ವರಲಕ್ಷ್ಮೀ ಶರತ್ ಕುಮಾರ್ ಜೊತೆ ಕಿಚ್ಚ ಸುದೀಪ್ & ಫ್ಯಾಮಿಲಿ..!

'ಮಾಣಿಕ್ಯ' ಹಾಗೂ 'ರನ್ನ' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದವರು 'ವರಲಕ್ಷ್ಮೀ ಶರತ್ ಕುಮಾರ್'. ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಂಡು ಪ್ರತಿಯೊಂದು ಚಿತ್ರದಲ್ಲಿಯೂ ಸವಾಲಿನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವುದನ್ನೇ ರೂಢಿ ಮಾಡಿಕೊಂಡಿರುವ 'ವರಲಕ್ಷ್ಮೀ' ಇತ್ತೀಚೆಗಷ್ಟೇ ತಮ್ಮ 14 ವರ್ಷದ ಗೆಳೆಯ 'ನಿಖೋಲಯ್ ಸಚ್​ದೇವ್' ಅವರ ಜೊತೆ 'ನಿಶ್ಚಿತಾರ್ಥ' ಮಾಡಿಕೊಂಡಿದ್ದರು.

Kichcha Sudeep s family met Varalakshmi Sarath Kumar and Nikholai Sachdev

ಮಾರ್ಚ್ 01ರಂದು ಮುಂಬೈನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಶರತ್ ಕುಮಾರ್ ಕುಟುಂಬಸ್ಥರು ಭಾಗಿಯಾಗಿದ್ದರು.ಕೆಲವೇ ಕೆಲ ಆಪ್ತ ಸ್ನೇಹಿತರು ಹಾಜರಿದ್ದರು.ಆದರೆ ಅವತ್ತು ಈ ಶುಭ ಕಾರ್ಯಕ್ಕೆ ಸುದೀಪ್ ಗೈರಾಗಿದ್ದರು. ಕಾರಣ ಸಿಸಿಎಲ್.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಲೀಗ್‌ ನಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ಉದ್ದೇಶದಿಂದ, ಮೈದಾನದಲ್ಲಿ ಬೆವರು ಹರಿಸುತ್ತಿದ್ದ ಸುದೀಪ್,ಈಗ ತಮ್ಮ ಮುದ್ದು ಗೆಳತಿ ವರಲಕ್ಷ್ಮೀ ಶರತ್ ಕುಮಾರ್‌ ಅವರನ್ನ ಭೇಟಿಯಾಗಿದ್ದಾರೆ. ಸದ್ಯದಲ್ಲಿಯೇ ಬದುಕಿನ ಹೊಸ ಅಧ್ಯಾಯವನ್ನ ಆರಂಭ ಮಾಡಲಿರುವ ನವ ಜೋಡಿಗೆ ಶುಭಾಶಯವನ್ನ ಕೋರಿದ್ದಾರೆ.

ಅಂದ್ಹಾಗೇ ಶರತ್ ಕುಮಾರ್ ಅವರ ಮುದ್ದಿನ ಪುತ್ರಿ ವರಲಕ್ಷ್ಮೀ , ಮೊದಲಿಂದ ಸುದೀಪ್ ಹಾಗೂ ಅವರ ಕುಟುಂಬಕ್ಕೆ ತುಂಬಾನೇ ಆತ್ಮೀಯರು. ಪ್ರತಿ ವರ್ಷ ಸುದೀಪ್ ಅವರ ಹುಟ್ಟಿದ ಹಬ್ಬದಂದು ಬೇರೆಯವರ ಶುಭಾಶಯ ಪತ್ರ ಬರಲಿ, ಬಿಡಲಿ.. ವರಲಕ್ಷ್ಮೀ ಶರತ್ ಕುಮಾರ್ ಅವರ ಕಡೆಯಿಂದ ಸುದೀಪ್ ಅವರಿಗೆ ಶುಭಾಶಯವನ್ನೊತ್ತ ಟ್ವಿಟ್ { ಎಕ್ಸ್ } ಬಂದೇ ಬರುತ್ತೆ.

