ವಿಕ್ರಾಂತ್ ರೋಣ: ಓವರ್‌ಸೀಸ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆದ ಮೊದಲ ಕನ್ನಡ ಚಿತ್ರ

ಕನ್ನಡ ಸಿನಿಮಾ ವರ್ಲ್ಡ್‌ ವೈಡ್ ಮಾರುಕಟ್ಟೆಯಲ್ಲಿ ಬೇಜಾನ್ ಸದ್ದು ಮಾಡುತ್ತಿವೆ. 'ಕೆಜಿಎಫ್ 2' ಸಿನಿಮಾ ಬಳಿಕ ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' ಅಖಾಡಕ್ಕೆ ಇಳಿದಿದೆ. ಈಗಾಗಲೇ ಕನ್ನಡ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗಿದೆ.

ಕರ್ನಾಟಕ ಅಷ್ಟೇ ಅಲ್ಲ. ದೇಶ-ವಿದೇಶದಿಂದ 'ವಿಕ್ರಾಂತ್ ರೋಣ'ಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ 3ಡಿಯಲ್ಲಿ ಬರುತ್ತಿರುವ ಸಿನಿಮಾ ಆಗಿರುವುದರಿಂದ 'ವಿಕ್ರಾಂತ್ ರೋಣ' ಸಿನಿಪ್ರಿಯರ ಗಮನ ಸೆಳೆದಿದೆ. ಕಿಚ್ಚ ಸುದೀಪ್ ಹಾಗೂ ನಿರ್ದೇಶ ಅನುಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿ ನಿಂತಿದೆ.

'ವಿಕ್ರಾಂತ್ ರೋಣ' ಕರ್ನಾಟಕ ಅಷ್ಟೇ ಅಲ್ಲ. ವಿದೇಶದ ಮಾರುಕಟ್ಟೆಯಲ್ಲೂ ಭಾರೀ ಬೇಡಿಕೆ ಇದ್ದೂ, ಈಗಾಗಲೇ ಚಿತ್ರತಂಡ ಬ್ಯುಸಿನೆಸ್ ಕುದುರಿಸಿದೆ. ಮೂಲಗಳ ಪ್ರಕಾರ, ಓವರ್‌ಸೀಸ್ ಮಾರುಕಟ್ಟೆಯಲ್ಲಿ 'ವಿಕ್ರಾಂತ್ ರೋಣ' ದಾಖಲೆಯ ಮೊತ್ತಕ್ಕೆ ವ್ಯಾಪಾರವಾಗಿದ್ದು, ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆದ ಮೊದಲ ಕನ್ನಡ ಸಿನಿಮಾ ಆಗಿದೆ.

'ವಿಕ್ರಾಂತ್ ರೋಣ' ವಿದೇಶಿ ಹಕ್ಕು ಮಾರಾಟ

'ವಿಕ್ರಾಂತ್ ರೋಣ' ವಿದೇಶಿ ಹಕ್ಕು ಮಾರಾಟ

'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಇನ್ನು ಎರಡೂವರೆ ತಿಂಗಳು ಬಾಕಿ ಉಳಿದಿದೆ. ಆಗಲೇ ಸಿನಿಮಾದ ವ್ಯಾಪಾರ ಆರಂಭ ಆಗಿದೆ. ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ.

'ವಿಕ್ರಾಂತ್ ರೋಣ' 10 ಕೋಟಿಗೆ ಸೇಲ್

'ವಿಕ್ರಾಂತ್ ರೋಣ' 10 ಕೋಟಿಗೆ ಸೇಲ್

ಕನ್ನಡ ಸಿನಿಮಾಗಳ ಮಾರುಕಟ್ಟೆ ಈಗ ಗಗನಕ್ಕೇರಿದೆ. ಎಲ್ಲಾ ಚಿತ್ರರಂಗವೂ ಕನ್ನಡ ಸಿನಿಮಾ ಮೇಲೊಂದು ಕಣ್ಣಿಟ್ಟಿದೆ. 'ಕೆಜಿಎಫ್ 2' ದಾಖಲೆ ಗಳಿಕೆ ಬಳಿಕ 'ವಿಕ್ರಾಂತ್ ರೋಣ' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ. ಈ ಮೂಲಕ ವಿದೇಶಿ ಹಕ್ಕುಗಳು ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ 'ವಿಕ್ರಾಂತ್ ರೋಣ' ಪಾಲಾಗಿದೆ.

