"ಧಮ್ ಹೊಡೆಯೋದು ಕಮ್ಮಿ ಮಾಡ್ಬೇಕಲೇ"; 'ಜಗ್ಗುದಾದ'ಗೆ ಟಾಂಗ್ ಕೊಟ್ಟರೇ ಕಿಚ್ಚ? ಮತ್ತೆ ಶುರು ಡೈಲಾಗ್ ವಾರ್?
ಡಿಸೆಂಬರ್‌ನಲ್ಲಿ ಸಿನಿಮಾ ಮಂದಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದ್ಕಡೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ರಿಲೀಸ್ ರೆಡಿಯಾಗುತ್ತಿದೆ. ಅದೇ ಇನ್ನೊಂದು ಕಡೆ ಕ್ರಿಸ್‌ಮಸ್‌ಗೆ ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. 'ಮಾರ್ಕ್'ಗೆ ಕಾಂಪಿಟೇಷನ್ ಕೊಡುವುದಕ್ಕೆಂದು '45' ಸಜ್ಜಾಗುತ್ತಿದೆ. ಈ ಮೂರೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡೇ ಮಾಡುತ್ತವೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ವಿಶೇಷ ಅಂದರೆ, ಈ ಮೂರು ಸಿನಿಮಾಗಳ ಟ್ರೈಲರ್‌ಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಈಗಾಗಲೇ 'ಡೆವಿಲ್' ಟ್ರೈಲರ್ ರಿಲೀಸ್ ಆಗಿದೆ. ಇಂದು (ಡಿಸೆಂಬರ್ 7) ಕಿಚ್ಚ ಸುದೀಪ್ 'ಮಾರ್ಕ್' ಟ್ರೈಲರ್ ರಿಲೀಸ್ ಆಗಿದೆ. ಇನ್ನು ಕರ್ನಾಟಕದಾದ್ಯಂತ ಅದ್ಧೂರಿಯಾಗಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ '45' ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ.

ಸದ್ಯ ಬಿಡುಗಡೆಯಾಗಿರುವ ಎರಡು ಸಿನಿಮಾಗಳ ಟ್ರೈಲರ್‌ಗಳಲ್ಲಿ ಕೆಲವು ಡೈಲಾಗ್‌ಗಳು ಪಂಚಿಂಗ್ ಆಗಿವೆ. ತಮ್ಮ ಅಭಿಮಾನಿಗಳನ್ನು ಮೆಚ್ಚಿಸುವುದಕ್ಕೆಂದೇ ಮಾಸ್ ಡೈಲಾಗ್ ಇಡಲಾಗಿದೆ. ಎರಡೂ ಸಿನಿಮಾಗಳ ಟ್ರೈಲರ್‌ಗಳ ಡೈಲಾಗ್‌ಗಳು ಟ್ರಿಗರ್ ಆಗುವಂತಿವೆ. ಅದರಲ್ಲೂ 'ಮಾರ್ಕ್' ಟ್ರೈಲರ್ ಕೊನೆಯಲ್ಲಿ ಬರುವ ಒಂದು ಡೈಲಾಗ್ ಸೀದಾ 'ಜಗ್ಗುದಾದ'ಗೆ ತಿರುಗೇಟು ಕೊಟ್ಟಂತೆ ಇದೆ. ಸದ್ಯ ಕಿಚ್ಚನ ಫ್ಯಾನ್ಸ್ ಈ ಡೈಲಾಗ್ ಅನ್ನು ಇಟ್ಕೊಂಡು ಟ್ರೆಂಡ್ ಮಾಡುತ್ತಿದ್ದಾರೆ.
'ಮಾರ್ಕ್' ಟ್ರೈಲರ್ ಹೇಗಿದೆ?
'ಮಾರ್ಕ್' ಅಂದರೆ ಮಾಸ್ ಅನ್ನೋದು ಈ ಟ್ರೈಲರ್ ಸುಳಿವು ಕೊಟ್ಟಿದೆ. ಕಿಚ್ಚ ಸುದೀಪ್ ಮಾಸ್ ಎಂಟ್ರಿನೂ ಅಷ್ಟೇ ಸೊಗಸಾಗಿದೆ. ಆಕ್ಷನ್, ಸಸ್ಪೆನ್ಸ್, ಸೆಂಟಿಮೆಂಟ್ ಎಲ್ಲವೂ ಇದೆ. ಇದರೊಂದಿಗೆ ಸಖತ್ ಇಂಟ್ರೆಸ್ಟಿಂಗ್ ಅಂತ ಅನಿಸೋದು ಡೈಲಾಗ್‌ಗಳು. ಕಿಚ್ಚನ ಕೈಯಿಂದ ಈ ಸಿನಿಮಾದಲ್ಲಿ ಸಾಕಷ್ಟು ಪಂಚಿಂಗ್ ಡೈಲಾಗ್‌ಗಳನ್ನು ಹೇಳಿಸಿರೋದು ವಿಶೇಷ. ಅದರಲ್ಲೊಂದು ಡೈಲಾಗ್ ಅನ್ನು ಅವರ ಫ್ಯಾನ್ಸ್ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ.
'ಮಾರ್ಕ್' ಟ್ರಿಗರಿಂಗ್ ಡೈಲಾಗ್ ಏನು?
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾದ ಟ್ರೈಲರ್‌ನ ಕೊನೆಯಲ್ಲೊಂದು ಡೈಲಾಗ್ ಇದೆ. ಒಂದು ಅಕ್ಷನ್ ಸೀನ್‌ಗಳ ಬಳಿಕ ಹಿನ್ನಲೆಯಲ್ಲಿ "ಸರ್..ನೀವು ಓಕೆನಾ..?" ಅನ್ನೋ ಡೈಲಾಗ್ ಬರುತ್ತೆ. ಅದಕ್ಕೆ ಕಿಚ್ಚ ಸುದೀಪ್ "ಧಮ್ ಹೊಡೆಯೋದು ಕಮ್ಮಿ ಮಾಡ್ಬೇಕಲೈ" ಎಂದು ಮಾಸ್ ಡೈಲಾಗ್ ಹೊಡೆಯುತ್ತಾರೆ. ಇದೇ ಡೈಲಾಗ್ ಅನ್ನು ಅವರ ಅಭಿಮಾನಿಗಳು ಹೆಚ್ಚೆದ್ದು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಇದನ್ನು ದರ್ಶನ್ 'ಜಗ್ಗುದಾದ' ಸಿನಿಮಾದ ಡೈಲಾಗ್‌ಗೂ ಹೋಲಿಕೆ ಮಾಡುತ್ತಿದ್ದಾರೆ.

'ಜಗ್ಗುದಾದ' ಡೈಲಾಗ್ ಏನು?
ದರ್ಶನ್ ಹಾಗೂ ಸೃಜನ್ ಲೋಕೇಶ್ ನಟಿಸಿದ 'ಜಗ್ಗುದಾದ' ಸಿನಿಮಾದಲ್ಲೂ ಒಂದು ಮಾಸ್ ಡೈಲಾಗ್ ಇದೆ. ಖಳನಾಯಕ "ನೀನೀಗ ನನ್ನ ಚಕ್ರವ್ಯೂಹದ ಸುಳಿಯಲ್ಲಿ ನಿಂತಿದ್ದೀಯ. ಇಲ್ಲಿ ನನ್ನ ಹವಾನೇ ನಡೆಯೋದು." ಎಂಬ ಡೈಲಾಗ್ ಇದೆ. ಅದಕ್ಕೆ ದರ್ಶನ್ "ಹೇ ಮರಿ ನಾನು ಆ ಸುಳಿಯಲ್ಲೇ ಈಜು ಕಲಿತಿರೋನು. ಹವಾ ಹೀಟ್ ಇರೋವರೆಗೂ ಮಾತ್ರ ಇರುತ್ತೆ. ಉಸಿರು ಇರೋವರೆಗೂ ಹೆಸರು ಇರಬೇಕು ಅಂತ ಅಂದ್ರೆ, ಧಮ್ ಬೇಕಲೈ" ಎಂದು ಹೇಳಿದ್ದರು. ಇದೇ "ಧಮ್ ಬೇಕಲೈ" ಅನ್ನೋದ ಡೈಲಾಗ್‌ಗೆ 'ಮಾರ್ಕ್' ಡೈಲಾಗ್ ಅನ್ನು ಹೋಲಿಕೆ ಮಾಡಲಾಗುತ್ತಿದೆ.
'ಜಗ್ಗುದಾದ'ಗೆ ಟಾಂಗ್ ಕೊಟ್ಟರೇ?
'ಜಗ್ಗುದಾದ' ಹಾಗೂ 'ಮಾರ್ಕ್' ಎರಡೂ ಸಿನಿಮಾಗಳ 'ಧಮ್' ಡೈಲಾಗ್ ಒಂದೇ ದಾಟಿಯಲ್ಲಿ ಇರೋದಂತೂ ಸತ್ಯ. ದರ್ಶನ್ ಸಿನಿಮಾದಲ್ಲಿ "ಧಮ್ ಬೇಕಲೈ" ಅಂದರೆ, 'ಮಾರ್ಕ್' ಸಿನಿಮಾ "ಧಮ್ ಹೊಡೆಯೋದು ಕಮ್ಮಿ ಮಾಡ್ಬೇಕಲೈ" ಅನ್ನೋ ಡೈಲಾಗ್ ಇದೆ. ಮೇಲ್ನೋಟಕ್ಕೆ ಮಾರ್ಕ್ ಡೈಲಾಗ್ ಟ್ರಿಗರ್ ಮಾಡಿರಬಹುದು. ಆದರೆ, ಎರಡೂ ಸಿನಿಮಾಗಳಿಗೋ, ಇಲ್ಲವೇ ಇಬ್ಬರು ನಟರೊಂದಿಗೋ ಹೋಲಿಕೆ ಮಾಡೋದು ಸಮಂಜಸವಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಂತೂ ಈ ಡೈಲಾಗ್ ಬಗ್ಗೆ ಚರ್ಚೆಯಾಗುತ್ತಲೇ ಇದೆ.


Click it and Unblock the Notifications