ಇನ್ನೂ.. ಸುದೀಪ್ ಅವರದ್ದು ಸ್ನೇಹಕ್ಕೆ.. ಸ್ನೇಹ.. ಪ್ರೀತಿಗೆ ಪ್ರೀತಿ ಅನ್ನುವ ವ್ಯಕ್ತಿತ್ವ. ಸ್ನೇಹಕ್ಕೆ ಸದಾ ತಲೆ ಬಾಗುವ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್ ಅವರ ಏಳು-ಬೀಳುಗಳನ್ನ ಹತ್ತಿರದಿಂದ ನೋಡಿದವರಲ್ಲಿ ಒಬ್ಬರು. ಸ್ನೇಹಿತನಾಗಿ ವರಲಕ್ಷ್ಮೀ ಬೆಂಬಲಕ್ಕೆ ಸದಾ ಮುಂದೆ ಇರುತ್ತಾರೆ ಸುದೀಪ್. ಹೀಗಾಗಿಯೇ..ಸಮಯ ಬಿಡುವು ಮಾಡಿಕೊಂಡು ಸುದೀಪ್ ತಮ್ಮ ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿಯ ಜೊತೆ ವರಲಕ್ಷ್ಮೀ ಹಾಗೂ ಅವರ ಭಾವಿ ಪತಿ ನಿಖೋಲಯ್ ಸಚ್‌ದೇವ್ ಅವರನ್ನ ಭೇಟಿ ಮಾಡಿ ಮಾಡಿದ್ದಾರೆ. ಕೆಲ ಹೊತ್ತು ಕಾಲ ಕಳೆದು ಹರಟೆ ಹೊಡೆದಿದ್ದಾರೆ. ಸಿಹಿಯಾದ ನೆನಪುಗಳಿಗೆ ಫೋಟೋವನ್ನ ಕ್ಲಿಕಿಸಿಕೊಂಡಿದ್ದಾರೆ.

Kichcha Sudeep s family met Varalakshmi Sarath Kumar and Nikholai Sachdev

ಉಳಿದಂತೆ ವರಲಕ್ಷ್ಮೀ ಶರತ್ ಕುಮಾರ್, ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಮ್ಯಾಕ್ಸ್ ನಲ್ಲಿ ವರಲಕ್ಷ್ಮೀ ಶರತ್ ಕುಮಾರ್ ಕೂಡ ಇದ್ದಾರೆ. ಆದರೆ ಇವರದ್ದು ನಾಯಕಿಯ ಪಾತ್ರವನ್ನ ನಿರ್ವಹಿಸಿದ್ದಾರಾ ಅಥವಾ ಬೇರೆಯದ್ದೇ ಪಾತ್ರಾನಾ..? ಅನ್ನುವುದಕ್ಕೆ ಉತ್ತರ ಇಲ್ಲ. ಕಲೈಪುಲಿ ಎಸ್ ತನು ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ದಿನ ಬಾಕಿ. ಚಿತ್ರತಂಡ ಕುಂಬಳಕಾಯಿ ಒಡೆಯಲಿದೆ.

ವರಲಕ್ಷ್ಮೀ ಶರತ್ ಕುಮಾರ್ ಮದುವೆ ಯಾವಾಗ..?

14 ವರ್ಷದ ಸ್ನೇಹ-ಪ್ರೀತಿಯ ಮೇಲೆ ಮದುವೆಯ ಮುದ್ರೆಯನ್ನೊತ್ತಲು ಸಿದ್ಧವಾದ ವರಲಕ್ಷ್ಮೀ ಶರತ್ ಕುಮಾರ್ ಹಾಗೂ ನಿಖೋಲಯ್ ಸಚ್‌ದೇವ್, ಈ ವರ್ಷದ ಅಂತ್ಯದಲ್ಲಿ ಮದುವೆಯ ಬಂಧನಕ್ಕೊಳಗಾಗಲಿದ್ದಾರೆ ಅನ್ನುವ ಮಾತು ಇದೆ. ಇನ್ನೂ ಇಬ್ಬರ ಡೆಸ್ಟಿನೇಷನ್ ವೆಡ್ಡಿಂಗ್ ಎಲ್ಲಿ ನಡೆಯಲಿದೆ ಅನ್ನುವುದಕ್ಕೆ ಉತ್ತರ ಸದ್ಯಕ್ಕೆ ಇಲ್ಲವಾದರೂ ಇಬ್ಬರ ಮದುವೆಗೆ ದಕ್ಷಿಣ ಹಾಗೂ ಉತ್ತರದ ಅನೇಕ ತಾರೆಯರು ಆಗಮಿಸುವ ನಿರೀಕ್ಷೆ ಇದೆ.

More from Filmibeat

English summary
Along With His Wife Priya Sudeep And Daughter Saanvi, Kichcha Sudeep Met Varalakshmi Sarath Kumar And Nicholai Sachdev.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X