ಬಿಗ್‌ಬಾಸ್ ಹತ್ತೂ ಸೀಸನ್ ಯಶಸ್ಸು ಕಾಣಲು ಕಾರಣ ಕಿಚ್ಚ ಸುದೀಪ್ ಅಲ್ಲ; ಅವರ ಅಮ್ಮ ಸರೋಜಾ.. ಹೇಗೆ ಗೊತ್ತೇ?

ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಇಂದು (ಅಕ್ಟೋಬರ್ 20) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಸುದೀಪ್ ಕುಟುಂಬದಲ್ಲಿ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ತಾಯಿಯ ಅಗಲಿಕೆಯ ನೋವಿನಲ್ಲೇ ಕಿಚ್ಚ ಸುದೀಪ್ ಅಂತ್ಯ ಸಂಸ್ಕಾರವನ್ನು ನಡೆಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಸಂಬಂಧ ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಕಿಚ್ಚ ಸುದೀಪ್ ಅವರ ತಾಯಿ ಚಿಕಿತ್ಸೆ ಸ್ಪಂದಿಸಲಿಲ್ಲ. ತನ್ನ ಏಳಿಕೆಯ ಪ್ರತಿಯೊಂದು ಹಂತದಲ್ಲಿಯೂ ಜೊತೆಗಿದ್ದ ತಾಯಿಯ ಅಗಲಿಕೆಯ ಶಾಕ್‌ನಿಂದ ಇನ್ನೂ ಹೊರ ಬಂದಿಲ್ಲ.

Kichcha Sudeepa mother is the real reason behind Big Boss Success Know an interesting story

ಕಿಚ್ಚ ಸುದೀಪ್ ನಟಿಸುವ ಸಿನಿಮಾ ಆಗಿರಲಿ. ಇಲ್ಲ ಬಿಗ್‌ ಬಾಸ್ ನಿರೂಪಣೆಯಾಗಿಯೇ ಇರಲಿ. ಕಿಚ್ಚ ಸುದೀಪ್‌ ಕೆಲಸಕ್ಕೆ ಒಳ್ಳೆಯ ವಿಮರ್ಶಕಿಯಾಗಿ ಇದ್ದಿದ್ದು ಅವರ ತಾಯಿ ಸರೋಜಾ ಸಂಜೀವ್. ಅವರ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತಿದ್ದರು. ತಪ್ಪು ಹೆಜ್ಜೆ ಇಟ್ಟಲ್ಲಿ ತಿದ್ದಿ ಹೇಳುತ್ತಿದ್ದರು. ಇಂಟ್ರೆಸ್ಟಿಂಗ್ ವಿಷಯ ಅಂದರೆ, ಕಿಚ್ಚ ಸುದೀಪ್‌ ನಡೆಸಿಕೊಡುವ ವೀಕೆಂಡ್ ಎಪಿಸೋಡ್‌ಗಳು ಯಶಸ್ಸು ಕಾಣುವುದರ ಹಿಂದೆ ಅವರ ಅಮ್ಮನ ಪಾತ್ರ ದೊಡ್ಡದಿದೆ.

ಕಿಚ್ಚ ಸುದೀಪ್ ಬಿಗ್‌ ಬಾಸ್ ಸೀಸನ್ ಶುರುವಾದಾಗ ವೀಕೆಂಡ್‌ನಲ್ಲಿ ವಾರ ಪಂಚಾಯ್ತಿ ನಡೆಸಿಕೊಡುತ್ತಾರೆ. ಕಿಚ್ಚನ ಮಾತುಗಳನ್ನು ಕೇಳುವುದಕ್ಕೆ ಅಂತಲೇ ವೀಕ್ಷಕರು ಟಿವಿ ನೋಡುತ್ತಾ ಕೂರುತ್ತಾರೆ. ಬಿಗ್‌ಬಾಸ್ 10ನೇ ಸೀಸನ್ ಅತ್ಯುತ್ತಮ ಸೀಸನ್ ಎನಿಸಿಕೊಂಡಿತ್ತು. 11ನೇ ಸೀಸನ್‌ನ ಎರಡು ವಾರ ಕೂಡ ಕಿಚ್ಚ ಸುದೀಪ್ ಮಾತುಗಳಿಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Kichcha Sudeepa mother is the real reason behind Big Boss Success Know an interesting story

ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಇಷ್ಟೊಂದು ಎಫೆಕ್ಟೀವ್ ಆಗಿ ನಡೆಸಿಕೊಡುವುದರ ಹಿಂದೆ ಇದ್ದಿದ್ದು ಅವರ ಅಮ್ಮ. ಈ ವಿಷಯವನ್ನು ಬಿಗ್‌ ಬಾಸ್ ಕನ್ನಡ ಮಾಜಿ ವಿನ್ನರ್ ಪ್ರಥಮ್ ರಿವೀಲ್ ಮಾಡಿದ್ದಾರೆ. ಒಮ್ಮೆ ಕಿಚ್ಚ ಸುದೀಪ್ ಮನೆಗೆ ಪ್ರಥಮ್ ಹೋಗಿದ್ದಾಗ ಅವರ ಅಮ್ಮ ಹೇಳಿದ ಮಾತನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದರು. ಆ ವೇಳೆ ಕಿಚ್ಚನ ಅಮ್ಮ ಏನು ಹೇಳಿದ್ದರು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕಿಚ್ಚ ಸುದೀಪ್ ಬಿಗ್‌ ಬಾಸ್ ಸೆಟ್ಟಿಗೆ ಶುಕ್ರವಾರ ಮಧ್ಯಾಹ್ನ ಬರುತ್ತಾರೆ. ಬಂದ ಕೂಡಲೇ ಬಿಗ್‌ಬಾಸ್ ತಂಡದೊಂಡಿಗೆ ಕ್ರಿಕೆಟ್ ಆಡುತ್ತಾರೆಂದು ಹೇಳಿದ್ದಾರೆ. "ಶುಕ್ರವಾರ ಸುದೀಪ್ ಸರ್ ಬಿಗ್‌ ಬಾಸ್ ಮನೆಗೆ ಬರುತ್ತಾರೆ. ವಿಶ್ವದ ಯಾವ ಮೂಲೆಯಲ್ಲಿ ಇದ್ದರೂ ಶುಕ್ರವಾರ ಮಧ್ಯಾಹ್ನ ಬರುತ್ತಾರೆ. 12.30 ಇಲ್ಲವೇ ಒಂದು ಗಂಟೆ ಅಷ್ಟೊತ್ತಿಗೆ ರೀಚ್ ಆಗುತ್ತಾರೆ. ಯಾರಿಗೂ ಗೊತ್ತಿಲ್ಲ. ಸುದೀಪ್ ಸರ್ ಬಂದ ಕೂಡಲೇ ಏನು ಮಾಡುತ್ತಾರೆ ಗೊತ್ತಾ? ಕ್ರಿಕೆಟ್ ಆಡುತ್ತಾರೆ. ಅಲ್ಲಿನ ಟೆಕ್ನಿಷಿಯನ್ ಜೊತೆ ಒಂದರಿಂದ ಎರಡು ಗಂಟೆ ಕ್ರಿಕೆಟ್ ಆಡುತ್ತಾರೆ. ಒಬ್ಬ ಸಾಮಾನ್ಯ ವ್ಯಕ್ತಿ ತರ ಇರುತ್ತಾರೆ." ಎಂದು ಪ್ರಥಮ್ ಹೇಳಿದ್ದಾರೆ.

ಕ್ರಿಕೆಟ್ ಆಡಿದ ಬಳಿಕ ಒಂದೆರಡು ಗಂಟೆ ರೆಸ್ಟ್ ಮಾಡುತ್ತಾರೆ. ಆ ಮೇಲೆ ಬಿಗ್ ಬಾಸ್‌ ವಿಷಯದತ್ತ ಮುಖ ಮಾಡುತ್ತಾರೆ. "10 ಸೀಸಸ್‌ವರೆಗೂ ಇಷ್ಟು ಚೆನ್ನಾಗಿ ಬರುವುದಕ್ಕೆ ಯಾರು ಕಾರಣ ಗೊತ್ತಾ? ಎಲ್ಲರೂ ಅಂದಕೊಳ್ಳುತ್ತಾರೆ. ಆದರೆ, ಸುದೀಪ್ ಸರ್ ಅಲ್ಲ. ಒಬ್ಬರು ವೀಕ್ಷಕರಿದ್ದಾರೆ. ಅವರು ಸೂಪರ್ ಸುದೀಪ್. ಸುದೀಪ್ ಅವರಿಗಿಂತಲೂ ಬೆಸ್ಟ್. ಅದು ಸುದೀಪ್ ಅವರ ಅಮ್ಮ." ಎನ್ನುತ್ತಾ ಪ್ರಥಮ್.

ಕಿಚ್ಚ ಸುದೀಪ್ ಮನೆಗೆ ಪ್ರಥಮ್ ಒಮ್ಮೆ ಹೋಗಿದ್ದಾಗ ಅವರ ಅಮ್ಮನೊಂದಿಗೆ ಮಾತಿಗೆ ಇಳಿದಿದ್ದರು. ಆ ವೇಳೆ ಕಿಚ್ಚ ಸುದೀಪ್ ನಿರೂಪಣೆಯ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಅದನ್ನು ಪ್ರಥಮ್ ನೆನಪಿಸಿಕೊಂಡಿದ್ದಾರೆ. "ಒಮ್ಮೆ ಅವರ ಮನೆಗೆ ಹೋದಾಗ ಸುದೀಪ್ ಸರ್ ಅವರ ಅಮ್ಮ ಹೇಳಿದರು. ನಿಮಗೆ ಗೊತ್ತಾ ಪ್ರಥಮ್ ನಾನು ಎಪಿಸೋಡ್ ನೋಡುವಾಗ ಯಾರ ಮೇಲೂ ಒಲವಿಟ್ಟುಕೊಂಡು ನೋಡಬಾರದು. ನಾನು ಶೋ ನೋಡುತ್ತೇನೆ. ಅದನ್ನು ಪ್ರಾಮಾಣಿಕವಾಗಿ ನನ್ನ ಮಗನಿಗೆ ಹೇಳುತ್ತೇನೆ. ಅದನ್ನು ಕೇಳಿಕೊಂಡು ಶನಿವಾರ ನಮ್ಮ ಮಗ ಪಂಚಾಯ್ತಿ ಮಾಡುತ್ತಾನೆ ಎಂದು ಹೇಳಿದ್ದರು. ಬಿಗ್ ಬಾಸ್ ಸಕ್ಸಸ್ ಆಗುವುದಕ್ಕೆ ಸುದೀಪ್ ಅವರ ಅಮ್ಮನೂ ಕಾರಣ." ಎಂದು ಪ್ರಥಮ್ ಅವರು ಹೇಳಿದ್ದಾರೆ.

More from Filmibeat

English summary
The Untold Story of Kichcha Sudeepa mother role in Bigg Boss Kannada;
Read more about: sudeep pratham filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X