ಸುಶಾಂತ್ ಸಿಂಗ್ ಸಾವಿಗೆ ಸೋಲು ಕಾರಣವಲ್ಲ, ಬೇರೇನೋ ಇದೆ: ಕಿಚ್ಚ ಸುದೀಪ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಇಡೀ ಭಾರತೀಯ ಚಿತ್ರರಂಗದಲ್ಲಿ ವಿಷಾದದ ಛಾಯೆ ಮೂಡಿಸಿದೆ. ಸುಶಾಂತ್ ಅವರದು ಖಿನ್ನತೆಯ ಕಾರಣದಿಂದ ಆಗಿರುವ ಸಾವಲ್ಲ. ಅದರ ಹಿಂದೆ ಬೇರೆಯದೇ ಕೈವಾಡ ಮತ್ತು ಸಂಚು ನಡೆದಿದೆ ಎಂಬ ಅನುಮಾನಗಳಿವೆ. ಈ ಕಾರಣದಿಂದ ಸಿಬಿಐ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಲೇ ಇದೆ.
Recommended Video
ಸುಶಾಂತ್ ಆತ್ಮಹತ್ಯೆ ಪ್ರಕರಣದ ಸುತ್ತ ಅನೇಕ ತರ್ಕಗಳು ಹುಟ್ಟಿಕೊಂಡಿವೆ. ಸುಶಾಂತ್ ಬಾಲಿವುಡ್ ಸಿನಿಮಾಗಳಲ್ಲಿ ಈಗಾಗಲೇ ನೆಲೆ ಕಂಡು ಯಶಸ್ಸಿನ ಮುಖ ನೋಡಿರುವವರು. ತಾವು ಇಷ್ಟಪಟ್ಟು ಆರಿಸಿಕೊಂಡ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದವರು. ಎಲ್ಲರೊಂದಿಗೆ ಚೆನ್ನಾಗಿದ್ದ ಅವರು ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ? ಅದರ ಹಿಂದೆ ಬೇರೆಯದೇ ಕಾರಣಗಳಿರಬೇಕು ಎಂದು ಅಭಿಮಾನಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಸುಶಾಂತ್ ಸಾವಿಗೆ ಬೇರೆ ಕಾರಣಗಳಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಓದಿ...

ಸೆಳೆಯುತ್ತಿದ್ದ ಸುಶಾಂತ್ ನಗು
ಹಿಂದಿ ಚಿತ್ರರಂಗದ ವೆಬ್ ಸೈಟ್ ಒಂದಕ್ಕೆ ವಿಡಿಯೋ ಸಂದರ್ಶನ ನೀಡಿರುವ ಕಿಚ್ಚ ಸುದೀಪ್, ಸುಶಾಂತ್ ಸಾವಿನ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್ ಅವರದು ಸದಾ ನಗುವ ಮುಖ. ಅವರ ಮುಖದಲ್ಲಿ ಒಂದು ತೀವ್ರತೆ ಇತ್ತು. ಅದು ಪ್ರತಿಯೊಬ್ಬರನ್ನೂ ಸೆಳೆಯುತ್ತಿತ್ತು ಎಂದಿದ್ದಾರೆ.

ಯಶಸ್ವಿ ನಟನಾಗಿದ್ದರಿಂದ ಇಷ್ಟಪಡುತ್ತಿದ್ದೆ
ಸುಶಾಂತ್ ಸಿಂಗ್ ನಾನು ಬಹಳ ಮೆಚ್ಚಿಕೊಂಡ ನಟರಲ್ಲಿ ಒಬ್ಬರು. ನಾನು ಯಾರನ್ನಾದರೂ ಇಷ್ಟಪಡುತ್ತೇನೆ ಎಂದರೆ ಅವರು ಬಹಳ ಯಶಸ್ವಿಯಾಗಿರಲೇಬೇಕು. ಅವರು ಆಗಲೇ ಬಹಳ ಯಶಸ್ವಿಯಾಗಿದ್ದರು. ಯಶಸ್ವಿಯಾಗಿರದೆ ಹೋದರೆ ನಾವು ಅವರ ಬಗ್ಗೆ ಹೇಗೆ ತಿಳಿದುಕೊಳ್ಳಲು ಸಾಧ್ಯ? ಎಂದು ಸುಶಾಂತ್ ಕುರಿತು ಸುದೀಪ್ ಹೇಳಿದ್ದಾರೆ.

