ಇಂಡಿಯನ್ ರೇಸಿಂಗ್ ಲೀಗ್ ಮುಕ್ತಾಯ; ಮೂರನೇ ಸ್ಥಾನ ಪಡೆದ ಕಿಚ್ಚ ಸುದೀಪ್ ತಂಡ

ಇಂಡಿಯನ್ ರೇಸಿಂಗ್ ಲೀಗ್ (IRL) ಅದ್ದೂರಿಯಾಗಿ ಆರಂಭಗೊಂಡಿತ್ತು. ನವಿ ಮುಂಬೈ ರೇಸ್‌ ಮುಂದಿನ ಸೀಸನ್‌ಗೆ ಮುಂದೂಡಲ್ಪಟ್ಟಿರುವ ಕಾರಣ ಗೋವಾ ಸ್ಟ್ರೀಟ್ ರೇಸ್‌ ಈ ಸೀಸನ್‌ಗೆ ಅಂತ್ಯ ಹಾಡಲಾಗಿದೆ. ನವಿ ಮುಂಬೈ ರೇಸ್ ಆಗಸ್ಟ್ 2026 ರಿಂದ ಆರಂಭವಾಗಲಿದೆ. ಇಂಡಿಯನ್ ರೇಸಿಂಗ್ ಲೀಗ್‌ನ ಮುಂದಿನ ಆವೃತ್ತಿಯಲ್ಲಿ ಇದು ಕೂಡ ಒಂದು ಸುತ್ತಾಗಿ ಸೇರ್ಪಡೆಗೊಳ್ಳಲಿದೆ.

ಯಶಸ್ವಿಯಾಗಿ ಮುಕ್ತಾಯಗೊಂಡ ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಕಿಚ್ಚನ ತಂಡ ಕಿಚ್ಚಸ್ ಕಿಂಗ್ಸ್ ಬೆಂಗಳೂರು ತಂಡ ಕೂಡ ಭಾಗವಹಿಸಿತ್ತು. ಈ ರೋಚಕ ಸೀಸನ್‌ನಲ್ಲಿ ಮುಕ್ತಾಯಗೊಂಡ ಬಳಿಕ 2025-2026ರ ಸಾಲಿನ ಚಾಂಪಿಯನ್‌ಗಳು ಯಾರು ಅನ್ನೋದು ಇಂಡಿಯನ್ ರೇಸಿಂಗ್ ಲೀಗ್ ಘೋಷಣೆ ಮಾಡಿದೆ. ಇದರಲ್ಲಿ ಟಾಪ್ 3 ಸ್ಥಾನದಲ್ಲಿ ಕಿಚ್ಚ ಸುದೀಪ್ ಒಡೆತನದ ಕಿಚ್ಚಸ್ ಕಿಂಗ್ಸ್ ಬೆಂಗಳೂರು ತಂಡ ಕೂಡ ಸೇರಿಕೊಂಡಿದೆ.

Kichcha Sudeep team Kichcha s Kings Bengaluru finished 3rd place in Indian Racing league

2025-26ನೇ ಸೀಸನ್‌ನಲ್ಲಿ ಒಟ್ಟು ನಾಲ್ಕು ಸುತ್ತುಗಳು ನಡೆದಿವೆ. ಈ ಮೋಟಾರ್ ಸ್ಪೋರ್ಟ್ಸ್ ಸ್ಪರ್ಧೆ ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದ್ದವು. ಕೊಯಮತ್ತೂರಿನಲ್ಲಿ ಎರಡು ರೌಂಡ್, ಬಳಿಕ ಚೆನ್ನೈನಲ್ಲಿ ಒಂದು ರೌಂಡ್ ಹಾಗೂ ಗೋವಾದ ಸ್ಟ್ರೀಟ್ ರೇಸ್‌ನಲ್ಲಿ ನಡೆದಿದೆ. ಇಲ್ಲಿಗೆ ಈ ಬಾರಿಯ ಸೀಸನ್ ಅನ್ನು ಮುಕ್ತಾಯ ಮಾಡಲಾಗಿದೆ. ಇದರಲ್ಲಿ ಮೊದಲ ಮೂರು ತಂಡಗಳು ಯಾವುವು ಎಂದು ನೋಡುವುದಾರೇ,

ಗೋವಾ ಅಸಸ್ ಜೆಎ ರೇಸಿಂಗ್ ತಂಡ ಏಳು ರೇಸ್‌ಗಳಲ್ಲಿ ಐದು ಅತ್ಯುತ್ತಮ ಪ್ರದರ್ಶನ ನೀಡಿತ್ತು. ಈ ಮೂಲಕ ಒಟ್ಟು 141 ಅಂಕಗಳನ್ನು ಗಳಿಸಿತ್ತು. ಬಳಿಕ ಸ್ಪೀಡ್ ಡೆಮನ್ಸ್ ದೆಹಲಿ ತಂಡವು 135 ಅಂಕ ಗಳಿಸಿದರೆ, ಕಿಚ್ಚ ಸುದೀಪ್ ಮಾಲೀಕತ್ವದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು 115 ಅಂಕಗಳನ್ನು ಪಡೆದುಕೊಂಡಿತ್ತು. ಈ ಮೂಲಕ ಕ್ರಮವಾಗಿ ಗೋವಾ ಅಸಸ್ ಜೆಎ ರೇಸಿಂಗ್ ಮೊದಲ ಸ್ಥಾನ, ಸ್ಪೀಡ್ ಡೆಮನ್ಸ್ ದೆಹಲಿ 2ನೇ ಸ್ಥಾನ ಹಾಗೂ ಕಿಚ್ಚ ಸುದೀಪ್ ಅವರ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು 3ನೇ ಸ್ಥಾನ ಪಡೆದುಕೊಂಡಿದೆ.

