"ನಾನು ಚುನಾವಣೆಗೆ ನಿಲ್ಲೋದಿಲ್ಲ..ಕೆಲವೊಂದು ವಿಷಯ ಈಗಲೇ ಹೇಳೋಕಾಗಲ್ಲ"–ಕಿಚ್ಚ ಸುದೀಪ್
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಅನ್ನೋ ಮಾತು ಕೆಲವು ದಿನಗಳಿಂದ ಓಡಾಡುತ್ತಲೇ ಇತ್ತು. ಇಂದು (ಏಪ್ರಿಲ್ 5) ಮಧ್ಯಾಹ್ನ ಕಿಚ್ಚ ಸುದೀಪ್ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುತ್ತಾರೆ ಅಂತಲೇ ಹೇಳಲಾಗಿತ್ತು. ಸಿ ಎಂ ಬಸವರಾಜ್ ಬೊಮ್ಮಾಯಿ ಪತ್ರಿಕಾಗೋಷ್ಠಿ ಕರೆದಿದ್ದು, ಅಲ್ಲಿ ಸ್ಪಷ್ಟತೆ ಸಿಗುತ್ತೆ ಎಂದು ಹೇಳಲಾಗುತ್ತಿತ್ತು.
ಪತ್ರಿಕಾಗೋಷ್ಠಿಗೆ ಹೋಗುವುದಕ್ಕೂ ಮುನ್ನ ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯಕ್ಕೆ ಪ್ರವೇಶ ಮಾಡುತ್ತಾರಾ? ಬಿಜೆಪಿ ಸೇರುತ್ತಾರಾ? ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರಾ? ಅನ್ನುವ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೆ ಹೆಚ್ಚು ಮಾಹಿತಿ ಬಿಟ್ಟುಕೊಡದೇ ಹೋದಲು ಚುನಾವಣೆ ನಿಲ್ಲುತ್ತಿಲ್ಲ ಅಂತ ಕ್ಲಾರಿಟಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಹೇಳಿಕೆಯ ಝಲಕ್ ಹೀಗಿದೆ.

"ನಾನು ಚುನಾವಣೆಗೆ ನಿಲ್ಲುತ್ತಿಲ್ಲ"
"ಕೆಲವೊಂದು ಇಲ್ಲಿ ಮಾತಾಡೋಕೆ ಆಗುತ್ತೆ. ಕೆಲವೊಂದು ಇಲ್ಲಿ ಮಾತಾಡೋಕೆ ಆಗೋದಿಲ್ಲ. ಅದರ ಬಗ್ಗೆ ನಿಮಗೂ ಸ್ವಲ್ಪ ಕ್ಲಾರಿಟಿ ಇರಲಿ. ಪ್ರೆಸ್ ಮೀಟ್‌ಗೆ ಹೋಗುವುದಂತೂ ಸತ್ಯ. ಅಲ್ಲಿ ನಾನು ಏನು ಮಾತಾಡಬೇಕೋ ಅದನ್ನು ಮಾತಾಡುತ್ತೇನೆ."
"ನಿಮಗೆ ಒಂದು ಸ್ಪಷ್ಟತೆ ಕೊಡಬೇಕು ಅಂದರೆ, ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ನಾನು ಯಾವ ಪಕ್ಷದಿಂದಲೂ ಸ್ಪರ್ಧೆ ಮಾಡುತ್ತಿಲ್ಲ. ಎಲೆಕ್ಷನ್‌ಗೆ ನಿಲ್ಲುತ್ತಿಲ್ಲ. ಅಷ್ಟು ಸ್ಪಷ್ಟನೆ ನಿಮಗೆ ಕೊಡುತ್ತಿದ್ದೇನೆ." ಎಂದು ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿಗೆ ಹೋಗುವುದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದಾರೆ.

"ಸಿನಿಮಾ ಮಾಡೋದು ತುಂಬಾ ಇದೆ"
"ಪ್ರಕಾರಕ್ಕೆ ಹೋಗುವುದು ಅಂತ ಅಂದರೆ, ಎಷ್ಟೋ ಜನ ನಮ್ಮ ಜೀವನದಲ್ಲಿ, ಚಿಕ್ಕ ವಯಸ್ಸಿನಲ್ಲಿ ನಮಗೆ ಬೇಕಾಗಿದ್ದಾರೆ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ನನ್ನ ಕಷ್ಟ ಕಾಲದಲ್ಲಿ ನಿಂತವರು ತುಂಬಾ ಜನ ಇದ್ದಾರೆ. ಅವರಿಗೆ ಬೇಕಾದಾಗ ಅವರ ಪರ ನಿಲ್ಲೋದ್ರಲ್ಲಿ ತಪ್ಪೇ ಇಲ್ಲ ಅನ್ನೋದು ನನ್ನ ಭಾವನೆ."
"ನಾನೊಬ್ಬ ನಟ. ಸಿನಿಮಾ ಮಾಡೋದು ತುಂಬಾ ಇದೆ. ಮೊನ್ನೆಯಷ್ಟೇ ಒಂದು ಲೆಟರ್ ರಿಲೀಸ್ ಮಾಡಿದ್ದೆ ನಾನು. ಮೂರು ಸಿನಿಮಾ ಒಪ್ಪಿಕೊಂಡಿದ್ದೀನಿ ಅಂತ ಹೇಳಿದ್ದೆ." ಎಂದು ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


Click it and Unblock the Notifications