ಬೇರೆ ಏನೋ ಇದೆ
ಸುಶಾಂತ್ ವೃತ್ತಿ ಬದುಕಿನಲ್ಲಿ ಯಶಸ್ಸು ಗಳಿಸಿದ್ದರು. ಹೀಗಾಗಿ ವೈಫಲ್ಯಕ್ಕಿಂತಲೂ ಬೇರೆ ಯಾವುದೋ ಸಂಗತಿ ಅವರನ್ನು ತೀವ್ರವಾಗಿ ಕಾಡುತ್ತಿತ್ತು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ ಎಂಬುದಾಗಿ ಸುದೀಪ್ ತಿಳಿಸಿದ್ದಾರೆ.

ನಟ ಎಂದು ಯಾರೂ ಮೆಚ್ಚಿಕೊಳ್ಳುವುದಿಲ್ಲ
ಸುಶಾಂತ್ ಅವರನ್ನು ಪ್ರವಾಸವೊಂದರ ಸಂದರ್ಭದಲ್ಲಿ ಬ್ಯಾಂಕಾಂಕ್ ಏರ್‌ಪೋರ್ಟ್‌ನಲ್ಲಿ ನಮ್ಮ ಕುಟುಂಬ ಭೇಟಿ ಮಾಡಿತ್ತು. ಅವರು ಯಾವಾಗಲೂ ನಗುತ್ತಿದ್ದರು. ಎಲ್ಲರೂ ಅವರ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಇದೊಂದು ಸತ್ಯ, ನಟ ಎಂಬ ಕಾರಣಕ್ಕೆ ಯಾರೂ ಹೋಗಿ ಫೋಟೊ ತೆಗೆಸಿಕೊಳ್ಳುವುದಿಲ್ಲ. ಜನರು ಆತನನ್ನು ಇಷ್ಟಪಡುವ ಕಾರಣಕ್ಕೆ, ಮೆಚ್ಚಿಕೊಂಡಿರುವ ಕಾರಣಕ್ಕೆ ಹೋಗಿ ಮಾತನಾಡಿಸಿ ಫೋಟೊ ತೆಗೆಸಿಕೊಳ್ಳುತ್ತಾರೆ.

ಏನು ನಡೆದಿದೆಯೋ ಗೊತ್ತಿಲ್ಲ
ನಿಮ್ಮನ್ನು ಯಾರಾದರೂ ಇಷ್ಟಪಟ್ಟು ಹತ್ತಿರ ಬಂದು ನಿಮ್ಮ ಜತೆ ಫೋಟೊ ತೆಗೆಸಿಕೊಳ್ಳಬೇಕು ಎಂದು ಕೇಳಿದರೆ ಅವರು ನಿಮ್ಮನ್ನು ಬಹಳ ಮೆಚ್ಚಿಕೊಂಡಿರಬೇಕು. ಸುಶಾಂತ್ ಬಹಳ ಯಶಸ್ವಿ ನಟ ಎಂದು ನಂಬುತ್ತೇನೆ. ಬಾಲಿವುಡ್‌ನಲ್ಲಿ ತುಂಬಾ ಜನ ಪ್ರತಿ ದಿನ ಬರುತ್ತಾರೆ. ಅವರಿಗೆ ಹೋಲಿಸಿದರೆ ಸುಶಾಂತ್ ಬಹಳ ಯಶಸ್ಸು ಕಂಡ ನಟ. ಆದರೆ ನಾನು ಇದರ ಹೊಳಹೊಕ್ಕು ಮಾತನಾಡಲು ಬಯಸುವುದಿಲ್ಲ. ಏಕೆಂದರೆ ಅಲ್ಲಿ ಏನಾಗಿದೆಯೋ ನನಗೆ ತಿಳಿದಿಲ್ಲ. ಆದರೆ ಬೇರೆ ಏನೋ ಸಮಸ್ಯೆ ಇತ್ತು ಎನಿಸುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications











