟ್‌ ಅನ್ನೂ ರಿಲೀಸ್ ಮಾಡಿದ್ದಾರೆ.

'ವಿಕ್ರಾಂತ್ ರೋಣ' ಇದೇ ಜೂನ್ 23 ರಂದು ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈ ಖುಷಿ ವಿಷಯವನ್ನು ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಟ್ರೈಲರ್‌ಗಾಗಿ ಕಾದು ಕೂತಿದ್ದಾರೆ.

'ವಿಕ್ರಾಂತ್ ರೋಣ' ಬಹುಭಾಷೆಯ ಟ್ರೈಲರ್

'ವಿಕ್ರಾಂತ್ ರೋಣ' ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾ ಬಗ್ಗೆನೂ ದೇಶದಾದ್ಯಂತ ಕ್ರೇಜ್ ಹೆಚ್ಚಾಗುತ್ತಿದೆ. ಕಿಚ್ಚನ ಈ ಬಹುನಿರೀಕ್ಷಿತ ಸಿನಿಮಾದ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಯಾಗುತ್ತಿದೆ. ಇಲ್ಲಿವರೆಗೂ ಟೀಸರ್ ಹಾಗೂ ಸಾಂಗ್‌ನಿಂದ ಕ್ರೇಜ್ ದುಪ್ಪಟ್ಟಾಗಿತ್ತು. ಈಗ ಟ್ರೈಲರ್ ಅದ್ಯಾವ ಮಟ್ಟಕ್ಕೆ ಕ್ರೇಜ್ ಹುಟ್ಟಾಕುತ್ತೆ ಅನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿದೆ.

ಟ್ರೈಲರ್‌ನಲ್ಲಿ ಏನಿರುತ್ತೆ?

ಟ್ರೈಲರ್‌ನಲ್ಲಿ ಏನಿರುತ್ತೆ?

'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಸಿನಿಪ್ರಿಯರು ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇಲ್ಲಿವರೆಗೂ ಕೇವಲ ಕಿಚ್ಚನ ಝಲಕ್ ಅಷ್ಟೇ ನೋಡಿರುವ ಸಿನಿಪ್ರಿಯರಿಗೆ ಟ್ರೈಲರ್‌ ಮೇಲೆ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಕಿಚ್ಚನ ಫ್ಯಾಂಟಸಿ ವರ್ಲ್ಡ್‌ ಹೇಗಿರುತ್ತೆ? ಟ್ರೈಲರ್‌ನಲ್ಲಿ ಯಾವ್ಯಾವ ನಟ-ನಟಿಯರು ಬರಬಹುದು? ಆಕ್ಷನ್ ಹೇಗಿರುತ್ತೆ? ಡೈಲಾಗ್ ಇರುತ್ತಾ? ಇಂತಹದ್ದೇ ಒಂದಿಷ್ಟು ಕುತೂಹಲಕ್ಕೆ ಇನ್ನೊಂದು ವಾರದಲ್ಲಿ ತೆರೆಬೀಳಲಿದೆ.

ಟ್ರೈಲರ್‌ನಲ್ಲಿ ಸಿನಿಮಾ ಭವಿಷ್ಯ!

ಟ್ರೈಲರ್‌ನಲ್ಲಿ ಸಿನಿಮಾ ಭವಿಷ್ಯ!

'ವಿಕ್ರಾಂತ್ ರೋಣ' ಸಿನಿಮಾದ ಟ್ರೈಲರ್ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ. ಐದು ಭಾಷೆಗಳಲ್ಲಿ ಟ್ರೈಲರ್ ಯಾವ ಮಟ್ಟಕ್ಕೆ ಸದ್ದು ಮಾಡುತ್ತೆ ಅನ್ನುವುದೇ ಸದ್ಯಕ್ಕೆ ದೊಡ್ಡ ಪ್ರಶ್ನೆಯಾಗಿದೆ. ಈಗಾಗಲೇ 'ವಿಕ್ರಾಂತ್ ರೋಣ' ಟೀಸರ್ ಹಾಗೂ ರಾ ರಾ ರಕ್ಕಮ್ಮ ಸಾಂಗ್‌ನಿಂದ ಕ್ರೇಜ್ ದುಪ್ಪಟ್ಟಾಗುವಂತೆ ಮಾಡಿದೆ. ಈಗ ಬಿಡುಗಡೆಯಾಗುವ ಟ್ರೈಲರ್ ಕೂಡ ಅಷ್ಟೇ ಸದ್ದು ಮಾಡಬೇಕಿದೆ. ಟ್ರೈಲರ್ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದರೆ, ಸಿನಿಮಾ ಅರ್ಧಕ್ಕರ್ಧ ಗೆದ್ದಂತೆ.

Recommended Video

ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಕನಸು ಕಂಡಿದ್ದ ಸತೀಶ್ ವರ್ಜಾ ಮರ್ಡರ್ ! | Sathish Vajra | Filmibeat
ವಿಕ್ರಾಂತ್ ರೋಣ 3ಡಿಯಲ್ಲಿ ರಿಲೀಸ್

ವಿಕ್ರಾಂತ್ ರೋಣ 3ಡಿಯಲ್ಲಿ ರಿಲೀಸ್

'ವಿಕ್ರಾಂತ್ ರೋಣ' ಸಿನಿಮಾದ ಮತ್ತೊಂದು ಹೈಲೈಟ್ ಇದೆ. ಈ ಸಿನಿಮಾ 3ಡಿಯಲ್ಲಿ ರಿಲೀಸ್ ಆಗುತ್ತಿದೆ. ಬಹಳ ದಿನಗಳ ಬಳಿಕ ಕನ್ನಡದಲ್ಲಿ 3ಡಿ ಸಿನಿಮಾವೊಂದು ಬಿಡುಗಡೆಯಾಗಿತ್ತಿದೆ. ಈ ಕಾರಣಕ್ಕೆ ಕನ್ನಡದ ಪ್ರೇಕ್ಷಕರಿಗೆ ಈ ಸಿನಿಮಾ ಅದ್ಭುತ ಅನುಭವ ನೀಡಬಹುದು. ಸಿನಿಮಾ ಸೂಪರ್‌ ಆಗಿ ಇದ್ದರೆ, ಪ್ರೇಕ್ಷಕರು 3 ಡಿ ನೋಡಲು ಮುಗಿಬೀಳಬಹುದು. 'ರಂಗಿತರಂಗ' ಸಿನಿಮಾ ಬಗ್ಗೆ ಅನುಪ್ ಭಂಡಾರಿ ನಿರ್ದೇಶನದ ಸಿನಿಮಾ ಸದ್ದು ಮಾಡುತ್ತಿದೆ. ನಿರೂಪ್ ಭಂಡಾರಿ, ನಿತಾ ಅಶೋಕ್ ಹಾಗೂ ರವಿಶಂಕರ್ ತೆರೆ ಮೇಲೆ ಅದ್ಯಾವ ಮೋಡಿ ಮಾಡಲಿದ್ದಾರೆ ಅಂತ ನೋಡುವ ತವಕ ಅಂತೂ ಇದ್ದೇ ಇದೆ.

More from Filmibeat

English summary
Kichcha Sudeep Starrer Vikrant Rona Trailer Release Date Announced, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X