ಹುಚ್ಚ ವೆಂಕಟ್ ಚಿಕಿತ್ಸೆಗೆ ನೆರವು ನೀಡಲು ಮುಂದಾದ ಕಿಚ್ಚ ಸುದೀಪ್

ಮಾನಸಿಕ ಸಮತೋಲನ ಕಳೆದುಕೊಂಡು ಅಲೆದಾಡುವಾಗ ಕಿಡಿಗೇಡಿಗಳಿಂದ ಹಲ್ಲೆಗೆ ಒಳಗಾಗಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರ ಪರವಾಗಿ ಇತ್ತೀಚೆಗೆ ಕೆಲವು ನಟರು ಧ್ವನಿ ಎತ್ತಿದ್ದರು. ಅವರ ಮೇಲೆ ಹಲ್ಲೆ ನಡೆಸಬೇಡಿ ಎಂದು ಮನವಿ ಮಾಡಿದ್ದರು. ಹಲ್ಲೆ ನಡೆಸಿದವರ ವಿರುದ್ಧ ದೂರು ಸಹ ನೀಡಲಾಗಿತ್ತು.

Recommended Video

Sudeep has come forward to help Huccha Venkat | Kiccha Sudeep | Huccha Venkat

ಹುಚ್ಚ ವೆಂಕಟ್ ಅವರಿಗೆ ಕರುಣೆ ತೋರಿ ಅನೇಕರು ಊಟ ಮತ್ತು ಹಣ ನೀಡಿ ಸಂತೈಸಿದಿದ್ದರು. ಅವರನ್ನುಮರಳಿ ಮನೆಗೆ ಕಳುಹಿಸಲು ಸಹಾಯ ಮಾಡಿದ್ದರು. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಅವರ ಮಾನಸಿಕ ಆರೋಗ್ಯ ಸ್ಥಿಮಿತತೆ ಕಳೆದುಕೊಂಡ ಪರಿಣಾಮ ಅವರು ಅನೇಕ ಬಾರಿ ಅತಿರೇಕದ ವರ್ತನೆ ತೋರಿಸಿದ್ದರು. ಕೆಲವೆಡೆ ಹಲ್ಲೆ ನಡೆಸಿದ್ದರು. ಹಾಗೆಯೇ ಕೆಲವರನ್ನು ಪೀಡಿಸಿದ್ದರು.

ಅವರ ಸ್ಥಿತಿಯನ್ನು ಬಳಸಿಕೊಂಡ ಅನೇಕರು ಅವರೊಂದಿಗೆ ಸೆಲ್ಫಿ ವಿಡಿಯೋ ತೆಗೆದು ತಮಾಷೆ ಮಾಡಿದರೆ ಇನ್ನು ಕೆಲವರು ಹಲ್ಲೆನಡೆಸುವ ಮೂಲಕ ಅಮಾನವೀಯತೆ ಪ್ರದರ್ಶಿಸಿದ್ದರು. ಮುಂದೆ ಓದಿ...

ನೆರವಿನ ಹಸ್ತ ಚಾಚಿದ ಸುದೀಪ್

ನೆರವಿನ ಹಸ್ತ ಚಾಚಿದ ಸುದೀಪ್

ಸಂಕಷ್ಟದಲ್ಲಿರುವ ಹುಚ್ಚ ವೆಂಕಟ್ ಅವರಿಗೆ ಸಹಾಯ ಮಾಡಲು ನಟ ಕಿಚ್ಚ ಸುದೀಪ್ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಹುಚ್ಚ ವೆಂಕಟ್ ಅವರಿಗೆ ಚಿಕಿತ್ಸೆ ಮತ್ತು ಸಾಂತ್ವನದ ಅಗತ್ಯವಿದೆ. ಅದನ್ನು ನೀಡಲು ಸುದೀಪ್ ಬಯಸಿದ್ದಾರೆ.

