ಸುದೀಪ್, ಕುಮಾರ್, ರಮೇಶ್ ನಡುವಿನ ವ್ಯವಹಾರವೇನು? ಹಳೇ ಪತ್ರ ರಿಲೀಸ್.. ಏನಿದು ಟ್ವಿಸ್ಟ್?

ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ಜಟಾಪಟಿ ಮುಂದುವರೆದಿದೆ. ಕಿಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇತ್ತ ನಿರ್ಮಾಪಕ ಕುಮಾರ್ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಕುಮಾರ್‌ಗೆ ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಿಚ್ಚ ಸುದೀಪ್ ನ್ಯಾಯಾಲಯದ ಮೆಟ್ಟಿಲೇರಿದ್ದಕ್ಕೆ ನಿರ್ಮಾಪಕ ಎಂಎನ್‌ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಫಿಲ್ಮ್ ಚೇಂಬರ್‌ನಲ್ಲಿ ಕೂತು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಆಹ್ವಾನ ನೀಡಿದ್ದೆವು. ಆದರೆ, ನ್ಯಾಯಾಲಯ ಮೊರೆ ಹೋಗಿದ್ದಾರೆ ಅನ್ನೋ ಆಕ್ರೋಶ ಕುಮಾರ್ ಹಾಗೂ ನಿರ್ಮಾಪಕರದ್ದು. ಈ ಸಂಬಂಧ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆ ನಡೆಯುತ್ತಿದೆ.

Kichcha Sudeep, MN Kumar, Ramesh Yadav

ಇನ್ನೊಂದು ಕಡೆ ಕಿಚ್ಚ ಸುದೀಪ್ ವಿರುದ್ಧ ಮತ್ತೊಬ್ಬ ನಿರ್ಮಾಪಕ ಅಖಾಡಕ್ಕೆ ಇಳಿದಿದ್ದಾರೆ. ಸುದೀಪ್‌ಗಾಗಿ 'ವಾಲಿ' ಸಿನಿಮಾ ನಿರ್ಮಾಣ ಮಾಡಿದ್ದ ರಮೇಶ್ ಯಾದವ್ 14 ವರ್ಷದ ಹಳೇ ಪತ್ರದೊಂದಿಗೆ ಹೊಸ ಆರೋಪ ಮಾಡಿದ್ದಾರೆ.

'ವಾಲಿ' ನಿರ್ಮಾಪಕನ ಎಂಟ್ರಿ

ಎಂಎನ್ ಕುಮಾರ್, ರೆಹಮಾನ್ ಬಳಿಕ ಮತ್ತೊಬ್ಬ ನಿರ್ಮಾಪಕ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇವರು ದಾಖಲೆ ಸಮೇತ ಬಂದಿರೋದು ವಿಶೇಷ. ಆದರೆ, ಈ ದಾಖಲೆ ಯಾವ ರೀತಿ ಪರಿಗಣನೆಗೆ ಬರುತ್ತೆ ಅನ್ನೋದು ಇನ್ನೋದು ಬೇರೆ ಮಾತು. ಅಸಲಿಗೆ ಇವರ ವಾದ ಏನು ಅಂದ್ರೆ, ಕಿಚ್ಚ ಸುದೀಪ್‌ಗೆ 'ವಾಲಿ' ಅನ್ನೋ ಸಿನಿಮಾ ಮಾಡಿದ್ದ ರಮೇಶ್ ಯಾದವ್ ಮತ್ತೊಂದು ಸಿನಿಮಾಗೆ ಅಡ್ವಾನ್ಸ್ ಕೊಟ್ಟಿದ್ದರು.

Kichcha Sudeep, MN Kumar, Ramesh Yadav

ಅಡ್ವಾನ್ಸ್ ಮಾಡಿದ ಬಳಿಕವೂ ಸುದೀಪ್ ಕಾಲ್‌ಶೀಟ್ ಕೊಟ್ಟಿರಲಿಲ್ಲ. ಹೀಗಾಗಿ ಅಂದು ರಮೇಶ್ ಯಾದವ್ ಅಸೋಸಿಯೇಷನ್ ಮೆಟ್ಟಿಲೇರಿದ್ದರು ಎನ್ನಲಾಗಿದೆ. ಆಗ ಸುದೀಪ್ 'ವೀರಪರಂಪರೆ' ಸಿನಿಮಾಗೆ ಕಮಿಟ್ ಆಗಿದ್ದರು. ಹೀಗಾಗಿ ಕಾಲ್‌ಶೀಟ್ ಸಿಕ್ಕಿರಲಿಲ್ಲ. ಈ ವೇಳೆ ಸುದೀಪ್ ನಿರ್ಮಾಪಕ ಕುಮಾರ್ ಅವರಿಂದ ಹಣ ಕೊಡಿಸಿದ್ದರು. ಆ ವೇಳೆ ಈ ಮೂವರ ನಡುವೆ ನಡೆದ ವ್ಯವಹಾರದ ಪತ್ರವನ್ನು ಇಂದು (ಜುಲೈ 18) ಬಿಡುಗಡೆ ಮಾಡಲಾಗಿದೆ.

46 ಲಕ್ಷ ರೂ. ಕಥೆಯೇನು?