Also Read
ಸುದೀಪ್ ಹೊಸ ಸಾಹಸ; ಕಾರ್ ರೇಸ್ ತಂಡದ ಮಾಲೀಕರಾದ ನಟ ಕಿಚ್ಚ ಸುದೀಪ್
ಸುದೀಪ್ ಹೊಸ ಸಾಹಸ; ಕಾರ್ ರೇಸ್ ತಂಡದ ಮಾಲೀಕರಾದ ನಟ ಕಿಚ್ಚ ಸುದೀಪ್

ಇನ್ನು ಕಾರ್ಸ್ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಗೋವಾ ಅಸಸ್ ಜೆಎ ರೇಸಿಂಗ್‌ನ ಕಾರ್ ಜೋಡಿಯಾದ ರಾವುಲ್ ಹೈಮನ್ ಮತ್ತು ಫ್ಯಾಬಿಯೆನ್ ವೋಲ್ವೆಂಡ್ 101 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಹಾಗೇ ಕೋಲ್ಕತ್ತಾ ರಾಯಲ್ ಟೈಗರ್ಸ್‌ನ ಸೋಹಿಲ್ ಶಾ ಮತ್ತು ಥಾಮಸ್ ಕ್ಯಾನಿಂಗ್ 81 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸ್ಪೀಡ್ ಡೆಮನ್ಸ್ ದೆಹಲಿಯ ಅಲಿಸ್ಟರ್ ಯೂಂಗ್ ಮತ್ತು ಕೈಟ್ಲಿನ್ ವುಡ್ 75 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Kichcha Sudeep team Kichcha s Kings Bengaluru finished 3rd place in Indian Racing league

ಇಂಡಿಯನ್ ರೇಸಿಂಗ್ ಲೀಗ್ ಮುಕ್ತಾಯಗೊಂಡ ಈ ಸಮಯದಲ್ಲಿ ರೇಸಿಂಗ್ ಪ್ರೊಮೋಷನ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಅಖಿಲೇಶ್ ರೆಡ್ಡಿ "ಈ ಆವೃತ್ತಿಯು ಭಾರತೀಯ ಮೋಟಾರ್‌ಸ್ಪೋರ್ಟ್ ಪ್ರತಿಭೆಗಳ ಜೊತೆಗೆ ಸಿನಿಮಾ ಮತ್ತು ಕ್ರೀಡಾ ಲೋಕದ ಗಣ್ಯರನ್ನು ಒಗ್ಗೂಡಿಸಿದೆ. ಈ ಮೂಲಕ ಅಭೂತಪೂರ್ವ ಯಶಸ್ಸು ಕಂಡಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಗೋವಾ ಸ್ಟ್ರೀಟ್ ರೇಸ್‌ನಲ್ಲಿ ನಡೆದ ಜಿದ್ದಾಜಿದ್ದಿನ ಹಣಾಹಣಿಯ ಬಳಿಕ ಅಂತಿಮ ಅಂಕಪಟ್ಟಿಯಲ್ಲಿ ಗೋವಾ ಅಸಸ್ ಜೆಎ ರೇಸಿಂಗ್ ತಂಡ 141 ಅಂಕ, ಸ್ಪೀಡ್ ಡೆಮನ್ಸ್ ದೆಹಲಿ ತಂಡವು 135 ಅಂಕ, ಕಿಚ್ಚ ಸುದೀಪ್ ಮಾಲೀಕತ್ವದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು 115 ಅಂಕ, ಕೋಲ್ಕತ್ತಾ ರಾಯಲ್ ಟೈಗರ್ಸ್ 107 ಅಂಕ, ಹೈದರಾಬಾದ್ ಬ್ಲ್ಯಾಕ್ ಬರ್ಡ್ಸ್ 86 ಅಂಕ ಮತ್ತು ಚೆನ್ನೈ ಟರ್ಬೊ ರೈಡರ್ಸ್ 75 ಅಂಕಗಳನ್ನು ಪಡೆದಿವೆ.

ಈ ರೇಸಿಂಗ್ ಫೆಸ್ಟಿವಲ್‌ನಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್, ಸೌರವ್ ಗಂಗೂಲಿ, ನಾಗ ಚೈತನ್ಯ, ಕಿಚ್ಚ ಸುದೀಪ್ ಮತ್ತು ಡಾ. ಶ್ವೇತಾ ಸುದೀಪ್ ಆನಂದ್ ಅವರಂತಹ ಸೆಲೆಬ್ರೆಟಿಗಳು ತಂಡಗಳ ಮಾಲೀಕರಾಗಿ ಭಾಗವಹಿಸಿದ್ದರು. ಮುಂದಿನ ಸೀಸನ್ ಆಗಸ್ಟ್ 2026ರಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಯಶಸ್ಸಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಒಟ್ಟು ಆರು ಸುತ್ತುಗಳೊಂದಿಗೆ ಮತ್ತಷ್ಟು ವಿಸ್ತಾರವಾಗಿ ನಡೆಯಲಿದೆ. ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಭಾರತದ ಮೋಟಾರ್‌ಸ್ಪೋರ್ಟ್ ಕ್ರಾಂತಿಯ ವೇಗವನ್ನು ಮತ್ತಷ್ಟು ಹೆಚ್ಚಿಸಿದೆ.

English summary
Kichcha Sudeep team Kichcha’s Kings Bengaluru finished 3rd place in Indian Racing league.
Read more about: sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X