ಜಾಕ್ ಮಂಜು ಹೇಳಿದ್ದೇನು?

ಜಾಕ್ ಮಂಜು ಹೇಳಿದ್ದೇನು?

'ವಿಕ್ರಾಂತ್ ರೋಣ' ದುಬಾರಿ ಮೊತ್ತಕ್ಕೆ ಸೇಲ್ ಆಗಿದ್ದು, ನಿರ್ಮಾಪಕ ಜಾಕ್ ಮಂಜು ಪ್ರತಿಕ್ರಿಯಿಸಿದ್ದಾರೆ." ವಿಕ್ರಾಂತ್ ರೋಣ ಸಿನಿಮಾದ ಕಂಟೆಂಟ್ ಯೂನಿವರ್ಸಲ್ ಆಗಿರುತ್ತದೆ. ಈ ಮಾತನ್ನು ಆರಂಭದಿಂದಲೂ ಹೇಳಿಕೊಂಡು ಬಂದಿದ್ದೇನೆ. ಭಾವನೆಗಳು ಪ್ರಪಂಚದಾದ್ಯಂತ ಒಂದೇ ಸ್ವರ ಮತ್ತು ತಾಳದಲ್ಲಿ ಕೂರುತ್ತದೆ. ಈಗ ಆಗಿರುವ ಒಪ್ಪಂದವು ಅದಕ್ಕೆ ಉತ್ತಮ ಸಾಕ್ಷಿ. ಓವರ್‌ಸೀಸ್ ಸಿನಿಮಾ ಖರೀದಿಯ ಬಗ್ಗೆ ಅತ್ಯಂತ ಸಂತೋಷವಿದೆ." ಎಂದು ಹೇಳಿದ್ದಾರೆ. ಅಲ್ಲದೆ "ಇದು ಕನ್ನಡ ಚಿತ್ರದ ಮಟ್ಟಿಗೆ ದುಬಾರಿ ಮೊತ್ತವಾಗಿದ್ದು, ಇತರ ದಕ್ಷಿಣ ಭಾರತದ ಭಾಷೆಗಳಿಗೆ ಸಮಾನಾಗಿದೆ." ಎಂದು ಜಾಕ್ ಮಂಜು ಹೇಳಿದ್ದಾರೆ.

ವಿಶ್ವದಾದ್ಯಂತ 3Dಯಲ್ಲಿ ಬಿಡುಗಡೆ

ವಿಶ್ವದಾದ್ಯಂತ 3Dಯಲ್ಲಿ ಬಿಡುಗಡೆ

ಅನುಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾ. ಈ ಕಾರಣಕ್ಕೆ ಈ ಜೋಡಿ ಸ್ಯಾಂಡಲ್‌ವುಡ್‌ ಹೊಸ ಟ್ರೆಂಡ್ ಸೆಟ್ ಮಾಡುತ್ತಾ? ಅನ್ನುವ ಕುತೂಹಲವಂತೂ ಇದ್ದೇ ಇದೆ. 'ವಿಕ್ರಾಂತ್ ರೋಣ' ಸಿನಿಮಾ ಜುಲೈ 28 ರಂದು ವಿಶ್ವಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದ್ದು, ಸುದೀಪ್ ಜೊತೆ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Kichcha Sudeep Vikrant Rona Movie Overseas Rights Sold For Record Amount of 10 Cr, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X