ರಮೇಶ್ ಯಾದವ್ ಹೇಳುವಂತೆ ಸುದೀಪ್ ಡೇಟ್ಸ್ ಕೊಡದ ಹಿನ್ನೆಲೆಯಲ್ಲಿ 46 ಲಕ್ಷ ರೂ. ಹಣವನ್ನು ಸುದೀಪ್ ಅವರು ಕುಮಾರ್ ಅವರ ಕಡೆಯಿಂದ ಹಿಂತಿರುಗಿಸಿದ್ದರು. ಅಂದು ಈ ಮೂವರೊಂದಿಗೆ ನಡೆದ ವ್ಯವಹಾರವನ್ನು ರಮೇಶ್ ಯಾದವ್ ಬಿಚ್ಚಿಟ್ಟಿದ್ದಾರೆ.

"ಸುದೀಪ್ ಸರ್ ಜೊತೆ ವಾಲಿ ಸಿನಿಮಾ ಮಾಡಿದ್ದೀನಿ. ಅದಾದ್ಮೇಲೆ 2009ರಲ್ಲಿ ಇನ್ನೊಂದು ಸಿನಿಮಾ ಮಾಡ್ಬೇಕು ಅಂತ ಅಡ್ವಾನ್ಸ್ ಕೊಟ್ಟಿದ್ದೆ. ಸ್ಕ್ರಿಪ್ಟ್ ಫೈನಲ್ ಆಗಿಲ್ಲ ಅಂತ ಡಿಸ್ಕಷನ್ ನಡೆಯುತ್ತಲೇ ಇತ್ತು. ಆಗ ಕುಮಾರ್ ಅವರ 'ಕೆಂಚ' ಸಿನಿಮಾ ರಿಲೀಸ್ ಆಗಿತ್ತು. ಆ ಸಮಯದಲ್ಲಿ ಸುದೀಪ್ ಕಡೆಯಿಂದ ಬರಬೇಕಿದ್ದ 46 ಲಕ್ಷ ರೂ. ಕುಮಾರ್ ಸರ್ ತಂದು ಕೊಟ್ಟಿದ್ದರು" ಎಂದು ರಮೇಶ್ ಯಾದವ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಅವರು ಕೊಟ್ಟಿದ್ದು ಬಡ್ಡಿ ಅಲ್ಲ ಪ್ರಾಫಿಟ್

ಇತ್ತೀಚೆಗೆ ಜಾಕ್ ಮಂಜು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತಾಡಿದ್ದರು. ರಮೇಶ್ ಯಾದವ್‌ಗೆ ಬಡ್ಡಿ ಸಮೇತ ಹಣ ಹಿಂತಿರುಗಿಸಲಾಗಿದೆ ಎಂದಿದ್ದು, ಆ ಮಾತನ್ನು ಹಿಂತೆಗೆದುಕೊಳ್ಳಬೇಕು ಎಂದು ರಮೇಶ್ ಯಾದವ್ ಹೇಳಿದ್ದಾರೆ. ಈ ಸಂಬಂಧ ಅಂದು ನಿರ್ಮಾಪಕ ಕುಮಾರ್‌ಗೆ ಕೊಟ್ಟಿದ್ದ ಪತ್ರವನ್ನು ಶೇರ್ ಮಾಡಿದ್ದಾರೆ.

"ಮೊನ್ನೆ ಜಾಕ್ ಮಂಜು ಸರ್ ಏನ್ ಹೇಳಿದ್ರು ಅಂದ್ರೆ, ಬಡ್ಡಿ ಸೇರಿಸಿಕೊಟ್ಟು ಅಂತ. ಆ ಮಾತನ್ನು ಹಿಂತೆಗೆದುಕೊಳ್ಳಬೇಕು. ಯಾಕಂದ್ರೆ, ಜಾಕ್ ಮಂಜು ಸರ್‌ಗೆ ಅದು ಗೊತ್ತಿಲ್ಲ. ಅದು ಬಡ್ಡಿ ಅಲ್ಲ ಬ್ಯುಸಿನೆಸ್. ನಾನು ಕೊಟ್ಟಿದ್ದ ಹಣವನ್ನು ಅವರು ಬ್ಯುಸಿನೆಸ್ ಆಗಿ ಕನ್ವರ್ಟ್ ಮಾಡಿ, ಪ್ರಾಫಿಟ್‌ನಲ್ಲಿ ಶೇರ್ ಮಾಡಿದ್ರು. ಸುದೀಪ್‌ ಸರ್‌ಯಿಂದ ಬಡ್ಡಿ ಅಂತ ಬರಲಿ ಉತ್ತರ ಕೊಡ್ತೀನಿ. ಆದರೆ, ಜಾಕ್‌ ಮಂಜುಗೆ ಗೊತ್ತಿಲ್ಲದೆ ಬಂದಿರಬಹುದು ಅದಕ್ಕೆ ನಾನು ಉತ್ತರ ಕೊಡಲ್ಲ." ಎಂದು ರಮೇಶ್ ಯಾದವ್ ಹೇಳಿದ್ದಾರೆ.

More from Filmibeat

English summary
Kichcha Sudeep Vs Kumar Issue: Producer Ramesh Yadav Letter revealed, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X