'ವಿಕ್ರಾಂತ್ ರೋಣ' 3Dಯಲ್ಲಿ ರಿಲೀಸ್ ಆಗಲ್ಲ ಅಂದೋರಿಗೆ ಜಾಕ್ ಮಂಜು ತಿರುಗೇಟು!
ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾಗಳು ಹೇಗಿರುತ್ತೆ ಅನ್ನೋದು ಇಡೀ ಜಗತ್ತಿಗೆ ತೋರಿಸಿದ್ದಾರೆ. ಈಗ ಇನ್ನೊಂದು ಹೆಜ್ಜೆ ಮುಂದಿಡುವುದಕ್ಕೆ 'ವಿಕ್ರಾಂತ್ ರೋಣ' ಸಜ್ಜಾಗಿ ನಿಂತಿದೆ. ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾವೊಂದು 3Dಯಲ್ಲಿ ಬಿಡುಗಡೆಯಾಗುತ್ತಿದೆ.
ಈಗಾಗಲೇ 3ಡಿಯಲ್ಲಿ ಹಲವು ಸಿನಿಮಾ ಬಂದಿವೆ. ಇವು ಪ್ರೇಕ್ಷಕರ ಕಣ್ಣುಗಳಿಗೆ ವಿಸ್ಮಯ ಅಂತಲೇ ಅನಿಸಿವೆ. ಇಂತಹದ್ದೇ ಪ್ರಯತ್ನಕ್ಕೆ ಕನ್ನಡ ಚಿತ್ರರಂಗ ಕೂಡ ಕೈ ಹಾಕಿತ್ತು. ಪ್ರೇಕ್ಷಕರು 3ಡಿಯಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿತ್ತು. ಆದ್ರೀಗ ಯಾರೂ 3ಡಿ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಾಡುವ ಸಾಹಸಕ್ಕೆ ಕೈ ಹಾಕಿರಲಿಲ್ಲ.

ಜಾಕ್ ಮಂಜು ಕಿಡಿ
'ವಿಕ್ರಾಂತ್ ರೋಣ' ಬಿಡುಗಡೆಗೆ ಸಜ್ಜಾದಲ್ಲಿಂದ 3ಡಿಯಲ್ಲಿ ರಿಲೀಸ್ ಮಾಡುವುದಾಗಿ ಹೇಳುತ್ತಲೇ ಬಂದಿದೆ. ಆದರೆ, ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಎನ್ನುವಾಗಲೇ, ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಶುರುಮಾಡಿದ್ದರಂತೆ. ಈ ವಿಷಯ ಗಮನಕ್ಕೆ ಬಂದ ಕೂಡಲೇ ಜಾಕ್ ಮಂಜು ಅಂತವರ ಬಗ್ಗೆ ಕಿಡಿಕಾರಿದ್ದಾರೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.

ಸಿನಿಮಾ ಬಗ್ಗೆ ಕಿಡಿಗೇಡಿಗಳ ಅಪಪ್ರಚಾರ
'ವಿಕ್ರಾಂತ್ ರೋಣ' ರಿಲೀಸ್‌ಗೆ ಇನ್ನೇನು 3 ದಿನಗಳು ಬಾಕಿ ಉಳಿದಿವೆಯಷ್ಟೇ. ಈ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು 'ವಿಕ್ರಾಂತ್ ರೋಣ' 3ಡಿಯಲ್ಲಿ ರಿಲೀಸ್ ಆಗುವುದಿಲ್ಲ ಅಂತ ಅಪಪ್ರಚಾರ ಮಾಡುತ್ತಿದ್ದರಂತೆ. ಅಂತಹವ್ರಿಗೆ ಜಾಕ್ ಮಂಜು ತಿರುಗೇಟು ನೀಡಿದ್ದಾರೆ. "ಸಿನಿಮಾ 3ಡಿಯಲ್ಲಿಯೇ ಬಿಡುಗಡೆಯಾಗುತ್ತೆ. ಆದರೆ, ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ತಾಂತ್ರಿಕ ಕಾರಣದಿಂದ ತಡವಾಗಿ ಬಿಡುಗಡೆಯಾಗುತ್ತೆ ಅಷ್ಟೆ. ಊರ್ವಶಿಯಲ್ಲಿ 3ಡಿ ಗ್ಲಾಸ್ ಇಲ್ಲ. ಅದಕ್ಕಾಗಿ ಕಾಯುತ್ತಿದ್ದಾರೆ. 5 ದಿನಗಳ ಬಳಿಕ ಬಿಡುಗಡೆ ಮಾಡುತ್ತೇವೆ. ಅಲ್ಲಿವರೆಗೂ 2ಡಿಯಲ್ಲಿ ರಿಲೀಸ್ ಆಗುತ್ತೆ." ಎಂದಿದ್ದಾರೆ.