ಜನರು ಕರುಣೆ ತೋರಿಸಿ

ಜನರು ಕರುಣೆ ತೋರಿಸಿ

ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಈ ಬಗ್ಗೆ ಮಾಹಿತಿ ನೀಡಿದೆ. ಕೆಲವು ದಿನಗಳಿಂದ ಮಾನಸಿಕವಾಗಿ ಜರ್ಜರಿತವಾಗಿ ಓಡಾಡುತ್ತಿದ್ದ ಹುಚ್ಚ ವೆಂಕಟ್ ಅವರ ಮೇಲೆ ದೈಹಿಕವಾಗಿ ಹಲ್ಲೆಯಾಗುತ್ತಿದ್ದು, ಸಾರ್ವಜನಿಕರು ಸ್ವಲ್ಪ ಸಂಯಮ ಮತ್ತು ಕರುಣೆ ತೋರಿಸಬೇಕು ಎಂದು ಸೊಸೈಟಿ ಮನವಿ ಮಾಡಿದೆ.

ಚಿಕಿತ್ಸೆ ನೀಡಲು ನಿರ್ಧಾರ

ಚಿಕಿತ್ಸೆ ನೀಡಲು ನಿರ್ಧಾರ

ಹುಚ್ಚ ವೆಂಕಟ್ ಅವರಿಗೆ ಚಿಕಿತ್ಸೆ ಮತ್ತು ಸಾಂತ್ವನ ನೀಡಲು ಕಿಚ್ಚ ಸುದೀಪ್ ನಿರ್ಧರಿಸಿದ್ದು, ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಗೆ ಅನುಮತಿ ನೀಡಿದ್ದಾರೆ. ಹುಚ್ಚ ವೆಂಕಟ್ ಅವರು ಯಾವುದೇ ಸ್ಥಳದಲ್ಲಿ ಕಂಡು ಬಂದರೆ 63603 34455 ಸಂಖ್ಯೆಗೆ ಕರೆ ಮಾಡಿ ತಿಳಿಸಿ. ಮಾನವೀಯತೆ ಗೆಲ್ಲುವ ಹಾಗೆ ಮಾಡಿ ಎಂದು ಕೋರಿದ್ದಾರೆ.

ಹಲ್ಲೆ ಮಾಡಿದ್ದ ಯುವಕರು

ಹಲ್ಲೆ ಮಾಡಿದ್ದ ಯುವಕರು

ಶ್ರೀರಂಗಪಟ್ಟಣದಲ್ಲಿ ಕೆಲವು ಯುವಕರು ಇತ್ತೀಚೆಗೆ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ನಟ ಜಗ್ಗೇಶ್ ಮತ್ತು ದುನಿಯಾ ವಿಜಯ್ ಖಂಡಿಸಿದ್ದರು. ಟೀ ಅಂಗಡಿ ಮಾಲೀಕರೊಬ್ಬರು ನೀಡಿದ್ದ ದೂರಿನ ಅನ್ವಯ ಯುವಕ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಮಾನವೀಯತೆ ಪ್ರದರ್ಶಿಸಿದ್ದರು

ಮಾನವೀಯತೆ ಪ್ರದರ್ಶಿಸಿದ್ದರು

ಹಲ್ಲೆಯ ವಿಡಿಯೋ ನಡುವೆಯೇ ಕೆಲವರು ವೆಂಕಟ್ ಅವರಿಗೆ ತಮ್ಮ ಕಯ್ಯಾರೆ ಊಟ ಮಾಡಿಸಿದ ಮತ್ತು ಮಹಿಳೆಯೊಬ್ಬರು ಕಾಲಿನ ಮೇಲೆ ಮಲಗಿಸಿಕೊಂಡು ಸಾಂತ್ವನ ಹೇಳುವ ವಿಡಿಯೋಗಳು ಜನರಲ್ಲಿ ಇನ್ನೂ ಮಾನವೀಯತೆಯ ಸೆಲೆ ಇದೆ ಎಂಬುದನ್ನು ಸಾಬೀತುಪಡಿಸಿದ್ದವು.

More from Filmibeat

English summary
Kichcha Sudeep has decided to help Huccha Venkat's treatment, who is suffering from mental issues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X