ವ್ಹೀಲ್ ಚೇರ್ ರೋಮಿಯೋ ತಂಡದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಹೊಸಬರ ತಂಡಕ್ಕೆ ಕನ್ನಡದ ಸೂಪರ್‌ಸ್ಟಾರ್‌ಗಳು ಬೆಂಬಲ ನೀಡುತ್ತಲೇ ಬಂದಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಹೊಸ ಸಿನಿಮಾ ರಿಲೀಸ್ ಆದಾಗ ಆ ತಂಡಕ್ಕೆ ಹುರಿದುಂಬಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಈಗ 'ವ್ಹೀಲ್ ಚೇರ್ ರೋಮಿಯೋ' ತಂಡಕ್ಕೂ ಕೂಡ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
'ವ್ಹೀಲ್ ಚೇರ್ ರೋಮಿಯೋ' ಮೇ 27ರಂದು ರಿಲೀಸ್ ಆಗಿದ್ದು, ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಸಿನಿಮಾ ಪ್ರಿಯರ ಮನಸ್ಸನ್ನು ಸೆಳೆದುಕೊಂಡಿದೆ. ಟೈಟಲ್ ಸೂಚಿಸುವಂತೆ ನಾಯಕ ನಟನ ಬದುಕು 'ವ್ಹೀಲ್ ಚೇರ್ ರೋಮಿಯೋ' ಮೇಲೆಯೇ ನಡೆಯುತ್ತದೆ. ಇದರೊಳಗೊಂದು ನವೀರಾದ ಪ್ರೀತಿಯೂ ಹುಟ್ಟುತ್ತೆ. ಈ ಕಥೆಗೆ ಫಿದಾ ಆಗದವರಿಲ್ಲ. ಎಲ್ಲರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಪಾಸಿಟಿವ್ ಒಪಿನಿಯನ್ ಹೇಳುತ್ತಿದ್ದಾರೆ. ಇದೇ ಬೆನ್ನಲ್ಲೇ ಸಿನಿಮಾಗೆ ದೊಡ್ಡ ಸ್ಟಾರ್ ಹಾರೈಕೆ ಸಿಕ್ಕಿದೆ. ಅದು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.
ಕಿಚ್ಚ ಸುದೀಪ್ 'ವ್ಹೀಲ್ ಚೇರ್ ರೋಮಿಯೋ' ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ವ್ಹೀಲ್ ಚೇರ್ ರೋಮಿಯೋ' ಸಿನಿಮಾ ಇಡೀ ಟೀಂಗೆ ಶುಭವಾಗಲಿ. ಎಲ್ಲಾ ಕಡೆಯಿಂದಲೂ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಎಂದು ನಿರ್ದೇಶಕ ನಟರಾಜ್, ನಟಿ ಮಯೂರಿ, ನಟ ರಾಮ್ ಚೇತನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ನಟ ಸುದೀಪ್ ಹೊಸಬರು, ಸ್ಟಾರ್‌ಗಳು ಎಂಬುದನ್ನು ನೋಡುವುದಿಲ್ಲ. ಎಲ್ಲರಿಗೂ ಬೆಂಬಲವಾಗಿ ನಿಲ್ಲುತ್ತಾರೆ. ಸಿನಿಮಾ ಚೆನ್ನಾಗಿದ್ದರೆ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾ ಬೆಂಬಲ ಸೂಚಿಸುತ್ತಾರೆ. ಯಾರೇ ಆಡಿಯೋ ರಿಲೀಸ್‌ಗೆ ಕರೆದರು ಅಷ್ಟೆ, ಬೇರೆ ಏನನ್ನು ಯೋಚನೆ ಮಾಡುವುದಿಲ್ಲ. ಸಿನಿಮಾ ಇಂಡಸ್ಟ್ರಿ ಬೆಳೆಯಬೇಕೆಂಬುದನ್ನು ಯೋಚಿಸಿ, ಎಲ್ಲರಿಗೂ ತಮ್ಮ ಬೆಂಬಲ ನೀಡುತ್ತಾರೆ. ಕಿಚ್ಚನ ಸಪೋರ್ಟ್‌ಗೆ ಚಿತ್ರತಂಡ ಧನ್ಯವಾದ ಹೇಳಿದೆ.
'ವ್ಹೀಲ್ ಚೇರ್ ರೋಮಿಯೋ' ಒಂದು ವಿಭಿನ್ನ ಕಥೆಯನ್ನು ಹೊಂದಿರುವಂಥ ಸಿನಿಮಾ. ಈ ಸಿನಿಮಾದಲ್ಲಿ ನಾಯಕ ನಟ ಕೊನೆವರೆಗೂ 'ವ್ಹೀಲ್ ಚೇರ್ ಮೇಲೆಯೇ ಕುಳಿತು ಜೀವನ ಸಾಗಿಸುತ್ತಾನೆ. ಜೊತೆಗೆ ಕೈಕಾಲು ಸ್ವಾಧೀನ ಕಳೆದುಕೊಂಡ ಮಗನಿಗೆ ಮದುವೆ ಮಾಡಲು ಹೊರಟ ತಂದೆಯ ಸಾಹಸ ಹೇಗಿರುತ್ತದೆ. ಏನೆಲ್ಲಾ ಸಮಸ್ಯೆಗಳು ಎದುರಾಗಲಿದೆ. ಬಳಿಕ ಸಿಕ್ಕಂತ ಜ್ಯೂಲಿಯಟ್ ಜೊತೆಗೆ ಮದುವೆಯಾಗುತ್ತಾ ಎಂಬುದನ್ನೆಲ್ಲಾ ಥಿಯೇಟರ್‌ನಲ್ಲಿ ನೋಡಿದಾಗ ಸಿಗುವ ಮಜವೇ ಬೇರೆ.

ನಟರಾಜ್ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಪಡೆದುಕೊಂಡ ಅವರ ಅನುಭವ ಇಲ್ಲಿ ವರ್ಕೌಟ್ ಆಗಿರೋದು ಗೊತ್ತಾಗುತ್ತದೆ. ಪ್ರೇಕ್ಷಕರ ನಾಡಿಮಿಡಿತವನ್ನು ನಿರ್ದೇಶಕರು ಸರಿಯಾಗಿಯೇ ಅರ್ಥೈಸಿಕೊಂಡಿದ್ದಾರೆ.


Click it and Unblock the Notifications