3Dಯಲ್ಲಿಯೇ ಹೆಚ್ಚು ಸ್ಕ್ರೀನ್‌ನಲ್ಲಿ ರಿಲೀಸ್
'ವಿಕ್ರಾಂತ್ ರೋಣ' ಹೇಳಿ-ಕೇಳಿ ಪ್ಯಾನ್ ಇಂಡಿಯಾ ಸಿನಿಮಾ. ಆರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. "3ಡಿಯಲ್ಲಿಯೇ ಹೆಚ್ಚು ಸಿನಿಮಾ ಬಿಡುಗಡೆಯಾಗುತ್ತಿದೆ. ಹಿಂದಿ ಭಾಷೆಯಲ್ಲಿ ಶೇ. 90ರಷ್ಟು 3ಡಿಯಲ್ಲಿಯೇ ಬಿಡುಗಡೆಯಾಗುತ್ತಿದೆ. ಅಂದ್ರೆ, ಸುಮಾರು 900 ಸ್ಕ್ರೀನ್‌ಗಳಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ." ಎಂದು ನಿರ್ಮಾಪಕ ಜಾಕ್ ಮಂಜು ಮಾಹಿತಿ ನೀಡಿದ್ದಾರೆ. ಈ ಕಾರಣಕ್ಕೆ ಈ ಸಿನಿಮಾ 3ಡಿಯ ಬಿಡುಗಡೆಯಾಗುತ್ತಿರುವ ಕನ್ನಡದ ಅತೀ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಎನ್ನಬಹುದು.

ಅಡ್ವಾನ್ಸ್ ಬುಕಿಂಗ್ ಆರಂಭ
'ವಿಕ್ರಾಂತ್ ರೋಣ' ಸಿನಿಮಾ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಹಲವೆಡೆ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ನಿನ್ನೆಯಿಂದ ಕರ್ನಾಟಕದ ಸಿಂಗಲ್ ಸ್ಕ್ರೀನ್‌ಗಳಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿತ್ತು. ನಾಳೆ (ಜುಲೈ 26)ರಿಂದ ಮಲ್ಟಿಪ್ಲೆಕ್ಸ್‌ನಲ್ಲಿಯೂ 'ವಿಕ್ರಾಂತ್ ರೋಣ' ಸಿನಿಮಾ ಅಡ್ವಾನ್ಸ್ ಬುಕಿಂಗ್ ಶುರುವಾಗಲಿದೆ. ನಿರ್ಮಾಪಕರೇ ನೀಡಿರುವ ಮಾಹಿತಿ ಪ್ರಕಾರ, ವಿಶ್ವದಾದ್ಯಂತ ಸುಮಾರು 800ಕ್ಕೂ ಅಧಿಕ ಶೋಗಳು ಅಡ್ವಾನ್ಸ್ ಬುಕಿಂಗ್ ಆಗಿವೆ.

3ಡಿ ಸಿನಿಮಾಗಾಗಿ ಒಲವು
'ವಿಕ್ರಾಂತ್ ರೋಣ' ಸಿನಿಮಾ 2ಡಿಗಿಂತ ಹೆಚ್ಚಾಗಿ 3ಡಿ ಕಡೆಗೆ ಪ್ರೇಕ್ಷಕರು ಒಲವು ಹೆಚ್ಚಿದೆ. ಅಡ್ವಾನ್ಸ್ ಬುಕಿಂಗ್ ಓಪನ್ ಆದಲ್ಲಿಂದ 3ಡಿಯಲ್ಲಿ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅಡ್ವಾನ್ಸ್ ಬುಕಿಂಗ್ ಟಿಕೆಟ್ ತುಂಬಾನೇ ಫಾಸ್ಟ್ ಆಗಿ ಬುಕ್ ಆಗುತ್ತಿದೆ ಎಂದು ಜಾಕ್ ಮಂಜು ಮಾಹಿತಿ ನೀಡಿದ್ದಾರೆ. ಇದೇ ವೇಳೆ 'ವಿಕ್ರಾಂತ್ ರೋಣ' 3ಡಿಯಲ್ಲಿ ರಿಲೀಸ್ ಆಗುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವವರಿಗೂ ಅಂಕಿ ಸಂಖ್ಯೆಗಳ ಮೂಲಕ ಟಕ್ಕರ್ ಕೊಟ್ಟಿದ್ದಾರೆ. ಅಂದ್ಹಾಗೆ ಕರ್ನಾಟಕದಲ್ಲಿ ಸುಮಾರು 400ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು,ವಿಶ್ವದಾದ್ಯಮತ 3200ಕ್ಕೂ ಹೆಚ್ಚು ಸ್ಕೀನ್‌ಗಳಲ್ಲಿ ರಿಲೀಸ್ ಆಗಲಿದೆ.


Click it and Unblock the Notifications











